ಇಂಡಿಯನ್ ಪ್ರೀಮೀಯರ್ ಲೀಗ್(Indian Premier League)ನಲ್ಲಿ ಮೈದಾನದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗುತ್ತಿದೆ. ಒಂದೆಡೆ ಸಿಕ್ಸರ್(Sixer), ಬೌಂಡರಿ(Boundary) ಮಳೆಯಾಗುತ್ತಿದ್ದರೆ, ಇತ್ತ ಕ್ಯಾಮರಾಮ್ಯಾನ್ಗಳ ಕಣ್ಣು ಮಾತ್ರ ಸುಂದರವಾದ ಹುಡುಗಿ(Girls)ಯರ ಮೇಲೆ ಇರುತ್ತೆ ಅಂದರೆ ತಪ್ಪಾಗಲ್ಲ.ಪಂದ್ಯ ವೀಕ್ಷಿಸುವವರ ಕಣ್ಣು ಪ್ರೇಕ್ಷಕರ ಗ್ಯಾಲರಿಯತ್ತ ಸದಾ ನೆಟ್ಟಿರುತ್ತದೆ. ಐಪಿಎಲ್(IPL)ನಲ್ಲಿ ಆಗಾಗ ಕ್ರೇಜ್ ಹೆಚ್ಚಿಸುವ ಹುಡುಗಿಯರು ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಘ ಅಂತಹದ್ದೇ ‘ಮಿಸ್ಟರಿ ಗರ್ಲ್’(Mystery Girl) ಐಪಿಎಲ್ 2022ರ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಫೋಟೋಗಳು ಸಾಮಾಜಿಕ ಜಾಲತಾಣ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಹುಡುಗಿಯ ಬಗ್ಗೆ ಹುಡುಕಾಟ ಶುರುವಾಗಿದೆ ಜೊತೆಗೆ ಇಂಥ ಮಿಸ್ಟರಿ ಗರ್ಲ್ ಹುಡುಕಿ ಫೋಕಸ್ ಮಾಡಿದ್ದ ಕ್ಯಾಮರಾ ಮ್ಯಾನ್ಗೆ ಸೆಲ್ಯೂಟ್ ಹೇಳುತ್ತಿದ್ದಾರೆ. ಈ ಹಿಂದೆ ಆರ್‌ಸಿಬಿ ಗಲ್ ಆಗಿ ಮಿಂಚಿದ ನೃತ್ಯ ಸಂಯೋಜಕಿ ದೀಪಿಕಾ ಘೋಷ್(Deepika Gosh) ಈ ರೀತಿ ಕ್ರೇಜ್ ಹುಟ್ಟು ಹಾಕಿದ್ದರು.
ಸಖತ್ ಫೇಮಸ್ ಆಗ್ತಿದ್ದಾರೆ ‘ಮಿಸ್ಟರಿ ಗರ್ಲ್’
ಇದೀಗ ದೀಪಿಕಾ ಘೋಷ್ ರೀತಿಯಲ್ಲೇ ಈಕೆಯೂ ಕೂಡ ಸಖತ್ ಫೇಮಸ್ ಆಗುತ್ತಿದ್ದಾರೆ. ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಂಡ ಈಕೆ ಹೆಸರು ದೀಪಿಕಾ, ಸದ್ಯ ಆಕೆ ಬಗ್ಗೆ ಅನೇಕ ಮೀಮ್ಸ್, ಟ್ರೋಲ್ಗಳು ಬರುತ್ತಿವೆ. ಇದನೆಲ್ಲಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಅಕೆಯೂ ಖುಷಿಪಟ್ಟಳು, ಕಿಚಾಯಿಸಿದವರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದಳು. ಈಗ ಚೆನ್ನೈ ಹಾಗೂ ಕೋಲ್ಕತಾ ನಡುವಿನ ಪಂದ್ಯದ ಬಳಿಕ ಹೊಸ ಮಿಸ್ಟರಿ ಗರ್ಲ್ ಟ್ರೆಂಡ್ ಆಗುತ್ತಿದ್ದಾಳೆ.
IPL aate hi kaam suru kr diye, cameraman😂 pic.twitter.com/xJhGznTcn8
— Sami Shaikh (@samishaikh_) March 26, 2022
ಈ ಹಿಂದೆಯೂ ಟ್ರೆಂಡ್ ಆಗಿದ್ದ ಮಿಸ್ಟರಿ ಗರ್ಲ್ಸ್!
2020ರ ಪಂಜಾಬ್ ಹಾಗೂ ಮುಂಬೈ ನಡುವಿನ ಸೂಪರ್ ಓವರ್ ಹಣಾಹಣಿ ಸಂದರ್ಭದಲ್ಲಿ ಕಾಣಿಸಿಕೊಂಡ ಸೂಪರ್ ಓವರ್ ಗರ್ಲ್ ರಿಯಾನಾ ಲಾಲ್ವಾನಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕವಿಯಾ(ಕಾವ್ಯಾ) ಮಾರನ್, ಆರ್‌ಸಿಬಿ ತಂಡದ ಮಸಾಜ್ ಥೆರಪಿಸ್ಟ್ ನವನೀತ್ ಗೌತಮ್, ರಾಜಸ್ಥಾನದ ಫಿಸಿಯೋ ಸಿಬ್ಬಂದಿ ಅನುಜಾ ದಳವಿ ಕೂಡಾ ಟ್ರೆಂಡ್ ಆಗಿದ್ದವರು. ಈಗ ಹೊಸ ಹುಡುಗಿ ಬಗ್ಗೆ ಫ್ಯಾನ್ಸ್ ಟ್ವಿಟ್ಟರಲ್ಲಿ ಏನು ಹೇಳಿದ್ದಾರೆ ಮುಂದೆ ಓದಿ.
#TATAIPL #IPL2022 #cameraman #iplcameraman #CSKvKKR pic.twitter.com/49jRNawWG8
— Mohd Shuaib (@talha_sid99) March 26, 2022
ಇದನ್ನೂ ಓದಿ: ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಸೋಲು, ಇಶಾನ್ ಕಿಶನ್ ಅರ್ಧ ಶತಕ ವ್ಯರ್ಥ
ಮೊದಲ ಪಂದ್ಯದಲ್ಲೇ ಚೆನ್ನೈಗೆ ಸೋಲು!
ನಿನ್ನೆ ಚೆನ್ನೈ ನೀಡಿದ್ದ 132 ರನ್ಗಳ ಗುರಿ ಬೆನ್ನತ್ತಿದ್ದ ಕೆಕೆಆರ್, ಅಂಜಿಕ್ಯಾ ರಹಾನೆ(Ajinkya Rahane) ಹಾಗೂ ವೆಂಕಟೇಶ್ ಅಯ್ಯರ್ ಆರಂಭಿಕ ಆಟಗಾರರಾಗಿ ಗ್ರೌಂಡ್ಗೆ ಎಂಟ್ರಿಯಾಗಿದ್ದರು. ಈ ಜೋಡಿ 43 ರನ್ಗಳ ಯಶಸ್ವಿಯಾಗಿ ಪೂರೈಸಿದ್ದಾಗ ವೆಂಕಟೇಶ್ ಅಯ್ಯರ್, ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಬಳಿಕ ಸ್ಕ್ರೀಜ್ಗೆ ಬಂದ ನಿತಿಶ್ ರಾಣಾ 21 ರನ್ಗಳಿಸಲಷ್ಟೇ ಸಕ್ತರಾದರು.ಕೆಕೆಆರ್ ತಂಡ 76ರನ್ಗಳಿಸಿದ್ದಾಗ ಮತ್ತೆ ಬ್ರಾವೋಗೆ ನಿತಿಶ್ ರಾಣಾ ಔಟ್ ಆದರು. ಆರಂಭಿಕ ಆಟಗಾರನಾಗಿ ಬಂದಿದ್ದ ಅಜಿಂಕ್ಯಾ ರಹಾನೆ ಉತ್ತಮ್ಮ ಪ್ರದರ್ಶನ ನೀಡಿದರು 34 ಬಾಲ್ಗಳಲ್ಲಿ 44 ರನ್ಗಳಿಸಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ಔಟ್ ಆದರು.
ಇದನ್ನೂ ಓದಿ: ಮುಂಬೈ ಕೊಟ್ಟ ಕೋಟಿ ಕೋಟಿ ವೇಸ್ಟ್ ಆಗಲಿಲ್ಲ.. ಮೊದಲ ಪಂದ್ಯದಲ್ಲೇ ಮಿಂಚಿದ ಇಶಾನ್ ಕಿಶನ್!
ವಿನ್ನಿಂಗ್ ಟಚ್ ನೀಡಿದ ಶ್ರೇಯಸ್-ಜ್ಯಾಕ್ಷನ್!
ನಿತೀಶ್ ರಾಣಾ ಔಟ್ ಆಗುತ್ತಿದ್ದಂತೆ ನಾಯಕ ಶ್ರೇಯಸ್ ಅಯ್ಯರ್ ಸ್ಕ್ರೀಜ್ಗೆ ಬಂದ ಶ್ರೇಯಸ್ ಅಯ್ಯರ್ ತಾಳ್ಮೆ ಕಳೆದುಕೊಳ್ಳದೇ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದಾರೆ. ಇವರಿಗೆ ಸಾಥ್ ನೀಡಿದ ಸ್ಯಾಮ್ ಬಿಲ್ಲಿಂಗ್ಸ್ ಅದ್ಭುತ ಆಟವಾಡಿದರು. ಸ್ಯಾಮ್ ಬಿಲ್ಲಿಂಗ್ಸ್ 22 ಬಾಲ್ಗೆ 25 ರನ್ ಗಳಿಸಿ ಔಟ್ ಆದರು. ಇನ್ನೂ ಶ್ರೇಯಸ್ ಅಯ್ಯರ್ ಔಟಾಗದೆ 19 ಬಾಲ್ಗಳಲ್ಲಿ20 ರನ್ಗಳಿಸಿ ಗೆಲುವಿನ ನಗೆ ಬೀರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ