ಐಪಿಎಲ್(IPL) 2022 15ನೇ ಆವೃತ್ತಿಯ 5ನೇ ಪಂದ್ಯ ಇಂದು ನಡೆಯುತ್ತಿದೆ. ಪುಣೆ(Pune)ಯ ಮಹಾರಾಷ್ಟ್ರ (Maharashtra)ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಇರುವ ಐಪಿಎಲ್ನ 5ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್(Sun Risers Hyderabad) ಮತ್ತು ರಾಜಸ್ಥಾನ್ ರಾಯಲ್ಸ್(Rajasthan Royals) ತಂಡಗಳು ಮುಖಾಮುಖಿಯಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್(Sanju Samson) ಮುನ್ನಡೆಸುತ್ತಿದ್ದರೆ, ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಕೇನ್ ವಿಲಿಯಮ್ಸನ್(Kane Williamson) ಕಾಣಿಸಿಕೊಳ್ಳುತ್ತಿದ್ದಾರೆ. ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಸ್ಆರ್ಹೆಚ್(SRH) ತಂಡವು 8 ಬಾರಿ ಗೆದ್ದರೆ, ರಾಜಸ್ಥಾನ್ ರಾಯಲ್ಸ್ 7 ಸಲ ಜಯ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಸಂಖ್ಯೆಯಲ್ಲಿ ಸಮಬಲ ಸಾಧಿಸಲು ರಾಜಸ್ಥಾನ್ ರಾಯಲ್ಸ್ ಸಜ್ಜಾಗಿದೆ. ಇದೀಗ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬೌಲಿಂಗ್ ಮಾಡಲಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ ಗೆದ್ದಿವೆ.
ಆರ್ಆರ್ಗೆ ಟಕ್ಕರ್ ಕೊಡ್ತಾರಾ ಸನ್ ರೈಸರ್ಸ್?
ಕಳೆದ ವರ್ಷ ಐಪಿಎಲ್ನಲ್ಲಿ ದಯನೀಯವಾಗಿ ವಿಫಲವಾದ ಹೈದರಾಬಾದ್ ತಂಡವು 2022 ರ ಋತುವಿನಲ್ಲಿ ಭರ್ಜರಿ ಪ್ರದರ್ಶನ ನೀಡಲು ನಿರ್ಧರಿಸಿದೆ. ಆದರೆ ಅನೇಕ ರಾಜಸ್ಥಾನ ರಾಯಲ್ಸ್ ಆಟಗಾರರು ಸಹ ಸುಮ್ಮನೆ ಕುಳಿತಿಲ್ಲ. ಇಂದಿನ ಪಂದ್ಯ ಗೆಲ್ಲಲ್ಲು ರಣತಂತ್ರ ಹೆಣೆದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಸನ್ರೈಸರ್ಸ್ ವಿರುದ್ಧ 18 ಪಂದ್ಯಗಳನ್ನು ಆಡಿ 615 ರನ್ ಗಳಿಸಿದ್ದಾರೆ. ಸ್ಯಾಮ್ಸನ್ ಇಂದಿನ ಪಂದ್ಯದಲ್ಲೂ ಇದೇ ರೀತಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಕಮಾಲ್ ಮಾಡ್ತಾರಾ ಸಂಜು ಸ್ಯಾಮ್ಸನ್ ?
ಸನ್ರೈಸರ್ಸ್ ಬೌಲರ್ಗಳ ಬಾಲುಗಳಿಗೆ ಸಿಕ್ಸರ್ ಬಾರಿಸುವುದರಲ್ಲಿ ಸಂಜು ಸ್ಯಾಮ್ಸನ್ ಮುಂದಿದ್ದಾರೆ. ಸನ್ ರೈಸರ್ಸ್ ವಿರುದ್ಧ ಈಗಾಗಲೇ 615 ರನ್ ಸಿಡಿಸಿರುವ ಸ್ಯಾಮ್ಸನ್ ಪ್ರದರ್ಶನವನ್ನು ಕಾಧುನೋಡಬೇಕಿದೆ. ಸ್ಯಾಮ್ಸನ್ ಸನ್ ರೈಸರ್ಸ್ ವಿರುದ್ಧ ಸತತ 21 ಸಿಕ್ಸರ್ ಬಾರಿಸಿದ್ದಾರೆ.
ಯುಜ್ವೇಂದ್ರ ಚಹಾಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ವಾಸ್ತವವಾಗಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಸನ್ ರೈಸರ್ಸ್ ವಿರುದ್ಧ ಈ ಸಾಧನೆ ಮಾಡಿದರು. ಯುಜ್ವೇಂದ್ರ ಚಹಾಲ್ 16 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಇದೀಗ ಚಾಹಲ್ ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣದಲ್ಲಿದ್ದಾರೆ.