RCB vs PBKS: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಇರ್ಲಿ ಬಿಡಿ.. ಮೊದಲ ಮ್ಯಾಚ್​ ದೇವರಿಗೆ ಬಿಟ್ಟುಕೊಟ್ಟ ಆರ್​​ಸಿಬಿ!

ಎರಡನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಪಂಜಾಬ್​ ಕಿಂಗ್(Punjab Kings)​ ನಡುವೆ ಹಣಾಹಣಿ ನಡೀತು. ಸಾಕಷ್ಟು ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​ ದಿಗ್ವಿಜಯ ಸಾಧಿಸಿದೆ

ಮಯಾಂಕ್, ಫಾಫ್​ ಡು ಪ್ಲೆಸಿಸ್​

ಮಯಾಂಕ್, ಫಾಫ್​ ಡು ಪ್ಲೆಸಿಸ್​

  • Share this:
ಐಪಿಎಲ್ (IPL) 15ನೇ ಆವೃತ್ತಿಯಲ್ಲಿ ಇಂದು ಎರಡು ರಣ ರೋಚಕ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಹಾಗೂ ಡೆಲ್ಲಿ ಕ್ಯಾಪಿಟೆಲ್ಸ್(Delhi Capitals)​ ಹಣಾಹಣಿ ನಡೆಸಿದವು. ರಣ ರೋಚಕ ವಾಗಿ ಡೆಲ್ಲಿ ಕ್ಯಾಪಿಟಲ್ಸ್​ ಜಯಬೇರಿ ಆಯ್ತು. ಇತ್ತ ಮುಂಬೈ ಇಂಡಿಯನ್ಸ್​ ತನ್ನ ಸಂಪ್ರದಾಯವನ್ನು ಮುಂದುವರೆಸಿತು. ಎರಡನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಪಂಜಾಬ್​ ಕಿಂಗ್(Punjab Kings)​ ನಡುವೆ ಹಣಾಹಣಿ ನಡೀತು. ಸಾಕಷ್ಟು ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​ ದಿಗ್ವಿಜಯ ಸಾಧಿಸಿದೆ. 205 ರನ್​ ಸ್ಕೋರ್ ಮಾಡಿದ್ದರು ಡಿಫೆಂಡ್​ ಮಾಡಿಕೊಳ್ಳುವಲ್ಲಿ ಆರ್​ಸಿಬಿ ಸೋತಿದೆ206ರನ್​ ಗುರಿ ಬೆನ್ನತ್ತಿ ಬ್ಯಾಟಿಂಗ್​ ಆರಂಭಿಸಿದ ಪಂಜಾಬ್​ ತಂಡ ಮೊದಲ 6 ಓವರ್​ಗಳಲ್ಲಿ ಒಳ್ಳೆಯ ರನ್​ ಕಲೆ ಹಾಕಿದರು. ಆರಂಭಿಕ ಆಟಗಾರರಾಗಿ ಬಂದ ಮಯಾಂಕ್​ ಅರ್ಗವಾಲ್​(Mayank Agarwal) ಹಾಗೂ ಶಿಖರ್​ ಧವನ್(Shikar Dhawan)​ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಮಯಾಂಕ್-ಶಿಖರ್​ ಸೂಪರ್​ ಜೊತೆಯಾಟ!

ವನಿದು ಹಸರಂಗ ಮಯಾಂಕ್​ ಅಗರ್ವಾಲ್​ ಅವರನ್ನು ತಮ್ಮ ಖೆಡ್ಡಾಗೆ ಬಿಳಿಸಿಕೊಂಡಿದ್ದರು. ಮಯಾಂಕ್​ 32 ರನ್​ಗಳಿಸಿ ಶಹಬಾಸ್​ಗೆ ಕ್ಯಾಚ್​ ನೀಡಿ ಪೆವಿಲಿಯನನ್​ಗೆ ಮರಳಿದರು. 43 ರನ್​ಗಳಿಸಿ ಶಿಖರ್​ ಧವನ್​ ಕೂಡ ಔಟ್​ ಆದರು. ಇತ್ತ ಅಖಾಡಕ್ಕೆ ಇಳಿದಿದ್ದ ಸಿರಾಜ್​ 2 ಬಾಲ್​ಗಳಲ್ಲಿ 2 ವಿಕೆಟ್​ ತೆಗೆದು ಪಂಜಾಬ್​ ಕಿಂಗ್ಸ್ ಮಧ್ಯಮ ಕ್ರಮಾಂಕವನ್ನು ಮುರಿದರು. ರಾಜಪಕ್ಷ 43ರನ್​ಗಳಿಸಿ ಔಟ್​ ಆದರೆ, ರಾಜ ಬಾವಾ ಡಕ್​ ಔಟ್ ಆದರು. ಇದಾದ ಬಳಿಕ ಕೆಲ ಕಾಲ್​ ಶಾರುಖ್​ ಖಾನ್​ ಆರ್​ಸಿಬಿ ಬೌಲರ್​ಗಳನ್ನು ಕಾಡಿದರು.

ವಿನ್ನಿಂಗ್​ ಟಚ್​ ಕೊಟ್ಟ ಶಾರುಖ್​ - ಓಡಿಯನ್!

ಸೋಲಿನ ಸುಳಿಯಲ್ಲಿ ಸಿಲುಕಿದ್ದ ಪಂಜಾಬ್ ತಂಡಕ್ಕೆ ಶಾರುಖ್​ ಖಾನ್​ ಹಾಗೂ ಓಡಿಯನ್ ಆಸರೆಯಾದರು. ಶಾರುಖ್ ಖಾನ್​ 20 ಬಾಲ್​ಗಳಲ್ಲಿ 24ರನ್​ಗಳಿಸಿದರು. ಇತ್ತ ಓಡಿಯನ್​ ಕೇವಲ 8 ಬಾಲ್​ಗಳಲ್ಲಿ 28ರನ್​​ಗಳಿಸಿ ಪಂಜಾಬ್​ ತಂಡಕ್ಕೆ ಗೆಲುವು ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಒಂದ್ಕಡೆ ಮ್ಯಾಚ್​ ಸೋತಿದ್ದಕ್ಕೆ ಬೇಜಾರು.. ಇನ್ನೊಂದ್ಕಡೆ `ಆ’ ತಪ್ಪಿನಿಂದ ಭಾರಿ ದಂಡ ತೆತ್ತ ರೋಹಿತ್​ ಶರ್ಮಾ!

ಎಕ್ಸ್ಟ್ರಾ ರನ್​ ಕೊಟ್ಟ ಆರ್​​ಸಿಬಿ ಬೌಲರ್​ಗಳು!

ಇನ್ನು ಮೊದಲಿನಿಂದಲೂ ಆರ್​ಸಿಬಿ ಹೆಚ್ಚು ಎಕ್ಸ್ಟ್ರಾ ರನ್​ ನೀಡುತ್ತಾ ಬಂತು. ಬರೋಬ್ಬರಿ 21 ಎಕ್ಸ್ಟ್ರಾ ರನ್​ ನೀಡಿದ್ದಾರೆ. ಕಳೆದ ಸೀಸನ್​ನಲ್ಲೂ ಕಳಪೆ ಬೌಲಿಂಗ್​ ಮಾಡಿದ್ದ ಆರ್​ಸಿಬಿ ತಂಡ, ಈ ಸೀಸನ್​ನಲ್ಲೂ ಅದನ್ನೇ ಮುಂದುವರೆಸಿದೆ. ಆರ್​ಸಿಬಿ ಬೌಲರ್​ಗಳು ಬೇಕಾಬಿಟ್ಟಿ ಬೌಲ್​ ಮಾಡಿದ್ದಾರೆ. ಪಂಜಾಬ್ ತಂಡದ ಬ್ಯಾಟ್ಸ್​ಮೆನ್​ಗಳಿಗೆ ಹೇಗೆ ಬೌಲಿಂಗ್​ ಮಾಡಬೇಕು ಅಂತ ಆರ್​​ಸಿಬಿ ಬೌಲರ್ಸ್ ಪರದಾಟ ನಡೆಸಿದರು.

ಇದನ್ನೂ ಓದಿ: ಪಂಜಾಬ್ ಎದುರು ಅಬ್ಬರಿಸಿದ RCB, ಮೊದಲ ಪಂದ್ಯದಲ್ಲೇ ನಾಯಕನ ಆರ್ಭಟ

ಉತ್ತಮ ಆರಂಭ ನೀಡಿದ ಪಾಫ್ -ರಾವತ್ ಜೋಡಿ

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಅನೂಜ್ ರಾವತ್ ಇನಿಂಗ್ಸ್ ಆರಂಭಿಸಿ ಭದ್ರ ಅಡಿಪಾಯ ಹಾಕಿದರು. ಮೊದಲ ವಿಕೆಟ್​ಗೆ 50 ರನ್​ಗಳ ಜೊತೆಯತಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು ನಂತರ ವಿರಾಟ್ ಕೊಹ್ಲಿ ಜೊತೆ ಅಬ್ಬರಿಸಿದ ಫಾಫ್ ಡುಪ್ಲೆಸಿಸ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ನಾಯಕನಾಗಿ ಅಬ್ಬರಿಸಿದ ಫಾಫ್:

ಅರ್ಧಶತಕದ ಬಳಿಕ ಅಬ್ಬರಿಸಲು ಆರಂಭಿಸಿದ ಫಾಫ್ ಸಿಕ್ಸ್​ಗಳ ಮೇಲೆ ಸಿಕ್ಸ್ ಸಿಡಿಸಿದರು. ಡುಪ್ಲೇಸಿಸ್ 57 ಎಸೆತಗಳಲ್ಲಿ 3 ಫೋರ್​ ಜೊತೆಗೆ ಅಬ್ಬರದ 7 ಸಿಕ್ಸ್​ಗಳ ನೆರವಿನಿಂದ ಬರೋಬ್ಬರಿ 88 ರನ್​ ಗಳಿಸಿದರು. ಇದೇ ವೇಳೆ 65 ರನ್​ ಗಳಿಸಿದ ವೇಳೆ ಫಾಫ್ ಐಪಿಎಲ್​ನಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಐಪಿಎಲ್​ನಲ್ಲಿ 101 ಪಂದ್ಯಗಳನ್ನಾಡಿರುವ ಡುಪ್ಲೆಸಿಸ್ 94 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 23 ಅರ್ಧಶತಕದೊಂದಿಗೆ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.
Published by:Vasudeva M
First published: