SRH vs RR: ಸಖತ್​ ಡೇಂಜರಸ್​​ ಆಗಿ ಕಾಣ್ತಿದ್ದಾರೆ RR! ಸನ್​ ರೈಸರ್ಸ್​ ವಿರುದ್ಧ ಗೆದ್ದು ಬೀಗಿದ ಸಂಜು ಟೀಂ

ಬ್ಯಾಟಿಂಗ್(Batting)​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಜಸ್ಥಾನ್​ ರಾಯಲ್ಸ್ ತಂಡ, ಬೌಲಿಂಗ್​(Bowling)ನಲ್ಲೂ ಅದ್ಭುತ ಪ್ರದರ್ಶನ ನೀಡಿ ಸಖತ್ ಡೇಂಜರಸ್​ ತಂಡವಾಗಿ ಇತರೆ ತಂಡಗಳಿಗೆ ವಾರ್ನಿಂಗ್​(Warning) ನೀಡಿದೆ. 

ಸಂಜು ಸ್ಯಾಮ್ಸನ್​, ಕೇನ್​ ವಿಲಿಯಮ್ಸನ್​

ಸಂಜು ಸ್ಯಾಮ್ಸನ್​, ಕೇನ್​ ವಿಲಿಯಮ್ಸನ್​

  • Share this:
ಐಪಿಎಲ್​(IPL) 15 ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಇಂದು ರಾಜಸ್ಥಾನ್​ ರಾಯಲ್ಸ್(Rajasthan Royals)​ ಹಾಗೂ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabada)​ ನಡುವೆ ಹಣಾಹಣಿ ನಡೀತು. ನಾಯಕ ಸಂಜು ಸ್ಯಾಮ್ಸನ್(Sanju Samson) ಹಾಫ್ ಸೆಂಚುರಿ, ಕನ್ನಡಿಗ ದೇವದತ್ ಪಡಿಕ್ಕಲ್(Devdatt Padikal) ಸ್ಫೋಟಕ ಬ್ಯಾಟಿಂಗ್‌  ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ಗೆ ಬೃಹತ್ ಮೊತ್ತದ ಟಾರ್ಗೆಟ್(Target) ನೀಡಿತ್ತು. ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಸಿಡಿಸಿತು. 211 ರನ್​ಗಳ ಗುರಿ ಬೆನ್ನತ್ತಿದ್ದ ಸನ್​ರೈಸರ್ಸ್​ ಗುರಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ. ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ಸೋಲನುಭವಿಸಿದೆ. ಬ್ಯಾಟಿಂಗ್(Batting)​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಜಸ್ಥಾನ್​ ರಾಯಲ್ಸ್ ತಂಡ, ಬೌಲಿಂಗ್​(Bowling)ನಲ್ಲೂ ಅದ್ಭುತ ಪ್ರದರ್ಶನ ನೀಡಿ ಸಖತ್ ಡೇಂಜರಸ್​ ತಂಡವಾಗಿ ಇತರೆ ತಂಡಗಳಿಗೆ ವಾರ್ನಿಂಗ್​(Warning) ನೀಡಿದೆ. 

ಎಸ್​ಆರ್​ಹೆಚ್​​ಗೆ ಕೈಕೊಟ್ಟ ಓಪನರ್ಸ್​!

211 ರನ್​ ಗುರಿ ಹೊತ್ತಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕೇನ್​ ವಿಲಿಯಮ್ಸನ್​ ಹಾಗೂ ಅಭಿಷೇಕ್​ ಶರ್ಮಾ ಓಪನರ್ಸ್​ ಆಗಿ ಕಣಕ್ಕೆ ಇಳಿದಿದ್ದರು. ಎಸ್​ಆರ್​ಎಚ್​ ತಂಡ 3ರನ್​ಗಳಿಸಿದ್ದಾಗ 2 ರನ್​ಗಳಿಸಿದ ಕೇನ್​ ವಿಲಿಯಮ್ಸನ್​ ಔಟ್ ಆಗಿ ಪೆವಿಲಿಯನ್ ಸೇರಿದರು. ಇವರ ಹಿಂದೆಯೆ ರಾಹುಲ್​ ತ್ರಿಪಾಟಿ ಡಕ್​ ಔಟ್​ ಆಗಿ ಸ್ಕ್ರೀಜ್​ಗೆ ಬಂದ ವೇಗದಲ್ಲೇ ಪೆವಿಲಿಯನ್​ಗೆ ಮರಳಿದರು. ಇದಾದ ಬಳಿಕ 9 ಬೌಲ್​ ಎದುರಿಸಿದ ನಿಕಲೋಸ್ ಪೂರನ್​ ಕೂಡ ಸೊನ್ನೆ ಸುತ್ತಿದರು. ಎಸ್​​ಆರ್​ಎಚ್​ ತಂಡ 29ರನ್​ಗಳಿಸುವಷ್ಟರಲ್ಲೇ ಪ್ರಮುಖ ನಾಲ್ಕು ಬ್ಯಾಟ್ಸ್​​ಮನ್​ಗಳನ್ನು ಕಳೆದುಕೊಂಡಿತ್ತು. 106ರನ್​ಗಳಿಸುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡಿತ್ತು.

ಕೊನೆವರೆಗೂ ಹೋರಾಡಿದ ಸುಂದರ್​-ಮಾರ್ಕ್ರಂ!

ಇತ್ತ ವಿಕೆಟ್​ ಮೇಲೆ ವಿಕೆಟ್​ ಬೀಳುತ್ತಿದ್ದರು ಮಾರ್ಕ್ರಂ ಮಾತ್ರ ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ರೆಡಿ ಇರಲಿಲ್ಲ.  41 ಬಾಲ್​ಗಳಲ್ಲಿ 57 ರನ್​ಗಳಿಸಿ ಕೊನೆವರೆಗೂ ಹೋರಾಡಿದರು. ಇನ್ನೂ ಇವರಿಗೆ ಸಾಥ್​ ಕೊಟ್ಟ ಮತ್ತೊಬ್ಬ ಆರ್​ಸಿಬಿ ತಂಡ ಮಾಜಿ ಆಟಗಾರ ವಾಷಿಂಗ್ ಟನ್​ ಸುಂದರ್​ 14 ಬಾಲ್​ಗಳಲ್ಲಿ 40 ರನ್​ಗಳಿಸಿ ಔಟ್​ ಆದರು. ಇನ್ನೂ ಕೊನೆಯದಾಗಿ ಎಸ್​ಆರ್​ಎಚ್​ 20 ಓವರ್​ಗಳಲ್ಲಿ 148 ರನ್​ಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ 61ರನ್​ಗಳಿಂದ ಆರ್​ಆರ್​ ತಂಡ ಭರ್ಜರಿ ಗೆಲುವು ಕಂಡಿದೆ

22 ರನ್​ ಕೊಟ್ಟು 3 ವಿಕೆಟ್​ ಕಿತ್ತ ಯುಜ್ವೇಂದ್ರ ಚಹಾಲ್​!

ಆರ್​ಸಿಬಿ ತಂಡ ಕೈಬಿಟ್ಟಿದ್ದ ಯುಜ್ವೇಂದ್ರ ಚಹಾಲ್​ ಅವರನ್ನು ರಾಜಸ್ಥಾನ್​ ತಂಡ ಖರೀದಿ ಮಾಡಿತ್ತು. ಮೊದಲ ಪಂದ್ಯದಲ್ಲೇ ಯುಜ್ವೇಂದ್ರ ಚಹಾಲ್​ ಅದ್ಭುತ ಪ್ರದರ್ಶನ ನೀಡಿದ್ದಾರೆ. 4 ಓವರ್ ಮಾಡಿದ ಯುಜ್ವೇಂದ್ರ ಚಹಾಲ್​ 22 ರನ್​ ಕೊಟ್ಟು 3 ವಿಕೆಟ್​ ಕಬಳಿಸಿದ್ದಾರೆ. ಕನ್ನಡಿಗ ಪ್ರಶೀದ್ ಕೃಷ್ಣ ಕೂಡ 16 ರನ್​ ನೀಡಿ ಎರಡು ವಿಕೆಟ್​ ಪಡೆದರು.

ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದ ಸನ್​ರೈಸರ್ಸ್!

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿತು.ಯಶಸ್ವಿ ಜೈಸ್ವಾಲ್ 16 ಎಸೆತದಲ್ಲಿ 20 ರನ್ ಸಿಡಿಸಿ ಔಟಾದರು. 28 ಎಸೆತದಲ್ಲಿ 35 ರನ್ ಸಿಡಿಸಿದ ಜೋಸ್ ಬಟ್ಲರ್ ವಿಕೆಟ್ ಕೂಡ ಪತನಗೊಂಡಿತು.

ಇದನ್ನೂ ಓದಿ: RCB ಐಪಿಎಲ್ ಗೆದ್ದಾಗ ನೆನಪಾಗೋದು ಕುಚಿಕು ಗೆಳೆಯ! Kohli ಮನದಾಳ ಮಾತು

ಗ್ರೌಂಡ್​ ಘರ್ಜಿಸಿದ ನಾಯಕ ಸಂಜು ಸ್ಯಾಮ್ಸನ್​!

ಆರಂಭಿಕರ ನಿರ್ಗಮನದ ಬಳಿಕ, ನಾಯಕ ಸಂಜು ಸ್ಯಾಮ್ಸನ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಅದ್ಭುತ ಜೊತೆಯಾಟಕ್ಕೆ ಸಾಕ್ಷಿಯಾದರು. ಸಂಜು ಹಾಗೂ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್‌ನಿಂದ ರಾಜಸ್ಥಾನ ರಾಯಲ್ಸ್ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಸಂಜು ಸ್ಯಾಮ್ಸನ್ 27 ಎಸೆತದಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್  ನೆರವಿನಿಂದ 55 ರನ್ ಸಿಡಿಸಿ ಔಟಾದರು. ಇತ್ತ ಪಡಿಕ್ಕಲ್ 29 ಎಸೆತದಲ್ಲಿ 41 ರನ್ ಸಿಡಿಸಿದರು.

ಇದನ್ನು ಓದಿ: ಹಾರ್ದಿಕ್​ ವಿಕೆಟ್ ಕಿತ್ತಿದ್ದಕ್ಕೆ ಕೃನಾಲ್​ ಪಾಂಡ್ಯಗೆ ಮನೆಲಿ ಬೈದ್ರಾ? ಮ್ಯಾಚ್ ಮುಗಿದ ಮೇಲೆ ಏನಾಯ್ತು?

ಈ ಸೀಸನ್​ ಗರಿಷ್ಠ ರನ್​ ಟಾರ್ಗೆಟ್​ ಕೊಟ್ಟಿದ್ದ ಆರ್​ಆರ್​!

ಸಂಜು ಸ್ಯಾಮ್ಸನ್ ಹಾಗೂ ದೇವದತ್​ ಪಡಿಕ್ಕಲ್​ ಔಟಾದ ನಂತರ ಹೆಟ್ಮೆಯರ್​ ಹಾಗೂ ಪರಾಗ್​ ಸ್ಕ್ರೀಜ್​ಗೆ ಬಂದರು. ಹೆಟ್ಮೆಯರ್ 32  ರನ್ ಸಿಡಿಸಿ ಔಟಾದರು. ಪರಾಗ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ 210 ರನ್ ಸಿಡಿಸಿತು.
Published by:Vasudeva M
First published: