Sanju Samson- ಸಂಜು ಸ್ಯಾಮ್ಸನ್ ಯಾಕೆ ಪರದಾಡುತ್ತಿದ್ದಾರೆ? ಕೆವಿನ್ ಬಳಿ ಇದೆ ಉತ್ತರ

Kevin Pietersen Speaks- ಭಾರತದ ಅತ್ಯಂತ ಉಜ್ವಲ ಕ್ರಿಕೆಟ್ ಪ್ರತಿಭೆ ಎಂದು ಕೆಲವಾರು ವರ್ಷಗಳಿಂದ ಪರಿಗಣಿತವಾಗಿರುವ ಸಂಜು ಸ್ಯಾಮ್ಸನ್ ಅವರು ಬ್ಯಾಟಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ಶಕ್ಯರಾಗುತ್ತಿಲ್ಲ. ಇದಕ್ಕೆ ಕಾರಣ ಏನು ಮತ್ತು ಪರಿಹಾರ ಏನು ಎಂದು ಕೆವಿನ್ ಪೀಟರ್ಸನ್ ತೋರಿಸಿದ್ದಾರೆ.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

  • Cricketnext
  • Last Updated :
  • Share this:
    ದುಬೈ, ಸೆ. 27: ಇಂದು ಸನ್​ರೈಸರ್ಸ್ ಹೈದರಾಬಾದ್ (Sunrisers Hyderabad) ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals) ನಡುವೆ ಐಪಿಎಲ್ 2021ನ 40ನೇ ಪಂದ್ಯ ಇದೆ. ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರುವ ಅವಕಾಶ ಇಲ್ಲವೇ ಇಲ್ಲ. ಅದೀಗ ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕು ಅಷ್ಟೇ. ಆದರೆ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಪಂದ್ಯ ಬಹಳ ಮಹತ್ವದ್ದು. 9 ಪಂದ್ಯಗಳಿಂದ 8 ಅಂಕ ಗಳಿಸಿರುವ ರಾಯಲ್ಸ್ ತಂಡ ಈ ಪಂದ್ಯ ಗೆದ್ದರೆ ನಾಲ್ಕನೇ ಸ್ಥಾನಕ್ಕೇ ಹೋಗಿ ಕೂರುವ ಅವಕಾಶ ಇದೆ. ರಾಯಲ್ಸ್ ತಂಡದ ಜೊತೆಗೆ ಅದರ ನಾಯಕ ಸಂಜು ಸ್ಯಾಮ್ಸನ್ (Sanju Samson) ಕೂಡ ಒತ್ತಡದಲ್ಲಿದ್ದಾರೆ. ರಾಯಲ್ಸ್ ತಂಡವನ್ನು ಪ್ಲೇ ಆಫ್​ಗೆ ಮುನ್ನಡೆಸುವ ಒತ್ತಡ ಒಂದೆಡೆಯಾದರೆ, ಬ್ಯಾಟಿಂಗ್​ನಲ್ಲಿ ಎಡವುತ್ತಿರುವುದನ್ನು ನಿಲ್ಲಿಸುವುದು ಹೇಗೆಂಬ ತಲೆನೋವು ಇನ್ನೊಂದೆಡೆ ಸ್ಯಾಮ್ಸನ್ ಅವರನ್ನ ಬಾಧಿಸುತ್ತಿದೆ.

    ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಬಹಳಷ್ಟು ಟೀಕೆ ಟಿಪ್ಪಣಿಗಳು ನಡೆದಿವೆ. ರಾಯಲ್ಸ್ ಸೋತಾಗೆಲ್ಲಾ ಸ್ಯಾಮ್ಸನ್ ಅವರತ್ತ ಬೊಟ್ಟು ಮಡಿಸುವವರ ಸಂಖ್ಯೆ ಹೆಚ್ಚಾಗಿದೆ. ಕೇರಳದ ಪ್ರತಿಭಾನ್ವಿತ ಬ್ಯಾಟರ್ ಸಂಜು ಸ್ಯಾಮ್ಸನ್ ಐಪಿಎಲ್ 2021ರಲ್ಲಿ ತೀರಾ ಕಳಪೆಯಾಗೇನೂ ಆಡಿಲ್ಲ. 9 ಪಂದ್ಯಗಳಿಂದ 351 ರನ್ ಗಳಿಸಿದ್ದಾರೆ. ಮೇಲ್ನೋಟಕ್ಕೆ ನೋಡಿದರೆ ಇದು ಉತ್ತಮ ಮೊತ್ತವೇ. ಈ ಹಾದಿಯಲ್ಲಿ ಸ್ಯಾಮ್ಸನ್ ಒಂದು ಶತಕ ಹಾಗೂ ಒಂದು ಅರ್ಧ ಶತಕ ಭಾರಿಸಿದ್ದಾರೆ. ಆದರೆ, ಬೇರೆ ಹಲವು ಇನ್ನಿಂಗ್ಸಲ್ಲಿ ಅವರಿಂದ ನಿರೀಕ್ಷಿತ ಸ್ಕೋರು ಬಂದಿಲ್ಲ. ಹೀಗಾಗಿ, ಟೀಕಾಕಾರರ ಧ್ವನಿ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ (Kevin Pietersen) ಅವರು ಸಂಜು ಸ್ಯಾಮ್ಸನ್ ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರವನ್ನೂ ತೋರಿಸಿದ್ಧಾರೆ.

    ಕೆವಿನ್ ಪೀಟರ್ಸನ್ ಪ್ರಕಾರ ಸಂಜು ಸ್ಯಾಮ್ಸನ್ ಅವರು ಭಾರತದ ಸೂಪರ್ ಸ್ಟಾರ್ ಆಗಲು ಇರುವ ಒಂದೇ ಅಡ್ಡಿ ಎಂದರೆ ಅವರ ಬ್ಯಾಟಿಂಗ್ ಅಸ್ಥಿರತೆ. “ಒಬ್ಬ ಬ್ಯಾಟರ್ ಆಗಿ ಅವರನ್ನ ಬಹಳ ಇಷ್ಟಪಡುತ್ತೇನೆ. ಅವರೊಬ್ಬ ಅಪ್ರತಿಮ ಬ್ಯಾಟರ್. ಅವರ ಪುಲ್ ಶಾಟ್, ಅವರು ಸಿಕ್ಸರ್ ಭಾರಿಸುವ ರೀತಿ, ಸ್ಪಿನ್ನರ್​ಗಳ ಎಸೆತಗಳನ್ನ ಗ್ರೌಂಡ್​ನ ಮೂಲೆಮೂಲೆಗೂ ಕಳುಹಿಸುವ ಅವರ ಶಾಟ್​​ಗಳು ಹಾಗೂ ಗ್ಯಾಪ್​ಗಳಲ್ಲಿ ಅವರು ಶಾಟ್ ಹೊಡೆಯುವ ರೀತಿ ಎಲ್ಲವೂ ಮನಮೋಹಕ. ಅವರು ಶತಕ ಭಾರಿಸಿದರೆ ಅದಕ್ಕಿಂತ ಚೆನ್ನಾಗಿರುವ ಇನ್ನಿಂಗ್ಸ್ ನಿಮಗೆ ನೋಡಲು ಸಿಗುವುದು ತೀರಾ ಅಪರೂಪ. ಆದರೆ, ಸ್ಥಿರ ಪ್ರದರ್ಶನದ ಕೊರತೆಯೊಂದೇ ಅವರಿಗೆ ಕಾಡುತ್ತಿರುವುದು” ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ಧಾರೆ.

    ಇದನ್ನೂ ಓದಿ: ‘ನನ್ನ ಹೆಂಡ್ತಿ ಬಿಡ್ತಿಲ್ಲ’- ಆರ್​ಸಿಬಿ ಜೆರ್ಸಿ ತೊಟ್ಟು ಬಂದ ಸಿಎಸ್​ಕೆ ಫ್ಯಾನ್; ವೈರಲ್ ಆಯ್ತು ಆತನ ಪ್ಲೆಕಾರ್ಡ್

    ಸಂಜು ಸ್ಯಾಮ್ಸನ್ ಅವರ ಅಸ್ಥಿರ ಬ್ಯಾಟಿಂಗ್ ಪ್ರದರ್ಶನಕ್ಕೆ ಅವರ ನಾಯಕತ್ವದ ಹೊಣೆಗಾರಿಕೆಯೂ ಕಾರಣವಿರಬಹುದೇನೋ ಎಂದು ಕೆವಿನ್ ಪೀಟರ್ಸನ್ ಶಂಕಿಸಿದ್ದಾರೆ. ಈ ವಿಚಾರದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕನ್ನಡಿಗ ಕೆಎಲ್ ರಾಹುಲ್ ಅವರಿಂದ ನೋಡಿ ಕಲಿಯಬೇಕೆಂದೂ ಅವರು ಸಲಹೆ ನೀಡಿದ್ಧಾರೆ.

    “ಅಸ್ಥಿರ ಪ್ರದರ್ಶನಕ್ಕೆ ಅವರ ನಾಯಕತ್ವ ಕಾರಣ ಇರಬಹುದಾ? ನಾಯಕತ್ವದ ಹೊಣೆಗಾರಿಕೆ ಬಗ್ಗೆ ಅವರು ಬಹಳ ಯೋಚಿಸುತ್ತಿರಬಹುದು. ಕೆಎಲ್ ರಾಹುಲ್ ಅವರಿಂದ ನೋಡಿ ಅವರು ಕಲಿಯಬಹುದು. ನಾನು ಈಗ ಬ್ಯಾಟ್ ಮಾಡಬೇಕು, ಅಷ್ಟೇ. ಈಗ ಬ್ಯಾಟಿಂಗ್ ಸಮಯ. ನಾಯಕತ್ವವನ್ನು ಇನ್ನೊಂದು ಸಮಯದಲ್ಲಿ ಮಾಡುತ್ತೇನೆ. ಈಗಿರುವ ಟೈಮ್ ಬ್ಯಾಟಿಂಗ್ ಮಾಡುವುದು ಎಂದು ಸ್ಯಾಮ್ಸನ್ ಯೋಚಿಸಬೇಕು. ಆಗ ಬ್ಯಾಟಿಂಗ್ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ” ಎಂದು ಕೆವಿನ್ ಪೀಟರ್ಸನ್ ಹೇಳಿದ್ಧಾರೆ.
    Published by:Vijayasarthy SN
    First published: