IPL 2022: ಭಾರತಕ್ಕೆ ಬರಲು ವಿಸಾ ಸಿಗದೇ ಸಿಎಸ್​ಕೆ ಪ್ಲೇಯರ್​ ಪರದಾಟ, 8 ಕೋಟಿ ಕೊಟ್ಟ ಮ್ಯಾನೇಜ್​ಮೆಂಟ್​ಗೆ ಟೆನ್ಶನ್​!

ಎಂಎಸ್ ಧೋನಿ (MS Dhoni) ಪಡೆಗೆ ಮತ್ತೊಂದು ಕಾರಣದಿಂದ ತಲೆನೋವು ಹೆಚ್ಚಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್ ಇನ್ನೂ ತಂಡವನ್ನು ಸೇರಿಕೊಂಡಿದಲ್ಲ. ಕಳೆದ 20 ದಿನಗಳಿಂದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಭಾರತಕ್ಕೆ ಬರಲು ವೀಸಾ ಸಿಗದಿರುವುದು ಸಿಎಸ್‌ಕೆ ಟೆನ್ಷನ್ ಹೆಚ್ಚಿಸಿದೆ.

ಎಂ.ಎಸ್​.ಧೋನಿ

ಎಂ.ಎಸ್​.ಧೋನಿ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ನಡೆಯಲಿದೆ. ಆದರೆ, ಆರಂಭದಲ್ಲಿ ವಿದೇಶಿ ಆಟಗಾರರು ಲಭ್ಯವಿಲ್ಲದಿರುವುದು ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಈ ವಿಷಯದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿಲ್ಲ. ಆದರೆ ಎಂಎಸ್ ಧೋನಿ (MS Dhoni) ಪಡೆಗೆ ಮತ್ತೊಂದು ಕಾರಣದಿಂದ ತಲೆನೋವು ಹೆಚ್ಚಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್ ಇನ್ನೂ ತಂಡವನ್ನು ಸೇರಿಕೊಂಡಿದಲ್ಲ. ಕಳೆದ 20 ದಿನಗಳಿಂದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಭಾರತಕ್ಕೆ ಬರಲು ವೀಸಾ ಸಿಗದಿರುವುದು ಸಿಎಸ್‌ಕೆ ಟೆನ್ಷನ್ ಹೆಚ್ಚಿಸಿದೆ.

ಇನ್ನೂ ತಂಡ ಸೇರಿಕೊಳ್ಳದ ಮೊಯಿನ್​ ಅಲಿ!

ಮಾರ್ಚ್ 26 ರಿಂದ ಮುಂಬೈನಲ್ಲಿ ಐಪಿಎಲ್ 15 ನೇ ಸೀಸನ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಮೊಯಿನ್​ಗೆ ಇನ್ನೂ ವೀಸಾ ಸಿಗದಿರುವುದು ಚೆನ್ನೈನ ಚಿಂತೆಗೆ ಕಾರಣವಾಗಿದೆ. ನಿರಂತರವಾಗಿ ಭಾರತಕ್ಕೆ ಪ್ರಯಾಣ ಬೆಳೆಸುವುದರ ನಡುವೆಯೂ ಮೊಯಿನ್​ಗೆ ವೀಸಾ ವಿಳಂಬವಾಗುತ್ತಿರುವುದು ಫ್ರಾಂಚೈಸಿಗೂ ಆಶ್ಚರ್ಯ ಉಂಟು ಮಾಡಿದೆ. ಇನ್ನೂ 8 ಕೋಟಿ ಕೊಟ್ಟು ಖರೀದಿ ಮಾಡಿರುವ ಚೆನ್ನೈ ಮ್ಯಾನೇಜ್​ಮೆಂಟ್​ಗೆ ಆತಂಕ ಶುರುವಾಗಿದೆ.

ಮಾರ್ಚ್ 21ರೊಳಗೆ ತಂಡ ಸೇರಿಕೊಳ್ತಾರೆ ಮೊಯಿನ್ ಅಲಿ?

ಈ ವಿಚಾರದಲ್ಲಿ ಬಿಸಿಸಿಐ ಕೂಡ ಪ್ರಯತ್ನ ನಡೆಸಿದ್ದು, ಸೋಮವಾರದೊಳಗೆ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥ್ ವ ಹೇಳಿದ್ದಾರೆ. ಪ್ರಯಾಣದ ದಾಖಲೆಗಳನ್ನು (ವೀಸಾ) ಪಡೆದ ತಕ್ಷಣ ಮುಂದಿನ ವಿಮಾನದಲ್ಲಿ ಭಾರತಕ್ಕೆ ಹೊರಡುವುದಾಗಿ ಮೊಯಿನ್ ನಮಗೆ ತಿಳಿಸಿದ್ದಾರೆ. ಈ ವಿಚಾರದಲ್ಲಿ ಬಿಸಿಸಿಐ ಕೂಡ ನಮಗೆ ಸಹಾಯ ಹಸ್ತ ಚಾಚಿದೆ. ಸೋಮವಾರದೊಳಗೆ (ಮಾರ್ಚ್ 21) ಅನುಮತಿ ಸಿಗುತ್ತದೆ ಎಂಬ ಭರವಸೆ ನಮಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್​ ಇತಿಹಾಸದಲ್ಲೇ ಹೆಚ್ಚಿನ ಗೆಲುವು ದಾಖಲಿಸಿದ ಟಾಪ್​ 4 ತಂಡಗಳು ಇವು.. ಆರ್​​ಸಿಬಿನೂ ಇದೇ ರೀ!

8 ಕೋಟಿಗೆ ಚೆನ್ನೈ ಪಾಲಾಗಿದ್ದ ಮೊಯಿನ್ ಅಲಿ!

ಎಡಗೈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್ ಸ್ಪಿನ್ನರ್ ಮೊಯಿನ್ ಅಲಿ ತಮ್ಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ಚೆನ್ನೈ ನಾಲ್ಕನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  ಕಳೆದ ವರ್ಷದ ಹರಾಜಿನಲ್ಲಿ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಈ ಇಂಗ್ಲೆಂಡ್ ಆಲ್ರೌಂಡರ್ ಅನ್ನು ರೂ 8 ಕೋಟಿಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಇದೀಗ ಆದಷ್ಟು ಬೇಗ ಅವರು ತಂಡವನ್ನು ಸೇರಿಕೊಳ್ಳುಲಿದ್ದಾರೆ ಎಂದು ಚೆನ್ನೈ ಮ್ಯಾನೆಂಜ್​ಮೆಂಟ್ ತಿಳಿಸಿದೆ.

ಇದನ್ನೂ ಓದಿ: ಐಪಿಎಲ್​ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದ ದಾಂಡಿಗರು..!

ಪ್ರೇಕಕ್ಷರಿಲ್ಲದೇ ನಡೆಯುತ್ತಾ ಈ ಬಾರಿಯ ಐಪಿಎಲ್​ !

ಆರ್​​ಸಿಬಿ (RCB) ಸೇರಿದಂತೆ ಇತರೆ ತಂಡದ ಕೆಲ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದರೆ, ಇನ್ನೂ ಕೆಲವರು ಕ್ವಾರಂಟೈನ್​ನಲ್ಲಿದ್ದಾರೆ. ಆದರೀಗ ಟೂರ್ನಿಯನ್ನು ಮೈದಾನಕ್ಕೆ ಬಂದು ವೀಕ್ಷಿಸಿ ರೋಚಕ ಅನುಭವ ಪಡೆದುಕೊಳ್ಳಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ. ಯಾಕೆಂದರೆ ಐಪಿಎಲ್ 2022 ಟೂರ್ನಿ ಪ್ರೇಕ್ಷಕರಿಲ್ಲದೆ ಈ ಬಾರಿ ಕೂಡ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯೂ ಕೊರೋನಾಗೆ ಐಪಿಎಲ್​ ಆಹುತಿಯಾಗಿತ್ತು.
Published by:Vasudeva M
First published: