ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಸರಿ ಸುಮಾರು 2 ವರ್ಷಗಳೇ ಆಗಿವೆ. ಆದರೂ ಈವರೆಗೂ ಅವರಿಗೆ ಅಭಿಮಾನಿಗಳ ಸಂಖ್ಯೆ ಹಾಗೆಯೇ ಇದೆ. ಧೋನಿ ಸದ್ಯ ಐಪಿಎಲ್ನಲ್ಲಿ (IPL) ಮಾತ್ರ ಆಡುತ್ತಿದ್ದಾರೆ. ಅವರ ಬ್ರಾಂಡ್ ವ್ಯಾಲ್ಯೂ (Brand Value) ಇನ್ನೂ ಸಹ ಮೊದಲಿನ ಹಾಗೆಯೇ ಉಳಿದಿದೆ ಎಂದರೂ ತಪ್ಪಾಗಲಾರದು. ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಕ್ರಿಕೆಟ್ನ (Cricket) ಗ್ರೇಟ್ ಮೈಂಡ್. ಈ ಐಕಾನ್ ಆಟಗಾರನನ್ನ ದೇಶ ವಿದೇಶಗಳಲ್ಲಿ, ಫಾಲೋ ಮಾಡ್ತಾರೆ. ಯಾರೇ ಔಟ್ ಆಗಿದ್ದರು ಧೋನಿ ಒಬ್ಬ ಸ್ಕ್ರೀಜ್ನಲ್ಲಿದ್ದರೆ ಪಕ್ಕಾ ಮ್ಯಾಚ್ ಗೆಲ್ಲುತ್ತೇವೆ ಅನ್ನುವ ಭರವಸೆ. ಮಹೇಂದ್ರ ಸಿಂಗ್ ಧೋನಿ ದಿ ಬೆಸ್ಟ್ ಫಿನಿಶರ್ ( Dhoni The Best Finisher) ಅನ್ನುವುದು ಎಲ್ಲರಿಗೂ ಗೊತ್ತಿದೆ.
ಧೋನಿ ದಿ ಬೆಸ್ಟ್ ಫಿನಿಶರ್ ಆಲ್ವೇಸ್!
ಹೌದು, ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಮತ್ತೆ ಧೋನಿ ನಾನು ಯಾಕೆ ಬೆಸ್ಟ್ ಫಿನಿಶರ್ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ. . ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನತ್ತ ಬಹುತೇಕ ಮುಖಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಊಹಿಸಲಾರದ ರೀತಿಯಲ್ಲಿ ಧೋನಿ ಗೆಲ್ಲಿಸಿದ್ದಾರೆ. ಈ ಮೂಲಕ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾಹಿ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ವಿಂಟೆಂಜ್ ಧೋನಿಯನ್ನು ಕಂಡ ಕ್ರೀಡಾಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಐಪಿಎಲ್ ಸೀಸನ್ 15ರಲ ಮೊದಲ ಪಂದ್ಯದಲ್ಲೂ ಧೋನಿ ಅಬ್ಬರಿಸಿ ಕಮ್ಬ್ಯಾಕ್ ಮಾಡಿರುವ ಸೂಚನೆಯನ್ನು ನೀಡಿದ್ದರು.
4 ಬಾಲ್ಗಳಲ್ಲಿ 16ರನ್ ಬಾರಿಸಿದ ಧೋನಿ!
ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 156 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮ್ಯಾನ್ಗಳು ಗ್ರೌಂಡ್ಗೆ ಬಂದ ವೇಗದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಆದರೆ ಅಂಬಾಟಿ ರಾಯಿಡು ರಾಬಿನ್ ಉತ್ತಪ್ಪ ಹೋರಾಟ ಸಿಎಸ್ಕೆಯನ್ನು ಪಂದ್ಯದಲ್ಲಿ ಮುಂದುವರಿಯುವಂತೆ ಮಾಡಿತ್ತು. ಆದರೆ ಅಂತಿಮ ಹಂತದಲ್ಲಿ ಎಂಎಸ್ ಧೋನಿ ಹೋರಾಟ ತಂಡಕ್ಕೆ ಗೆಲುವಿನ ಸಾಧ್ಯತೆಯನ್ನು ತೆರೆದಿಟ್ಟಿತ್ತು. ಅಂತಿಮ ಓವರ್ನಲ್ಲಿ ಎಂಎಸ್ ಧೋನಿ 17 ರನ್ಗಳನ್ನು ಕಲೆ ಹಾಕುವ ಮೂಲಕ ಮುಂಬೈ ಇಂಡಿಯನ್ಸ್ಗೆ 7ನೇ ಬಾರಿಗೆ ಸೋಲಿನ ರುಚಿ ತೋರಿಸಿದ್ದಾರೆ.
ಇದನ್ನೂ ಓದಿ: ಕ್ಯಾಮರಾ ಮುಂದೇ ಕಿಸ್, ಕಾಲಿಗೂ ಬಿದ್ರು! ವೈರಲ್ ವಿಡಿಯೋ ನೋಡಿ
ರಣರೋಚಕ ಪಂದ್ಯದಲ್ಲಿಗೆದ್ದು ಬೀಗಿದ ಸಿಎಸ್ಕೆ
ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ ಬೇಕಿದ್ದ ಹಂತದಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಹಾಗೂ ಜೋಡಿ ರನ್ ಸಾಹಸ ನಡೆಸಿದ ಎಂಎಸ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ ( Chennai Super Kings ) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ 2ನೇ ಗೆಲುವು ನೀಡಿದ್ದಾರೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ (Mumbai Indians) ಧೋನಿಯ ಸಾಹಸಿಕ ಇನ್ನಿಂಗ್ಸ್ ನ ಮುಂದೆ ಮಂಕಾಗಿ 7ನೇ ಸೋಲು ಕಂಡಿತು.
ಇದನ್ನೂ ಓದಿ: ಈ ವರ್ಷವೇ ಮದುವೆ ಆಗ್ತಾರಂತೆ ರಾಹುಲ್ - ಅತಿಯಾ, ಈ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಡ್ವೈನ್ ಅಬ್ಬರದ ಬ್ಯಾಟಿಂಗ್!
ಡ್ವೈನ್ ಪ್ರಿಟೋರಿಯಸ್ (22ರನ್, 14 ಎಸೆತ, 2 ಬೌಂಡರಿ, 1 ಸಿಕ್ಸರ್) ಮೂಲಕ ಸಿಎಸ್ಕೆ ಗೆಲುವಿಗಾಗಿ ದೊಡ್ಡ ಮಟ್ಟದ ಹೋರಾಟ ತೋರಿದ್ದರು. ಕೊನೇ ಓವರ್ ನಲ್ಲಿ ಪ್ರಿಟೋರಿಯಸ್ ಔಟಾದರೂ, ಎಂಎಸ್ ಧೋನಿ ಭರ್ಜರಿ ಆಟವಾಡುವ ಮೂಲಕ ತಂಡಕ್ಕೆ ಗೆಲುವು ನೀಡಿದರು.ಇನ್ನೂ ಈ ರೀತಿಯ ಧೋನಿಯ ಆಟವನ್ನೇ ನಾವು ನಿರೀಕ್ಷೆ ಮಾಡುತ್ತಿದ್ದೆವೆ ಅಂತ ಅವರ ಅಭಿಮಾನಿಗಳು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ