RCB vs SRH: ಆರ್​ಸಿಬಿ ಗೆಲುವಿನ ನಾಗಲೋಟಕ್ಕೆ ಬ್ರೇಕ್​ ಹಾಕಿದ ವಿಲಿಯಮ್ಸನ್​ ಪಡೆ! ನೆಕ್ಸ್ಟ್​ ಮ್ಯಾಚ್​ ಪಕ್ಕಾ ಗೆಲ್ತಾರೆ ನಮ್​ ಹುಡುಗ್ರು​

ಹೀನಾಯ ಬ್ಯಾಟಿಂಗ್ ನಿರ್ವಹಣೆ ತೋರಿದ ಆರ್ ಸಿಬಿ (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿತ್ತು. 69ರನ್​ಗಳ ಗುರಿ ಬೆನ್ನತ್ತಿದ್ದ ಸನ್​ ರೈಸರ್ಸ್ ಸುಲಭ ಜಯಗಳಿಸಿದೆ.

ಹೈದರಾಬಾದ್​ಗೆ ಸುಲಭ ಜಯ

ಹೈದರಾಬಾದ್​ಗೆ ಸುಲಭ ಜಯ

  • Share this:
ಇಂದು 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ಮುಖಾಮುಖಿಯಾಗಿತ್ತು. ಕಳಪೆ ಪ್ರದರ್ಶನ ತೋರಿದ ಆರ್​ಸಿಬಿ ವಿರುದ್ಧ ಕೇನ್​ ವಿಲಿಯಮ್ಸನ್​ ಪಡೆ . ಹೀನಾಯ ಬ್ಯಾಟಿಂಗ್ ನಿರ್ವಹಣೆ ತೋರಿದ ಆರ್ ಸಿಬಿ (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿತ್ತು. 69ರನ್​ಗಳ ಗುರಿ ಬೆನ್ನತ್ತಿದ್ದ ಸನ್​ ರೈಸರ್ಸ್ ಸುಲಭ ಜಯಗಳಿಸಿದೆ. 9 ವಿಕೆಟ್​ಗಳಿಂದ  ಸನ್​ರೈಸರ್ಸ್​ ತಂಡ ಗೆಲುವಿನ ನಗೆ ಬೀರಿದೆ. ಹೈದರಾಬಾದ್​ ತಂಡ ಆರಂಭದಿಂದಲೂ ತನ್ನ ರನ್​ ರೇಟ್ (Run Rate)​ ಹೆಚ್ಚಿಸಲು ಬಿರುಸಿನ ಆಟವಾಡಿ 8 ಓವರ್ (Over)​ ಗಳಲ್ಲಿ ಮ್ಯಾಚ್​ ಮುಗಿಸಿದೆ. ಅಭಿಷೇಕ್​ 28 ಬಾಲ್​ಗಳಲ್ಲಿ 47 ರನ್​ಗಳಿಸಿ ಔಟ್​ ಆದರು. ಇನ್ನೂ ನಾಯಕ ಕೇನ್​ ವಿಲಿಯಮ್ಸನ್ (Kane Williamson) ​ 17 ಬಾಲ್​ಗಳಲ್ಲಿ 16 ರನ್​ಗಳಸಿದರು. ತ್ರಿಪಾಠಿ 3 ಬಾಲ್​ಗಳಲ್ಲಿ 7ರನ್​ಗಳಿಸಿದರು.

68ರನ್​ಗಳಿಗೆ ಆಲ್​ಔಟ್​ ಆದ ಆರ್​ಸಿಬಿ!

ಕಳಪೆ ಬ್ಯಾಟಿಂಗ್ ನಿರ್ವಹಣೆ ತೋರಿದ ಆರ್ ಸಿಬಿ (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿತ್ತು. ಮಾರ್ಕೋ ಜಾನ್ಸೆನ್ (Marco Jansen) ಎಸೆದ ಇನ್ನಿಂಗ್ಸ್ ನ 2ನೇ ಓವರ್ ನಲ್ಲಿಯೇ ಆಘಾತ ಕಂಡ ಆರ್ ಸಿಬಿ (RCB), ಸನ್ ರೈಸರ್ಸ್ (Sunrisers Hyderabad) ವಿರುದ್ಧ 68 ರನ್​ಗಳಿಗೆ ಆಲೌಟ್ ಆಗಿದೆ. ಇದು ಐಪಿಎಲ್ ಇತಿಹಾಸದ 6ನೇ ಕನಿಷ್ಠ ಸ್ಕೋರ್ ಎನಿಸಿದೆ. ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಲೇ ಬಂದ ಆರ್​ಸಿಬಿ, ಎಲ್ಲಿಯೂ ಕಮ್​ಬ್ಯಾಕ್​ ಮಾಡಲೇ ಇಲ್ಲ.

ಸನ್​ರೈಸರ್ಸ್ ಬೌಲರ್​ಗಳ ಆರ್ಭಟ!

ಮಾರ್ಕೋ ಜಾನ್ಸೆನ್ (25ಕ್ಕೆ 3), ಟಿ.ನಟರಾಜನ್ (10ಕ್ಕೆ 3), ಜೆ.ಸುಚಿತ್ (12ಕ್ಕೆ 2) ದಾಳಿಗೆ ನಲುಗಿದ ಆರ್ ಸಿಬಿ 16.1 ಓವರ್ ಗಳಲ್ಲಿ 68 ರನ್ ಗೆ ಆಲೌಟ್ ಆಗಿದೆ. ಆರ್​ಸಿಬಿ ಬ್ಯಾಟಿಂಗ್​ ಲೈನ್​ ಅಪ್​ ಅನ್ನೇ ಸನ್​ರೈಸರ್ಸ್ ಹೈದರಾಬಾದ್​ ಬೌಲರ್​ಗಳು ಉಡೀಸ್​ ಮಾಡಿದ್ದಾರೆ. ಈ ಸೀಸನ್​ನಲ್ಲಿ ಉತ್ತಮವಾಗಿ ಆಡುತ್ತಾ ಬಂದಿದ್ದ ಆರ್​ಸಿಬಿ ತಂಡ, ಇಂದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದೆ. ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ರೀತಿ ಕಮ್​ಬ್ಯಾಕ್​ ಮಾಡುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಶೂನ್ಯ ಸಾಧನೆ: ಕೊಹ್ಲಿ vs ರೋಹಿತ್ ಶರ್ಮಾ ಪೈಪೋಟಿ!

ಮತ್ತೆ ಸೊನ್ನೆಗೆ ಔಟ್ ಆದ ಕಿಂಗ್ ಕೊಹ್ಲಿ


ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಡಕ್ ಆಗಿದ್ದ ಕೊಹ್ಲಿ, ಅರ್ಧ ದಶಕದ ನಂತರ ಐಪಿಎಲ್‌ನಲ್ಲಿ ಸ್ಕೋರ್ ಮಾಡದೆ ಔಟಾಗಿದ್ದರು. ಇಂದೂ ಸಹ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರ ಶೂನ್ಯ ಸಾಧನೆ ಬಹಳ ನಿರಾಸೆ ಮೂಡಿಸಿದೆ.

ಗೋಲ್ಡನ್ ಡಕ್ ಎಷ್ಟು ಬಾರಿ?


ಇಂದಿನ ಪಂದ್ಯದ ಕೇವಲ 5 ರನ್ ​ಗಳಿಸಿದ ಡು ಪ್ಲೆಸಿಸ್ (Du Plessis)​ 2ನೇ ಓವರ್​ನ 2ನೇ ಬಾಲ್​ನಲ್ಲಿ ವಿಕೆಟ್​ ಒಪ್ಪಿಸಿದ್ದಾರೆ. ಬಳಿಕ  ಕ್ರೀಸ್​ಗೆ ಬಂದಿದ್ದ ವಿರಾಟ್​ ಕೊಹ್ಲಿ (Virat Kohli) ಮತ್ತೆ ಡಕ್ ಔಟ್ (Duck Out)​ ಆಗಿದ್ದಾರೆ. ಇವರ ಹಿಂದೆಯೆ ಅನೂಜ್ ರಾವತ್ (Anuj Rawat)​ ಪೆವಿಲಿಯನ್​ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಸಂವಿಧಾನದ ಹೆಸರಲ್ಲಿ ಕಿತ್ತಾಡಿಕೊಂಡ ಮಾಜಿ ಕ್ರಿಕೆಟಿಗರು

ಬ್ಯಾಟಿಂಗ್ ಆರ್ಡರ್​ ಚೇಂಜ್​ ಮಾಡ್ತಾರಾ ಆರ್​ಸಿಬಿ!

ಇಂದು ಹೀನಾಯ ಪ್ರದರ್ಶನ ನೀಡಿದ ಆರ್​​ಸಿಬಿ ತಂಡ ಮುಂದಿನ ಪಂದ್ಯಗಳಲ್ಲಿ ತನ್ನ ಬ್ಯಾಟಿಂಗ್​ ಆರ್ಡರ್​ ಚೇಂಜ್​ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಕೊಹ್ಲಿ ಆರಂಭಿಕ ಆಟಗಾರನಾಗಿ  ಕಣಕ್ಕೆ ಇಳಿಯಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Published by:Vasudeva M
First published: