RCB vs RR: ಶಹಬಾಜ್​​ ಸೂಪರ್​​.. ಡಿಕೆ​ ದರ್ಬಾರ್​​! ರೋಚಕ ಸಮರದಲ್ಲಿ ಗೆದ್ದ ಆರ್​​ಸಿಬಿ ಬಾಯ್ಸ್​

ರಣ ರೋಚಕ ಪಂದ್ಯದಲ್ಲಿ ಆರ್​​ಸಿಬಿ ತಂಡ ಗೆದ್ದು ಬೀಗಿದೆ. ದಿಕ್ಕು ತೋಚದೇ ಸೋಲಿನ ಹಾದಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ದಿನೇಶ್​ ಕಾರ್ತಿಕ್(Dinesh Karhik)​ ಹಾಗೂ ಶಹಬ್ಬಾಸ್ ಅಹಮದ್ ಅದ್ಭುತ ಆಟ ಪ್ರದರ್ಶಿಸಿ ಆರ್​ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶಹಬಾಜ್​, ದಿನೇಶ್​ ಕಾರ್ತಿಕ್​

ಶಹಬಾಜ್​, ದಿನೇಶ್​ ಕಾರ್ತಿಕ್​

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಸೀಸನ್‌ 13ನೇ ಪಂದ್ಯದಲ್ಲಿ ಆರ್​ಆರ್​(RR) ಹಾಗೂ ಆರ್​ಸಿಬಿ(RCB) ಮುಖಾಮುಖಿಯಾಗಿದೆ. ಈ ರೋಚಕ ಪಂದ್ಯಲ್ಕೆ ಮುಂಬೈ(Mumbai)ನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗಿತ್ತು. ಸಂಜು ಸ್ಯಾಮ್ಸನ್(Sanju Samson)​ ನೇತೃತ್ವದ ತಂಡಕ್ಕೆ ಫಾಫ್​ ಡು ಪ್ಲೆಸಿಸ್​(Faf Du Plessis) ನಾಯಕತ್ವದ ಆರ್​ಸಿಬಿ ತಂಡ ಸವಾಲು ಹಾಕಿತ್ತು. ರಣ ರೋಚಕ ಪಂದ್ಯದಲ್ಲಿ ಆರ್​​ಸಿಬಿ ತಂಡ ಗೆದ್ದು ಬೀಗಿದೆ. ದಿಕ್ಕು ತೋಚದೇ ಸೋಲಿನ ಹಾದಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ದಿನೇಶ್​ ಕಾರ್ತಿಕ್(Dinesh Karhik)​ ಹಾಗೂ ಶಹಬ್ಬಾಸ್ ಅಹಮದ್ ಅದ್ಭುತ ಆಟ ಪ್ರದರ್ಶಿಸಿ ಆರ್​ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಕೆಟ್​ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ಆರ್​ಸಿಬಿ ಈ ಇಬ್ಬರು ಆಟಗಾರರು ನೆರವಾಗಿ ಕೊನೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ವಿಜಯ ಲಕ್ಷ್ಮಿಯನ್ನು ಒಲಿಸಿಕೊಟ್ಟಿದ್ದಾರೆ. 170 ರನ್​ಗಳ ಗುರಿ ಬೆನ್ನತ್ತಿದ್ದ ಆರ್​​ಸಿಬಿ  ಯಶಸ್ವಿಯಾಗಿದೆ.

ಶಹಬಾಜ್ ಸೂಪರ್​.. ದಿನೇಶ್​ ದರ್ಬಾರ್​!


87 ರನ್ ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ವೇಳೆ, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಕೇವಲ 33 ಎಸೆತಗಳಲ್ಲಿ 67 ರನ್ ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಲು ನೆರವಾದರು. ಗ್ರೌಂಡ್​ನ ಮೂಲೆ ಮೂಲೆಗೆ ಈ ಇಬ್ಬರು ಆಟಗಾರರು ಬಾಲ್​ನ ಕಳುಹಿಸಿದ್ದಾರೆ. ಇನ್ನೂ ಶಹಬಾಜ್​ ಅಹಮದ್​ 26 ಬಾಲ್​ಗಳಲ್ಲಿ 46 ರನ್​ಗಳಿಸಿ ಔಟ್​ ಆದರು. ಇತ್ತ ದಿನೇಶ್​ ಕಾರ್ತಿಕ್​ 23 ಬಾಲ್​ಗಳಲ್ಲಿ 44 ರನ್​​ಗಳಿಸಿ ಆರ್​ಸಿಬಿಗೆ ಗೆಲುವು ತಂದುಕೊಟ್ಟಿದ್ದಾರೆ. ಇಲ್ಲಿ ದಿನೇಶ್ ಕಾರ್ತಿಕ್ ಅನುಭವ ಸಖತ್​ ವರ್ಕೌಟ್​ ಆಗಿದೆ. ಒಟ್ಟಾರೆ 4 ವಿಕೆಟ್​ಗಳ ರೋಚಕ ಜಯ ಕಂಡಿದೆ ರಾಯಲ್​ ಚಾಲೆಂಜರ್ಸ್  ಬೆಂಗಳೂರು.

ಉತ್ತಮ ಆಟವಾಡಿದ ಬೆಂಗಳೂರು ಓಪನರ್ಸ್​!

170ರನ್​ಗಳ ಚೇಸಿಂಗ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ಮೊದಲ ವಿಕೆಟ್​​ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಅನುಜ್ ರಾವತ್ ಅರ್ಧಶತಕದ ಜೊತೆಯಾಟವಾಡಿದ್ದರು. ಡು ಪ್ಲೆಸಿಸ್​​ 25 ಬಾಲ್​ಗಳಲ್ಲಿ 26ರನ್​ಗಳಿಸಿ ಔಟ್​ ಆದರು. ಇನ್ನೂ 20 ಎಸೆತಗಳಲ್ಲಿ 26ರನ್​ಗಳಿಸಿದ್ದ ಅನುಜ್​ ಕೂಡ ಕ್ಯಾಚ್​ ನೀಡಿ ಔಟ್​ ಆದರು.ಪವರ್ ಪ್ಲೇ ಮುಗಿದ ಬಳಿಕ, ಚಾಹಲ್ ಎಸೆತದಲ್ಲಿ ಫಾಫ್ ಡು ಪ್ಲೆಸಿಸ್, ಬೌಲ್ಟ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದಾಗ ಆರ್ ಸಿಬಿ ಮೊದಲ ಆಘಾತ ಕಂಡಿತು.

ಇದನ್ನೂ ಓದಿ: ಚೆನ್ನೈ ಸೂಪರ್​ ಕಿಂಗ್ಸ್​ಗೆ ಭಾರೀ ಮುಖಭಂಗ.. ಮೂರಕ್ಕೆ ಮೂರೂ ಸೋಲು! ಮುಂದೇನು ಕಥೆ

ಕೇವಲ 5ರನ್​ಗಳಿಸಿ ಔಟ್​ ಆದ ಕೊಹ್ಲಿ, ವಿಲ್ಲಿ!

ಮಾಜಿ ನಾಯಕ ವಿರಾಟ್ ಕೊಹ್ಲಿ  ಮತ್ತೊಮ್ಮೆ ವೈಫಲ್ಯ ಎದುರಿಸಿದರು. 6 ಎಸೆತ ಎದುರಿಸಿದ ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್ ಮಾಡಿದ ಆಕರ್ಷಕ ರನೌಟ್​ಗೆ ಬಲಿಯಾದರು. ಬಡ್ತಿ ಪಡೆದು ಬಂದು ಆಡಿದ ಡೇವಿಡ್ ವಿಲ್ಲಿ ಕೇವಲ 2 ಎಸೆತಗಳಿಗೆ ತಮ್ಮ ಆಟ ಮುಗಿಸಿದಾಗ ಆರ್ ಸಿಬಿ 62 ರನ್ ಗೆ 4 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು.

ಇದನ್ನೂ ಓದಿ: ಐಪಿಎಲ್​ನ ಮೊದಲ ವಾರದಲ್ಲಿ ದಾಖಲಾದ ವಿಶೇಷ ದಾಖಲೆಗಳು..!

ಇದಾದ ಬಳಿಕ ಸ್ಕ್ರೀಜ್​ಗೆ ಬಂದಿದ್ದ ಶಹಬಾಜ್​ ಅಹಮದ್​ ಹಾಗೂ ದಿನೇಶ್ ಕಾರ್ತಿಕ್​ ಸೂಪರ್​ ಜೊತೆಯಾಟ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ ಶಹಬಾಜ್​ ಔಟ್​ ಆದ ಬಳಿಕ ಹರ್ಷಲ್​ ಪಟೇಲ್​ ಸಿಕ್ಸ್ ಭಾರಿಸುವ ಮೂಲಕ ಆರ್​ಸಿಬಿಗೆ ಗೆಲುವಯ ತಂದು ಕೊಟ್ಟರು.


Published by:Vasudeva M
First published: