RCB vs GT: ಆರ್​ಸಿಬಿಗೆ ಹ್ಯಾಟ್ರಿಕ್ ಸೋಲು, ವಿರಾಟ್​-ರಜತ್​ ಅರ್ಧಶತಕ ವ್ಯರ್ಥ! ಪ್ಲೇ ಆಫ್​​​ಗೆ ಎಂಟ್ರಿ ಕೊಟ್ಟ ಗುಜರಾತ್​

ಗುಜರಾತ್​ ಟೈಟನ್ಸ್​​ಗೆ ಆರ್​ಸಿಬಿ 171ರನ್​ಗಳ ಗುರಿ ನೀಡಿತ್ತು. ಆರಂಭದಿಂದಲೂ ಉತ್ತಮ ಬ್ಯಾಟಿಂಗ್​ ಮಾಡಿಕೊಂಡು ಬಂದಿದ್ದ ಗುಜರಾತ್​ ಟೈಟನ್ಸ್​​ ಗೆದ್ದು ಬೀಗಿದೆ. ಆರ್​ಸಿಬಿ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಆರ್​ಸಿಬಿ ಹ್ಯಾಟ್ರಿಕ್​ ಸೋಲು ಕಂಡಿದೆ

ಗುಜರಾತ್​ ಟೀಂ, ಬೆಂಗಳೂರು ಟೀಂ

ಗುಜರಾತ್​ ಟೀಂ, ಬೆಂಗಳೂರು ಟೀಂ

  • Share this:
ಐಪಿಎಲ್ 2022ರ (IPL 2022) 42ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ಮತ್ತು ಗುಜರಾತ್ ಟೈಟನ್ಸ್ (Gujarat Titans) ತಂಡಗಳು ಮುಖಾಮುಖಿಯಾಗಿತ್ತು. ಟಾಸ್ (Toss)​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಆರ್​ಸಿಬಿ, ವಿರಾಟ್​ ಕೊಹ್ಲಿ (Virat Kohli) , ಹಾಗೂ ರಜತ್​ ಪಟಿದರ್​ ಅವರ ಆಕರ್ಷಕ ಅರ್ಧಶತಕದಿಂದ 170ರನ್​ಗಳಿಸಿತ್ತು. ಗುಜರಾತ್​ ಟೈಟನ್ಸ್​​ಗೆ ಆರ್​ಸಿಬಿ 171ರನ್​ಗಳ ಗುರಿ ನೀಡಿತ್ತು. ಆರಂಭದಿಂದಲೂ ಉತ್ತಮ ಬ್ಯಾಟಿಂಗ್​ ಮಾಡಿಕೊಂಡು ಬಂದಿದ್ದ ಗುಜರಾತ್​ ಟೈಟನ್ಸ್​​ ಗೆದ್ದು ಬೀಗಿದೆ. ಆರ್​ಸಿಬಿ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಆರ್​ಸಿಬಿ ಹ್ಯಾಟ್ರಿಕ್​ ಸೋಲು ಕಂಡಿದೆ. ಬ್ಯಾಟಿಂಗ್​ ಚೆನ್ನಾಗಿ ಆಡಿದ್ದ ಆರ್​ಸಿಬಿ, ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದೆ. 19.3 ಬಾಲ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 171ರನ್​ ಗುರಿ ಮುಟ್ಟಿದೆ.

ಪ್ಲೇ ಆಫ್​ಗೆ ಎಂಟ್ರಿಯಾದ ಗುಜರಾತ್​ ಟೈಟನ್ಸ್​!

ಇಲ್ಲಿವರೆಗೂ ಆಡಿರುವ 9ರಲ್ಲಿ 8 ಪಂದ್ಯ ಗೆದ್ದು ಗುಜರಾತ್‌ ಪ್ಲೇ-ಆಫ್‌ ಗೆ ಎಂಟ್ರಿಯಾಗಿದ್ದಾರೆ.ಮೆಗಾ ಹರಾಜಿನ ಬಳಿಕ ಗುಜರಾತ್‌ ಟೈಟಾನ್ಸ್‌ (Gujarat Titans) ಸಿದ್ಧಪಡಿಸಿದ ತಂಡವನ್ನು ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ತಂಡ ಪ್ಲೇ-ಆಫ್‌ಚ (Play Off) ಹತ್ತಿರಕ್ಕೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ, ಗುಜರಾತ್​ ಟೈಟನ್ಸ್ ಆಟ ಕಂಡು ಹೀಗಂದುಕೊಂಡಿದ್ದವರು ದಂಗಾಗಿ ಹೋಗಿದ್ದಾರೆ.

ಮತ್ತೆ ಕಮಾಲ್​ ಮಾಡಿದ ಮಿಲ್ಲರ್​ - ತೇವಾಟಿಯಾ!

ಅವಕಾಶ ಸಿಕ್ಕಾಗೆಲ್ಲಾ ಚೆನ್ನಾಗಿ ಬಳಿಸಿಕೊಳ್ಳುತ್ತಿರುವ ಗುಜರಾತ್ ತಂಡ ಮಿಲ್ಲರ್​​ ಹಾಗೂ ತೇವಾಟಿಯಾ ಈ ಪಂದ್ಯದಲ್ಲೂ ಗಮನ ಸೆಳೆದರು. ಡೇವಿಡ್​ ಮಿಲ್ಲರ್​ 24 ಬಾಲ್​​ಗಳಲ್ಲಿ 34ರನ್​ಗಳಿಸಿದರೆ ತೇವಾಟಿಯಾ, 25 ಬಾಲ್​ಗಳಲ್ಲಿ 43ರನ್​ಗಳಿಸಿ ಗುಜರಾತ್ ಟೈಟನ್ಸ್​ ಗೆಲುವಿಗೆ ಕಾರಣರಾದರು. ಇದರೊಂದಿಗೆ ಈ ಸೀಸನ್​  ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿ ಗುಜರಾತ್​ ಟೈಟನ್ಸ್​ ಹೊಸ ದಾಖಲೆ ಮಾಡಿತು. ಎಂಟ್ರಿಯಾದ ಮೊದಲ ಸೀಸನ್​ನಲ್ಲಿ ಮೊದಲನೆಯದಾಗಿ ಪ್ಲೇ ಆಫ್​ಗೆ ಗುಜರಾತ್​ ಟೈಟನ್ಸ್​ ಎಂಟ್ರಿಯಾಗಿದ್ದಾರೆ.

ಇದನ್ನೂ ಓದಿ: ಆರೆಂಜ್ ಕ್ಯಾಪ್ ರೇಸ್​ನಲ್ಲಿ ನಾಲ್ವರು ಭಾರತೀಯರು, ಯಾರಿಗೆ ಒಲಿಯಲಿದೆ ಈ ಬಾರಿಯ ಅದೃಷ್ಟ?

ಕಿಂಗ್​ ಕೊಹ್ಲಿಗೆ ಸಾಥ್ ಕೊಟ್ಟ  ರಜತ್​!

ವಿರಾಟ್​ ಕೊಹ್ಲಿ 53 ಬಾಲ್​ಗಳಲ್ಲಿ 58ರನ್​ ಸಿಡಿಸಿ ಔಟ್​ ಆದರು. 6 ಫೋರ್ ಹಾಗೂ ಒಂದು ಸಿಕ್ಸರ್​ ಬಾರಿಸುವ ಮೂಲಕ ಫಾರ್ಮ್​ಗೆ ಮರಳಿದ್ದಾರೆ. ಇನ್ನೂ ವಿರಾಟ್​ ಜೊತೆ ಇನ್ನಿಂಗ್ಸ್​ ಆರಂಭಿಸದ ನಾಯಕ ಫಾಪ್​ ಡು ಪ್ಲೆಸಿಸ್​ ಹೆಚ್ಚು ಹೊತ್ತು ಸ್ಕ್ರೀಜ್​ನಲ್ಲಿ ನಿಲ್ಲಲಿಲ್ಲ.  ಡಕ್​ ಔಟ್​ ಆಗಿ ಫಾಪ್​ ಡು ಪ್ಲೆಸಿಸ್​ ಪೆವಿಲಿಯನ್​ ಸೇರಿಕೊಂಡರು. ಫಾಫ್​ ಔಟಾದ ಬಳಿಕ ಸ್ಕ್ರೀಜ್​ಗೆ ಬಂದಿದ್ದ ರಜತ್​ ಪಟಿದರ್​ ಆಕರ್ಷಕ ಆಟ ಪ್ರದರ್ಶಿಸಿದ್ದಾರೆ. ಒಂದು ಕಡೆ ವಿರಾಟ್ ಗುಜರಾತ್ ಟೈಟನ್ಸ್​ ಬೌಲರ್​​ಗಳಿಗೆ ಬೆವರಿಳಿಸುತ್ತಿದ್ದರೆ, ಇತ್ತ ರಜತ್ ಕೂಡ ಬೌಲರ್​ಗಳಿಗೆ ಕಾಟ ಕೊಟ್ಟರು. 32 ಬಾಲ್​ಗಳಲ್ಲಿ 52 ರನ್​ಗಳಿಸಿ ರಜತ್​ ಆರ್​ಸಿಬಿ ತಂಡಕ್ಕೆ ನೆರವಾದರು.

ಇದನ್ನೂ ಓದಿ: ಮುಂಬೈ ಪ್ಲೇ ಆಫ್​ ಕನಸು ಭಗ್ನ! ಇಂದಿನ ಪಂದ್ಯದಲ್ಲಾದ್ರೂ ಆಡ್ತಾರಾ ಸಚಿನ್​​ ಮಗ ಅರ್ಜುನ್​?

ಸವಾಲಿನ ಗುರಿ ನೀಡಿದ್ದ ಆರ್​ಸಿಬಿ!

ಕಿಂಗ್ ಕೊಹ್ಲಿ ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ತುದಿಯಲ್ಲಿ ಯುವ ಪ್ರತಿಭಾನ್ವಿಯ ಬ್ಯಾಟರ್ ರಜತ್ ಪಾಟೀದರ್ (Rajat Patidar) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು 6 ವಿಕೆಟ್ ಕಳೆದುಕೊಂಡು 170 ರನ್‌ ಬಾರಿಸಿದ್ದು. ಗೆಲ್ಲಲು ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಸವಾಲಿನ ಗುರಿ ನೀಡಿತ್ತು.
Published by:Vasudeva M
First published: