IPL 2022: ಚುಟುಕು ಸಮರಕ್ಕೆ ಸಿಕ್ತು ಚಾಲನೆ.. ಟಾಸ್​ ಗೆದ್ದು ಚೇಸಿಂಗ್​ ಚೂಸ್​ ಮಾಡಿದ್ದೇಕೆ ಶ್ರೇಯಸ್​? ಅದಕ್ಕೂ ಕಾರಣವಿದೆ!

ಐಪಿಎಲ್ 2022ರ (IPL 2022) 15ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಇಂದು ಸಂಜೆ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಟಾಸ್​ ಗೆದ್ದು ಕೊಲ್ಕತ್ತಾ ನೈಟ್​ ರೈಡರ್ಸ್  ಬೌಲಿಂಗ್​ ಆಯ್ತುಕೊಂಡಿದ್ದಾರೆ.

ಜಡೇಜಾ, ಶ್ರೇಯಸ್​ ಅಯ್ಯರ್​

ಜಡೇಜಾ, ಶ್ರೇಯಸ್​ ಅಯ್ಯರ್​

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಇಂದು ಸಂಜೆ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಟಾಸ್​ ಗೆದ್ದು ಕೊಲ್ಕತ್ತಾ ನೈಟ್​ ರೈಡರ್ಸ್  ಬೌಲಿಂಗ್​ ಆಯ್ತುಕೊಂಡಿದ್ದಾರೆ. ಮೊದಲ ಬಾರಿಗೆ ಜಡೇಜಾ(Jadeja) ನಾಯಕತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಅಖಾಡಕ್ಕೆ ಇಳಿಯುತ್ತಿದೆ.ಈ ಬಾರಿ ಹತ್ತು ತಂಡಗಳು(10 Teams) ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿರುವುದು ಟೂರ್ನಿಯ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಕಳೆದ ಬಾರಿಯ ಚಾಂಪಿಯನ್(Champion) ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್‌ಅಪ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ನಡುವೆ ಹಣಾಹಣಿ ನಡೆಯುತ್ತಿದೆ.

ಟಾಸ್​ ಗೆದ್ರೂ ಚೇಸಿಂಗ್ ಚೂಸ್​ ಮಾಡಿದ ಶ್ರೇಯಸ್ ಅಯ್ಯರ್​!

ಮೊದಲನೇ ಪಂದ್ಯದ ಎರಡು ತಂಡಗಳಿಗೂ ಹೊಸ ನಾಯಕರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಎಂ.ಎಸ್. ಧೋನಿ(MS Dhoni) ಎರಡು ದಿನಗಳ ಹಿಂದೆಯಷ್ಟೇ ನಾಯಕತ್ವ ಬಿಟ್ಟುಕೊಟ್ಟಿದ್ದರು. ಹೀಗಾಗಿ ರವೀಂದ್ರ ಜಡೇಜಾ(Ravindra Jadeja) ಸಿಎಸ್‌ಕೆ(CSK) ತಂಡವ್ನನು ಈ ಬಾರಿಯ ಟೂರ್ನಿಯಲ್ಲಿಪೂರ್ಣಪ್ರಮಾಣದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಧೋನಿಯ ಆಪ್ತ ಸ್ನೇಹಿತನಾಗಿರುವ ಜಡೇಜಾಗೆ ಧೋನಿಯ ಬೆಂಬಲ ಸದಾ ಇರಲಿದೆ. ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಶ್ರೇಯಸ್ ಐಯ್ಯರ್ ನಾಯಕನಾಗಿದ್ದಾರೆ. ಭಾರತ ತಂಡದಲ್ಲಿ ಶ್ರೇಯಸ್​ ಅಯ್ಯರ್​ ತಾನೆಂಥ ಒಳ್ಳೆಯ ಆಟಗಾರ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ತಾನೆಂಥ ನಾಯಕ ಎಂಬುದನ್ನು ಶ್ರೇಯಸ್​​ ಪ್ರೂವ್​ ಮಾಡಿಕೊಳ್ಳಬೇಕಿದೆ.

ವಾಖೆಂಡೆಯಲ್ಲಿ ಮೊದಲು ಬ್ಯಾಟ್​ ಮಾಡಿದವರಿಗೆ ಗೆಲುವು!

ಕಳೆದ ಸೀಸನ್​ ಐಪಿಎಲ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಅಂದರೆ 6 ತಂಡಗಳು ಚೇಸಿಂಗ್ ಮಾಡಿ ಗೆದ್ದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ 81 ಐಪಿಎಲ್​ ಪಂದ್ಯಗಳನ್ನು ಆಡಲಾಗಿದೆ. ಆದರೆ ಈ ವೇಳೆ ಚೇಸಿಂಗ್ ತಂಡ ಗೆದ್ದಿರುವುದು 41 ಬಾರಿ ಮಾತ್ರ. ಅಂದರೆ ಉಳಿದ 40 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ ತಂಡವೇ ಗೆದ್ದಿದೆ. ಆದರೆ, ಶ್ರೇಯಸ್​ ಅಯ್ಯರ್​ ಚೇಸಿಂಗ್​ ಆಯ್ಕೆ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಕ್ರಿಕೆಟ್​ ಹಬ್ಬಕ್ಕೆ ಕ್ಷಣಗಣನೆ! CSK v/s KKR ರಣರಂಗದಲ್ಲಿ ಗೆಲ್ಲೋದ್ಯಾರು? ಹೇಗಿದೆ ಪಿಚ್​ ರಿಪೋರ್ಟ್?

ಕೆಕೆಆರ್​ ಪ್ಲೇಯಿಂಗ್​ ಇಲೆವೆನ್ ತಂಡ​ 

ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನೀಲ್ ನರೈನ್, ಸೆಲ್ಡೊನ್ ಜಾಕ್ಸನ್​, ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ.

ಇದನ್ನೂ ಓದಿ: ಕರ್ನಾಟಕದ ಡಿಜಿ, ಐಜಿಪಿ ಅಳಿಯ IPLನ ಸ್ಟಾರ್ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್!

ಸಿಎಸ್​ಕೆ ಪ್ಲೇಯಿಂಗ್​ ಇಲೆವೆನ್ ತಂಡ​

ರುಥುರಾಜ್​ ಗಾಯಕ್​ವಾಡ್​​, ಡಿವನ್​ ಕಾನ್ವೆ, ರಾಬಿನ್​ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಶಿವಂ ದುಬೆ, ಎಂಎಸ್ ಧೋನಿ,  ಡ್ವೇನ್ ಬ್ರಾವೋ, ಮಿಚೆಲ್​ ಸ್ಯಾಂಟ್ನರ್​, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ.
Published by:Vasudeva M
First published: