ಮೀಸೆ ಮೂಡುವ ಮುನ್ನವೇ IPL ನಲ್ಲಿ ಆಡಿದ ಆಟಗಾರರು ಇವರು!

ಇದುವರೆಗೆ ಐಪಿಎಲ್​ನಲ್ಲಿ ಆಡಿದ ಅತಿ ಎಳೆಯ ಕ್ರೀಡಾಪಟುಗಳು ಯಾರೆಲ್ಲ? ಯಾವ ವಯಸ್ಸಿಗೆ ಅವರು ಕಾಲಿರಿಸಿದರು? ಇಲ್ಲಿದೆ ನಿಮಗಾಗಿಯೇ ಈ ಎಲ್ಲ ಕುತೂಹಲಕರ ಮಾಹಿತಿ.

ಸರ್ಫರಾಜ್ ಖಾನ್

ಸರ್ಫರಾಜ್ ಖಾನ್

  • Share this:
14 ವರ್ಷಗಳ ಅದ್ಭುತ ಪಯಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಅಲ್ಲದೆ ಕ್ರಿಕೆಟಿಗರು ಐಪಿಎಲ್​ನಲ್ಲಿ (IPL 2022) ಒಂದು ಚಾನ್ಸ್​ಗಾಗಿ ಹಂಬಲಿಸುತ್ತಾರೆ.  ಇಲ್ಲಿ ಮಿಂಚಿದವರು ಭಾರತ ಮತ್ತು ವಿದೇಶಗಳಲ್ಲಿ ಅಂತರರಾಷ್ಟ್ರೀಯ ಸೂಪರ್‌ಸ್ಟಾರ್‌ಗಳಾಗಿದ್ದಾರೆ. 2008 ರಲ್ಲಿ ಮೊದಲ ಆವೃತ್ತಿಯಿಂದ (IPL 2008) ಇಲ್ಲಿಯವರೆಗೂ ಹಲವು ಆಟಗಾರರು ತಮ್ಮ ಪ್ರದರ್ಶನಗಳಿಂದ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅಲ್ಲದೇ ಐಪಿಎಲ್​ ಕ್ರಿಕೆಟ್‌ನ ಜನಪ್ರಿಯತೆಯನ್ನು ಹೆಚ್ಚಿಸಿದೆ ಎಂದು ಯಾವುದೇ ಸಂದೇಹವಿಲ್ಲದೇ ಹೇಳಬಹುದು. ಹಾಗಾದರೆ ಇದುವರೆಗೆ ಐಪಿಎಲ್​ನಲ್ಲಿ ಆಡಿದ ಅತಿ ಎಳೆಯ ಕ್ರೀಡಾಪಟುಗಳು ಯಾರೆಲ್ಲ? ಯಾವ ವಯಸ್ಸಿಗೆ ಅವರು (Indian Premier League) ಕಾಲಿರಿಸಿದರು? ಇಲ್ಲಿದೆ ನಿಮಗಾಗಿಯೇ ಈ ಎಲ್ಲ ಕುತೂಹಲಕರ ಮಾಹಿತಿ.

ಪ್ರಯಾಸ್ ರೇ ಬರ್ಮನ್ (16 ವರ್ಷ 152 ದಿನಗಳು)
ಐಪಿಎಲ್ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಪ್ರಯಾಸ್ ರೇ ಬರ್ಮನ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಕಿರಿಯ ಆಟಗಾರನಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. 16 ವರ್ಷ ಮತ್ತು 152 ದಿನಗಳ ವಯಸ್ಸಿನಲ್ಲಿ, ಈ ಆಲ್‌ರೌಂಡರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಮತ್ತೊಂದೆಡೆ ಪ್ರಯಾಸ್ ರೇ ಬರ್ಮನ್ ದುಬಾರಿ ಸ್ಪೆಲ್ ಮಾಡುವ ಮೂಲಕ ಈ ಅವಕಾಶವನ್ನು ಕೈಚೆಲ್ಲಿದರು.

ಪ್ರಯಾಸ್‌ನ ರೇ ಬರ್ಮನ್ ನಾಲ್ಕು ಓವರ್‌ಗಳಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಈ ಯುವ ಆಟಗಾರನಿಗೆ ಕೆಟ್ಟ ಆರಂಭ ಒದಗಿಸಿತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಮುಂದುವರೆಸಲಿಲ್ಲ. ಬೇರೆ ತಂಡಗಳೂ ಅವರನ್ನು ಕೈಹಿಡಿಯಲಿಲ್ಲ.

ಮುಜೀಬ್ ಉರ್ ರೆಹಮಾನ್ (17 ವರ್ಷ, 11 ದಿನಗಳು)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಗ್ರ ಐದು ಕಿರಿಯ ಆಟಗಾರರ ಈ ಪಟ್ಟಿಯಲ್ಲಿ, ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ಎರಡನೇ ಸ್ಥಾನದಲ್ಲಿದ್ದಾರೆ. ಮುಜೀಬ್ ಉರ್ ರೆಹಮಾನ್ 17 ವರ್ಷ ಮತ್ತು 11 ದಿನಗಳ ವಯಸ್ಸಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದರು.

ಅವರು ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದಾಗ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಜನಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರವಾಗಿದ್ದರು. ಮುಜೀಬ್ ಏಕದಿನ ಪಂದ್ಯವೊಂದರಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: IPL ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರು ಬ್ಯಾನ್ ಆಗಿರುವುದೇಕೆ?

2018 ರ ಐಪಿಎಲ್‌ನಲ್ಲಿ, ಮುಜೀಬ್ ಪಂಜಾಬ್ ಕಿಂಗ್ಸ್‌ಗೆ ಸೇರಿದರು. ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಈ ಸ್ಪಿನ್ ಬೌಲರ್ 14 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಆಟಗಾರನನ್ನು ಐಪಿಎಲ್ 2021 ರ ಹರಾಜಿನ ಮೊದಲು ಪಂಜಾಬ್ ಕಿಂಗ್ಸ್ ಖರೀದಿಸಿದ್ದರೂ ಅವರಿಗೆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಮುಜೀಬ್ ತಮ್ಮ ವೃತ್ತಿಜೀವನದಲ್ಲಿ 19 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 31 ಸ್ಟ್ರೈಕ್ ರೇಟ್‌ನಲ್ಲಿ ಅದೇ ಪ್ರಮಾಣದ ವಿಕೆಟ್‌ಗಳನ್ನು ಪಡೆದಿದ್ದಾರೆ.

ರಿಯಾನ್ ಪರಾಗ್ (17 ವರ್ಷಗಳು, 152 ದಿನಗಳು)
ರಿಯಾನ್ ಪರಾಗ್ ಎಂಬ ಅದ್ಭುತ ಯುವ ಆಟಗಾರ 17 ವರ್ಷ ಮತ್ತು 152 ದಿನಗಳ ವಯಸ್ಸಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದರು. ಅವರು 2018 ರ ICC U19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ರಿಯಾನ್ ಪರಾಗ್ ಅವರು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಮೈದಾನದಲ್ಲಿ ನಿಪುಣ ಫೀಲ್ಡರ್ ಆಗಿದ್ದಾರೆ.

ರಿಯಾನ್ ಪರಾಗ್ ಅವರು 20 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ರಾಜಸ್ಥಾನ ರಾಯಲ್ಸ್‌ಗೆ ಸೇರಿದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅವರು ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಿಯಾನ್ ಪರಾಗ್ ಐಪಿಎಲ್‌ನಲ್ಲಿ ಇದುವರೆಗೆ 23 ಇನ್ನಿಂಗ್ಸ್‌ಗಳನ್ನು ಆಡಿದ್ದು, 339 ರನ್ ಗಳಿಸಿದ್ದಾರೆ. ಒಂದು ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಮೂರು ವಿಕೆಟ್‌ಗಳನ್ನು ಪಡೆದಿದ್ದರು.

ಸರ್ಫರಾಜ್ ಖಾನ್ (17 ವರ್ಷ, 177 ದಿನಗಳು)
ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಪರ ಅದ್ಭುತ ಅತ್ಯುತ್ತಮ ಪ್ರದರ್ಶನದ ನಂತರ ಸರ್ಫರಾಜ್ ಖಾನ್ ಮುನ್ನೆಲೆಗೆ ಬಂದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸರ್ಫರಾಜ್ ಖಾನ್ ನಾಲ್ಕನೇ ಕಿರಿಯ ಕ್ರಿಕೆಟಿಗರಾಗಿದ್ದಾರೆ.

ಇದನ್ನೂ ಓದಿ: IPL ಸೃಷ್ಟಿಕರ್ತ ಮೋದಿಗೆ IPLನಿಂದ ನಿಷೇಧ ಹೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಕಥೆ

2015 ರಲ್ಲಿ ಸರ್ಫರಾಜ್ ಖಾನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಾಗಿ IPL ಚೊಚ್ಚಲ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಸರ್ಫರಾಜ್ ಖಾನ್ ಕೇವಲ 27 ಎಸೆತಗಳಲ್ಲಿ 46 ರನ್ ಗಳಿಸುವ ಮೂಲಕ ಅಚ್ಚರಿ ಮೂಡಿಸಿದರು. ಐಪಿಎಲ್ 2017 ರಲ್ಲಿ ಅವರು ಪಂಜಾಬ್ ಕಿಂಗ್ಸ್ ಸೇರಿದರು. 28 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಸರ್ಫರಾಜ್ ಖಾನ್ 441 ರನ್ ಗಳಿಸಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ್ದಾರೆ.

ಅಭಿಷೇಕ್ ಶರ್ಮಾ (17 ವರ್ಷ, 251 ದಿನಗಳು)
ಅಭಿಷೇಕ್ ಶರ್ಮಾ ಭಾರತದ ವಿಶ್ವಕಪ್ ವಿಜೇತ U-18 ತಂಡದ ಸದಸ್ಯರಾಗಿದ್ದರು. ಆ ಸಮಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು55 ಲಕ್ಷಕ್ಕೆ ಸೇರಿದ್ದರು. ಕೇವಲ 19 ಎಸೆತಗಳಲ್ಲಿ 46 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಮಿಂಚಿದ್ದರು.
Published by:guruganesh bhat
First published: