ಐಪಿಎಲ್ 2022(IPL 2022) ಸೀಸನ್ 15ರ 27ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Banglore) ಹಾಗೂ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಮುಖಾಮುಖಿಯಾಗಿತ್ತು. ಫಾಫ್ ಡು ಪ್ಲೆಸಿಸ್(Faf Du Plessis) ನಾಯಕತ್ವದ ಆರ್ಸಿಬಿ(RCB)ಗೆ, ರಿಷಭ್ ಪಂತ್(Rishab Pant) ನೇತೃತ್ವದ ಡೆಲ್ಲಿ(Delhi) ತಂಡ ಸವಾಲೊಡ್ಡಿತ್ತು.ರಣರೋಚಕ ರಣರಂಗದಲ್ಲಿ ಕೊನೆಗೂ ಆರ್ಸಿಬಿ ಗೆದ್ದು ಬೀಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿಚ್ಚಿಗೆ ಡೆಲ್ಲಿ ಕ್ಯಾಪಿಟಲ್ಸ್ ತಲೆ ತಿರುಗಿ ಬಿದ್ದಿದೆ. ಕೊನೆಯ ಓವರ್ಗಳಲ್ಲಿ ಬಿಗಿ ಬೌಲಿಂಗ್(Bowling) ಮಾಡಿದ ಆರ್ಸಿಬಿ ತಂಡ ಬೌಲರ್ಗಳು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮ್ಯಾಕ್ಸ್ವೆಲ್(Maxwell) ಹಾಗೂ ದಿನೇಶ್ ಕಾರ್ತಿಕ್(Dinesh Karthik) ಅವರ ಆಟ ವ್ಯರ್ಥವಾಗದಂತೆ ಆರ್ಸಿಬಿ ಬೌಲರ್ಗಳೂ ಅದ್ಭುತ ಆಟ ಪ್ರದರ್ಶಿಸಿದರು. 190ರನ್ ಗುರಿ ಬೆನ್ನತ್ತಿದ್ದ ಡಿಸಿ ಚೇಸ್ ಮಾಡುವಲ್ಲಿ ವಿಫಲವಾಗಿದೆ. 20 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಕಳೆದುಕೊಂಡು 173 ರನ್ಗಳಲಸಷ್ಟೇ ಶಕ್ತವಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೇಲಕ್ಕೆ ಹೋಗಿದೆ.
ಅಬ್ಬರಿಸಿ ಔಟ್ ಆದ ವಾರ್ನರ್!
ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದಾರಾಬಾದ್ ಪರ ಆಡಿದ ಡೇವಿಡ್ ವಾರ್ನರ್ ಕಳೆಪೆ ಆಟ ಪ್ರದರ್ಶಿಸಿದ್ದರು. ಭಾರೀ ಟೀಕೆಕೆ ಗುರಿಯಾಗಿದ್ದರು. ಆದರೆ, ಡೆಲ್ಲಿ ಪರ ಕಣಕ್ಕೆ ಇಳಿದಿದ್ದ ವಾರ್ನರ್ ಆರ್ಸಿಬಿ ಪಡೆಯಲ್ಲಿ ಆತಂಕ ಮೂಡಿಸಿದ್ದರು. ಆರಂಭಿಕನಾಗಿ ಕಣಕ್ಕೆ ಇಳಿದ ವಾರ್ನರ್ ಆಕರ್ಷಕ ಅರ್ಧ ಶತಕ ಗಳಿಸಿದರು. 38 ಬಾಲ್ಗಳಲ್ಲಿ 66ರನ್ ಸಿಡಿಸಿದರು. ವಾರ್ನರ್ ಬಿಟ್ಟರೆ ನಾಯಕ ಪಂತ್ ಕೆಲ ಕಾಲ ಆರ್ಸಿಬಿ ಬೌಲರ್ಗಳನ್ನು ಕಾಡಿದರು. ಆದರೆ, ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ರಿಷಬ್ ಔಟ್ ಆಗಿ ಪೆವೆಲಿಯನ್ಗೆ ಮರಳಿದ್ದಾರೆ. ಮತ್ತ್ಯಾವ ಆಟಗಾರರು ಹೆಚ್ಚು ಸದ್ದು ಮಾಡಲಿಲ್ಲ
ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್
ಆರಂಭಿಕ ಹಿನ್ನಡೆ, ಮಧ್ಯಮಕ್ರಮಾಂಕ ಕುಸಿತದ ನಡುವೆ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಹೋರಾಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಚೇತರಿಕೆ ಕೊಟ್ಟಿತು. ಅಲ್ಪಮೊತ್ತಕ್ಕೆ ಕುಸಿಯು ಭೀತಿಯಿಂದ ಬೆಂಗಳೂರು ಪಾರಾಯಿತು. ಈ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಲೀಗ್ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್ 188 ನಷ್ಟಕ್ಕೆ ರನ್ ಸಿಡಿಸಿತು.
ಇದನ್ನೂ ಓದಿ: ಕನ್ನಡಿಗನಿಂದ ಹೊಸ ದಾಖಲೆ, 100ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಏಕೈಕ ಆಟಗಾರ ರಾಹುಲ್!
ಆರಂಭಿಕ ಹಿಡಿತ ಕಳೆದುಕೊಂಡ ಆರ್ಸಿಬಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ಆರಂಭ ಕಳೆಪೆಯಾಗಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅನೂಜ್ ರಾವತ್ ಜೊತೆಯಾಟ ಆರಂಭದಲ್ಲೇ ಮುರಿದು ಬಿದ್ದಿತು. ಫಾಫ್ ಡುಪ್ಲೆಸಿಸ್ ಕೇವಲ 8 ರನ್ ಸಿಡಿಸಿ ಔಟಾದರು. ಅನೂಜ್ ರಾವತ್ ಡಕೌಟ್ ಆದರು. 13 ರನ್ಗಳಿಗೆ ಆರ್ಸಿಬಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.
ಇದನ್ನೂ ಓದಿ: ಕೆಎಲ್ ರಾಹುಲ್ ಅಬ್ಬರಕ್ಕೆ ಬೆಚ್ಚಿದ ಮುಂಬೈ, ಸತತ 6ನೇ ಪಂದ್ಯ ಸೋತ ರೋಹಿತ್ ಪಡೆ
ದಿನೇಶ್-ಶಹಬ್ಬಾಸ್ 97ರನ್ಗಳ ಜೊತೆಯಾಟ!
ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಶೆಹಬಾಜ್ ಅಹಮ್ಮದ್ ಹೋರಾಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ಕಳೆದುಕೊಂಡು 188 ರನ್ ಸಿಡಿಸಿತು. ಕಾರ್ತಿಕ್ ಹಾಗೂ ಅಹಮ್ಮದ್ 6ನೇ ವಿಕೆಟ್ಗೆ ಅಜೇಯ 97 ರನ್ ಜೊತೆಯಾಟ ನೀಡಿತು. ಈ ಮೂಲಕ 6ನೇ ವಿಕೆಟ್ಗೆ ಗರಿಷ್ಠ ರನ್ ಸಿಡಿಸಿ 3ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ