ಬ್ರಬೋರ್ನ್ ಸ್ಟೇಡಿಯಂನಲ್ಲಿ (Brabourne Stadium) ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (PBKS) ತಂಡ, ಲಿವಿಂಗ್ ಸ್ಟೋನ್ ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 189 ರನ್ ಬಾರಿಸಿತು. ಲಿವಿಂಗ್ ಸ್ಟೋನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, 189 ರನ್ ಸೇರಿಸಲು ಸಾಧ್ಯವಾಯಿತು. 190ರನ್ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್, ಪಂಜಾಬ್ ಸರಿಯಾಗಿ ಗುಮ್ಮಿದೆ ಎಂದರೇ ತಪ್ಪಾಗಲಾರದು. ಹೌದು, ಗಿಲ್ ಹಾಗೂ ಸುದರ್ಶನ್ ಅದ್ಭುತ ಬ್ಯಾಟಿಂಗ್ನಿಂದ ಗುಜರಾತ್ ಟೈಟನ್ಸ್ ಗೆಲುವು ಸಾಧಿಸಿದೆ. ಅದರಲ್ಲೈ ತೇವಾಟಿಯಾ ಅದ್ಭುತ ಆಟ ಪ್ರದರ್ಶಸಿದ್ದಾರೆ. 2 ಬಾಲ್ಗೆ 12ರನ್ ಅವಶ್ಯಕತೆಯಿದ್ದಾಗ ತೇವಾಟಿಯಾ 2 ಬಾಲ್ಗಳನ್ನು ಸಿಕ್ಸರ್ ಸಿಡಿಸಿ ಗುಜರಾತ್ಗೆ ಗೆಲುವು ತಂದುಕೊಟ್ಟಿದ್ದಾರೆ.
ಮತ್ತೆ ಹೀರೋ ಆದ ರಾಹುಲ್ ತೇವಾಟಿಯಾ!
ಶುಭ್ ಮಾನ್ ಗಿಲ್ (96) ಸಾಹಸಿಕ ಬ್ಯಾಟಿಂಗ್ ನ ನಡುವೆಯೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿನ ಭೀತಿ ಎದುರಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ, ಕೊನೇ ಎರಡು ಎಸೆತಗಳಲ್ಲಿ 12 ರನ್ ಬೇಕಿದ್ದಾಗ ಜೋಡಿ ಸಿಕ್ಸರ್ ಸಿಡಿಸಿದ ರಾಹುಲ್ ತೇಪಂಜಾಬ್ ಕಿಂಗ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 6 ವಿಕೆಟ್ ಸೋಲು ಕಂಡಿದೆ. ಆ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಅಜೇಯ ಓಟ ಮುಂದುವರಿದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 2ನೇ ಸೋಲು ಕಂಡಿತು.ವಾಟಿಯಾ ತಂಡಕ್ಕೆ ಅದ್ಭುತ ಗೆಲುವು ನೀಡಿದ್ದಾರೆ.
ಶತಕ ವಂಚಿತರಾದ ಶುಭ್ಮಾನ್ ಗಿಲ್!
ಶತಕ ವಂಚಿತರಾದ ಶುಭ್ ಮಾನ್ ಗಿಲ್ 59 ಎಸೆತಗಳಲ್ಲಿ 96 ರನ್ಇನ್ನೇನು ವ್ಯರ್ಥ ಎನ್ನುವ ಸಮಯದಲ್ಲಿ ಆಪದ್ಭಾಂದವನಾಗಿ ಮೈದಾನಕ್ಕಿಳಿದ ರಾಹುಲ್ ತೇವಾಟಿಯಾ ಸೂಪರ್ ಆಟವಾಡುವ ಮೂಲಕ ತಂಡಕ್ಕೆ ಗೆಲುವು ನೀಡಿದರು. ಓಡಿಯನ್ ಸ್ಮಿತ್ವ ಎಸೆದ ಕೊನೇ ಓವರ್ ನಲ್ಲಿ 19 ರನ್ ಬೇಕಿದ್ದಾಗ ಮೊದಲ ನಾಲ್ಕು ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ಕೇವಲ 7 ರನ್ ಬಾರಿಸಿತು. ಕೊನೇ ಎರಡು ಎಸೆತಗಳಲ್ಲಿ 12 ರನ್ ಬೇಕಿದ್ದಾಗ ಮಿಡ್ ವಿಕೆಟ್ ಗಳತ್ತ ಮಿಂಚಿನ ಎರಡು ಸಿಕ್ಸರ್ ಸಿಡಿಸಿದ ರಾಹುಲ್ ತೇವಾಟಿಯಾ ತಂಡಕ್ಕೆ ಅದ್ಭುತ ಜಯ ತಂದರು. ಕೊನೆಯ ಬಾಲ್ ಸಿಕ್ಸ್ಗೆ ಹೋಗುತ್ತಿದ್ದಂತೆ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ.
ಇದನ್ನೂ ಓದಿ: ದಿನೇಶ್ ಕಾರ್ತಿಕ್ ಕ್ರಿಕೆಟ್ ಜೀವನಕ್ಕೆ ಧೋನಿ ವಿಲನ್ ಆದ್ರಾ?
ಗಿಲ್ಗೆ ಸಾಥ್ ಕೊಟ್ಟ ಸುದರ್ಶನ್!
66 ಎಸೆತಗಳಲ್ಲಿ 100 ರನ್ ಜೊತೆಯಾಟ ಪೂರೈಸಿದ ಗಿಲ್ ಹಾಗೂ ಸುದರ್ಶನ್ ಜೋಡಿಯನ್ನು ರಾಹುಲ್ ಚಹರ್ ಬೇರ್ಪಡಿಸಿದರು. ಚಹರ್ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಲು ಯತ್ನಿಸಿದ ಸಾಯಿ ಸುದರ್ಶನ್, ಮಯಾಂಕ್ ಅಗರ್ವಾಲ್ ಗೆ ಕ್ಯಾಚ್ ನೀಡಿ ಹೊರನಡೆದರು. ಆ ಬಳಿಕ ಕ್ರೀಸ್ ನಲ್ಲಿದ್ದ ಶುಭ್ ಮಾನ್ ಗಿಲ್ ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ 26 ಎಸೆತಗಳಲ್ಲಿ 37 ರನ್ ಗಳ ಜೊತೆಯಾಟವಾಡಿದರು.19ನೇ ಓವರ್ ನ 5ನೇ ಎಸೆತದಲ್ಲಿ ಶುಭ್ ಮಾನ್ ಗಿಲ್ ಅವರ ವಿಕೆಟ್ ಉರುಳಿಸಿ ರಬಾಡ, ಪಂಜಾಬ್ ಗೆ ಮೇಲುಗೈ ನೀಡಿದ್ದರು.
ಇದನ್ನೂ ಓದಿ: RCB ಬೇಡ ಎಂದು ರಿಜೆಕ್ಟ್ ಮಾಡಿದ ಆಟಗಾರರು ಇದೀಗ ಮತ್ತೊಂದು ತಂಡದ ಸೂಪರ್ ಪ್ಲೇಯರ್ಸ್..!
ಟಿ20ಯಲ್ಲಿ 1 ಸಾವಿರ ಬೌಂಡರಿ ದಾಖಲೆ ಮಾಡಿದ ಧವನ್
ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸಿದರು. ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ 1 ಸಾವಿರ ಬೌಂಡರಿ ಫೋರ್ಸ್ ಗಳನ್ನು ಬಾರಿಸಿದ ಕೇವಲ ಐದನೇ ಬ್ಯಾಟ್ಸ್ ಮನ್ ಎನಿಸಿದರು. ಕ್ರಿಸ್ ಗೇಲ್ 1132 ಬೌಂಡರಿ ಫೋರ್ಸ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಲೆಕ್ಸ್ ಹ್ಯಾಲ್ಸ್ (1054), ಡೇವಿಡ್ ವಾರ್ನರ್ (1005) ಹಾಗೂ ಆರನ್ ಫಿಂಚ್ (1004) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ