GT vs LSG: ಗುಜರಾತ್​ ಟೈಟನ್ಸ್​ ಘರ್ಜನೆಗೆ ಬೆಚ್ಚಿದ ಲಕ್ನೋ ಸೂಪರ್​ ಜೈಂಟ್ಸ್ ​! ಮತ್ತೆ ಹೀರೋ ಆದ ತೇವಾಟಿಯ

ಹಾರ್ದಿಕ್​ ಪಾಂಡ್ಯ(Hardik Pandya) ನಾಯಕತ್ವದಲ್ಲಿ ಗುಜರಾತ್​ ಟೈಟಾನ್ಸ್​ ಕಣಕ್ಕಿಳಿದಿದ್ದರು, ಅತ್ತ ಕೆ.ಎಲ್​ ರಾಹುಲ್​(KL Rahul) ನಾಯಕತ್ವದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಅಖಾಡಕ್ಕೆ ಇಳಿದಿತ್ತು. ಈ ಹೊಸ ತಂಡಗಳ ರಣರೋಚಕ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ಜಯ(Win) ದಾಖಲಿಸಿದೆ.

ಹಾರ್ದಿಕ್​ ಪಾಂಡ್ಯ, ಕೆ.ಎಲ್​ ರಾಹುಲ್​

ಹಾರ್ದಿಕ್​ ಪಾಂಡ್ಯ, ಕೆ.ಎಲ್​ ರಾಹುಲ್​

  • Share this:
ಇಂದು ಐಪಿಎಲ್(IPL)​ 2022 15ನೇ ಆವೃತ್ತಿಯ ಮೊದಲ ರಣ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಎರಡು ತಂಡಗಳು ಈ ಬಾರಿ ಐಪಿಎಲ್​ಗೆ ಹೊಸದಾಗಿ ಸೇರ್ಪಡೆಗೊಂಡಿದ್ದರು. ಹೀಗಾಗಿ ಇಂದಿನ ಪಂದ್ಯದ ಮೇಲೆ ಭಾರೀ ನೀರಿಕ್ಷೆ ಇತ್ತು. ಹೊಸದಾಗಿ ಸೇರ್ಪಡೆಗೊಂಡಿದ್ದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ಹಾಗೂ ಗುಜರಾತ್​ ಟೈಟನ್ಸ್(Gujarat Titans)​ ಮೊಟ್ಟ ಮೊದಲ ಬಾರಿಗೆ ಐಪಿಎಲ್​ ರಣರಂಗದಲ್ಲಿ ಹಣಾಹಣಿ ನಡೆಸಿತು. ಹಾರ್ದಿಕ್​ ಪಾಂಡ್ಯ(Hardik Pandya) ನಾಯಕತ್ವದಲ್ಲಿ ಗುಜರಾತ್​ ಟೈಟಾನ್ಸ್​ ಕಣಕ್ಕಿಳಿದಿದ್ದರು, ಅತ್ತ ಕೆ.ಎಲ್​ ರಾಹುಲ್​(KL Rahul) ನಾಯಕತ್ವದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಅಖಾಡಕ್ಕೆ ಇಳಿದಿತ್ತು. ಈ ಹೊಸ ತಂಡಗಳ ರಣರೋಚಕ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ಜಯ(Win) ದಾಖಲಿಸಿದೆ.

ಮತ್ತೆ ಹೀರೋ ಆದ ರಾಹುಲ್​ ತೇವಾಟಿಯ!

ರಾಹುಲ್​ ತೇವಾಟಿಯ ಬಗ್ಗೆ ಹೆಚ್ಚೆನೂ ಹೇಳಬೇಕಿಲ್ಲ.. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಳೆದ ಸೀಸನ್​ನಲ್ಲಿ ರಾಜಸ್ಥಾನ ರಾಯಲ್ಸ್​ ಪರ ರಾಹುಲ್​ ತೇವಾಟಿಯ ಆಡಿದ್ದರು. ಸೋಲುವ ಹಂತದಲ್ಲಿದ್ದ ಪಂದ್ಯಗಳನ್ನು ಒಂಟಿಯಾಗಿ ಹೋರಾಡಿ ತೇವಾಟಿಯ ಗೆಲ್ಲಿಸಿದ್ದರು. ತಂಡ ಚೇಂಜ್​ ಆದರೂ, ರಾಹುಲ್ ತೇವಾಟಿಯ ಖದರ್​ ಮಾತ್ರ ಹಾಗೇ ಇದೆ, ಸೋಲಿನ ಸುಳಿಯಲ್ಲಿ ಇನ್ನೇನು ಗುಜರಾತ್​ ಜೈಂಟ್ಸ್​​ ಸಿಲುಕುತ್ತೆ ಎನ್ನುವಾಗ ತೇವಾಟಿಯ ಆಕರ್ಷಕ ಆಟ ಆಡಿ ಗೆಲ್ಲಿಸಿದ್ದಾರೆ. ಇನ್ನೂ ತೇವಾಟಿಯಾಗೆ ಡೇವಿಡ್​ ಮಿಲ್ಲರ್​ ಸಾಥ್​ ನೀಡಿದರು. ಡೇವಿಡ್​ ಮಿಲ್ಲರ್​ 21 ಬಾಲ್​ಗಳಲ್ಲಿ 30 ರನ್​ಗಳಿಸಿ ಔಟ್​ ಆದರು.

ವಿನ್ನಿಂಗ್​ ಫೈನಲ್ ಟಚ್​ ಕೊಟ್ಟ ಕನ್ನಡಿಗ ಮನೋಹರ್​!

ಮಿಲ್ಲರ್​ ಔಟ್​ ಆದ ಬಳಿಕ ಸ್ಕ್ರೀಜ್​​ಗೆ ಕನ್ನಡಿಗ ಅಭಿನವ್​ ಮನೋಹರ್ ಎಂಟ್ರಿಯಾದರು. ಬರುತ್ತಿದ್ದಂತೆ ತಮ್ಮ ಖದರ್​ ತೋರಿದ ಕನ್ನಡಗಿ ಅಭಿನವ್​ ಮನೋಹರ್​ 7 ಬಾಲ್​​ಗೆ 15 ರನ್​​ಗಳಸಿದರು. ಇನ್ನೂ ಇತ್ತ ಇಂದಿನ ಪಂದ್ಯ ಹೀರೋ ರಾಹುಲ್​ ತೇವಾಟಿಯ 24 ಬಾಲ್​ಗೆ 40 ರನ್​ಗಳಿಸಿ ಅಜೇಯರಾಗುಳಿದರು.​​ ಈ ಮೂಲಕ ಗುಜರಾತ್​ ಟೈಟನ್ಸ್​​​ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

ಮೊದಲ ಎಸೆತದಲ್ಲೇ ರಾಹುಲ್​ ಡಕ್ಔಟ್​!

ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್ ಆಯ್ದುಕೊಂಡಿತು. ಶಮಿ ಎಸೆದ ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ಪೆವಿಲಿಯನ್ ಸೇರಿದರು. 3ನೇ ಓವರ್​ನ 2ನೇ ಎಸೆತದಲ್ಲಿ ಆರಂಭಿಕ ಕ್ವಿಂಟನ್ ಡಿ ಕಾಕ್ ಕ್ಲೀನ್ ಬೌಲ್ಡ್ ಆದರು. ಕೇವಲ 7 ರನ್​ ಗಳಿಸಿ ಡಿ ಕಾಕ್​ ಪೆವಿಲಿಯನ್​ಗೆ ಮರಳಿದರು. ರಾಹುಲ್ ವಿಕೆಟ್ ಬಳಿಕ ಬಂದಿದ್ದ ಲೂಯಿಸ್ 10ರನ್​ ಗಳಿಸಿದ್ದಾಗ ಶಮಿ ಎಸೆತವನ್ನು ಸಿಕ್ಸರ್ ಕಳುಹಿಸುವ ಯತ್ನದಲ್ಲಿ ಲೂಯಿಸ್ ಔಟಾಗಿದ್ದಾರೆ. ಗಿಲ್ ಹಿಡಿದ ಅದ್ಬುತ ಕ್ಯಾಚ್ ಕಂಡು ಇಡೀ ಮೈದಾನ ಆಶ್ಚರ್ಯಚಕಿತಗೊಂಡಿತು. 10 ಓವರ್‌ಗಳ ಅಂತ್ಯಕ್ಕೆ ಲಖನೌ 4 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿತ್ತು.

ಇದನ್ನೂ ಓದಿ: KL ರಾಹುಲ್ ಈ ಅಫ್ಘಾನ್ ಬೌಲರ್ ಹೆಸರು ಕೇಳಿದ್ರೆ ನಡುಗುತ್ತಾರಂತೆ, ಇಂದಿನ ಪಂದ್ಯದ ಮೇನ್ ಆಟ್ರಾಕ್ಷನ್ ಇವರೇ!

ಕೊನೆಯಲ್ಲಿ ಸಿಡಿದಿದ್ದ ದೀಪಕ್ ಹುಡಾ, ಆಯುಶ್​!

ಒಂದೆಡೆ 10 ಓವರ್​ಗೆ ಕಡಿಮೆ ಸ್ಕೋರ್​  ಮಾಡಿದ್ದ ಲಕ್ನೋ ಸೂಪರ್​ ಜೈಂಟ್ಸ್​​​ ತಂಡಕ್ಕೆ ದೀಪಕ್​ ಹೂಡಾ ಹಾಗೂ ಆಯುಶ್​ ಸಿಡಿದೆದಿದ್ದರು. ಗ್ರೌಂಡ್​ನ ಮೂಲೆ ಮೂಲೆಗೂ ಬಾಲ್​ ಕಳುಹಿಸಿದರು. ಇನ್ನೂ ದೀಪಕ್​ ಹೂಡಾ 41 ಬಾಲ್​ಗಳಲ್ಲಿ55 ರನ್​ಗಳಿಸಿ ಔಟ್ ಆದರು. ಆಯುಶ್​ ಕೂಡ 41 ಬಾಲ್​ಗಳಲ್ಲಿ 54 ರನ್​ಗಳಿಸಿ ಔಟ್ ಆದರೂ, ಕೊನೆಯಲ್ಲಿ ಬಂದ ಕೃನಾಲ್​ ಪಾಂಡ್ಯ 13 ಬಾಲ್​ಗಳಲ್ಲಿ 21 ರನ್​ಗಳಿಸಿ ತಂಡ 158 ರನ್​ಗಳಿಸಲು ಸಹಾಯ ಮಾಡಿದರು.
Published by:Vasudeva M
First published: