IPL 2022: ಶ್ರೀಲಂಕಾ ಅಥವಾ ಸೌತ್ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ

South Africa may host IPL 2022: ಭಾರತದಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜಿಸಲು ಸಾಧ್ಯವಾಗದೇ ಹೋದರೆ ಶ್ರೀಲಂಕಾ ಅಥವಾ ಸೌತ್ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಲೆಕ್ಕಾಚಾರ ಹಾಕಿದೆ. ಸೌತ್ ಆಫ್ರಿಕಾ ಮೊದಲ ಆದ್ಯತೆ ಆಗಿದೆ. ಅದಕ್ಕೆ ಕಾರಣಗಳೂ ಇವೆ…

ಐಪಿಎಲ್ ಟ್ರೋಫಿ

ಐಪಿಎಲ್ ಟ್ರೋಫಿ

 • Share this:
  ನವದೆಹಲಿ, ಜ. 13: ಭಾರತದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಐಪಿಎಲ್ ಟೂರ್ನಿ ನಡೆಯುವುದು ಸಂಶಯಾಸ್ಪದವಾಗಿದೆ. ಏಪ್ರಿಲ್ ತಿಂಗಳಷ್ಟರಲ್ಲಿ ಸೋಂಕು ಪರಿಸ್ಥಿತಿ ಸುಧಾರಿಸದಿದ್ದರೆ ಬಿಸಿಸಿಐ ಪರ್ಯಾಯ ಪ್ಲಾನ್​ಗಳನ್ನ ಮಾಡಿಕೊಂಡಿದೆ. ಈಗ ಭಾರತ ಕ್ರಿಕೆಟ್ ಸರಣಿ ಆಡುತ್ತಿರುವ ಸೌತ್ ಆಫ್ರಿಕಾದಲ್ಲಿ ಐಪಿಎಲ್ ಅನ್ನ ಆಯೋಜಿಸುವುದು ಬಿಸಿಸಿಐ ಬಳಿ ಇರುವ ಪ್ಲಾನ್ ಎ. ಸದ್ಯ ಭಾರತದ ಜೊತೆಗಿನ ಕ್ರಿಕೆಟ್ ಸರಣಿಯನ್ನ ಸೌತ್ ಆಫ್ರಿಕಾ ಅಚ್ಚುಕಟ್ಟಾಗಿ ಆಯೋಜಿಸಿರುವುದು ಬಿಸಿಸಿಐ ಗಮನ ಸೆಳೆದಿದೆ.

  ಒಂದು ವೇಳೆ ಭಾರತದಲ್ಲಿ ಐಪಿಎಲ್ ನಡೆಸಲು ಸಾಧ್ಯವಾಗದೇ ಹೋದ ಪಕ್ಷದಲ್ಲಿ ಸೌತ್ ಆಫ್ರಿಕಾದಲ್ಲಿ ನಡೆಸಲು ಮೊದಲು ಆದ್ಯತೆ ಕೊಡಲು ಬಿಸಿಸಿಐ ನಿರ್ಧರಿಸಿದೆ.  ಅಕಸ್ಮಾತ್, ಸೌತ್ ಆಫ್ರಿಕಾದಲ್ಲಿ ಕಾರಣಾಂತರದಿಂದ ಐಪಿಎಲ್ ನಡೆಸಲು ಸಾಧ್ಯವಾಗದೇ ಹೋದರೆ ಬಿಸಿಸಿಐ ಮನಸಿನಲ್ಲಿ ಇರುವ ಪ್ಲಾನ್ ಬಿ ಎಂದರೆ ಅದು ಶ್ರೀಲಂಕಾ.

  ಯುಎಇ ಅಥವಾ ಬೇರೆಡೆ ಯಾಕಿಲ್ಲ?

  ವಿದೇಶಗಳಲ್ಲಿ ಐಪಿಎಲ್ ಆಯೋಜಿಸಬೇಕೆಂದರೆ ಬಿಸಿಸಿಐ ಬಳಿ ಇರುವ ಇತರ ಆಯ್ಕೆಗಳೆಂದರೆ ಯುಎಇ ಮತ್ತು ಇಂಗ್ಲೆಂಡ್. ಇಂಗ್ಲೆಂಡ್ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬಿಸಿಸಿಐ ಆ ಆಯ್ಕೆಯನ್ನ ನಿರ್ಲಕ್ಷಿಸಿದೆ. ಇನ್ನು, ಯುಎಇ. ಈ ಹಿಂದಿನ ಎರಡು ಸೀಸನ್ ಐಪಿಎಲ್ ಟೂರ್ನಿಗಳು ಯುಎಇಯಲ್ಲಿ ನಡೆದಿದ್ದವು. ಬಹಳ ಅಚ್ಚುಕಟ್ಟಾಗಿಯೂ ಆಯೋಜನೆಯಾಗಿದ್ದವು. ಆದರೆ, ಈ ಬಾರಿಯೂ ಅಲ್ಲಿಯೇ ಪಂದ್ಯಾವಳಿ ನಡೆಸಲು ಬಿಸಿಸಿಐಗೆ ಮುಜುಗರವಾದಂತಿದೆ.

  ಇದನ್ನೂ ಓದಿ: Virat Fans: ಟ್ವೀಟಿಗರಿಗೆ 8 ಲಕ್ಷ ರೂ. ಕೊಡಬೇಕಂತೆ ಈ ಕೊಹ್ಲಿ ಅಭಿಮಾನಿ..! ಯಾಕೆ ಗೊತ್ತಾ..?

  “ನಾವು ಯಾವಾಗಲೂ ಯುಎಇ ಮೇಲೆಯೇ ಅವಲಂಬಿತವಾಗಿರಲು ಸಾಧ್ಯವಿಲ್ಲ. ಹೀಗಾಗಿ, ಬೇರೆ ಆಯ್ಕೆಗಳನ್ನ ಅವಲೋಕಿಸಲು ನಿರ್ಧರಿಸಿದೆವು. ಸೌತ್ ಆಫ್ರಿಕಾದ ಸಮಯಕ್ಕೆ ಹೊಂದಿಕೊಳ್ಳುವುದು ಆಟಗಾರರಿಗೂ ಸುಲಭ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ಧಾರೆಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

  ಮಹಾರಾಷ್ಟ್ರದಲ್ಲಿ ನಡೆಸಲು ಆಗಿತ್ತು ಪ್ಲಾನ್:

  ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮಹಾರಾಷ್ಟ್ರ ರಾಜ್ಯದ ಮುಂಬೈ ಮತ್ತು ಪುಣೆ ನಗರಗಳ ನಾಲ್ಕು ಸ್ಟೇಡಿಯಂಗಳಲ್ಲಿ ಇಡೀ ಐಪಿಎಲ್ ಪಂದ್ಯಾವಳಿಯನ್ನ ಆಯೋಜಿಸಲು ಬಿಸಿಸಿಐ ಲೆಕ್ಕಾಚಾರ ಹಾಕಿತ್ತು. ಮುಂಬೈನ ಬ್ರಬೌರ್ನ್ ಸ್ಟೇಡಿಯಂ ಮತ್ತು ವಾಂಖೆಡೆ ಸ್ಟೇಡಿಯಂ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯ ಗಾಹುಂಜೆಯ ಎಂಸಿಎಎಸ್ ಸ್ಟೇಡಿಯಂಗಳಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸಲು ನಿರ್ಧರಿಸಲಾಗಿತ್ತು. ಆಟಗಾರರು ಹೆಚ್ಚು ಪ್ರಯಾಣ ಬೆಳಸದೇ ಇರುವಂತಾಗಲೂ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಎಲ್ಲಾ ಪಂದ್ಯಗಳನ್ನ ನಡೆಸುವುದು ಎಂದಾಗಿತ್ತು. ಮುಂಬೈ, ನವಿ ಮುಂಬೈ ಮತ್ತು ಪುಣೆ ನಗರಗಳು ಬಹಳ ಸಮೀಪದಲ್ಲೇ ಇರುವುದರಿಂದ ಆಟಗಾರರ ಪ್ರಯಾಣಕ್ಕೆ ಅನುಕೂಲಕವಾಗಿತ್ತು.

  ಇದನ್ನೂ ಓದಿ: IPL 2022: ನಾಯಕರಿಲ್ಲದ ತಂಡಗಳು; ನಾಯಕರಾಗಬಲ್ಲ ಆಟಗಾರರು, ಇಲ್ಲಿದೆ ಡೀಟೇಲ್ಸ್

  ಆದರೆ, ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಅತಿ ವೇಗವಾಗಿ ಹರಡುತ್ತಿರುವುದರಿಂದ ಬಿಸಿಸಿಐ ಬಹುತೇಕ ಈ ಯೋಜನೆಯನ್ನ ಕೈಬಿಡಬೇಕಾಗಿದೆ. ಫೆಬ್ರವರಿ 12-13ರಂದು ಬೆಂಗಳೂರಿನಲ್ಲಿ ಐಪಿಎಲ್ ಹರಾಜು ಕಾರ್ಯಕ್ರಮ ನಡೆದ ಬಳಿಕ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ ಎಂದು ನೋಡಿಕೊಂಡು ಮುಂದಿನ ಹೆಜ್ಜೆ ಇರಿಸಲು ಬಿಸಿಸಿಐ ನಿರ್ಧರಿಸಿದೆ.

  ಬಿಸಿಸಿಐಗೆ ಇಷ್ಟವಾದ ಸೌತ್ ಆಫ್ರಿಕಾ:

  ಐಪಿಎಲ್ ಆಯೋಜನೆಗೆ ಸೌತ್ ಆಫ್ರಿಕಾ ಬಿಸಿಸಿಐಗೆ ಮೊದಲ ಆದ್ಯತೆಯಾಗಲು ಕಾರಣ ಇದೆ. ಭಾರತ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆಗಿದ್ದು ಜೋಹಾನ್ಸ್​ಬರ್ಗ್ ನಗರದ ವಾಂಡರರ್ಸ್ ಸ್ಟೇಡಿಯಂನಲ್ಲಿ. ಇಲ್ಲಿ ಟೀಮ್ ಇಂಡಿಯಾ ಉಳಿದುಕೊಂಡಿದ್ದ ಸ್ಥಳ ಬಹಳ ವಿಶಾಲವಾಗಿದೆ. ಹಲವು ಎಕರೆಗಳಷ್ಟು ವಿಶಾಲವಾಗಿದೆ. ಆಟಗಾರರಿಗೂ ಇದು ನಿರಾಳ ತರುವಂತಿದೆ. ಯಾಕೆಂದರೆ ಕಳೆದ ಎರಡು ವರ್ಷಗಳಲ್ಲಿ ಭಾರತದ ಕ್ರಿಕೆಟಿಗರು ಬಯೋಬಬಲ್ ವಾಸದಿಂದ ಹೈರಾಣವಾಗಿ ಹೋಗಿದ್ದಾರೆ.

  ಈ ಬಯೋಬಬಲ್ ವ್ಯವಸ್ಥೆಯಲ್ಲಿ ಆಟಗಾರರು ತಮ್ಮ ರೂಮುಗಳಿಂದ ಆಚೆ ಕಾಲಿಡಲೂ ಆಗದಷ್ಟು ನಿರ್ಬಂಧಗಳಿವೆ. ಮೈದಾನದಲ್ಲಿ ಕ್ರಿಕೆಟ್ ಆಡುವುದು ಬಿಟ್ಟರೆ ಆಟಗಾರರದ್ದು ಪಂಜರದಲ್ಲಿ ಸಿಕ್ಕಿಕೊಂಡ ಹುಲಿಯಂತಹ ಸ್ಥಿತಿ. ಈಗ ಜೋಹಾನ್ಸ್​ಬರ್ಗ್​ನಲ್ಲಿ ವಿಶಾಲವಾದ ಜಾಗದಲ್ಲಿ ಆಟಗಾರರು ಹೆಚ್ಚು ಸ್ವತಂತ್ರವಾಗಿರಬಹುದು. ಅಲ್ಲದೇ ಕ್ರಿಕೆಟ್ ಸರಣಿಯನ್ನ ಸೌತ್ ಆಫ್ರಿಕಾ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ಈ ಕಾರಣಗಳಿಂದ ವಿದೇಶದಲ್ಲಿ ಐಪಿಎಲ್ ಆಯೋಜಿಸಬೇಕಾದ ಸ್ಥಿತಿ ಬಂದರೆ ಹರಿಣಗಳ ನಾಡಿಗೆ ಮೊದಲ ಆದ್ಯತೆ ಕೊಡಲು ಬಿಸಿಸಿಐ ಎಣಿಕೆ ಹಾಕಿದೆ.
  Published by:Vijayasarthy SN
  First published: