ಇಂದು 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಸೆಣಸಾಡುತ್ತಿವೆ. ಈ ಪಂದ್ಯವು ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ದಕ್ಷಿಣದ ಪ್ರಮುಖ ತಂಡದಗಳಾದ ಸನ್ ರೈಸರ್ಸ್ ಹೈದರಾಬಾದ್ (Sun Risers Hyderabad) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ತಂಡಗಳು 15ನೇ ಅವೃತ್ತಿಯ ಐಪಿಎಲ್ ನಲ್ಲಿ ಕಾದಾಟ ನಡೆಸಲಿದೆ. ಟಾಸ್ (Toss) ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಗೆಲುವಿನ ನಾಗಾಲೋಟದಲ್ಲಿರುವ ಆರ್ಸಿಬಿ (RCB) ತಂಡವು ಈ ಪಂದ್ಯವನ್ನು ಗೆದ್ದು ಕ್ವಲಿಪೈಯರ್ ಹಂತಕ್ಕೆ ಸುಲಭ ದಾರಿಯನ್ನು ಮಾಡಿಕೊಳ್ಳಲು ಹೌಣಿಸುತ್ತಿದ್ದರೆ, ಹೈದರಾಬಾದ್ ಅಂಕಪಟ್ಟಿಯಲ್ಲಿ ಮೇಲೆರಲು ಸಿದ್ಧವಾಗಿ ನಿಂತಿದೆ. ಈ ಪಂದ್ಯದಲ್ಲೂ ಆರ್ಸಿಬಿ ಬೃಹತ್ ರನ್ ಕಲೆಹಾಕುವ ನಿರೀಕ್ಷೆ ಹೆಚ್ಚಿದೆ. ಇಷ್ಟೂ ಪಂದ್ಯಗಳಲ್ಲಿ ಡಲ್ ಆಗಿರವ ವಿರಾಟ್ ಕೊಹ್ಲಿ (Virat Kohli) ಇಂದಿನ ಪಂದ್ಯದಲ್ಲಿ ಅಬ್ಬರಿಸಿಲಿದ್ದಾರೆ ಅಂತಿದ್ದಾರೆ ಅಭಿಮಾನಿಗಳು.
ಪಿಚ್ ವರದಿ ಏನ್ ಹೇಳುತ್ತೆ?
ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಕಳೆದ ಪಂದ್ಯವು ಕಡಿಮೆ ಸ್ಕೋರ್ ಆಗಿತ್ತು. ಅಲ್ಲದೇ ಇಂದು ತೇವಾಂಶದ ಅಂಶದಿಂದ ಕೂಡಿರುವ ಸಾಧ್ಯತೆ ಇದ್ದು, ಸ್ಪನ್ನರ್ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವ ಸಾದ್ಯತೆ ಇದೆ.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್
ಇದನ್ನೂ ಓದಿ: ಅಂಪೈರ್ ತೀರ್ಪು ಪ್ರಶ್ನಿಸಿದ್ದಕ್ಕೆ ರಿಷಭ್ಗೆ ಭಾರೀ ದಂಡ! ಗ್ರೌಂಡ್ಗೆ ನುಗ್ಗಿದ ಕೋಚ್ಗೂ ತಲೆದಂಡ
ಸನ್ ರೈಸರ್ಸ್ ಪ್ಲೇಯಿಂಗ್ ಇಲೆವೆನ್
ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್ (ವಿ.ಕೀ), ಶಶಾಂಕ್ ಸಿಂಗ್, ಜೆ.ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್
ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಆರ್ಸಿಬಿ
ಸನ್ ರೈಸರ್ಸ್ ಹೈದರಾಬಾದ್ ತಂಡ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲುಗಳನ್ನು ತಂಡ ಕಂಡಿದೆ. ಇನ್ನೊಂದೆಡೆ 7 ಪಂದ್ಯಗಳನ್ನು ಆಡಿರುವ ಆರ್ ಸಿಬಿ ತಂಡ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 5 ಗೆಲುವು ಹಾಗೂ 2 ಸೋಲುಗಳನ್ನು ತಂಡ ಕಂಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಗೆಲುವು ಸಾಧಿಸಿದೆ.
ಇದನ್ನೂ ಓದಿ: W, W, 1, 4, W, W ಆಂಡ್ರೆ ರಸೆಲ್ 'ಮಿಸೈಲ್'ಗೆ ಪತರುಗುಟ್ಟಿದ ಗುಜರಾತ್ ಟೈಟನ್ಸ್!
ರಿಷಭ್ ಪಂತ್ಗೆ 1.15 ಕೋಟಿ ರೂ ದಂಡ
ನಿನ್ನೆ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಇನಿಂಗ್ಸ್ನ ಕೊನೆಯ ಓವರ್ನ ಮೂರನೇ ಎಸೆತವು ನೋಬಾಲ್ ಆಗಿತ್ತು ಎಂದು ಡಗೌಟ್ನಲ್ಲಿ ಕೂತಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಸಹ ಆಟಗಾರ ಶಾರ್ದೂಲ್ ಠಾಕೂರ್ ಆಗ್ರಹಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಮೈದಾನಕ್ಕೆ ತೆರಳಿ ತೀರ್ಪನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದರು. ಇದು ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಡೆಲ್ಲಿ ನಾಯಕ ರಿಷಭ್ ಪಂತ್ಗೆ ಪಂದ್ಯದ ಸಂಭಾವನೆಯ 100% ಅಂದರೆ 1.15 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ