CSK vs SRH: ಟಾಸ್​ ಗೆದ್ದ ​ಹೈದರಾಬಾದ್​.. ಬೌಲಿಂಗ್​ ಆಯ್ಕೆ! ಇಲ್ಲಿವರೆಗೂ ಇವ್ರಿಬ್ಬರು ಗೆಲುವಿನ​ ಅಕೌಂಟ್​ ಓಪನ್​ ಮಾಡಿಲ್ಲ..

. ಟಾಸ್​ ಗೆದ್ದಿರುವ ಸನ್​ರೈರ್ಸಸ್​ ಹೈದರಾಬಾದ್ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದು, ಅಖಾಡಕ್ಕೆ ಇಳಿಯುತ್ತಿದೆ. ಆದರೆ, ಇಂದಿನ ಪಂದ್ಯದಲ್ಲಿ ಎಸ್​​ಆರ್​​ಎಚ್​ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಜಡೇಜಾ, ವಿಲಿಯಮ್ಸನ್​

ಜಡೇಜಾ, ವಿಲಿಯಮ್ಸನ್​

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2022) 15 ನೇ ಸೀಸನ್‌ನಲ್ಲಿ ಇಂದು 2 ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಅಂದರೆ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (CSK vs SRH) ನಡುವೆ ನಡೆಯುತ್ತಿದೆ. ಈ ಪಂದ್ಯದ ನಂತರ 18ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವೆ ನಡಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಹೈದರಾಬಾದ್ ಮುಖಾಮುಖಿಯಾಗುತ್ತಿದ್ದು, ಈ ಋತುವಿನಲ್ಲಿ ಇನ್ನೂ ಒಂದು ಪಂದ್ಯವನ್ನು ಈ 2 ತಂಡಗಳು ಗೆದ್ದಿಲ್ಲ. ಟಾಸ್​ ಗೆದ್ದಿರುವ ಸನ್​ರೈರ್ಸಸ್​ ಹೈದರಾಬಾದ್ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದು, ಅಖಾಡಕ್ಕೆ ಇಳಿಯುತ್ತಿದೆ. ಆದರೆ, ಇಂದಿನ ಪಂದ್ಯದಲ್ಲಿ ಎಸ್​​ಆರ್​​ಎಚ್​ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

    ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ!

    ಈ ಋತುವಿನಲ್ಲಿ ಇನ್ನೂ ಒಂದು ಪಂದ್ಯವನ್ನು ಈ 2 ತಂಡಗಳು ಗೆದ್ದಿಲ್ಲ. ಹೀಗಾಗಿ ಚೆನ್ನೈ ಮತ್ತು ಹೈದರಾಬಾದ್ ಅಂಕಪಟ್ಟಿಯಲ್ಲಿ ಕ್ರಮವಾಗಿ 8 ಮತ್ತು 10 ನೇ ಸ್ಥಾನದಲ್ಲಿದ್ದು, ಇಂದಿನ ಪಮದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಎರಡೂ ತಂಡಗಳಿಗಿದೆ. ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ 3 ಪಂದ್ಯಗಳನ್ನಾಡಿದ್ದು 3 ಪಂದ್ಯಗಳನ್ನೂ ಸೋತಿದ್ದರೆ, ಇತ್ತ ಹೈದರಾಬಾದ್ ಸಹ 2 ಪಂದ್ಯಗಳನ್ನು ಕೈಚೆಲ್ಲಿದ್ದು ಇಂದಿನ ಪಂದ್ಯದ ಮೂಲಕ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ.

    ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇಯಿಂಗ್​ 11

    ಋುತುರಾಜ್‌ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್‌ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್‌, ಮಹೀಶ್ ತೀಕ್ಷಣ‌, ತುಷಾರ್ ದೇಶಪಾಂಡೆ‌, ಮುಕೇಶ್‌ ಚೌಧರಿ.

    ಸನ್‌ರೈಸರ್ಸ್‌ ಹೈದ್ರಾಬಾದ್‌ ಪ್ಲೇಯಿಂಗ್​ 11

    ಅಭಿಷೇಕ್ ಶರ್ಮಾ‌, ಕೇನ್ ವಿಲಿಯಮ್ಸನ್‌(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ವಾಷಿಂಗ್ಟನ್ ಸುಂದರ್‌, ಸುಶಾಂಕ್ ಸಿಂಗ್‌, ಮಾರ್ಕೊ ಯಾನ್ಸೆನ್‌, ಭುವನೇಶ್ವರ್ ಕುಮಾರ್‌, ಉಮ್ರಾನ್ ಮಲಿಕ್‌, ಟಿ ನಟರಾಜನ್‌

    ಇದನ್ನೂ ಓದಿ: ಟಿ20ಯಲ್ಲಿ ವಿಶೇಷ ದಾಖಲೆ ಬರೆದ ಗಬ್ಬರ್ ಸಿಂಗ್, ಭಾರತೀಯರಲ್ಲಿ ಇವರೇ ಮೊದಲು

    ಮತ್ತೊಂದು ಹೈಸ್ಕೋರಿಂಗ್​ ಗೇಮ್​ ನಿರೀಕ್ಷೆ

    ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಮತ್ತೊಂದು ಹೈಸ್ಕೋರಿಂಗ್ ಗೇಮ್ ನಿರೀಕ್ಷೆ ಮಾಡಲಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಸುಶಾಂಕ್ ಸಿಂಗ್ (Shashank Singh) ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಯಾನ್ಸನ್‌ (Marco Jansen) ತಂಡ ಕೂಡಿಕೊಂಡಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ಪರ ಡ್ವೇನ್ ಪ್ರಿಟೋರಿಯಸ್ ಬದಲಿಗೆ ಮಾಂತ್ರಿಕ ಸ್ಪಿನ್ನರ್ ಮಹೀಶ್ ತೀಕ್ಷಣ (Maheesh Theekshana) ತಂಡ ಕೂಡಿಕೊಂಡಿದ್ದಾರೆ. ಎರಡೂ ತಂಡಗಳು ಟೂರ್ನಿಯಲ್ಲಿ ಸತತ ಸೋಲುಗಳನ್ನು ಕಂಡಿದ್ದು, ಇಂದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

    ಇದನ್ನೂ ಓದಿ: ಐಪಿಎಲ್​ನಲ್ಲಿ ಮಿಂಚುತ್ತಿರುವ ಯುವ ಪ್ರತಿಭೆಗಳು, ಇವರೇ ಟೀಂ ಇಂಡಿಯಾ ಭವಿಷ್ಯದ ಪ್ಲೇಯರ್ಸ್​..!

    ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದು, ಇದೀಗ ಶತಾಯಗತಾಯ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
    Published by:Vasudeva M
    First published: