• ಹೋಂ
  • »
  • ನ್ಯೂಸ್
  • »
  • IPL
  • »
  • IPL 2022- ರೀಟೈನ್ ಆಗಲಿರುವ ಆಟಗಾರರು; ಹಣ ಎಷ್ಟು, ಹರಾಜು ಯಾವಾಗ, ಎಲ್ಲಾ ಮಾಹಿತಿ

IPL 2022- ರೀಟೈನ್ ಆಗಲಿರುವ ಆಟಗಾರರು; ಹಣ ಎಷ್ಟು, ಹರಾಜು ಯಾವಾಗ, ಎಲ್ಲಾ ಮಾಹಿತಿ

ಐಪಿಎಲ್ ಟ್ರೋಫಿ

ಐಪಿಎಲ್ ಟ್ರೋಫಿ

IPL Players Retention and other Rules- ರೀಟೈನ್ ಮಾಡಲಾಗುವ ಆಟಗಾರರ ಪಟ್ಟಿ ಕೊಡಲು ನ. 30 ಡೆಡ್​ಲೈನ್ ಇದೆ. ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಆರಂಭದಲ್ಲಿ ಹರಾಜು ನಡೆಯುವ ಸಾಧ್ಯತೆ ಇದೆ.

  • Cricketnext
  • 4-MIN READ
  • Last Updated :
  • Share this:

ಬೆಂಗಳೂರು, ನ. 26: ಐಪಿಎಲ್​ನ 14ನೇ ಆವೃತ್ತಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಈಗಾಗಲೇ ಎರಡು ಹೊಸ ತಂಡಗಳನ್ನ ಘೋಷಿಸಲಾಗಿದೆ. ಈಗ ಪಂದ್ಯಾವಳಿ ಶುರುವಾಗುವ ಮುನ್ನ ಆಟಗಾರರ ಹರಾಜಿನ ಮೇಲೆ ಎಲ್ಲರ ಕುತೂಹಲದ ಕಣ್ಣು ನೆಟ್ಟಿದೆ. ಅಲ್ಲದೆ, ಯಾವ್ಯಾವ ಆಟಗಾರರನ್ನ ಯಾವ್ಯಾವ ತಂಡಗಳು ಉಳಿಸಿಕೊಳ್ಳುತ್ತವೆ ಎಂಬ ಕುತೂಹಲವೂ ಇದೆ. ಒಂದೇ ತಂಡದಲ್ಲಿ ನಾಯಕತ್ವದ ಸಾಮರ್ಥ್ಯ ಇರುವ ಹಲವು ಆಟಗಾರರಿದ್ದರೆ ಅಂಥವರಲ್ಲಿ ಒಂದಿಬ್ಬರನ್ನ ಉಳಿಸಿಕೊಂಡು ಉಳಿದಿವರನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕ್ಯಾಪ್ಟನ್ಸಿ ಸಾಮರ್ಥ್ಯ ಇರುವ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ಅವರಿದ್ದರು. ಅವರ ಪೈಕಿ ಕಳೆದ ಸೀಸನ್​ನ ಕ್ಯಾಪ್ಟನ್ ಆಗಿದ್ದ ರಿಷಬ್ ಪಂತ್ ಅವರನ್ನ ಡೆಲ್ಲಿ ಉಳಿಸಿಕೊಳ್ಳಲಿದೆ. ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ಅವರನ್ನ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.


ಲಕ್ನೋ ತಂಡಕ್ಕೆ ಕೆಎಲ್ ರಾಹುಲ್ ನಾಯಕ?: ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರನ್ನ ಹೊಸ ತಂಡವಾಗಿರುವ ಲಕ್ನೋ ಫ್ರಾಂಚೈಸಿಯವರು ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ, ಕೆಎಲ್ ರಾಹುಲ್ ಅವರು ಲಕ್ನೋ ತಂಡದ ನಾಯಕರಾಗಲಿದ್ದಾರೆ.


ಯಾವ್ಯಾವ ತಂಡಗಳು ಯಾವ್ಯಾವ ಆಟಗಾರರನ್ನ ಉಳಿಸಿಕೊಳ್ಳಬಹುದು:


ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ಋತುರಾಜ್ ಗಾಯಕ್ವಾಡ್, ಆರ್ ಜಡೇಜಾ, ಮೊಯೀನ್ ಅಲಿ/ಸ್ಯಾಮ್ ಕುರನ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್, (ಸೂರ್ಯಕುಮಾರ್ ಯಾದವ್).
ಕೋಲ್ಕತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್, ಸುನೀಲ್ ನರೈನ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್,
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಅಕ್ಷರ್ ಪಟೇಲ್,
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ.


ಈ ಮೇಲಿನ ಪಟ್ಟಿ ಬರೀ ಸಾಧ್ಯತೆ ಮಾತ್ರ. ಮೂಲಗಳಿಂದ ತಿಳಿದ ಮಾಹಿತಿ. ಅಧಿಕೃತವಾಗಿ ಯಾವ ತಂಡವೂ ಇನ್ನೂ ಪ್ರಕಟಿಸಿಲ್ಲ. ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಎಸ್ ಧೋನಿ ನಾಯಕತ್ವವೇ ಮುಂದುವರಿಯುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಮತ್ತು ಚೆನ್ನೈ ತಂಡಗಳು ನಾಯಕನ್ನ ಫಿಕ್ಸ್ ಮಾಡಿಕೊಂಡಿವೆ. ವಿರಾಟ್ ಕೊಹ್ಲಿ ಅವರು ಆರ್​ಸಿಬಿ ಕ್ಯಾಪ್ಟನ್ಸಿಯನ್ನೂ ತೊರೆದಿರುವುದರಿಂದ ಬೆಂಗಳೂರು ತಂಡ ಹೊಸ ನಾಯಕನ ಹುಡುಕಬೇಕಿದೆ. ಆದರೆ, ಆಟಗಾರನಾಗಿ ವಿರಾಟ್ ಕೊಹ್ಲಿ ಅವರನ್ನ ರೀಟೈನ್ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ.


ಇದನ್ನೂ ಓದಿ: PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು


ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಮತ್ತು ಜಸ್​ಪ್ರೀತ್ ಬುಮ್ರಾ ಅವರನ್ನ ಉಳಿಸಿಕೊಳ್ಳಲು ನಿರ್ಧರಿಸಿಯಾಗಿದೆ. ಕೀರಾನ್ ಪೊಲಾರ್ಡ್ ಮತ್ತು ಇಶಾನ್ ಕಿಶನ್ ಅವರನ್ನೂ ರೀಟೇನ್ ಮಾಡಿಕೊಳ್ಳಬಹುದು. ಸೂರ್ಯಕುಮಾರ್ ಯಾದವ್ ಅವರನ್ನ ರಿಲೀಸ್ ಮಾಡಿ, ಹರಾಜಿನಲ್ಲಿ ಮತ್ತೆ ಖರೀದಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ಮತ್ತೊಂದು ವರದಿ ಪ್ರಕಾರ, ಅಹ್ಮದಾಬಾದ್ ಫ್ರಾಂಚೈಸಿಯವರು ಸೂರ್ಯಕುಮಾರ್ ಯಾದವ್ ಅವರನ್ನ ಪಡೆಯಲು ಪ್ರಯತ್ನಿಸಿದ್ಧಾರೆನ್ನಲಾಗಿದೆ.


ಎಷ್ಟು ಆಟಗಾರರನ್ನ ಉಳಿಸಿಕೊಳ್ಳಬಹುದು:


ಹೊಸ ನಿಯಮದ ಪ್ರಕಾರ ಕಳೆದ ಸೀಸನ್​ನಲ್ಲಿದ್ದ ಎಂಟು ಐಪಿಎಲ್ ತಂಡಗಳು ತಲಾ ಗರಿಷ್ಠ ನಾಲ್ವರು ಆಟಗಾರರನ್ನ ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಅದರಲ್ಲಿ ಗರಿಷ್ಠ ಮೂವರು ಭಾರತೀಯರು, ಗರಿಷ್ಠ ಇಬ್ಬರು ವಿದೇಶಿಯರನ್ನ ಮಾತ್ರ ರೀಟೇನ್ ಮಾಡಿಕೊಳ್ಳಬಹುದು.


ನ. 30ಕ್ಕೆ ಡೆಡ್​ಲೈನ್: ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನ ನವೆಂಬರ್ 30ರೊಳಗೆ ಬಿಸಿಸಿಐಗೆ ನೀಡಬೇಕು.


ತಂಡಗಳಿಗೆ ಬಜೆಟ್ ಎಷ್ಟು?


ಪ್ರತಿಯೊಂದು ಐಪಿಎಲ್ ತಂಡಕ್ಕೂ ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ ನಿಗದಿ ಮಾಡಲಾಗಿದೆ. ನಾಲ್ವರನ್ನ ಉಳಿಸಿಕೊಂಡರೆ ಅವರಿಗೆ 42 ಕೋಟಿ ರೂ ತೆರಬೇಕಾಗುತ್ತದೆ. ಮೂವರನ್ನ ಉಳಿಸಿಕೊಂಡರೆ 33 ಕೋಟಿ ರೂ, ಇಬ್ಬರನ್ನ ಉಳಿಸಿಕೊಂಡರೆ 24 ಕೋಟಿ ರೂ, ಒಬ್ಬರನ್ನ ಉಳಿಸಿಕೊಂಡರೆ 14 ಕೋಟಿ ರೂ ವ್ಯಯಿಸಬೇಕಾಗುತ್ತದೆ. ಉಳಿದ ಹಣದಲ್ಲಿ ಇತರ ಆಟಗಾರರನ್ನು ಈ ತಂಡಗಳು ಹರಾಜಿನಲ್ಲಿ ಕೊಳ್ಳಬೇಕಾಗುತ್ತದೆ.


ಇದನ್ನೂ ಓದಿ: Bengaluru Bulls Koo: ಧೂಳ್ ಧೂಳ್… ಗೆಲ್ಲಕ್ಕೆ ಬಿಡಲ್ಲ…! ಬೆಂಗಳೂರು ಬುಲ್ಸ್ ಕಬಡ್ಡಿ ಕಹಳೆಯ ಕೂ


ಅಹ್ಮದಾಬಾದ್ ಮತ್ತು ಲಕ್ನೋ ತಂಡಗಳು ಹೊಸದಾಗಿ ತಂಡ ಕಟ್ಟಬೇಕಾಗಿದೆ. ಹರಾಜಿಗೆ ಮುನ್ನವೇ ಈ ಎರಡೂ ತಂಡಗಳು ತಲಾ ಮೂವರು ಆಟಗಾರರನ್ನ ಖರೀದಿಸುವ ಅವಕಾಶ ಪಡೆದಿವೆ. ಡಿಸೆಂಬರ್ 1ರಿಂದ ಈ ತಂಡಗಳು ಹರಾಜಿಗೆ ಒಳಡುವ ಆಟಗಾರರ ಪೈಕಿ ಮೂವರು ಆಟಗಾರರನ್ನ ಪಡೆದುಕೊಳ್ಳಬಹುದಾಗಿದೆ.


ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಐಪಿಎಲ್ 2022ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಏಪ್ರಿಲ್ 2ರಂದು ಐಪಿಎಲ್ 2022 ಆರಂಭವಾಗಬಹುದು.

First published: