RCB: ಇಷ್ಟೂ ಸೀಸನ್​ ಒಂದ್​ ಲೆಕ್ಕ.. ಈ ಸೀಸನ್​ ಒಂದು ಲೆಕ್ಕ! ಈ ಕಾರಣಗಳಿಂದ ಗೆದ್ದೇ ಗೆಲ್ತಾರೆ ನಮ್​ ಹುಡುಗ್ರು ಬಾಸ್​

ಕಪ್​ ಒಂದನ್ನು ಬಿಟ್ಟು ಆರ್​ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಈ ಸಲನಾದರೂ ಆರ್​ಸಿಬಿ ಕಪ್​ ಗೆಲ್ಲಲ್ಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಈ ಸೀಸನ್​ನಲ್ಲಿ ನಮ್​ ಹುಡುಗ್ರು ಕೂಡ ಅದ್ಭುತವಾಗಿ ಆಡುತ್ತಿದ್ದಾರೆ.

ಆರ್​ಸಿಬಿ ತಂಡ

ಆರ್​ಸಿಬಿ ತಂಡ

  • Share this:
ಬೆಂಗಳೂರಿ(Bengaluru)ಗರಿಗೆ ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್​ಸಿಬಿ(RCB) ತಂಡ ಕಪ್(Cup)​ ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಇಂದಲ್ಲ, ನಾಳೆ ಅಥವಾ ಮುಂದೊಂದು ದಿನ ಅವರು ಗೆದ್ದೆ ಗೆಲ್ಲುತ್ತಾರೆ ಅನ್ನುವ ವಿಶ್ವಾಸದಲ್ಲಿ ಇದ್ದೇವೆ. ಆರ್​ಸಿಬಿ ಅನ್ನುವುದು ಕೇವಲ ತಂಡವಲ್ಲ. ಬೆಂಗಳೂರಿಗರ ಎಮೋಷನ್​(Emotion) ಅದು. ಈ ಬಾರಿ ಹೊಸ ಹುರುಪು, ಹೊಸ ನಾಯಕ(New Captain)ನೊಂದಿಗೆ ಆರ್​ಸಿಬಿ ಕಣಕ್ಕಿಳಿಯಲಿದೆ. ಕಳೆದ ಐಪಿಎಲ್​ ಸೀಸನ್​ಗಳಲ್ಲಿ ಫೈನಲ್(FInal)​ ಪ್ರವೇಶಸಿದ್ದರೂ ಕಪ್​ ಗೆಲ್ಲಲ್ಲು ಆರ್​ಸಿಬಿ ಆಟಗಾರರರಿಗೆ ಸಾಧ್ಯವಾಗಿರಲಿಲ್ಲ. ಕಪ್​ ಒಂದನ್ನು ಬಿಟ್ಟು ಆರ್​ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಈ ಸಲನಾದರೂ ಆರ್​ಸಿಬಿ ಕಪ್​ ಗೆಲ್ಲಲ್ಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಈ ಸೀಸನ್​ನಲ್ಲಿ ನಮ್​ ಹುಡುಗ್ರು ಕೂಡ ಅದ್ಭುತವಾಗಿ ಆಡುತ್ತಿದ್ದಾರೆ.

ಹಿಂದಿನಂತಿಲ್ಲ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!

ಇನ್ನೂ ಈ ಸಲ ಆರ್​ಸಿಬಿ ಹಿಂದಿನಂತಿಲ್ಲ. ಕಂಪ್ಲೀಟ್ಲಿ ಬದಲಾಗಿದೆ. ಹೊಸ ಕ್ಯಾಪ್ಟನ್ ಎಂಟ್ರಿ  ಬಳಿಕ, ಹೊಸ ಎನರ್ಜಿ ಬಂದಿದೆ. ಹೀಗಾಗಿ ಈ ಸಲ RCB ಕಪ್​ ಗೆದ್ದೇ ಗೆಲ್ಲುತ್ತೆ ಅನ್ನೋ ಹೊಸ ಆಶಾಭಾವ ಮೂಡಿದೆ. ಜೊತೆಗೆ ಈ ಐದು ಕಾರಣಗಳು ಖಂಡಿತ RCB ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಲು ನೆರವಾಗಲಿವೆ.

ಡುಪ್ಲೆಸಿಸ್ ಅನುಭವ ವರ್ಕ ಆಗ್ತಿದೆ!

ಫಾಫ್ ಡು ಪ್ಲೆಸಿಸ್ RCBಗೆ ಎಂಟ್ರಿ ಕೊಡ್ತಿದ್ದಂತೆ ಕಪ್​ ಕನಸು ಚಿಗುರೊಡೆದಿದೆ. ಯಾಕಂದ್ರೆ ಪ್ಲೆಸಿಸ್​​ ಅನುಭವಿ ಕ್ಯಾಪ್ಟನ್​​. ದಕ್ಷಿಣ ಆಫ್ರಿಕಾ ಕಂಡ ಯಶಸ್ವಿ ನಾಯಕ. ದಕ್ಷಿಣ ಆಫ್ರಿಕಾ ಪರ ನಾಯಕನಾಗಿ 115 ಪಂದ್ಯಗಳಲ್ಲಿ 70 ಗೆಲ್ಲಿಸಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ಆಗಿರೋ ಚೆನ್ನೈ ತಂಡದಲ್ಲಿ ಹಿಂದೆ ಆಡಿ ಕೂಲೆಸ್ಟ್​​ ಬ್ರೈನ್​ ಧೋನಿ ಗರಡಿಯಲ್ಲಿ ಪಳಗಿದ್ದಾರೆ. ಸದ್ಯ ಈ ಅನುಭವ ಪ್ಲೆಸಿಸ್​​ ಕೈಹಿಡಿತಿದೆ.

ರಣರಂಗದಲ್ಲಿ ಅಬ್ಬರಿಸುತ್ತಿದ್ದಾರೆ ಡಿಕೆ ಬಾಸ್​!

ಒಂದು ಟೈಮ್​​ನಲ್ಲಿ RCB ಅಂದ್ರೆ ಕೊಹ್ಲಿ, ಎಬಿಡಿ ಅನ್ನುವಂತಾಗಿತ್ತು. ಇದಿಗ RCBಯಲ್ಲಿ ಡಿಕೆ ಹೆಸರು ಪ್ರತಿಧ್ವನಿಸ್ತಿದೆ. ಮ್ಯಾಚ್​ ವಿನ್ನರ್​​​​​​, ಫಿನಿಶರ್​ ಆಗಿ ರನ್​​ ಹೊಳೆ ಹರಿಸ್ತಿದ್ದಾರೆ. 207ರ ಸ್ಟ್ರೈಕ್​ರೇಟ್​​​ನಲ್ಲಿ  197 ರನ್​​ ಕಲೆಹಾಕಿದ್ದಾರೆ. ಡಿಕೆ ಆರ್ಭಟ ಸದ್ಯ ಆರ್​ಸಿಬಿ ವಿಕ್ಟರಿ ಕೇಕೆಗೆ ಕಾರಣವಾಗ್ತಿದೆ. ಈ ಸೀಸನ್​ನಲ್ಲಿ ಡಿಕೆ ಘರ್ಜನೆ ಹೀಗೆ ಮುಂದುವರಿದರೆ ಈ ಸಲ ಪಕ್ಕಾ ಕಪ್​ ನಮ್ದೇ ಅಂತಿದ್ದಾರೆ ಆರ್​ಸಿಬಿ ಅಭಿಮಾನಿಗಳು.

ಇದನ್ನೂ ಓದಿ: ಯುಜ್ವೇಂದ್ರ ಚಹಾಲ್ ಮೊದಲ ಹ್ಯಾಟ್ರಿಕ್ ಐಪಿಎಲ್​ನ 21ನೇ ಹ್ಯಾಟ್ರಿಕ್ ಆಯ್ತು!

ಯುವ ಆಟಗಾರರ ಅಬ್ಬರ!

ಇನ್ನು ಯಂಗ್​ಸ್ಟರ್ಸ್​ಗಳಾದ ಅನೂಜ್​​ ರಾವತ್​​​, ಶಹಬಾಜ್​​​ ಅಹ್ಮದ್​​​ ಹಾಗೂ ಸುಯಾಶ್​ ಪ್ರಭುದೇಸಾಯಿ ಆಕರ್ಷಕ​​ ಆಟವಾಡ್ತಿದ್ದಾರೆ. ಇದು RCB ಬ್ಯಾಟಿಂಗ್​ ವಿಭಾಗಕ್ಕೆ ಹೊಸ ಚೈತನ್ಯ ತುಂಬಿದೆ. ಇನ್ನುಳಿದ ಪಂದ್ಯಗಳಲ್ಲೂ ಈ ಯಂಗ್​ಸ್ಟರ್ಸ್​ ಘರ್ಜಿಸಿದ್ರೆ, ಆರ್​ಸಿಬಿಗೆ ಕಪ್​ ಮಿಸ್ಸಾಗೋ ಮಾತೇ ಇಲ್ಲ.

ಬ್ಯಾಟಿಂಗ್​​ & ಬೌಲಿಂಗ್ ಲೈನ್​ಅಪ್​​

ಇನ್ನು ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ಬ್ಯಾಟಿಂಗ್​​ನಲ್ಲಿ ಪ್ಲೆಸಿಸ್​​​, ಕೊಹ್ಲಿ, ಮ್ಯಾಕ್ಸ್​ವೆಲ್​​ ಎದುರಾಳಿಯನ್ನ ಡೆಸ್ಟ್ರಾಯ್​ ಮಾಡಿದ್ರೆ, ಬೌಲಿಂಗ್​​ನಲ್ಲಿ ಹರ್ಷಲ್​​ ಪಟೇಲ್​​​, ಜೋಶ್​ ಹೆಜಲ್​ವುಡ್​​, ಸಿರಾಜ್​ ವಿಕೆಟ್ ಬೇಟೆಯಾಡ್ತಿದ್ದಾರೆ. ಇದರಿಂದಾಗಿ ಸಾಂಘಿಕ ಪ್ರದರ್ಶನ ಮೂಡಿ ಬರ್ತಿದೆ. ಇದು ಹೀಗೆ ಮುಂದುವರಿದಿದ್ದೇ ಆದಲ್ಲಿ ಆರ್​ಸಿಬಿಯ 14 ವರ್ಷದ ಕಪ್​ ವನವಾಸ ಕೊನೆಗೊಳ್ಳುತ್ತೆ.

ಇದನ್ನೂ ಓದಿ: ಈ ಸಲ ಕಪ್ ನಮ್ದೇ ಎಂದ RCB ಅಭಿಮಾನಿಗೆ ಕಾರ್ತಿಕ್ ಕೊಟ್ಟ ಉತ್ತರಕ್ಕೆ ಅಭಿಮಾನಿಗಳು ಫಿದಾ..!

ಆರ್​ಸಿಬಿ ಸ್ಪಿನ್ನರ್​ಗಳ ಮೋಡಿ!

ಆಕ್ಷನ್​​​ನಲ್ಲಿ 10.75 ಕೋಟಿಗೆ ವನಿಂದು ಹಸರಂಗರನ್ನ RCB ಖರೀದಿಸಿತ್ತು. ಆ ನಂಬಿಕೆಯನ್ನ ಲೆಗ್​​ ಬ್ರೇಕರ್​ ಉಳಿಸಿಕೊಂಡಿದ್ದು, ವಿಕೆಟ್ ಸರಮಾಲೆ ಕಟ್ಟಿದ್ದಾರೆ. ಅತ್ತ ಶಹಬ್ಬಾಜ್​ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
Published by:Vasudeva M
First published: