RCB: ಮೊನ್ನೆ ABD ಮಿಸ್​ ಮಾಡಿಕೊಂಡಿದ್ದ ವಿರಾಟ್! ಇಂದು ಕೊಹ್ಲಿ ಬಗ್ಗೆ ಭವಿಷ್ಯ ನುಡಿದ `ಸೂಪರ್​ ಮ್ಯಾನ್​’​

ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಈ ವರ್ಷದ ಪಂದ್ಯಾವಳಿಗೆ ಗೈರು ಹಾಜರಾದ ಆಟಗಾರರಲ್ಲಿ ಒಬ್ಬರು. ಏಕೆಂದರೆ ಅವರು ಹಿಂದಿನ ಆವೃತ್ತಿಯ ಐಪಿಎಲ್ ಮುಗಿದ ನಂತರ ಆಟದಿಂದ ನಿವೃತ್ತಿ ಘೋಷಿಸಿದ್ದರು.

ವಿರಾಟ್​ ಕೊಹ್ಲಿ, ಎಬಿಡಿ

ವಿರಾಟ್​ ಕೊಹ್ಲಿ, ಎಬಿಡಿ

  • Share this:
ಈಗಾಗಲೇ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶುರುವಾಗಿದ್ದು, ಎಲ್ಲಾ ತಂಡದ ಬ್ಯಾಟರ್‌ಗಳಿಂದ ಹೊಡಿ ಬಡಿ ಆಟ ಶುರುವಾಗಿದ್ದನ್ನು ಕ್ರಿಕೆಟ್(Cricket) ಅಭಿಮಾನಿಗಳು ತುಂಬಾನೇ ಆನಂದಿಸುತ್ತಿದ್ದಾರೆ ಎಂದು ಹೇಳಬಹುದು. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Banglore) ತಂಡವು ಆಡಿದ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಎರಡನೆಯ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದಿರುವುದು ಎಲ್ಲಾ ಆರ್‌ಸಿಬಿ(RCB) ಅಭಿಮಾನಿಗಳಿಗೆ ಸಂತೋಷ ತಂದಿರುತ್ತದೆ.ಫಾಫ್ ಡು ಪ್ಲೆಸಿಸ್(Faf Du Plessis) ನೇತೃತ್ವದ ತಂಡವು ಪಂಜಾಬ್ ಕಿಂಗ್ಸ್(Punjab Kings) ವಿರುದ್ಧದ ಋತುವಿನ ತನ್ನ ಮೊದಲ ಪಂದ್ಯದಲ್ಲಿ 20 ಓವರ್‌ಗಳಲ್ಲಿ 205 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದರೂ, ಐದು ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು. ನಂತರ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎರಡನೆಯ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್(Shreyas Ayyar) ನೇತೃತ್ವದ ಕೆಕೆಆರ್ ತಂಡವನ್ನು ಸಮರ್ಥವಾಗಿ ಎದುರಿಸಿ ಮೂರು ವಿಕೆಟ್‌ಗಳ ಜಯವನ್ನು ಸಾಧಿಸಿದೆ.

ಆರ್​​ಸಿಬಿ ತಂಡದಲ್ಲಿಲ್ಲ ಸೂಪರ್​ ಮ್ಯಾನ್​ ಎಬಿಡಿ!

ನೀವು ಆರ್‌ಸಿಬಿ ತಂಡದ ಅಭಿಮಾನಿಯಾಗಿದ್ದರೆ, ನೀವು ಖಂಡಿತವಾಗಿಯೂ ಈ ಐಪಿಎಲ್ 2022 ರ ಮೆಗಾ ಹರಾಜಿಗೆ ಧನ್ಯವಾದಗಳನ್ನು ಹೇಳುತ್ತೀರಿ. ಏಕೆಂದರೆ ಈ ವರ್ಷ ಆರ್‌ಸಿಬಿ ಫ್ರಾಂಚೈಸಿಯು ಇತರ ಎಲ್ಲಾ ಫ್ರಾಂಚೈಸಿಗಳಂತೆ ತನ್ನ ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ. ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಈ ವರ್ಷದ ಪಂದ್ಯಾವಳಿಗೆ ಗೈರು ಹಾಜರಾದ ಆಟಗಾರರಲ್ಲಿ ಒಬ್ಬರು. ಏಕೆಂದರೆ ಅವರು ಹಿಂದಿನ ಆವೃತ್ತಿಯ ಐಪಿಎಲ್ ಮುಗಿದ ನಂತರ ಆಟದಿಂದ ನಿವೃತ್ತಿ ಘೋಷಿಸಿದ್ದರು.

ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಸೂಪರ್​ ಮ್ಯಾನ್​!

'ಎಬಿಡಿ' ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಇನ್ನು ಮುಂದೆ ಸಕ್ರಿಯ ಆಟಗಾರನಲ್ಲದಿದ್ದರೂ, ಅವರು ಆರ್‌ಸಿಬಿ ತಂಡವನ್ನು ದೂರದಿಂದ ಬೆಂಬಲಿಸುವುದನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮಾಜಿ ಸಹ ಆಟಗಾರ ಮತ್ತು ಉತ್ತಮ ಸ್ನೇಹಿತ ವಿರಾಟ್ ಕೊಹ್ಲಿಯ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ ನೋಡಿ. ಇದೇನಪ್ಪಾ.. ಎಬಿ ಡಿ ವಿಲಿಯರ್ಸ್ ಅವರು ತನ್ನ ಸ್ನೇಹಿತ ವಿರಾಟ್ ಬಗ್ಗೆ ಅಂತದ್ದೇನು ಹೇಳಿದ್ದಾರೆ ಎಂದು ನೀವು ಶಾಕ್ ಆಗಬೇಡಿ.

ಇದನ್ನೂ ಓದಿ: ಅರೇ.. ಶಾಕ್​ ಆಗ್ಬೇಡಿ, ನೀವ್​ ನೋಡ್ತಿರೋದು ನಿಜ! ಧೋನಿ-ಗಂಭೀರ್​​ ಸಮಾಗಮಕ್ಕೆ ಕ್ರೀಡಾಭಿಮಾನಿಗಳು ಫಿದಾ

ಈ ಸೀಸನ್​ನಲ್ಲಿ 600 ರನ್​ ಸ್ಕೋರ್​ ಮಾಡ್ತಾರಂತೆ ಕೊಹ್ಲಿ!

ಕೊಹ್ಲಿ ಅವರು ಈ ಆವೃತ್ತಿಯಲ್ಲಿ ಕಡಿಮೆ ಎಂದರೂ 600 ರನ್ ಅಥವಾ ಅದ್ದಕ್ಕಿಂತಲೂ ಹೆಚ್ಚಿಗೆ ರನ್ ಗಳಿಸುತ್ತಾರೆ ಎಂದು ಡಿ ವಿಲಿಯರ್ಸ್ ಅವರು ಹೇಳಿದ್ದಾರೆ. "ಫಾಫ್ ಡು ಪ್ಲೆಸಿಸ್ ಅವರು ತಂಡದ ಹೊಸ ನಾಯಕನಾಗಿ ಬರುವ ವಿಚಾರ ಎಲ್ಲರಿಗೂ ತಿಳಿದಿತ್ತು. ನನಗೆ ಅತ್ಯಂತ ರೋಮಾಂಚನಕಾರಿ ವಿಷಯವೆಂದರೆ ವಿರಾಟ್ ನಾಯಕನಾಗದಿರುವುದು ಮತ್ತು ಅವರೀಗ ತಮ್ಮ ಮೇಲೆ ಇರುವಂತಹ ಆ ಸ್ವಲ್ಪ ಒತ್ತಡವನ್ನು ಕೆಳಗಿಳಿಸಿಕೊಂಡಿದ್ದಾರೆ” ಎಂದು ಹೇಳಿದರು.

 ವಿರಾಟ್​ ಅದ್ಭುತ ಬ್ಯಾಟಿಂಗ್​ ಮಾಡ್ತಾರೆ ಎಂದ ಎಬಿಡಿ!

"ನಾನು ವಿರಾಟ್ ಅವರ ಬ್ಯಾಟ್‌ನಿಂದ ತುಂಬಾ ರನ್‌ಗಳನ್ನು ನಿರೀಕ್ಷಿಸುತ್ತಿದ್ದೇನೆ. ಈ ವರ್ಷ ಅವರು 600 ಮತ್ತು ಅದಕ್ಕಿಂತಲೂ ಹೆಚ್ಚು ರನ್ ಗಳಿಸುತ್ತಾರೆ ಎಂದು ನನಗೆ ನಂಬಿಕೆ ಇದೆ" ಎಂದು ಎಬಿ ಡಿ ವಿಲಿಯರ್ಸ್ ತನ್ನ ಯೂಟ್ಯೂಬ್ ಚಾನೆಲ್ 'ವಿಯುಸ್ಪೋರ್ಟ್ ಸ್ಟ್ರೀಮಿಂಗ್' ನಲ್ಲಿ ಹೇಳಿದರು. ''ಈ ಆವೃತ್ತಿಯಲ್ಲಿ ಕೆಲವು ಯುವ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ” ಎಂದು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಟಿ20 ಅಲ್ಲಿ ಹೊಸ ದಾಖಲೆ ಬರೆದ ಧೋನಿ, ಬ್ರಾವೋ ಈಗ ನಂಬರ್ ಒನ್ ಬೌಲರ್

ಡು ಪ್ಲೆಸಿಸ್​ ಕೂಡ ಒಳ್ಳೆಯ ಆಟಗಾರ ಎಂದ ಎಬಿಡಿ

"ಫಾಫ್ ಕೂಡ ತುಂಬಾ ಅನುಭವಿ ಆಟಗಾರರಾಗಿದ್ದು, ಅವರು ವಿರಾಟ್ ಮತ್ತು ಕೆಲವು ಯುವ ಆಟಗಾರರಿಗೆ ಮೈದಾನಕ್ಕೆ ಇಳಿದು ಮುಕ್ತವಾಗಿ ಆಟವಾಡಲು ಮತ್ತು ಐಪಿಎಲ್ ಅನ್ನು ಆನಂದಿಸಲು ಅನುಮತಿಸುತ್ತಾರೆ. ಆರ್‌ಸಿಬಿ ತಂಡದಿಂದ ಏನನ್ನು ನಿರೀಕ್ಷಿಸಬೇಕೆಂದು ನನಗೆ ತಿಳಿದಿಲ್ಲ. ಆದರೆ ಕೆಲವು ಆಟಗಾರರು ಮಾತ್ರ ಈ ಐಪಿಎಲ್‌ನಲ್ಲಿ ತುಂಬಾನೇ ಜನಪ್ರಿಯರಾಗುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಡಿ ವಿಲಿಯರ್ಸ್ ಹೇಳಿದರು.
Published by:Vasudeva M
First published: