ಐಪಿಎಲ್ 2022ರ (IPL 2022) 15ನೇ ಆವೃತ್ತಿ ಮಾರ್ಚ್ 26ರಿಂದ ಆರಂಭವಾಗಲಿದೆ. ಇಂದು ಸಂಜೆ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡಗಳು ಮುಖಾಮುಖಿಯಾಗುವ ಮೂಲಕ ಈ ಅದ್ದೂರಿ ಟೂರ್ನಿಗೆ ಚಾಲನೆ ದೊರೆಯಲಿದೆ. ಈ ಬಾರಿ ಹತ್ತು ತಂಡಗಳು(10 Teams) ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿರುವುದು ಟೂರ್ನಿಯ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಕಳೆದ ಬಾರಿಯ ಚಾಂಪಿಯನ್(Champion) ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ಅಪ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ನಡುವೆ ಹಣಾಹಣಿ ನಡೆಯಲಿದೆ. ಎರಡು ತಂಡಗಳ ನಾಯಕರು ಬದಲಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಎಂ.ಎಸ್. ಧೋನಿ(MS Dhoni) ಎರಡು ದಿನಗಳ ಹಿಂದೆಯಷ್ಟೇ ನಾಯಕತ್ವ ಬಿಟ್ಟುಕೊಟ್ಟಿದ್ದರು. ಹೀಗಾಗಿ ರವೀಂದ್ರ ಜಡೇಜಾ(Ravindra Jadeja) ಸಿಎಸ್ಕೆ(CSK) ತಂಡವ್ನನು ಈ ಬಾರಿಯ ಟೂರ್ನಿಯಲ್ಲಿಪೂರ್ಣಪ್ರಮಾಣದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಮೊದಲ ರಣರಂಗದಲ್ಲಿ ಗೆಲ್ಲೋದ್ಯಾರು?
ರವೀಂದ್ರ ಜಡೇಜಾ ಇದೇ ಮೊದಲ ಬಾರಿಗೆ ಐಪಿಎಲ್ ತಂಡವನ್ನು ಮುನ್ನಡೆಸುವ ಹೊಣಡಗಾರಿಕೆ ದೊರೆತಿದ್ದು ಯಾವ ರೀತಿ ಈ ಜವಾಬ್ಧಾರಿಯನ್ನು ನಿರ್ವಹಿಸಲಿದ್ದಾರೆ. ಧೋನಿಯ ಆಪ್ತ ಸ್ನೇಹಿತನಾಗಿರುವ ಜಡೇಜಾಗೆ ಧೋನಿಯ ಬೆಂಬಲ ಸದಾ ಇರಲಿದೆ. ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಶ್ರೇಯಸ್ ಐಯ್ಯರ್ ನಾಯಕನಾಗಿದ್ದಾರೆ. ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ತಾನೆಂಥ ಒಳ್ಳೆಯ ಆಟಗಾರ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ತಾನೆಂಥ ನಾಯಕ ಎಂಬುದನ್ನು ಶ್ರೇಯಸ್ ಪ್ರೂವ್ ಮಾಡಿಕೊಳ್ಳಬೇಕಿದೆ. ಹೀಗಾಗಿ ಎರಡು ತಂಡ ನಾಯಕರಿಗೆ ಈ ಮೊದಲನೇ ಪಂದ್ಯ ಅತ್ಯಂತ ಮುಖ್ಯವಾಗಿದೆ.
ಇಂದಿನ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಟಾಸ್!
ಈ ಬಾರಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ. ಅದರಲ್ಲೂ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಕುತೂಹಲ ಮೂಡಿಸಿದೆ. ಮೊದಲನೇ ಪಂದ್ಯ ಕೂಡ ಇದೇ ಗ್ರೌಂಡ್ನಲ್ಲಿ ನಡೆದಿದೆ. ಕ್ರೀಡಾಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: ನನ್ನ ಆಶೀರ್ವಾದ ಸದಾ ಇರುತ್ತೆ..ಗೆದ್ದು ಬಾ! ವೆಂಕಟೇಶ್ ಅಯ್ಯರ್ಗೆ WWE ಕುಸ್ತಿಪಟು ರೋಲಿನ್ಸ್ ಆಶೀರ್ವಾದ!
ಮೊದಲು ಬ್ಯಾಟ್ ಮಾಡಿದವರಿಗೆ ಮೇಲುಗೈ!
ಹೌದು, ಕಳೆದ ಸೀಸನ್ ಐಪಿಎಲ್ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಅಂದರೆ 6 ತಂಡಗಳು ಚೇಸಿಂಗ್ ಮಾಡಿ ಗೆದ್ದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ 81 ಐಪಿಎಲ್ ಪಂದ್ಯಗಳನ್ನು ಆಡಲಾಗಿದೆ. ಆದರೆ ಈ ವೇಳೆ ಚೇಸಿಂಗ್ ತಂಡ ಗೆದ್ದಿರುವುದು 41 ಬಾರಿ ಮಾತ್ರ. ಅಂದರೆ ಉಳಿದ 40 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ ತಂಡವೇ ಗೆದ್ದಿದೆ.
ಇದನ್ನೂ ಓದಿ: IPL ನಲ್ಲಿ ಕಾಮೆಂಟೆಟರ್ ತುಂಬಾ ಕಾಸ್ಟ್ಲಿ ಗುರು..! ಯಾರು ಎಷ್ಟು ತಗೋಳ್ತಾರೆ ಗೊತ್ತಾ?
ಕೆಕೆಆರ್ ಸಂಭಾವ್ಯ ತಂಡ!
ಕೆಕೆಆರ್ ಸಂಭಾವ್ಯ ತಂಡ: ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನೀಲ್ ನರೈನ್, ಟಿಮ್ ಸೌಥೀ, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್.
ಸಿಎಸ್ಕೆ ಸಂಭಾವ್ಯ ತಂಡ!
ಚೆನ್ನೈ ಸಂಭಾವ್ಯ ತಂಡ: ರವೀಂದ್ರ ಜಡೇಜಾ (ನಾಯಕ), ದೀಪಕ್ ಚಹಾರ್, ಎಂಎಸ್ ಧೋನಿ, ಅಂಬಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕ್ರಿಸ್ ಜೋರ್ಡಾನ್, ತುಷಾರ್ ದೇಶಪಾಂಡೆ, ಕೆ ಎಂ ಆಸಿಫ್, ಆಡಮ್ ಮಿಲ್ನೆ, ಪ್ರಶಾಂತ್ ಸೋಲಂಕಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ