IPL 2021| ಐಪಿಎಲ್​ ಟೂರ್ನಿಯ ನಡುವೆಯೇ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಲಿದೆಯೇ ಆರ್​ಸಿಬಿ?

ಹಿರಿಯ ಆಟಗಾರ ಎಬಿ ಡಿವಿಲಿಯರ್ಸ್ ಬಹುಶಃ ವಿರಾಟ್ ಬದಲಿಗೆ ಸೂಕ್ತ ನಾಯಕ ಅಭ್ಯರ್ಥಿಯಾಗಲಿದ್ದಾರೆ. ತಂಡದ ಒಳಗೆ ಅವರನ್ನು ಬಹಳ ಗೌರವಿಸಲಾಗುತ್ತದೆ. ಆದರೆ ಅವರು ಈ ಆಫರ್ ಅನ್ನು ಒಪ್ಪಿಕೊಳ್ಳದಿರುವ ಸಾಧ್ಯತೆಗಳೇ ಹೆಚ್ಚು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ರನ್​ ಮೆಷಿನ್ ಖ್ಯಾತಿಯ ವಿರಾಟ್​ ಕೊಹ್ಲಿ ಈಗ ಒತ್ತಡದಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ಟಿ20 ವಿಶ್ವಕಪ್ ನಂತರ ಟಿ20 ಮಾದರಿ ಕ್ರಿಕೆಟ್​ನ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ, ಪ್ರಸ್ತುತ ಐಪಿಎಲ್ ಟೂರ್ನಿ ನಂತರ ಬೆಂಗಳೂರು ರಾಯಲ್ ಚಾಲೆಂಜರ್ಸ್​ ತಂಡದ ನಾಯಕತ್ವಕ್ಕೂ ತಾನು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅಲ್ಲದೆ, ಕೊನೆಯವರೆಗೆ ಆರ್​ಸಿಬಿ ತಂಡಕ್ಕಾಗಿಯೇ ತಾನು ಆಡುವುದಾಗಿಯೂ ಮಾಹಿತಿ ನೀಡಿದ್ದರು. ಆದರೆ, ಓರ್ವ ಬ್ಯಾಟ್ಸ್​ಮನ್ ಆಗಿ ಮತ್ತು ನಾಯಕನಾಗಿ ಸತತ ಸೋಲನ್ನು ಅನುಭವಿಸುತ್ತಿರುವ ವಿರಾಟ್ ಕೊಹ್ಲಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಡಳಿತ ಮಂಡಳಿ ಟೂರ್ನಿಯ ನಡುವೆಯೇ ನಾಯಕತ್ವ ಸ್ಥಾನದಿಂದ ವಜಾಗೊಳಿಸಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

  ಏಪ್ರಿಲ್​ನಲ್ಲಿ ಆರಂಭವಾಗಿದ್ದು ಐಪಿಎಲ್ 2021 ಮೊದಲಾರ್ಧದಲ್ಲಿ ಆರ್​ಸಿಬಿ ಉತ್ತಮವಾದ ಆಟವನ್ನೇ ಪ್ರದರ್ಶಿಸಿತ್ತು. ಆದರೆ, ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಮುಗ್ಗರಿಸಿತ್ತು. ಕೇವಲ 92 ರನ್​ಗಳಿಗೆ ಸರ್ವ ಪತನ ಅನುಭವಿಸುವ ಮೂಲಕ ಮುಖಭಂಗಕ್ಕೆ ಈಡಾಗಿತ್ತು. ಇದು RCB ತಂಡದ 6ನೇ ಅತ್ಯಂತ ಕಡಿಮೆ ಮೊತ್ತವಾಗಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಪಡೆ 9 ವಿಕೆಟ್​ಗಳ ಹೀನಾಯ ಸೋಲುಂಡಿತ್ತು.

  ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ 32 ವರ್ಷದ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅಲ್ಲದೆ, 4 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಪ್ರಸಿದ್ಧ್​ ಕೃಷ್ಣ ಎಸೆತಕ್ಕೆ ಔಟ್ ಆಗುವ ಮೂಲಕ ವಿಮರ್ಶಕರ ಟೀಕೆಗೂ ಗುರಿಯಾಗಿದ್ದರು. ಪಂದ್ಯದ ಉದ್ದಕ್ಕೂ ವಿರಾಟ್‌ ಅಂಗಳದಲ್ಲಿ ನೀರಸವಾಗಿಯೇ ಇದ್ದರು. ಅಲ್ಲದೆ, ಐಪಿಎಲ್ 2021 ರ ನಂತರ ಆರ್‌ಸಿಬಿಯ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ ಆಟಗಾರನ ಛಾಯೆಗಳನ್ನು ಹೊರಹಾಕುತ್ತಿದ್ದರು.

  ಅಲ್ಲದೆ, ಆರ್​ಸಿಬಿ ನಾಯಕತ್ವದಿಂದ ತಾನು ಹಿಂದೆ ಸರಿಯುವುದಾಗಿ ಮುಂಚಿತವಾಗಿಯೇ ಕೊಹ್ಲಿ ಘೋಷಣೆ ಮಾಡಿರುವುದು ತಂಡದ ಅಸ್ಥಿರ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ಸೇರಿದಂತೆ ಹಲವರು ಟೀಕಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಟೂರ್ನಿಯ ಮಧ್ಯದಲ್ಲೇ ನಾಯಕತ್ವದಿಂದ ಕೆಳಗೆ ಇಳಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

  ವಿರಾಟ್ ಅವರನ್ನು 2013 ರ ಐಪಿಎಲ್ ಸೀಸನ್‌ಗೆ ಮುಂಚಿತವಾಗಿ ಆರ್‌ಸಿಬಿಯ ನಾಯಕನಾಗಿ ನೇಮಕ ಮಾಡಲಾಗಿದ್ದು, ನಿರ್ಗಮಿತ ನಾಯಕ ಡೇನಿಯಲ್ ವೆಟೋರಿಯ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ಅಂದಿನಿಂದ, ತಂಡವು ಅವರ ನಾಯಕತ್ವದಲ್ಲಿ 132 ಪಂದ್ಯಗಳನ್ನು ಆಡಿದ್ದು, 62 ರಲ್ಲಿ ಜಯಗಳಿಸಿದೆ. 66 ಸೋಲುಗಳನ್ನು ಅನುಭವಿಸಿದೆ ಮತ್ತು 4 ಪಂದ್ಯಗಳು ಫಲಿತಾಂಶಗಳಿಲ್ಲದೆ ರದ್ದಾಗಿದೆ.

  ಕೊಹ್ಲಿಯ ನಂತರ ಯಾರಿಗೆ ಪಟ್ಟ?

  ಹಿರಿಯ ಆಟಗಾರ ಎಬಿ ಡಿವಿಲಿಯರ್ಸ್ ಬಹುಶಃ ವಿರಾಟ್ ಬದಲಿಗೆ ಸೂಕ್ತ ನಾಯಕ ಅಭ್ಯರ್ಥಿಯಾಗಲಿದ್ದಾರೆ. ತಂಡದ ಒಳಗೆ ಅವರನ್ನು ಬಹಳ ಗೌರವಿಸಲಾಗುತ್ತದೆ. ಆದರೆ ಅವರು ಈ ಆಫರ್ ಅನ್ನು ಒಪ್ಪಿಕೊಳ್ಳದಿರುವ ಸಾಧ್ಯತೆಗಳೇ ಹೆಚ್ಚು.

  ನಾಯಕ ಸ್ಥಾನಕ್ಕೆ ಯಜುವೇಂದ್ರ ಚಹಲ್ ಅವರ ಹೆಸರು ಕೂಡ ತಂಡದಲ್ಲಿನ ಹಿರಿತನದ ಆಧಾರದಲ್ಲಿ ಹರಿದಾಡುತ್ತಿದೆ. ಚಹಾಲ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅತಿಹೆಚ್ಚು ವಿಕೆಟ್ ಪಡೆದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಇದುವರೆಗೆ ಅವರು 106 ಪಂದ್ಯಗಳಲ್ಲಿ 125 ವಿಕೆಟ್ ಕಬಳಿಸಿದ್ದಾರೆ.

  ಇದನ್ನೂ ಓದಿ: DC vs SRH| ಗೆಲುವಿನ ನಾಗಾಲೋಟದಲ್ಲಿ ದೆಹಲಿ ಕ್ಯಾಪಿಟಲ್ಸ್; ಲಯಕ್ಕೆ ಮರಳುವುದೇ ಸನ್​ ರೈಸರ್ಸ್?

  ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ನಾಯಕನ್ನನಾಗಿ ನೇಮಿಸುವ ಇತ್ತೀಚಿನ ಬೆಳವಣಿಗೆಗಳಿಂದ ಪ್ರೇರಿತರಾಗಿ ಆರ್​ಸಿಬಿ ಸಹ ಯುವ ಆಟಗಾರ ದೇವದತ್ ಪಡಿಕ್ಕಲ್ ಅವರ ಹೆಸರನ್ನು ನಾಯಕ ಸ್ಥಾನಕ್ಕೆ ಮುಂದಿಟ್ಟರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಪ್ರಸ್ತುತ ದೇವದತ್ ಪಡಿಕ್ಕಲ್ ತಂಡದಲ್ಲಿ ಫಾರ್ಮ್​ನಲ್ಲಿರುವ ಏಕೈಕ ಬ್ಯಾಟ್ಸ್​ಮನ್ ಸಹ ಹೌದು ಎಂಬುದು ಉಲ್ಲೇಖಾರ್ಹ.
  Published by:MAshok Kumar
  First published: