RCB vs KKR: ಕಡಿಮೆ ರನ್​ ಟಾರ್ಗೆಟ್​ಗೂ ತಿಣುಕಾಡಿ ಗೆದ್ದ ಆರ್​ಸಿಬಿ.. ಅದಿದ್ರೆ ಇದಿಲ್ಲ-ಇದಿದ್ರೆ ಅದಿಲ್ಲ!

ಇಂದು ಟಾಸ್​(Toss) ಗೆದ್ದು ಬೌಲಿಂಗ್​ ಆಯ್ದುಕೊಂಡಿದ್ದ ಆರ್​ಸಿಬಿ ಅದ್ಭುತ ಬೌಲಿಂಗ್​ ಪ್ರದರ್ಶನ ಮಾಡಿತ್ತು. ಕೇವಲ 128ರನ್​ಗಳಿಗೆ 10 ವಿಕೆಟ್​ ಕಬಳಿಸಿತ್ತು. ಕಡಿಮೆ ಸ್ಕೋರ್​ ಟಾರ್ಗೆಟ್​ ಕೊಟ್ಟಿದ್ದ ಕೆಕೆಆರ್(KKR)​, ತಮ್ಮ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇಷ್ಟು ಕಡಿಮೆ ರನ್​ ಟಾರ್ಗೆಟ್​ ಇದ್ದರೂ ಆರ್​ಸಿಬಿ ಮಾತ್ರ ತಿಣುಕಾಡಿ ಗೆದ್ದಿದೆ. ಕಷ್ಟ ಪಟ್ಟು ಕೊನೆಗೂ ಗೆಲುವಿನ ಖಾತೆ ತೆರೆದಿದೆ. 

ಆರ್​ಸಿಬಿ ತಂಡ

ಆರ್​ಸಿಬಿ ತಂಡ

  • Share this:
ಐಪಿಎಲ್(IPL) 15ನೇ ಆವೃತ್ತಿಯ 6ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Banglore) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್(Kolakta Knight Riders) ತಂಡಗಳು ಮುಖಾಮುಖಿಯಾಗಿತ್ತು. ಎರಡೂ ತಂಡಗಳಿಗೂ ಈ ಪಂದ್ಯ ಎರಡನೇ ಮುಖಾಮುಖಿಯಾಗಿತ್ತು. ಬೌಲಿಂಗ್​(Bowling)ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ(RCB) ಬ್ಯಾಟಿಂಗ್​ನಲ್ಲಿ ಕಳಪೆ ಆಟ ಪ್ರದರ್ಶಸಿದೆ. ಮೊದಲ ಪಂದ್ಯದಲ್ಲಿ ಬೊಂಬಾಟ್​  ಬ್ಯಾಟಿಂಗ್​ ಮಾಡಿದ್ದ ಆರ್​​ಸಿಬಿ ತಂಡ ಬೌಲಿಂಗ್​ನಿಂದಾಗಿ ಪಂದ್ಯ ಸೋತಿತ್ತು. ಇಂದು ಟಾಸ್​(Toss) ಗೆದ್ದು ಬೌಲಿಂಗ್​ ಆಯ್ದುಕೊಂಡಿದ್ದ ಆರ್​ಸಿಬಿ ಅದ್ಭುತ ಬೌಲಿಂಗ್​ ಪ್ರದರ್ಶನ ಮಾಡಿತ್ತು. ಕೇವಲ 128ರನ್​ಗಳಿಗೆ 10 ವಿಕೆಟ್​ ಕಬಳಿಸಿತ್ತು. ಕಡಿಮೆ ಸ್ಕೋರ್​ ಟಾರ್ಗೆಟ್​ ಕೊಟ್ಟಿದ್ದ ಕೆಕೆಆರ್(KKR)​, ತಮ್ಮ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇಷ್ಟು ಕಡಿಮೆ ರನ್​ ಟಾರ್ಗೆಟ್​ ಇದ್ದರೂ ಆರ್​ಸಿಬಿ ಮಾತ್ರ ತಿಣುಕಾಡಿ ಗೆದ್ದಿದೆ. ಕಷ್ಟ ಪಟ್ಟು ಕೊನೆಗೂ ಗೆಲುವಿನ ಖಾತೆ ತೆರೆದಿದೆ.

ಆರ್​​ಸಿಬಿಗೆ ಆಪದ್ಬಾಂಧವನಾದ ದಿನೇಶ್​ ಕಾರ್ತಿಕ್​!

ಇನ್ನೇನು ಆರ್​​ಸಿಬಿ ಸೋಲುತ್ತೆ ಎಂದುಕೊಳ್ಳುತ್ತಿರುವ ದಿನೇಶ್ ಕಾರ್ತಿಕ್​ ಹಾಗೂ ಹರ್ಷಲ್​ ಪಟೇಲ್​ ಅವರು ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 6 ಬಾಲ್​ಗೆ 7ರನ್​ ಬೇಕಿದ್ದಾಗ. ದಿನೇಶ್ ಕಾರ್ತಿಕ್​ ಸಿಕ್ಸ್​ ಹೊಡೆದಿದ್ದು,  ಪೆವಿಲಿಯನ್​ನಲ್ಲಿ ಕೂತಿದ್ದ ಆಟಗಾರರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು. ರಾಯಲ್​ ಚಾಲೆಂರ್ಜಸ್​ 19.2 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಮೂರು ವಿಕೆಟ್​ಗಳಿಂದ ಜಯ ಸಾಧಿಸಿದೆ.

ರನ್​ ಕಲೆಹಾಕಲು ಪರದಾಡಿದ ಆರ್​ಸಿಬಿ ಆಟಗಾರರು!

129ರನ್​ಗಳ ಗುರಿ ಹೊತ್ತು ಸ್ಕ್ರೀಜ್​ಗೆ ಬಂದಿದ್ದ ಆರ್​ಸಿಬಿ ನಾಯಕ ಫಾಪ್​ ಡು ಪ್ಲೆಸಿಸ್​ ಹಾಗೂ ಅಂಜು ರಾವತ್​,  ಸ್ಕ್ರೀಜ್​ಗೆ ಬಂದ ವೇಗದಲ್ಲೇ ಡಕ್​ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. 17 ರನ್​ಗಳಿಸುವಷ್ಟರಲ್ಲಿ ನಾಯಕ ಫಾಫ್ ಡು ಪ್ಲೆಸಿಸ್​ ಸೌಥಿ ಬೌಲಿಂಗ್​ನಲ್ಲಿ ರಹಾನೆಗೆ ಕ್ಯಾಚ್​ ಕೊಟ್ಟು ಔಟ್ ಆದರು. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಕೂಡ ಶಾಕ್​ ಕೊಟ್ಟರು. ಡು ಪ್ಲೆಸಿಸ್​ ಹಿಂದೆಯೆ  12 ರನ್​ಗೆ ಔಟ್​ ಆದರು.

ತಂಡಕ್ಕೆ ಆಸರೆಯಾಗಿದ್ದ ವಿಲ್ಲಿ, ರುಥರ್ಫಾರ್ಡ್​!

17ರನ್​ಗೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​ಸಿಬಿಗೆ ವಿಲ್ಲಿ, ರುಥರ್ಪಾರ್ಡ್ ಆಸರೆಯಾದರು. ಸ್ಕೋರ್​ ಬೋರ್ಡ್​ನಲ್ಲಿ ರನ್​ ಏರಿಸುತ್ತಿದ್ದರು. ತಂಡ 62 ರನ್​ ಪೂರೈಸಿದ್ದಾಗ, 28 ಬಾಲ್​ಗಳಲ್ಲಿ 18 ರನ್​ಗಳಿಸಿದ ವಿಲ್ಲಿ ರಾಣಾಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿಕೊಂಡರು. ಇನ್ನೂ ಇವರಿಗೆ ಸಾಥ್​ ನೀಡಿಕೊಂಡು ಬಂದಿದ್ದ ರುಥರ್ಪಾರ್ಡ್ ಕೊಂಚ ಮಟ್ಟಿಗೆ ಉತ್ತಮ ಆಟ ಪ್ರದರ್ಶಿಸಿದರು. ವಿಲ್ಲಿ ಔಟ್​ ಆಗುತ್ತಿದ್ದಂತೆ ಸ್ಕ್ರೀಜ್​ಗೆ ಬಂದಿದ್ದ ಶಹಬ್ಬಾಸ್ ಅಹಮದ್​ ತಾವು ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಔಟ್​ ಆದರು. ಶಹಬ್ಬಾಸ್​​ 20 ಬಾಲ್​ಗಳಲ್ಲಿ 27ರನ್​ಗಳಿಸಿ ಔಟ್​ ಆದರು.

ಇದನ್ನೂ ಓದಿ: ಮೊನ್ನೆ ಬ್ಯಾಟಿಂಗ್​ ಬೊಂಬಾಟ್​.. ಇಂದು ಬೌಲಿಂಗ್​ ಸೂಪರ್​​.. ಆರ್​ಸಿಬಿ ಅಸಲಿ ಆಟ ಈಗ ಶುರು!

ಬೊಂಬಾಟ್​ ಬೌಲಿಂಗ್ ಮಾಡಿದ ಆರ್​ಸಿಬಿ!

ಆರ್​ಸಿಬಿ ತಂಡದ ಪ್ರತಿಯೊಬ್ಬ ಬೌಲರ್​​ ಕೂಡ ಇಂದು ಕೆಕೆಆರ್​ ಬ್ಯಾಟ್ಸ್​ಮ್ಯಾನ್​ಗಳಿಗೆ ಕಾಟ ನೀಡಿದ್ದಾರೆ. 128ರನ್​ಗಳಿಗೆ ಕೆಕೆಆರ್​ ತಂಡವನ್ನು ಕಟ್ಟಿಹಾಕಿದ್ದಾರೆ. ಆರ್​ಸಿಬಿ ಬೌಲರ್​ಗಳ ಸುನಾಮಿಯಲ್ಲಿ ಸಿಲುಕಿದ ಕೆಕೆಆರ್​ 10 ವಿಕೆಟ್​ ನಷ್ಟಕ್ಕೆ ಕೇವಲ 128ರನ್​ಗಳಿಸಿತ್ತು.

ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ ಐಪಿಎಲ್‌ನಲ್ಲಿ ಸತತ ಎರಡು ಓವರ್‌ಗಳನ್ನು ಬೌಲ್ ಮಾಡಿ ಒಂದು ರನ್ ಕೊಡದೆ 2 ವಿಕೆಟ್ ಪಡೆದ ಎರಡನೇ ಬೌಲರ್. 2020ರ ಮೊದಲ ವರ್ಷದಲ್ಲಿ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಕೋಲ್ಕತ್ತಾ ವಿರುದ್ಧ ಈ ಸಾಧನೆ ಮಾಡಿದ್ದರು. ನಾಲ್ಕು ಓವರ್​ ಮಾಡಿದ ಹರ್ಷಲ್​ ಪಟೇಲ್​ 2 ಮೇಡಿನ್​ ಓವರ್ ಮಾಡಿದ್ದಾರೆ. 11 ರನ್​ ನೀಡಿ ಎರಡು ವಿಕೆಟ್​ ಕಬಳಿಸಿದರು.

ಇದನ್ನೂ ಓದಿ: ಕೆ.ಎಲ್ ರಾಹುಲ್ ಹೆಸರಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ತಾಯಿ ಹೇಳಿದ ಸಿಹಿ ಸುಳ್ಳು ಏನ್ ಗೊತ್ತಾ?

ಉತ್ತಮ ಬೌಲಿಂಗ್​ ಪ್ರದರ್ಶಿಸಿದ ಕೆಕೆಆರ್​!

ಕೆಕೆಆರ್​ ತಂಡ 128ರನ್​ಗಳ ಟಾರ್ಗೆಟ್​ ನೀಡಿತ್ತು. ಇದನ್ನು ಡಿಫೆಂಡ್​ ಮಾಡಿಕೊಳ್ಳುವ ಅನಿವಾರ್ಯತೆ ಇತ್ತು. ಉಮೇಶ್​ ಯಾದವ್​ 4 ಓವರ್​​ಗಳಲ್ಲಿ 16ರನ್​ ನೀಡಿ 2 ವಿಕೆಟ್​ ಪಡೆದರು. ಸುನೀಲ್​ ನರೈನ್​ 4 ಓವರ್​ಗಳಲ್ಲಿ 12 ರನ್​ ನೀಡಿ
Published by:Vasudeva M
First published: