• ಹೋಂ
 • »
 • ನ್ಯೂಸ್
 • »
 • IPL
 • »
 • IPL Auction- ಐಪಿಎಲ್ ಹರಾಜು ಯಾವಾಗ, ಎಲ್ಲಿ, ಯಾಕೆ ವಿಳಂಬ?; ಇಲ್ಲಿದೆ ವಿವರ

IPL Auction- ಐಪಿಎಲ್ ಹರಾಜು ಯಾವಾಗ, ಎಲ್ಲಿ, ಯಾಕೆ ವಿಳಂಬ?; ಇಲ್ಲಿದೆ ವಿವರ

ಐಪಿಎಲ್ ಟ್ರೋಫಿ

ಐಪಿಎಲ್ ಟ್ರೋಫಿ

IPL 2022: ಈ ತಿಂಗಳು ಡಿಸೆಂಬರ್​ನಲ್ಲಿ ನಡೆಯಬೇಕಿದ್ದ ಐಪಿಎಲ್ ಹರಾಜು ಒಂದೆರಡು ತಿಂಗಳು ವಿಳಂಬವಾಗಬಹುದು ಎಂಬ ಸುದ್ದಿ ಇದೆ. ಈ ವಿಳಂಬಕ್ಕೆ ಏನು ಕಾರಣ, ಎಲ್ಲಿ ಹರಾಜು ನಡೆಯುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ.

 • Cricketnext
 • 3-MIN READ
 • Last Updated :
 • Share this:

  ನವದೆಹಲಿ: ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ನಡೆಯಬಹುದಾದ ಐಪಿಎಲ್ 2022 ಪಂದ್ಯಾವಳಿ (IPL 2022) ಬಹಳ ನಿರೀಕ್ಷೆ ಮೂಡಿಸಿದೆ. ಎರಡು ಹೊಸ ತಂಡಗಳ ಆಗಮನದಿಂದ ಐಪಿಎಲ್ ಈ ಬಾರಿ ದೊಡ್ಡದಾಗಿದೆ. ಲಕ್ನೋ (Lucknow Franchise) ಮತ್ತು ಅಹ್ಮದಾಬಾದ್ ಫ್ರಾಂಚೈಸಿಯ (Ahmedabad Franchise) ಎಂಟ್ರಿಯಿಂದ ಸ್ಪರ್ಧೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಈ ಎರಡು ಫ್ರಾಂಚೈಸಿಯ ತಂಡಗಳಿಗೆ ಇನ್ನೂ ಹೆಸರಿಡಲಾಗಿಲ್ಲ.


  ಇದೇ ವೇಳೆ, ಐಪಿಎಲ್ ಹರಾಜು ಕಾರ್ಯಕ್ರಮ ಮುಂದೂಡಲಾಗಿರುವುದು ಹಾಗೂ ಅಹ್ಮದಾಬಾದ್ ಫ್ರಾಂಚೈಸಿಯ ಬೆಟ್ಟಿಂಗ್ ವಿವಾದ ಇತ್ಯಾದಿ ವಿಚಾರಗಳು ಮುನ್ನೆಲೆಯಲ್ಲಿವೆ. ಇತ್ತೀಚಿನ ಮಾಹಿತಿ ಎಲ್ಲವೂ ಇಲ್ಲಿದೆ…


  ಐಪಿಎಲ್ ಪಂದ್ಯಾವಳಿ ಯಾವಾಗ:


  ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಟೂರ್ನಿ ಸಾಮಾನ್ಯವಾಗಿ ಏಪ್ರಿಲ್​ನಲ್ಲಿ ಅರಂಭವಾಗುತ್ತದೆ. ಆದರೆ, ದಿನಾಂಕವನ್ನು ಬಿಸಿಸಿಐ ಇನ್ನೂ ಘೋಷಿಸಿಲ್ಲ. ಹರಾಜು ಪ್ರಕ್ರಿಯೆ ಬಳಿಕ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಪಂದ್ಯಾವಳಿ ಆರಂಭಕ್ಕೆ ಬಿಸಿಸಿಐ ಮನದಲ್ಲಿ ಸದ್ಯಕ್ಕೆ ಇರುವುದು ಏಪ್ರಿಲ್ 2ರ ದಿನಾಂಕ.


  ಐಪಿಎಲ್ ಹರಾಜು ಯಾವಾಗ:


  ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ ತಿಂಗಳಲ್ಲೇ ಐಪಿಎಲ್ ಹರಾಜು ನಡೆಯಬೇಕಿತ್ತು. ಡಿಸೆಂಬರ್​ನಲ್ಲಿ ಆಟಗಾರರ ಆಕ್ಷನ್ ಇರುವ ಸಾಧ್ಯತೆ ಇದೆ ಎಂದು ಬಿಸಿಸಿಐ ಕೂಡ ಹೇಳಿತ್ತು. ಆದರೆ, ಇದೀಗ ಡಿಸೆಂಬರ್​ನಲ್ಲಿ ಹರಾಜು ಪ್ರಕ್ರಿಯೆ ಇರುವುದಿಲ್ಲ ಎಂದು ತಿಳಿದುಬಂದಿದೆ. ಬಿಸಿಸಿಐ ಮೂಲಗಳ ಪ್ರಕಾರ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಹರಾಜು ಕಾರ್ಯಕ್ರಮ ನಡೆಯಬಹುದು ಎನ್ನಲಾಗಿದೆ.


  ಐಪಿಎಲ್ ಹರಾಜು ಯಾಕೆ ವಿಳಂಬ:


  ಐಪಿಎಲ್​ಗೆ ಈ ಬಾರಿ ಎರಡು ಹೊಸ ತಂಡಗಳು ಸೇರ್ಪಡೆ ಆಗಿವೆ. ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಬಿಸಿಸಿಐ ಅನುಮತಿ ನೀಡಿದೆ. ಸಾವಿರಾರು ಕೋಟಿ ರೂ ತೆತ್ತು ಫ್ರಾಂಚೈಸಿಯನ್ನ ಕೊಳ್ಳಲಾಗಿದೆ. ಅದಾನಿ ಕಂಪನಿಯನ್ನ ಹಿಂದಿಕ್ಕಿ ಅಹ್ಮದಾಬಾದ್ ಫ್ರಾಂಚೈಸಿಯನ್ನ 5600 ಕೋಟಿಗೆ ಬಿಡ್ ಮಾಡಿ ಖರೀದಿಸಿದ್ದ ಸಿವಿಸಿ ಕ್ಯಾಪಿಟಲ್ ಸಂಸ್ಥೆಯ ವ್ಯವಹಾರದ ಬಗ್ಗೆ ಆರೋಪಗಳು ಕೇಳಿಬಂದಿವೆ. ಬೆಟಿಂಗ್ ಕಂಪನಿಗಳ ಜೊತೆ ಸಿವಿಸಿ ಕ್ಯಾಪಿಟಲ್ ನಂಟು ಹೊಂದಿರುವ ಆರೋಪಗಳವು. ಹೀಗಾಗಿ, ಅದರ ಪರಿಶೀಲನೆ ನಡೆಸಲಾಗುತ್ತಿದೆ. ಅದು ಸ್ಪಷ್ಟವಾದ ಬಳಿಕ ಹರಾಜು ಪ್ರಕ್ರಿಯೆಯ ದಿನಾಂಕವನ್ನು ಪ್ರಕಟಿಸಬಹುದು.


  ಇದನ್ನೂ ಓದಿ: IPL 2022- ಹರ್ಭಜನ್ ಸಿಂಗ್ ಸೆಕೆಂಡ್ ಇನ್ನಿಂಗ್ಸ್: ಐಪಿಎಲ್​ನಲ್ಲಿ ಭಜ್ಜಿ ಕೋಚಿಂಗ್


  ಐಪಿಎಲ್ ಹರಾಜು ಸ್ಥಳ ಎಲ್ಲಿ:


  2022ರ ಐಪಿಎಲ್​ನ ಹರಾಜು ಪ್ರಕ್ರಿಯೆ ಆಯೋಜಿಸಲು ಹಲವು ನಗರಗಳು ಆಸಕ್ತಿ ತೋರಿವೆ. ಆದರೆ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಮಧ್ಯೆ ಪೈಪೋಟಿ ಹೆಚ್ಚು ಇದೆ. ಹಿಂದಿನ ಕೆಲ ಸೀಸನ್​ಗಳಲ್ಲಿ ಬೆಂಗಳೂರಿನಲ್ಲಿ ಹರಾಜು ನಡೆದಿತ್ತು.


  ಹರಾಜಿಗೆ ವ್ಯವಸ್ಥೆ ಹೇಗೆ:


  ಸಾಮಾನ್ಯವಾಗಿ ಐಪಿಎಲ್ ಹರಾಜು ಕಾರ್ಯಕ್ರಮ ಎರಡು ದಿನ ನಡೆಯುತ್ತದೆ. ಈ ಬಾರಿ ಇನ್ನಷ್ಟು ಸುವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಯೋಜಿಸುತ್ತಿದೆ ಎಂದು ಕ್ರಿಕೆಟ್ ಡಾಟ್ ಕಾಮ್ ವೆಬ್ ಸೈಟ್ ವರದಿ ಮಾಡಿದೆ. ಈ ವರದಿಯನ್ನ ನಂಬುವುದಾದರೆ, ಐಪಿಎಲ್ ಹರಾಜನ್ನು ಟಿವಿ ವೀಕ್ಷಣೆಗೆ ಹೆಚ್ಚು ಅನುಕೂಲವಾಗುವಂತೆ ಆಯೋಜಿಸುವ ನಿರೀಕ್ಷೆ ಇದೆ.


  ಇದನ್ನೂ ಓದಿ: IPL 2022- ರೀಟೈನ್ ಆಗಲಿರುವ ಆಟಗಾರರು; ಹಣ ಎಷ್ಟು, ಹರಾಜು ಯಾವಾಗ, ಎಲ್ಲಾ ಮಾಹಿತಿ


  ಎಂಟು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ:


  ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯೀನ್ ಅಲಿ ಮತು ಋತುರಾಜ್ ಗಾಯಕ್ವಾಡ್
  ಕೋಲ್ಕತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್.
  ಸನ್​ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್.
  ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್.
  ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಮೊಹಮ್ಮದ್ ಸಿರಾಜ್
  ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಆನ್ರಿಕ್ ನೋರ್ಟಿಯಾ.
  ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್.
  ಪಂಜಾಬ್ ಕಿಂಗ್ಸ್: ಮಯಂಕ್ ಅಗರ್ವಾಲ್, ಅರ್ಷ್​ದೀಪ್ ಸಿಂಗ್


  ಹೊಸ ಎರಡು ತಂಡಗಳಿಗೆ ನಿಯಮಗಳು ಹೇಗೆ?:


  ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಆಟಗಾರರ ಹರಾಜಿಗೆ ಮುನ್ನ ತಲಾ ಮೂವರು ಆಟಗಾರರನ್ನ ಖರೀದಿಸುವ ಅವಕಾಶ ಪಡೆದಿವೆ. ಈ ಮೂರು ಆಟಗಾರರಿಗೆ ಗರಿಷ್ಠ 33 ಕೋಟಿ ರೂ ಮಾತ್ರ ಖರ್ಚು ಮಾಡಬಹುದು.


  ಮೊದಲ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ರೂ ತೆರಬೇಕೆಂಬುದು ಪೂರ್ವನಿಗದಿತವಾಗಿದೆ.


  ಇದನ್ನೂ ಓದಿ: ಸಾಂಪ್ರದಾಯಿಕ ಶೈಲಿ ಬಿಡದ ಫ್ಲವರ್ ಲಕ್ನೋ ಐಪಿಎಲ್ ತಂಡಕ್ಕೆ ಕೋಚ್; ಗಂಭೀರ್ ಮೆಂಟಾರ್


  ಲಕ್ನೋ ಫ್ರಾಂಚೈಸಿಯ ತಂಡಕ್ಕೆ ಫ್ಲವರ್ ಕೋಚ್:


  ಸಂಜೀವ್ ಗೋಯೆಂಕಾ ಒಡೆತನ ಇರುವ ಲಕ್ನೋ ಫ್ರಾಂಚೈಸಿ ಈಗಾಗಲೇ ತನ್ನ ಹಾದಿಯನ್ನ ಸ್ಪಷ್ಟಪಡಿಸಿಕೊಂಡಿರುವಂತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟಗಾರ ಮತ್ತು ಕೋಚ್ ಎರಡೂ ವಿಭಾಗದಲ್ಲಿ ಯಶಸ್ಸು ಕಂಡಿರುವ ಜಿಂಬಾಬ್ವೆಯ ಆಂಡಿ ಫ್ಲವರ್ ಅವರು ಲಕ್ನೋ ತಂಡಕ್ಕೆ ಮುಖ್ಯ ಕೋಚ್ ಆಗಿದ್ಧಾರೆ. ಗೌತಮ್ ಗಂಭೀರ್ ಅವರನ್ನ ಮೆಂಟಾರ್ ಜವಾಬ್ದಾರಿಗೆ ನಿಯುಕ್ತಿ ಮಾಡಲಾಗಿದೆ. ಮೂಲಗಳ ಪ್ರಕಾರ, ಕರ್ನಾಟಕದ ಕೆ ಎಲ್ ರಾಹುಲ್ ಅವರು ಲಕ್ನೋ ತಂಡದ ನಾಯಕರಾಗುವ ಸಾಧ್ಯತೆ ಇದೆ.

  Published by:Vijayasarthy SN
  First published: