ಐಪಿಎಲ್ 2022ರ (IPL 2022) 15ನೇ ಸೀಸನ್ನಲ್ಲಿ ಇಂದು 2 ಪಂದ್ಯಗಳು ನಡೆಯುತ್ತಿದೆ. ಮೊದಲ ಪಂದ್ಯ 35ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ (KKR vs GT) ಮುಖಾಮುಖಿಯಾಗಿದೆ. ನವಿ ಮುಂಬೈನಲ್ಲಿರುವ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಂದ್ಯ ನಡೆಯುತ್ತಿದೆ. 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಸೆಣಸಾಡಲಿವೆ. ಮೊದಲ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿದೆ. ಗುಜರಾತ್ ಟೈಟನ್ಸ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲೊಡ್ಡಿದೆ. ಟಾಸ್ ಗೆದ್ದಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆಯ್ದು ಕೊಂಡಿದೆ. ಬೃಹತ್ ಮೊತ್ತ ಕಲೆಹಾಕುವ ಉದ್ದೇಶದಿಂದ ಮೊದಲು ಬ್ಯಾಟ್ ಮಾಡಲು ಗುಜರಾತ್ ಟೈಟನ್ಸ್ ತೀರ್ಮಾನಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರನ್ ಮಳೆ ಬರುವ ಸಾಧ್ಯತೆ ಹೆಚ್ಚಿದೆ.
ಕೆಕೆಆರ್ಗೆ ಶಾಕ್ ಕೊಡುತ್ತಾ ಗುಜರಾತ್ ಟೈಟನ್ಸ್!
KKR ಈ ಋತುವಿನಲ್ಲಿ DY ಪಾಟೀಲ್ ಕ್ರೀಡಾಂಗಣದಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದೆ ಅದು ಸಹ ಆರ್ಸಿಬಿ ವಿರುದ್ದ ಸೋತಿದೆ. ಆದರೆ ಗುಜರಾತ್ ಇಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯ ಗೆದ್ದು ಒಂದು ಪಂದ್ಯವನ್ನು ಸೋತಿದ್ದಾರೆ. ಇದಲ್ಲದೇ ಈ ಬಾರಿ ಹೊಸ ತಂಡ ಗುಜರಾತ್ ಕೋಲ್ಕತ್ತಾ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಹೆಚ್ಚು ಪ್ರಭಲವಾಗಿ ಕಾಣುತ್ತಿದೆ.
ಇಂದು ಅಬ್ಬರಿಸಲಿದ್ದಾರೆ ಹಾರ್ದಿಕ್ ಪಾಂಡ್ಯ!
ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಗುಜರಾತ್ ಟೈಟಾನ್ಸ್ ಎಲ್ಲಾ ವಿಭಾಗಗಳಲ್ಲಿಯೂ ಅಬ್ಬರಿಸುತ್ತಿದ್ದು, ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಸೋತಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹ್ಯಾಟ್ರಿಕ್ ಸೋಲು ಅನುಭವಿಸಿದ್ದು, ಗೆಲುವಿನ ಲಯಕ್ಕೆ ಬರಲು ಎದುರು ನೋಡುತ್ತಿದೆ.
ಪಿಚ್ ವರದಿ
ಮುಂಬೈ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ 180 ಕ್ಕಿಂತ ಹೆಚ್ಚಿನ ಯಾವುದೇ ಸ್ಕೋರ್ ಬೆನ್ನಟ್ಟಲು ತುಲನಾತ್ಮಕವಾಗಿ ಕಷ್ಟಕರವಾಗಿರುತ್ತದೆ. ಆದಾಗ್ಯೂ, ವಿಕೆಟ್ಗಳು ಅನಿರೀಕ್ಷಿತವಾಗಿದ್ದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೊಹ್ಲಿ ನನನ್ನ ಎದುರಿಸಿದ್ದರೆ ಇಷ್ಟು ರನ್ ಗಳಿಸುತ್ತಿರಲಿಲ್ಲ, ಪಾಕ್ ಮಾಜಿ ಬೌಲರ್ ಶಾಕಿಂಗ್ ಹೇಳಿಕೆ
ಗುಜರಾತ್ ಪ್ಲೇಯಿಂಗ್ ಇಲೆವನ್!
ವೃದ್ದಿಮಾನ್ ಸಾಹ, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್, ಮೊಹಮ್ಮದ್ ಶಮಿ, ಯಶ್ ದಯಾಳ್.
ಇದನ್ನೂ ಓದಿ: RCB ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಹೈದರಾಬಾದ್? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11
ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವನ್!
ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ಸ್ಯಾಮ್ ಬಿಲ್ಲಿಂಗ್ಸ್, ರಿಂಕು ಸಿಂಗ್, ಶಿವಂ ಮಾವಿ, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ