ಐಪಿಲ್(IPL) 15ನೇ ಆವೃತ್ತಿಯ 11ನೇ ಪಂದ್ಯದಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಪಂಜಾಬ್ ಕಿಂಗ್ಸ್(Punjab Kings)ಗಳ ನಡುವೆ ಕಾದಾಟ ನಡೀತು. ಮೊದಲೇ 2 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಪಂದ್ಯದಲ್ಲೂ ಸೋತಿದೆ. ಈ ಸೀಸನ್(Season)ನಲ್ಲಿ ಆಡಿದ ಪಂದ್ಯಗಳಲೆಲ್ಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುಂಡಿದೆ. ಇದು ಸಿಎಸ್ಕೆ(CSK) ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಬ್ಯಾಟಿಂಗ್(Batting)ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ ಬೌಲಿಂಗ್(Bowling)ನಲ್ಲೂ ಆಕರ್ಷಕ ಆಟ ಪ್ರದರ್ಶಿಸಿದೆ. 181 ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗುರಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ. ಸಿಎಸ್ಕೆ ಬ್ಯಾಟ್ಸ್ಮ್ಯಾನ್ಗಳು ಬಂದ ವೇಗದಲ್ಲೇ ಪಂಜಾಬ್ ಕಿಂಗ್ಸ್ ಬೌಲರ್ಸ್ಗೆ ವಿಕೆಟ್(Wicket) ಒಪ್ಪಿಸಿ ಪೆವಿಲಿಯನ್ ಸೇರಿದರು.
ಅದ್ಭುತ ಆಟ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್!
ರಬಾಡ ಆಫ್-ಸ್ಟಂಪ್ನಿಂದ ಡ್ರೈವ್ ಆಡಲು ರಿತುರಾಜ್ ಪ್ರಯತ್ನಿಸಿದರು, ಆದರೆ ಚೆಂಡು ಅವರ ಬ್ಯಾಟ್ನ ಅಂಚಿಗೆ ತಾಗಿ ಸ್ಲಿಪ್ನಲ್ಲಿ ನಿಂತಿದ್ದ ಶಿಖರ್ ಧವನ್ ಕ್ಯಾಚ್ ಹಿಡಿದು ಚೆನ್ನೈಗೆ ಮೊದಲ ಅಘಾತ ನೀಡಿತ್ತು. ಮೂರನೇ ಓವರ್ನ ಎರಡನೇ ಎಸೆತದಲ್ಲಿ ಉತ್ತಪ್ಪ ಕೂಡ ಔಟಾದರು. ಈ ಓವರ್ನ ಮೊದಲ ಎಸೆತದಲ್ಲಿ ಉತ್ತಪ್ಪ ಬೌಂಡರಿ ಬಾರಿಸಿದರು. ಮುಂದಿನ ಬಾಲ್ನಲ್ಲಿ, ಅವರು ಮತ್ತೆ ಲೆಗ್ ಸೈಡ್ನಲ್ಲಿ ಆಡಲು ಪ್ರಯತ್ನಿಸಿದರು ಆದರೆ ಚೆಂಡು ಬ್ಯಾಟ್ನ ಮೇಲಿನ ಅಂಚಿಗೆ ತಾಗಿ ಗಾಳಿಯಲ್ಲಿ ಹೋಯಿತು. ಮಯಾಂಕ್ ಅಗರ್ವಾಲ್ ಅವರ ಕ್ಯಾಚ್ ಹಿಡಿದರು.
ರನ್ ಕಲೆಹಾಕುವಲ್ಲಿ ವಿಫಲವಾದ ಸಿಎಸ್ಕೆ!
ಐದನೇ ಓವರ್ನ ನಾಲ್ಕನೇ ಎಸೆತದಲ್ಲಿ ಮೊಯಿನ್ ಅಲಿ ಔಟಾದರು. ಈ ಪಂದ್ಯದಲ್ಲಿ ಮೊಯಿನ್ ಅಲಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಆರನೇ ಓವರ್ನ ಮೂರನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ಬೌಲ್ಗೆ ಜಡೇಜಾ ಬೌಲ್ಡ್ ಆದರು. ಜಡೇಜಾ ಕೂಡ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಎಂಟನೇ ಓವರ್ನ ಮೂರನೇ ಎಸೆತದಲ್ಲಿ ಓಡಿಯನ್ ಸ್ಮಿತ್ ಅಂಬಟಿ ರಾಯುಡು ಅವರನ್ನು ಔಟ್ ಮಾಡಿದರು.
ಇದನ್ನೂ ಓದಿ: ಈ ನಟಿಯ ನೋಟಕ್ಕೆ ವೆಂಕಟೇಶ್ ಅಯ್ಯರ್ ಕ್ಲೀನ್ ಬೋಲ್ಡ್? ಏನಿದು ಹೊಸ ಗುಸುಗುಸು!
126ಕ್ಕೆ ಆಲ್ಔಟ್ ಆದ ಸಿಎಸ್ಕೆ ತಂಡ!
18ನೇ ಓವರ್ನ ಮೊದಲ ಎಸೆತದಲ್ಲಿ ಧೋನಿ ಔಟಾದರು. ಧೋನಿ ಅವರು ರಾಹುಲ್ ಚಹಾರ್ ಅವರ ಎಸೆತವನ್ನು ಲೆಗ್ ಸ್ಟಂಪ್ ಮೇಲೆ ಪ್ಯಾಡಲ್ ಸ್ವೀಪ್ ಆಡಲು ಪ್ರಯತ್ನಿಸಿದರು ಆದರೆ ಶಾಟ್ ಅನ್ನು ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಂಪೈರ್ ಚೆಂಡನ್ನು ವೈಡ್ ನೀಡಿದರು ಆದರೆ ವಿಕೆಟ್ ಕೀಪರ್ ಜಿತೇಶ್ ಮನವಿ ಮಾಡಿದರು ಮತ್ತು ರಿವ್ಯೂ ತೆಗೆದುಕೊಂಡರು, ಅದು ಚೆಂಡು ಧೋನಿಯ ಬ್ಯಾಟ್ಗೆ ತಾಗಿ ಜಿತೇಶ್ ಅವರ ಗ್ಲೌಸ್ಗೆ ಹೋಗಿದೆ ಎಂದು ತೋರಿಸಿತು. ಕೊನೆಯದಾಗಿ 126ರನ್ಗಳಿಗೆ ಸಿಎಸ್ಕೆ ತಂಡ ಆಲೌಟ್ ಆಗಿದೆ.
ಇದನ್ನೂ ಓದಿ: ಮತ್ತೊಂದು ದಾಖಲೆಗೆ ಮುತ್ತಿಟ್ಟ MS Dhoni.. ಮಹಿ ಅಭಿಮಾನಿಗಳಿಗೆ ಸುಗ್ಗಿಯೋ ಸುಗ್ಗಿ..
ಚೆನ್ನೈ ಸೂಪರ್ ಕಿಂಗ್ಸ್ಗೆ ಹ್ಯಾಟ್ರಿಕ್ ಸೋಲು
ಚೆನ್ನೈ ತಂಡವನ್ನು ಪಂಜಾಬ್ ಸೋಲಿಸಿದೆ. ಈ ಋತುವಿನಲ್ಲಿ ಚೆನ್ನೈಗೆ ಇದು ಸತತ ಮೂರನೇ ಸೋಲು. ಚೆನ್ನೈನಿಂದ ಈ ಪ್ರದರ್ಶನವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್ ತೀವ್ರ ನಿರಾಸೆ ಮೂಡಿಸಿತು. ಮಾಜಿ ನಾಯಕ ಎಂಎಸ್ ಧೋನಿ ಮತ್ತು ಶಿವಂ ದುಬೆ ಸ್ವಲ್ಪ ಮಟ್ಟಿಗೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು ಆದರೆ ಬೇರೆಯವರು ಏನೂ ಮಾಡಲಾಗಲಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ