• ಹೋಂ
  • »
  • ನ್ಯೂಸ್
  • »
  • IPL
  • »
  • ಸೆಹ್ವಾಗ್ ಪ್ರಕಾರ ಸಿಎಸ್​ಕೆ-ಮುಂಬೈ ಪಂದ್ಯ ಗೆಲ್ಲೋದ್ಯಾರು? ಐಪಿಎಲ್ ಚಾಂಪಿಯನ್ ಯಾರಾಗ್ತಾರೆ?

ಸೆಹ್ವಾಗ್ ಪ್ರಕಾರ ಸಿಎಸ್​ಕೆ-ಮುಂಬೈ ಪಂದ್ಯ ಗೆಲ್ಲೋದ್ಯಾರು? ಐಪಿಎಲ್ ಚಾಂಪಿಯನ್ ಯಾರಾಗ್ತಾರೆ?

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

IPL winner Prediction- ಈ ಬಾರಿಯ ಐಪಿಎಲ್ ಮತ್ತು ಇವತ್ತಿನ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಯಾರು ಗೆಲ್ಲಬಹುದು ಎಂದು ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಅಂದಾಜು ಮಾಡಿದ್ಧಾರೆ.

  • Cricketnext
  • 5-MIN READ
  • Last Updated :
  • Share this:

    ದುಬೈ, ಸೆ. 19: ಸಂಜೆ 7:30ಕ್ಕೆ ಪ್ರಾರಂಭವಾಗಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ (Chennai Super Kings vs Mumbai Indians) ಬಹಳ ನಿರೀಕ್ಷೆ ಮೂಡಿಸಿದೆ. ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳೆನಿಸಿದ ಮುಂಬೈ ಮತ್ತು ಚೆನ್ನೈ ನಡುವಿನ ಪಂದ್ಯ ಯಾವತ್ತೂ ರೋಚಕವೇ. ಪಂದ್ಯ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟವೇ. ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡವೇ ಫೇವರಿಟ್ ಎನಿಸಿದರೂ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ದಿನವಾದರೂ ಅಚ್ಚರಿ ಹುಟ್ಟಿಸಬಲ್ಲುದು. ಇನ್ನು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರೂ ಕೂಡ ಮುಂಬೈ ಇಂಡಿಯನ್ಸ್​ಗೆ ವೋಟ್ ಹಾಕಿದ್ದಾರೆ. ಇವತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಸೆಹ್ವಾಗ್ ಹೇಳಿದ್ದಾರೆ. ಅದಕ್ಕೆ ಕೆಲ ಪ್ರಬಲ ಕಾರಣಗಳನ್ನೂ ವೀರೂ ಕೊಟ್ಟಿದ್ದಾರೆ.


    ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರತದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು ಹೌದು. ಇಲ್ಲಿ ಅದರ ಸರಾಸರಿ ಸ್ಕೋರು 201 ರನ್ ಇದೆ. ಆದರೆ, ಯುಎಇಯ ಪಿಚ್​ಗಳಲ್ಲಿ ಅಗತ್ಯ ಇರುವ ಒಳ್ಳೆಯ ಬ್ಯಾಟಿಂಗ್ ಲೈನಪ್ ಸಿಎಸ್​ಕೆಯಲ್ಲಿ ಇಲ್ಲ. ಇವೆರೆಡು ತಂಡಗಳ ಪೈಕಿ ಒಂದು ತಂಡವನ್ನು ಆರಿಸುವುದಾದರೆ ಮುಂಬೈ ತಂಡ ನನ್ನ ಆಯ್ಕೆ ಎಂದು ಮಾಜಿ ಕ್ರಿಕೆಟಿಗ ಹೇಳುತ್ತಾರೆ.


    ಐಪಿಎಲ್ 2021 ಯಾರು ಗೆಲ್ಲುತ್ತಾರೆ?


    14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನ ಯಾರು ಗೆಲ್ಲುತ್ತಾರೆ ಎಂದು ಸೆಹ್ವಾಗ್ ಅಂದಾಜು ಮಾಡಿದ್ದಾರೆ. ಭಾರತದಲ್ಲಿ ಟೂರ್ನಿ ಆರಂಭಗೊಂಡಾಗ ಸೆಹ್ವಾಗ್ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪೈಕಿ ಒಂದು ತಂಡ ಟೂರ್ನಿ ಗೆಲ್ಲಬಹುದು ಎಂದು ಹೇಳಿದ್ದರು. ಈಗ ಮಾರ್ಗಮಧ್ಯೆ ಯುಎಇಗೆ ಟೂರ್ನಿ ಶಿಫ್ಟ್ ಆಗಿದೆ. ಅವರ ಪ್ರಕಾರ ಈಗಲೂ ಇವೆರಡು ತಂಡಗಳೇ ಫೇವರಿಟ್ ಆಗಿವೆಯಂತೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಟೂರ್ನಿ ಗೆಲ್ಲಲು ಫೇವರಿಟ್ ಆಗಿವೆ. ಆದರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವನ ಚಾನ್ಸ್ ಹೆಚ್ಚು ಎಂದು ಪಿಟಿಐ ಸುದ್ದಿಸಂಸ್ಥೆಗೆ ಸೆಹ್ವಾಗ್ ತಿಳಿಸಿದ್ದಾರೆ.


    ಡೆಲ್ಲಿ ಶಕ್ತಿ:


    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಬಾರಿ ರಿಷಭ್ ಪಂತ್ ನಾಯಕತ್ವ ಇದೆ. ಮಾರ್ಕಸ್ ಸ್ಟಾಯ್ನಿಸ್, ಹೆಟ್ಮಯರ್, ಕ್ರಿಸ್ ವೋಕ್ಸ್, ಪೃಥ್ವಿ ಶಾ, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ಶಿಖರ್ ಧವನ್ ಅವರ ಬ್ಯಾಟಿಂಗ್ ಶಕ್ತಿ ಇದೆ. ಆರ್ ಅಶ್ವಿನ್, ಅವೇಶ್ ಖಾನ್, ರಬಡ, ಇಶಾಂತ್, ಉಮೇಶ್ ಯಾದವ್ ಅವರ ಬೌಲಿಂಗ್ ಶಕ್ತಿ ಇದೆ. ಕನ್ನಡಿಗ ಅನಿರುದ್ಧ ಜೋಷಿ ಕೂಡ ಡೆಲ್ಲಿ ತಂಡದಲ್ಲಿದ್ದಾರೆ. ಈವರೆಗಿನ ಅಂಕಪಟ್ಟಿಯಲ್ಲಿ ಡೆಲ್ಲಿ ತಂಡ 8 ಪಂದ್ಯಗಳಿಂದ 12 ಅಂಕಗಳನ್ನ ಗಳಿಸಿ ಅಗ್ರಸ್ಥಾನದಲ್ಲಿದೆ.


    ಇದನ್ನೂ ಓದಿ: CSK vs MI- ಸಿಎಸ್​ಕೆಯ ಮೂವರು ಬಿಗ್ ಸ್ಟಾರ್​ಗಳು ಇಂದು ಆಡೋದು ಅನುಮಾನ


    ಆದರೆ, ಮುಂಬೈ ಇಂಡಿಯನ್ಸ್ ತಂಡ ಅತಿ ಹೆಚ್ಚು ಬಾರಿ ಐಪಿಎಲ್ ಚಾಂಪಿಯನ್ ಎನಿಸಿದೆ. ಐದು ಬಾರಿ ಅದು ಐಪಿಎಲ್ ಟೂರ್ನಿ ಗೆದ್ದಿದೆ. ಸ್ಫೋಟಕ ಬ್ಯಾಟುಗಾರರು ಮತ್ತು ಮಾರಕ ಬೌಲರ್​ಗಳಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆಯಾದರೂ ಗೆಲುವಿನ ಲಯಕ್ಕೆ ಮರಳಿದರೆ ಯಾರೂ ತಡೆಯಲು ಸಾಧ್ಯವಿಲ್ಲ.


    ಇವತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲು ಒಡ್ಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೂ ಸೂಪರ್ ಕಿಂಗ್ಸ್ ತಂಡಕ್ಕೆ ತನ್ನ ಕೂಲ್ ಕ್ಯಾಪ್ಟನ್ ಅವರೇ ಪ್ರಮುಖ ಶಕ್ತಿ. ಕೆಲ ಆಟಗಾರರಿಗೆ ಗಾಯದ ಸಮಸ್ಯೆ ಇರುವುದರಿಂದ ಸಿಎಸ್​ಕೆ ತಂಡಕ್ಕೆ ಎರಡನೇ ಲೆಗ್​ನ ಕೆಲ ಆರಂಭಿಕ ಪಂದ್ಯಗಳಲ್ಲಿ ತುಸು ಕಠಿಣ ಎನಿಸಬಹುದು. ಆದರೆ, ಯಾವ ತಂಡವನ್ನಾದರೂ ಅಚ್ಚರಿಗೊಳಿಸಬಲ್ಲ ಶಕ್ತಿ ಸಿಎಸ್​ಕೆಗೆ ಇದೆ.

    Published by:Vijayasarthy SN
    First published: