RCB vs LSG: ಎಲ್ರೂ ಕೈ ಕೊಟ್ರು, 'ಸುಲ್ತಾನ'ನಂತೆ ಏಕಾಂಗಿಯಾಗಿ ಹೋರಾಡಿದ ನಾಯಕ ಡು ಪ್ಲೆಸಿಸ್​!

ಫಾಫ್​ ಡು ಪ್ಲೆಸಿಸ್​

ಫಾಫ್​ ಡು ಪ್ಲೆಸಿಸ್​

  • Share this:
ಐಪಿಎಲ್‌(IPL)ನಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್(Lucknow Super Gaints) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳುರು(Royal Challengers Bangalore) ತಂಡಗಳು ಮುಖಾಮುಖಿಯಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಎಲ್‌ಎಸ್‌ಜಿ(LSG) ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್(Bowling) ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ(RCB)ಗೆ ಆರಂಭಕಿ ಆಘಾತವಾಗಿತ್ತು. ಒಂದೊಂದಾಗಿ ಆರ್​ಸಿಬಿ ವಿಕೆಟ್​ಗಳು ಉರುಳುತ್ತಿತ್ತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ (IPL 2022 RCB vs LSG) ತಾವು ಎದುರಿಸಿದ  ಮೊದಲ ಎಸೆತದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)  ಔಟಾಗಿ ಮತ್ತೆ ಕಳಪೆ ಸಾಧನೆಗೆ ಶರಣಾದರು. ಮುಂದೇನು ಗತಿ ಅಂದುಕೊಳ್ಳುವಷ್ಟರಲ್ಲಿ ಡು ಪ್ಲೆಸಿಸ್ ಏಕಾಂಗಿಯಾಗಿ ಸುಲ್ತಾನ​ನಂತೆ ಹೋರಾಡಿ ಆಕರ್ಷಕ ಆಟವಾಡಿದ್ದಾರೆ.​

63 ಬಾಲ್​ಗಳಲ್ಲಿ 96ರನ್​ಗಳಸಿದ ಫಾಫ್​ ಡು ಪ್ಲೆಸಿಸ್​!

ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಆಕರ್ಷಕ ಆಟವಾಡಿದ್ದಾರೆ. ಒಂದು ಕಡೆ ವಿಕೆಟ್​ಗಳು ಉರುಳುತ್ತಿದ್ದರು, ಯಾವುದಕ್ಕೂ ಅಂಜದ ಫಾಫ್​​ 53 ಬಾಲ್​ಗಳಲ್ಲಿ 96ರನ್​ ಸಿಡಿಸಿ ಮಿಂಚಿದ್ದಾರೆ. ಆರ್​ಸಿಬಿ ಫೇಸ್ ಮಾಡಿದ ಮೊದಲ ಓವರ್​ನಲ್ಲೇ ಎರಡು ವಿಕೆಟ್​ ಕಳೆದುಕೊಂಡಿತು. ವಿರಾಟ್ ಕೊಹ್ಲಿಯ (Virat Kohli) ಮೊದಲ ಬಾಲ್ ಡಕ್ ನೊಂದಿಗೆ ಮೊದಲ ಓವರ್ ನಲ್ಲಿಯೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಆರ್ ಸಿಬಿ (RCB), ಫಾಫ್ ಡು ಪ್ಲೆಸಿಸ್ ಸಾಹಸಿಕ ಬ್ಯಾಟಿಂಗ್ ನಿಂದಾಗಿ 6 ವಿಕೆಟ್ ಗೆ 181 ಮೊತ್ತ ಬಾರಿಸಿತು.

ಚಾಮೀರಗೆ ವಿಕೆಟ್​ ಒಪ್ಪಿಸಿದ ರಾವತ್​-ವಿರಾಟ್!

ಚಾಮೀರ ಎಸೆದ ಮೊದಲ ಓವರ್ ಆರ್ ಸಿಬಿ ಪಾಲಿಗೆ ಆಘಾತಕಾರಿಯಾಗಿ ಪರಿಣಮಿಸಿತು. ಚಾಮೀರ ಎಸೆದ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿದ ಅನುಜ್ ರಾವತ್ ಮರು ಎಸೆತದಲ್ಲಿಯೇ ಕೆಎಲ್ ರಾಹುಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ,ಮರು ಎಸೆತದಲ್ಲಿ ವಿರಾಟ್ ಕೊಹ್ಲಿ ಆಡಿದ ಶಾಟ್. ಬೌನ್ಸ್ ಆಗಿ ಬಂದ ಎಸೆತವನ್ನು ಆಡುವಲ್ಲಿ ಎಡವಿದ ಕೊಹ್ಲಿ, ದೀಪಕ್ ಹೂಡಾಗೆ ಕ್ಯಾಚ್ ನೀಡಿ ಮೊದಲ ಎಸೆತದ ಡಕ್ ಕಂಡು ನಿರಾಸೆ ಅನುಭವಿಸಿದರು.

ಇದನ್ನೂ ಓದಿ: RCB ಗೆ ಪ್ರಧಾನಿ ಬೆಂಬಲ! ಮ್ಯಾಚ್ ನೋಡೋಕೆ ಬಂದ ಅಧೀರ

ಗೋಲ್ಡನ್ ಡಕ್ ಔಟ್ ಆದ ಕೊಹ್ಲಿ

ಮೊದಲ ಎಸೆತದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)  ಔಟಾಗಿ ಮತ್ತೆ ಕಳಪೆ ಸಾಧನೆಗೆ ಶರಣಾದರು. ಈಮೂಲಕ ಐಪಿಎಲ್ 2022ರಲ್ಲಿ ಕಿಂಗ್ ಕೊಹ್ಲಿ ಕಳಪೆ ಪ್ರದರ್ಶನ (Virat Kohli Golden Duck) ಮುಂದುವರೆಸಿದ್ದಾರೆ. ಔಟ್ ಆದ ತಕ್ಷಣ ಅವರ ಮುಖಭಾವ ಹೇಗಿತ್ತು ಎಂಬುದನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಇಷ್ಟೂ ಸೀಸನ್​ ಒಂದ್​ ಲೆಕ್ಕ.. ಈ ಸೀಸನ್​ ಒಂದು ಲೆಕ್ಕ! ಈ ಕಾರಣಗಳಿಂದ ಗೆದ್ದೇ ಗೆಲ್ತಾರೆ ನಮ್​ ಹುಡುಗ್ರು ಬಾಸ್​

ಔಟಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಮುಖಭಾವ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಈಬಾರಿಯೂ ಅದೃಷ್ಟ ತಮ್ಮ ಕೈಬಿಟ್ಟಿದೆ ಎಂದು ಅವರ ಮುಖಭಾವ ಹೇಳುವಂತಿತ್ತು. ಒಂದೇ ಎಸೆತಕ್ಕೆ ಔಟ್ ಆದ ನಂತರ ವಿರಾಟ್ ಕೊಹ್ಲಿ ಮುಖಭಾವದ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ. ಇಂದಿನ ಪಂದ್ಯಕ್ಕೂ ಮೊದಲು ಮುಂಬೈ ಇಂಡಿಯನ್ಸ್ (2008), ಪಂಜಾಬ್ ಕಿಂಗ್ಸ್ (2014), ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2017) ವಿರುದ್ಧ ವಿರಾಟ್ ಕೊಹ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದರು. ಐಪಿಎಲ್ 2022 ವಿರಾಟ್ ಕೊಹ್ಲಿಗೆ ದುಃಸ್ವಪ್ನವಾಗಿದೆ. ಪಂದ್ಯಾವಳಿಯ ಅರ್ಧದಾರಿಯವರೆಗೂ ಈ ಸೀಸನ್ ಅವರ IPL ವೃತ್ತಿಜೀವನದಲ್ಲಿ ಅತ್ಯಂತ ಕೆಟ್ಟದಾಗಿದೆ.
Published by:Vasudeva M
First published: