KKR vs GT: W, W, 1, 4, W, W ಆಂಡ್ರೆ ರಸೆಲ್‌ 'ಮಿಸೈಲ್'​ಗೆ ಪತರುಗುಟ್ಟಿದ ಗುಜರಾತ್​ ಟೈಟನ್ಸ್​!

ಮೊದಲಿನಿಂದಲೂ ಅಬ್ಬರಿಸಿದ್ದಿದ್ದರೂ, ಉತ್ತಮ ಬ್ಯಾಟಿಂಗ್​ ಮಾಡಿಕೊಂಡು ಬಂದಿದ್ದ ಗುಜರಾತ್​ಗೆ ಲಾಸ್ಟ್​ ಓವರ್​ನಲ್ಲಿ ಆಂಡ್ರೆ ರಸಲ್ (Andre Russel) ಎಸೆದ​ ಮಿಸೈಲ್​ನಂತ  ಬಾಲ್​ಗಳಿಗೆ ಗುಜರಾತ್​ ಬ್ಯಾಟ್ಸ್​ಮ್ಯಾನ್​ಗಳು ಪತರುಗುಟ್ಟಿದ್ದಾರೆ.

ಆಂಡ್ರೆ ರಸೆಲ್​

ಆಂಡ್ರೆ ರಸೆಲ್​

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ನಲ್ಲಿ ಇಂದು 2 ಪಂದ್ಯಗಳು ನಡೆಯುತ್ತಿದೆ. ಮೊದಲ ಪಂದ್ಯ 35ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ (KKR vs GT) ಮುಖಾಮುಖಿಯಾಗಿದೆ. ಗುಜರಾತ್​ ಟೈಟನ್ಸ್​ಗೆ ಕೋಲ್ಕತ್ತಾ ನೈಟ್​ ರೈಡರ್ಸ್ (Kolkatta Knight Riders) ಸವಾಲೊಡ್ಡಿದೆ. ಟಾಸ್​ ಗೆದ್ದಿರುವ ಹಾರ್ದಿಕ್​ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟನ್ಸ್ (Gujarat Titans)​ ಬ್ಯಾಟಿಂಗ್​ ಆಯ್ದು ಕೊಂಡಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್​ ಸಾಧಾರಣ ಗುರಿಯನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ಮುಂದೆ ಇಟ್ಟಿದೆ.

ಹಾರ್ದಿಕ್​ ಪಾಂಡ್ಯ ಅವರ ಆಕರ್ಷಕ ಅರ್ಧ ಶತಕ ಬಾರಿಸಿದರು, ಗುಜರಾತ್​ ತಂಡ ಕೇವಲ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 156ರನ್​ ಸಾಧಾರಣ ಗುರಿ ನೀಡಿದೆ. ಮೊದಲಿನಿಂದಲೂ ಅಬ್ಬರಿಸಿದ್ದಿದ್ದರೂ, ಉತ್ತಮ ಬ್ಯಾಟಿಂಗ್​ ಮಾಡಿಕೊಂಡು ಬಂದಿದ್ದ ಗುಜರಾತ್​ಗೆ ಲಾಸ್ಟ್​ ಓವರ್​ನಲ್ಲಿ ಆಂಡ್ರೆ ರಸಲ್ (Andre Russel) ಎಸೆದ​ ಮಿಸೈಲ್​ನಂತ  ಬಾಲ್​ಗಳಿಗೆ ಗುಜರಾತ್​ ಬ್ಯಾಟ್ಸ್​ಮ್ಯಾನ್​ಗಳು ಪತರುಗುಟ್ಟಿದ್ದಾರೆ.

ಕೊನೆಯ ಓವರ್​​ನಲ್ಲಿ ನಾಲ್ಕು ವಿಕೆಟ್​ ಪಡೆದ ರಸೆಲ್​!

ಇಲ್ಲಿನ ಡಾ. ಡಿವೈ ಪಾಟೀಲ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ವೇಗಿ ಟಿಮ್ ಸೌಥಿ ತಮ್ಮ ಮೊದಲ ಎಸೆತದಲ್ಲೇ ಶುಭ್‌ಮನ್‌ ಗಿಲ್ ಅವರ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಕೆಕೆಆರ್ ತಂಡದ ಪರ ವೇಗಿ ಟಿಮ್ ಸೌಥಿ 3 ವಿಕೆಟ್ ಕಬಳಿಸಿದರೆ, ಆಂಡ್ರೆ ರಸೆಲ್‌ ಕೇವಲ ಒಂದು ಓವರ್ ಬೌಲಿಂಗ್ ಮಾಡಿ 5 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಗುಜರಾತ್ ರನ್‌ ವೇಗಕ್ಕೆ ಕಡಿವಾಣ ಹಾಕಿದರು.

ಇದನ್ನೂ ಓದಿ: ಬಟ್ಲರ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿ, ಕೊಹ್ಲಿ ಸಾಧನೆಯನ್ನೂ ಹಿಂದಿಕ್ತಾರಾ ಜೋಸ್ ಬಟ್ಲರ್?

W, W, 1, 4, W, W

ಕೊನೆಯ ಓವರ್​ನಲ್ಲಿ ತಮ್ಮ ಮೊದಲ ಓವರ್​ ಹಾಕಲು ಬಂದ ರಸೆಲ್​ ಕೇವಲ 5ರನ್​ ನೀಡಿ ನಾಲ್ಕು ವಿಕೆಟ್​ ಪಡೆದುಕೊಂಡರು. 20ನೇ ಓವರ್​ ಮೊದಲ ಎಸೆತದಲ್ಲಿ ಅಭಿನವ್ ಮನೋಹರ್ ಅವರ ವಿಕೆಟ್​ನ್ನು ಪಡೆದುಕೊಂಡರು. ಎರಡನೇ ಎಸೆತದಲ್ಲಿ ಫರ್ಗುಸನ್‌ಗೆ ಡಕ್ ಔಟಾದರು. ಮೂರನೇ ಎಸೆತದಲ್ಲಿ ಜೋಸೆಪ್​ ಒಂದು ರನ್​ ಪಡೆದರು. ನಾಲ್ಕನೇ ಎಸೆತದಲ್ಲಿ ರಾಹುಲ್​ ತೇವಾಟಿಯ ಬೌಂಡರಿ ಬಾರಿಸುವ ಮೂಲಕ ನಾಲ್ಕು ರನ್​ ಪಡೆದರು. ಐದನೇ ಎಸೆತದಲ್ಲಿ ರಾಹುಲ್​ ತೇವಾಟಿಯ ಕೂಡ ಔಟ್​ ಆದರು. ಕೊನೆ ಎಸೆತದಲ್ಲಿ ಯಶ್​ ದಯಾಳ್​ ಅವರ ಕ್ಯಾಚ್​ ಹಿಡಿಯುವ ಮೂಲಕ ಆಂಡ್ರೆ ಎಸೆಲ್​ ಕೊನೆಯ ಓವರ್​ನಲ್ಲಿ ನಾಲ್ಕು ವಿಕೆಟ್​ ಪಡೆದರು.

ಇದನ್ನೂ ಓದಿ: ಥರ್ಡ್ ಅಂಪೈರೇ ತಪ್ಪು ನಿರ್ಧಾರ ಪ್ರಕಟಿಸಿದರೆ ಏನಾಗುತ್ತೆ? ಈ ಐಪಿಎಲ್‌ನಲ್ಲಿ ದಾಖಲಾದ ಕೆಟ್ಟ ನಿರ್ಧಾರಗಳು

ಅರ್ಧಶತಕ ಬಾರಿಸಿದ ಹಾರ್ದಿಕ್​ ಪಾಂಡ್ಯ!

ಎರಡನೇ ಓವರ್‌ನಲ್ಲೇ ಕ್ರೀಸ್‌ಗಿಳಿದ ಹಾರ್ದಿಕ್‌ ಪಾಂಡ್ಯ, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 36 ಎಸೆತಗಳನ್ನು ಎದುರಿಸಿ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 49 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 67 ರನ್ ಬಾರಿಸಿ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಬಿಟ್ಟರೆ ಮತ್ತ್ಯಾವ ಆಟಗಾರರು ಇಂದಿನ ಪಂದ್ಯದಲ್ಲಿ ಗಮನ ಸೆಳೆಯಲಿಲ್ಲ. ಗುಜರಾತ್​ ಟೈಟನ್ಸ್​ ಪಾಯಿಂಟ್ಸ್​ ಟೇಬಲ್​ನಲ್ಲಿ ಮೊದಲ ಸ್ಥಾನದಲ್ಲಿದೆ.
Published by:Vasudeva M
First published: