RCB vs RR: ರಣರಂಗದಲ್ಲಿಂದು ಆರ್​ಸಿಬಿ-ಆರ್​ಆರ್​ ಸಮರ.. ಅಪ್ಪಿ ತಪ್ಪಿಯೂ ಇವತ್ತು ಬೆಂಗಳೂರು ಈ ತಪ್ಪು ಮಾಡ್ಲೇ ಬಾರದು!

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಚೆನ್ನಾಗಿ ಮಾಡಿದ್ದ ಆರ್​ಸಿಬಿ ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಎರಡನೇ ಪಂದ್ಯದಲ್ಲಿ ಬೌಲಿಂಗ್ ಚೆನ್ನಾಗಿ ಮಾಡಿದ್ದ ಆರ್​ಸಿಬಿ ಬ್ಯಾಟಿಂಗ್​ನಲ್ಲಿ ಸ್ವಲ್ಪ ಎಡವಿತ್ತು. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.

ಸಂಜು ಸ್ಯಾಮ್ಸನ್​, ಡು ಪ್ಲೆಸಿಸ್​

ಸಂಜು ಸ್ಯಾಮ್ಸನ್​, ಡು ಪ್ಲೆಸಿಸ್​

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಸೀಸನ್‌ 13ನೇ ಪಂದ್ಯದಲ್ಲಿ ಆರ್​ಆರ್​(RR) ಹಾಗೂ ಆರ್​ಸಿಬಿ(RCB) ಮುಖಾಮುಖಿಯಾಗುತ್ತಿವೆ.  ಮುಂಬೈ(Mumbai)ನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿವೆ. ಆರ್​ಸಿಬಿಯ ಬ್ಯಾಟಿಂಗ್(Batting) ತುಂಬಾ ಪ್ರಬಲವಾಗಿದ್ದರೂ, ರಾಜಸ್ಥಾನ್ ರಾಯಲ್ಸ್ (RR vs RCB) ಬೌಲಿಂಗ್ ವಿಭಾಗ ಅದ್ಭುತವಾಗಿದೆ. ರಾಜಸ್ಥಾನ ಇಲ್ಲಿಯವರೆಗೆ ಎರಡು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು(Bengaluru) ಒಂದು ಪಂದ್ಯವನ್ನು ಗೆದ್ದು ಒಂದು ಸೋತಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಸೋತಿದ್ದರೆ, ನಂತರ ಈ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಅನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಚೆನ್ನಾಗಿ ಮಾಡಿದ್ದ ಆರ್​ಸಿಬಿ ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಎರಡನೇ ಪಂದ್ಯದಲ್ಲಿ ಬೌಲಿಂಗ್ ಚೆನ್ನಾಗಿ ಮಾಡಿದ್ದ ಆರ್​ಸಿಬಿ ಬ್ಯಾಟಿಂಗ್​ನಲ್ಲಿ ಸ್ವಲ್ಪ ಎಡವಿತ್ತು. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.

ಉತ್ತಮ ಆರಂಭ ಪಡೆದಿರುವ ರಾಜಸ್ತಾನ್​ ರಾಯಲ್ಸ್​!

ಸಂಜು ಸ್ಯಾಮನ್ಸ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ಈ ಸೀಸನ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಆಡಿರುವ ಎರಡು ಪಂದ್ಯಗಳನ್ನ ಜಯಿಸಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ 61 ರನ್‌ಗಳಿಂದ ಪಂದ್ಯ ಜಯಿಸಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ 23ರನ್‌ಗಳಿಂದ ಪಂದ್ಯ ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವ ಉತ್ಸಾದಲ್ಲೇ ರಾಜಸ್ಥಾನ್​ ರಾಯಲ್ಸ್ ತಂಡ ಕಣಕ್ಕಿಳಿಯಲಿದೆ. ಇತ್ತ ಆರ್​ಸಿಬಿ ಕೂಡ ಇಂದಿನ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಮಂಗಳವಾರ ಕ್ರಿಕೆಟ್​ ಅಭಿಮಾನಿಗಳಿಗೆ ಸಖತ್ ಕಿಕ್​ ಕೊಡುವ ಪಂದ್ಯ ಇದು ಎಂದರೆ ತಪ್ಪಾಗಲಾರದು.

ಆರ್‌ಆರ್‌ ವಿರುದ್ಧ ಹೆಚ್ಚು ಪಂದ್ಯ ಗೆದ್ದಿರುವ ಆರ್​ಸಿಬಿ!

ರಾಜಸ್ತಾನ್ ರಾಯಲ್ಸ್ ಹಾಗೂ ಆರ್‌ಸಿಬಿ ತಂಡವು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆರ್‌ಸಿಬಿ 12 ಪಂದ್ಯಗಳಲ್ಲಿ ಗೆಲುವನ್ನ ಸಾಧಿಸಿದ್ರೆ, ರಾಜಸ್ಥಾನ್ ರಾಯಲ್ಸ್‌ 10 ಪಂದ್ಯಗಳಲ್ಲಿ ಗೆದ್ದಿದೆ. 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಆರ್‌ಸಿಬಿ ಪಂದ್ಯ ಜಯಿಸಿದೆ. ಮ್ಯಾಕ್ಸ್​ವೆಲ್​ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ಆರ್​ಸಿಬಿ ಲೂಸ್​ ಬೌಲಿಂಗ್​ ಮಾಡಬಾರದು.

ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಬಟ್ಲರ್!

ಮುಂಬೈ ಇಂಡಿಯನ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಓಪನರ್ ಜಾಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು ಟಿ-20 ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದರು. 68 ಎಸೆತಗಳಲ್ಲಿ 100 ರನ್ ಕಲೆಹಾಕಿದ್ದರು ಬಟ್ಲರ್.

ಇದನ್ನೂ ಓದಿ: ಚೆನ್ನೈ ಸೂಪರ್​ ಕಿಂಗ್ಸ್​ಗೆ ಬೆವರಿಳಿಸಿದ ಅರೋರಾ! ಒಂದೇ ದಿನದಲ್ಲಿ ಸೂಪರ್​ಸ್ಟಾರ್​ ಆಗಿದ್ದೇಗೆ ವೈಭವ್​?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರಾರ್, ಫಿನ್ ಜಾರ್ಫ್ ಅಲೆನ್, ಶೆರ್ಫಾನ್, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್, ಸಿದ್ಧಾರ್ಥ್ ಕೌಲ್.

ಇದನ್ನೂ ಓದಿ: ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

ರಾಜಸ್ಥಾನ್ ರಾಯಲ್ಸ್ ತಂಡ

ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಶುಭಂ ಅಗರ್ವಾಲ್, ಧ್ರುವ್ ಜುರೆಲ್, ಕುಲದೀಪ್ ಯಾದವ್, ಕುಲದೀಪ್ ಸೇನ್, ತೇಜಸ್ ಬರೋಕಾ, ಅನುನಾ ಸಿಂಗ್, ಕೆಸಿ ಕಾರಿಯಪ್ಪ, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ರಾಸಿ ವ್ಯಾನ್ ಡೆರ್ ಡುಸ್ಸೆನ್, ನಾಥನ್ ಕೌಲ್ಟರ್ ನೈಲ್, ಜಿಮ್ಮಿಲ್, ಜಿಮ್ಮಿ ಮಿಚೆಲ್, ಕರುಣ್ ನಾಯರ್, ಒಬೆದ್ ಮೆಕಾಯ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್.
Published by:Vasudeva M
First published: