IPL 2022- LSG Vs CSK: ಯಾರು ತೆರೆಯಲ್ಲಿದ್ದಾರೆ ಗೆಲುವಿನ ಖಾತೆ? ಹೀಗಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ 15ನೇ ಸೀಸನ್‌ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿವೆ. ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಮ್ಯಾಚ್ ನಡೆಯಲಿದ್ದು, ಉಭಯ ತಂಡಗಳಲ್ಲಿ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ...

ಲಕ್ನೋ vs ಚೆನ್ನೈ

ಲಕ್ನೋ vs ಚೆನ್ನೈ

  • Share this:
ಐಪಿಎಲ್ 2022ರ (IPL 2022)  15ನೇ ಸೀಸನ್ ನ  7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (LSG Vs CSK) ಸೆಣಸಾಡಲಿವೆ. ಮುಂಬೈನ ಬ್ರಬೋರ್ನ್ ಮೈದಾನದಲ್ಲಿ (Brabourne Stadium)  ನಡೆಯಲಿದ್ದು, ಉಭಯ ತಂಡಗಳಲ್ಲಿ ಯಾರು ಗೆಲುವಿನ ಖಾತೆ ತೆರೆಯಲಿದ್ದಾರ ಎಂಬುದನ್ನು ಕಾದುನೋಡಬೇಕಿದೆ. ಕೊಲ್ಕತ್ತಾ ಎದುರು ಮೊದಲ ಪಂದ್ಯದಲ್ಲಿ ಚೆನ್ನೈ ಸೋತರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೋಲನ್ನಪ್ಪಿತ್ತು. ಹೀಗಾಗಿ ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವಿನ ಆರಂಭ ಮಾಡಬೇಕಿದೆ. ಇನ್ನು, ಈ ಕಳೆದ ಪಂದ್ಯದಲ್ಲಿ ಆಡದ ಮೊಯೀನ್ ಅಲಿ ವಾಪಸಾಗುವುದು ಖಚಿತವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಯಾರ ಬದಲಿಗೆ ಮೋಯಿನ್ ಅಲಿ (Moeen Ali) ಅವರನ್ನು ಕಣಕ್ಕಿಳಿಸಲಿದೆ ಎಂಬುದನ್ನು ನೋಡಬೇಕಿದೆ. ಆದರೆ ಅಲಿ ಬಂದಿರುವುದು ಚೆನ್ನೈ ತಂಡಕ್ಕೆ ವರದಾನವಾದಂತಾಗಿದೆ. ಲಕ್ನೋ ತಂಡಕ್ಕೆ ಮದ್ಯಮ ಕ್ರಮಾಂಕ ಇನ್ನಷ್ಟು ಬಲಪಡಿಸಬೇಕಿದೆ.

ಪಂದ್ಯದ ವಿವರ:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಈ ಪಂದ್ಯವು ಇಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಮುಂಬೈನ ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. 7 ಗಂಟೆಗೆ ಟಾಸ್​ ನಡೆಯಲಿದೆ.

ಹೀಗಿದೆ ಪಿಚ್ ವರದಿ:

ಮುಂಬೈನ ಬ್ರಬೌರ್ನ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸಹಾಯಕವಾಗಿದ್ದು, ಮೊದಲು ಬ್ಯಾಟಿಂಗ್ ಮಾಡುವ ತಂಡ ಸರಿಸುಮಾರು 160-170ರ ಆಸುಪಾಸಿನಲ್ಲಿ ರನ್​ ಕಲೆಹಾಕಲಿದೆ. ಜೊತೆಗೆ ತೇವಾಂಶ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ಸುಲಭವಾದ ಮೇಲ್ಮೈಯನ್ನು ಒದಗಿಸುವ ಪಿಚ್ ಇದಾಗಿದೆ.

ಇದನ್ನೂ ಓದಿ: IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

ತಂಡಗಳ ಬಲಾಬಲ ಹೇಗಿದೆ?:

ಉಭಯ ತಂಡಗಳು ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವ ಹಿನ್ನಲೆ ಯಾವುದೇ ಅಂಕಿ ಅಂಶಗಳಿಲ್ಲ. ಆದರೂ ಸಹ ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು,  ಎರಡೂ ತಂಡಗಳಿಂದ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ.

ಚೆನ್ನೈ ಸೂಪರ್ ಕಿಂಗ್ಸ್:

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿರುವ ಅನಿವಾರ್ಯತೆ ಇದೆ. ಅಲ್ಲದೇ ಮೊಯಿನ್ ಅಲಿ ಮರಳಿರುವುದು ತಂಡವನ್ನು ಬಲಪಡಿಸಿದ್ದು, ಜೊತೆಗೆ ಎಂಎಸ್ ಧೋನಿ ಉತ್ತಮ ಪಾರ್ಮ್​ ನಲ್ಲಿರುವುದು ಸ್ವಲ್ಪ ನೆಮ್ಮದಿಯ ವಿಷಯವಾಗಿದೆ. ಆದರೆ ಉತ್ತಪ್ಪಾ, ರುತುರಾಜ್ ಗಾಯಕ್ವಾಡ್ ಉತ್ತಮ ಓಪನಿಂಗ್​ ನೀಡುವ ಅವಶ್ಯಕತೆ ಬಹಳವಾಗಿದೆ.

ಲಕ್ನೋ ಸೂಪರ್ ಜೈಂಟ್ಸ್:

ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದು, ಈ ಬಾರಿ ಸಿಡಿದೇಳುವ ಅವಶ್ಯತೆ ಇದೆ. ಅಲ್ಲದೇ ಇಬ್ಬರಿಬ್ಬರಿಂದ ಉತ್ತಮ ಜೊತೆಯಾಟದ ಓಪನಿಂಗ್ ಅವಶ್ಯತತೆ ತಂಡಕ್ಕಿದೆ. ಆದರೆ ಮದ್ಯಮಕ್ರಮಾಂಕದಲ್ಲಿ ದೀಪಕ್ ಹೂಡಾ, ಆಯುಷ್ ಬಡೋನಿ ಮತ್ತು ಕೃನಾಲ್ ಪಾಂಡ್ಯ  ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಬಲವಾಗಿದೆ.

ಇದನ್ನೂ ಓದಿ: GT vs LSG: ಗುಜರಾತ್​ ಟೈಟನ್ಸ್​ ಘರ್ಜನೆಗೆ ಬೆಚ್ಚಿದ ಲಕ್ನೋ ಸೂಪರ್​ ಜೈಂಟ್ಸ್ ​! ಮತ್ತೆ ಹೀರೋ ಆದ ತೇವಾಟಿಯ

 LSG Vs CSK ಸಂಭಾವ್ಯ ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯೀನ್ ಅಲಿ, ಎಂಎಸ್ ಧೋನಿ (ವಿಕೆಟ್ ಕೀಪರ್), ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್ಲಕ್ನೋ ಸೂಪರ್ ಜೈಂಟ್ಸ್: ಎವಿನ್ ಲೆವಿಸ್, ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಮನೀಶ್ ಪಾಂಡೆ, ದೀಪಕ್ ಹೂಡಾ, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರವಿ ಬಿಷ್ಣೋಯ್, ಅವೇಶ್ ಖಾನ್

Published by:shrikrishna bhat
First published: