DC vs PBKS: ಪಂಜಾಬ್​ ಕಿಂಗ್ಸ್​​ ಕಳಪೆ ಪ್ರದರ್ಶನ, ಡೆಲ್ಲಿ ಕ್ಯಾಪಿಟಲ್ಸ್​ಗೆ ಸುಲಭ ಜಯ!

ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಮೊದಲು ಎದುರಾಲಿ ಪಂಜಾಬ್​ ಕಿಂಗ್ಸ್​ಗೆ ಬ್ಯಾಟಿಂಗ್​ ಮಾಡಲು ಆಹ್ವಾನ ನೀಡಿತ್ತು. ಆದರೆ, ಕಳಪೆ ಪ್ರದರ್ಶನ ನೀಡಿದ ಪಂಜಾಬ್​ ಕಿಂಗ್ಸ್​​ ಆಟಗಾರರು 20 ಓವರ್​ಗಳಲ್ಲಿ 10 ವಿಕೆಟ್​ಗಳ ನಷ್ಟಕ್ಕೆ 115ರನ್​ ಕಲೆಹಾಕಿತ್ತು. ಸಾಧಾರಾಣ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಸುಲಭವಾಗಿ ಜಯ ಸಾಧಿಸಿದೆ.

ಮಾಯಾಂಕ್​, ರಿಷಭ್​ ಪಂತ್​

ಮಾಯಾಂಕ್​, ರಿಷಭ್​ ಪಂತ್​

  • Share this:
22ಐಪಿಎಲ್‌(IPL)ನಲ್ಲಿ ಇಂದು ಪಂಜಾಬ್​ ಕಿಂಗ್ಸ್​(Punjab Kings) ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಂಡಗಳು ಮುಖಾಮುಖಿಯಾಗಿತ್ತು. ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಮೊದಲು ಎದುರಾಲಿ ಪಂಜಾಬ್​ ಕಿಂಗ್ಸ್​ಗೆ ಬ್ಯಾಟಿಂಗ್​ ಮಾಡಲು ಆಹ್ವಾನ ನೀಡಿತ್ತು. ಆದರೆ, ಕಳಪೆ ಪ್ರದರ್ಶನ ನೀಡಿದ ಪಂಜಾಬ್​ ಕಿಂಗ್ಸ್​​ ಆಟಗಾರರು 20 ಓವರ್​ಗಳಲ್ಲಿ 10 ವಿಕೆಟ್​ಗಳ ನಷ್ಟಕ್ಕೆ 115ರನ್​ ಕಲೆಹಾಕಿತ್ತು. ಸಾಧಾರಾಣ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಸುಲಭವಾಗಿ ಜಯ ಸಾಧಿಸಿದೆ. 9 ವಿಕೆಟ್​​ಗಳಿಂದ ಡೆಲ್ಲಿ ಕ್ಯಾಪಿಟಲ್ಸ್​ ಗೆದ್ದು ಬೀಗಿದೆ.10.3 ಬಾಲ್​ಗಳಲ್ಲಿ 116ರನ್​ಗಳಿಸಿ ತನ್ನ ತೆಕ್ಕೆಗೆ 2 ಪಾಯಿಂಟ್ಸ್​ ಪಡೆದುಕೊಂಡಿದೆ.

ಅಬ್ಬರಿಸಿ ಬೊಬ್ಬರಿದ ವಾರ್ನರ್​-ಪೃಥ್ವಿ ಶಾ! 

ಸಾಧಾರಣ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಪರವಾಗಿ ಆರಂಭಿಕ ಆಟಗಾರರಾಗಿ ಡೇವಿಡ್​ ವಾರ್ನರ್​ ಹಾಗೂ ಪೃಥ್ವಿ ಶಾ ಕಣಕ್ಕೆ ಇಳಿದಿದ್ದರು. ಮೊದಲ ಬಾಲಿನಿಂದಲೂ ಇಬ್ಬರು ಆಟಗಾರರೂ ಅಬ್ಬರಿಸಿ ಬೊಬ್ಬರಿದರು. ಕೇವಲ 4 ಓವರ್​ಗಳಲ್ಲೇ 58ರನ್​ಗಳಿಸಿದರು. ಲೆಫ್ಟ್​-ರೈಟ್​ ಹ್ಯಾಂಡೆಡ್​ನ ಈ ಜೋಡಿ ಪಂಜಾಬ್ ಬೌಲರ್​ಗಳಿಗೆ ಲೆಫ್ಟ್​ ರೈಟ್​ ಮಾಡಿಸಿದ್ದಾರೆ. 19 ಬಾಲ್​ಗಳಲ್ಲಿ 41ರನ್​ ಗಳಸಿದ್ದ ಪೃಥ್ವಿ ಶಾ, ರಾಹುಲ್​ ಚಾಹರ್​ ಅವರ ಸ್ಪಿನ್​ ಬಲೆಗೆ ಸಿಲುಕಿ ಲಾಂಗ್​ ಆನ್​ನಲ್ಲಿ ಕ್ಯಾಚ್​ ನೀಡಿ ಔಟ್​ ಆದರು. ವಾರ್ನರ್​ ಆಕರ್ಷಕ ಅರ್ಧಶತಕ ಬಾರಿಸಿದರು.

115ಕ್ಕೆ ಆಲೌಟ್​ ಆದ ಪಂಜಾಬ್​ ಕಿಂಗ್ಸ್​​!

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ (DC)ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭದ ಹೊರತಾಗಿಯೂ, ಅಕ್ಸರ್ ಪಟೇಲ್ (10ಕ್ಕೆ 2), ಕುಲದೀಪ್ ಯಾದವ್ (24ಕ್ಕೆ 2), ಲಲಿತ್ ಯಾದವ್ (11ಕ್ಕೆ 2) ಹಾಗೂ ಖಲೀಲ್ ಅಹ್ಮದ್‌ (21ಕ್ಕೆ 2) ಬೌಲಿಂಗ್ ದಾಳಿಯ ಮುಂದೆ ಪರದಾಡಿ 20 ಓವರ್ ಗಳಲ್ಲಿ 115 ರನ್ ಗೆ ಆಲೌಟ್ ಆಯಿತು. ಕಳೆದ ಪಂದ್ಯದಲ್ಲೂ ಪಂಜಾಬ್​ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಅದು ಇಂದು ಕೂಡ ಮುಂದುವರೆದಿದೆ.

ರನ್​ ಕಲೆಹಾಕಲು ಪರದಾಡಿದ ಆರಂಭಿಕ ಆಟಗಾರರು!

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡ , ಕಳೆದ ಪಂದ್ಯವನ್ನು ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದ ಮಾಯಾಂಕ್ ಅಗರ್ವಾಲ್ (Mayank agarwal ) ತಾವು ಎದುರಿಸಿದ್ದ 2ನೇ ಎಸೆತವನ್ನೇ ಬೌಂಡರಿಗೆ ಬಾರಿಸಿದ್ದರು. ಇದನ್ನು ಕಂಡ ಪಂಜಾಬ್​ ಅಭಿಮಾನಿಗಳು ಮಾಯಾಂಕ್​ ಇದ ಒಳ್ಳೆಯ ಆಟವನ್ನು ನಿರೀಕ್ಷಿಸಿದ್ದರು.  ಮಾಯಾಂಕ್​ ಎದುರಿಸಿದ 12 ಎಸೆಗಳಲ್ಲಿ 3 ಬೌಂಡರಿಗಳನ್ನು ಸಿಡಿಸಿದರು.

ಇದನ್ನೂ ಓದಿ: ಆರ್​​ಸಿಬಿಗೆ ಮತ್ತೊಂದು ಗೆಲುವು.. ಇದನ್ನು ಹೇಳೋಕೇ ಒಂಥರಾ ಖುಷಿ ಗುರೂ!

ವರ್ಕೌಟ್​ ಆಗಲಿಲ್ಲ ಗಬ್ಬರ್​ ಶಿಖರ್ ಆಟ!

4ನೇ ಓವರ್ ನಲ್ಲಿ ದಾಳಿಗಿಳಿಸಿದ ಲಲಿತ್ ಯಾದವ್ ನಾಲ್ಕನೇ ಎಸೆತದಲ್ಲಿ ಶಿಖರ್ ಧವನ್ ವಿಕೆಟ್ ಉರುಳಿಸಿದರು. ಬಳಿಕ ನಿರಂತರವಾಗಿ ಪಂಜಾಬ್ ತಂಡ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. 15 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 24 ರನ್ ಬಾರಿಸಿದ್ದ ಮಾಯಾಂಕ್ ಅಗರ್ವಾಲ್ 5ನೇ ಓವರ್ ನಲ್ಲಿ ಮುಸ್ತಾಫಿಜುರ್ ರೆಹಮಾನ್ ಗೆ ವಿಕೆಟ್ ನೀಡಿದರು. ಲಿಯಾಮ್ ಲಿವಿಂಗ್ ಸ್ಟೋನ್ ಕೇವಲ 2 ರನ್ ಬಾರಿಸಿ ಅಕ್ಸರ್ ಪಟೇಲ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.

ಇದನ್ನೂ ಓದಿ: ಕೋಟಿ ಕೋಟಿ ಕೊಟ್ಟು ಉಳಿಸಿಕೊಂಡ ಸ್ಟಾರ್ ಆಟಗಾರರ ಫ್ಲಾಪ್​ ಶೋ! ಮುಂದೇನು ಗತಿ ಅಂತಿದ್ದಾರೆ ಫ್ಯಾನ್ಸ್​

ನಿರಾಸೆ ಮೂಡಿಸಿದ ಶಾರುಖ್​ ಖಾನ್​!

ಸ್ಫೋಟಕ ಅಟಗಾರ ಶಾರುಖ್ ಖಾನ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದ ಪಂಜಾಬ್ ಕಿಂಗ್ಸ್ ನಿರಾಸೆ ಕಂಡಿತು. ತಂಡದ ಮೊತ್ತ 92 ರನ್ ಆಗಿದ್ದಾಗ ಖಲೀಲ್ ಅಹ್ಮದ್ ಎಸೆತದಲ್ಲಿ ಶಾರುಖ್ ಖಾನ್ ನಿರ್ಗಮನವಾಯಿತು. ಕೊನೆಗೆ ಪಂಜಾಬ್​ ಕಿಂಗ್ಸ್​ 20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 115 ರನ್​ ಗಳಿಸಿತ್ತು.
Published by:Vasudeva M
First published: