IPL 2021: ಐಪಿಎಲ್ ಮುಂದಿನ ಸೀಸನ್​ನಲ್ಲಿ 9 ತಂಡ, ನಾಯಕನಾಗಿ ರೈನಾ ರಿ ಎಂಟ್ರಿ..?

ಇನ್ನು ಹೊಸ ಫ್ರಾಂಚೈಸಿ ಎಂಟ್ರಿಯಾಗುವ ಸುದ್ದಿಯೊಂದಿಗೆ ತಂಡದ ನಾಯಕನಾಗಲಿರುವ ಆಟಗಾರರನ ಬಗ್ಗೆ ಕೂಡ ಚರ್ಚೆಗಳು ಶುರುವಾಗಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಅವರ ಹೆಸರು ಮುಂಚೂಣಿಯಲ್ಲಿದೆ.

Virat kohli-Suresh Raina

Virat kohli-Suresh Raina

 • Share this:
  ರಂಗು ರಂಗಿನ ರಂಗೀನ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್​ ಮುಕ್ತಾಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಫೈನಲ್​ನಲ್ಲಿ ರೋಹಿತ್ ಪಡೆ 5ನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮಾರ್ಚ್​​ನಲ್ಲಿ ನಡೆಯಬೇಕಿದ್ದ ಟೂರ್ನಿಯು ಕೊರೋನಾ ಕಾರಣದಿಂದ ಈ ಬಾರಿ ಸೆಪ್ಟೆಂಬರ್​ನಲ್ಲಿ ಆರಂಭವಾಗಿತ್ತು. ಅದು ಕೂಡ ದೂರದ ಯುಎಇನಲ್ಲಿ ಎಂಬುದು ವಿಶೇಷ. ಇದೀಗ ಎರಡು ತಿಂಗಳ ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದ್ದು, ಮುಂದೇನು ಎಂಬ ಪ್ರಶ್ನೆಗಳು ಕ್ರಿಕೆಟ್ ಪ್ರೇಮಿಗಳ ಮನದಲ್ಲಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ ಕೆಲವೇ ತಿಂಗಳಲ್ಲಿ ಮತ್ತೆ ಐಪಿಎಲ್.

  ಹೌದು, 14ನೇ ಸೀಸನ್ ಐಪಿಎಲ್ ಆರಂಭಿಕ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಮುಂದಿನ ಹರಾಜಿಗೆ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ. ಅದರಂತೆ ಡಿಸೆಂಬರ್ ಅಥವಾ ಜನವರಿಯಲ್ಲಿ ಮೆಗಾ ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದ್ದು, ಬಹುತೇಕ ತಂಡಗಳು ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.

  ಏಕೆಂದರೆ 2021ರ ಐಪಿಎಲ್​ ಟೂರ್ನಿಯಲ್ಲಿ ಮತ್ತೊಂದು ತಂಡ ಸೇರಿಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ. ಕೊರೋನಾ ಕಾರಣದಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಈ ಬಾರಿ ಮತ್ತೊಂದು ತಂಡಕ್ಕೆ ಅವಕಾಶ ನೀಡಲಿದ್ದು, ಅದರಂತೆ ಪ್ರತಿ ತಂಡಗಳು ಲೀಗ್​ನಲ್ಲಿ 3 ಪಂದ್ಯಗಳನ್ನು ಆಡಲಿದೆ. ಸದ್ಯದ ಮಾಹಿತಿ ಪ್ರಕಾರ ಈ ತಂಡವು ಗುಜರಾತ್​ನ ಅಹಮದಾಬಾದ್ ನಗರವನ್ನು ಪ್ರತಿನಿಧಿಸಲಿದ್ದು, ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಸರ್ದಾರ್ ಪಟೇಲ್ ಮೈದಾನ ತಂಡದ ಹೋಮ್ ಗ್ರೌಂಡ್ ಆಗಿರಲಿದೆ.

  ಇನ್ನು ಹೊಸ ಫ್ರಾಂಚೈಸಿ ಎಂಟ್ರಿಯಾಗುವ ಸುದ್ದಿಯೊಂದಿಗೆ ತಂಡದ ನಾಯಕನಾಗಲಿರುವ ಆಟಗಾರರನ ಬಗ್ಗೆ ಕೂಡ ಚರ್ಚೆಗಳು ಶುರುವಾಗಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಅವರ ಹೆಸರು ಮುಂಚೂಣಿಯಲ್ಲಿದೆ. ಏಕೆಂದರೆ ಈ ಹಿಂದೆ ಐಪಿಎಲ್​ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಅಲ್ಲದೆ 2016 ರಲ್ಲಿ ಗುಜರಾತ್ ಲಯನ್ಸ್​ ತಂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೈನಾ ಅವರೊಂದಿಗಿನ ಒಪ್ಪಂದವನ್ನು ರದ್ದು ಮಾಡಿದೆ. ಹೀಗಾಗಿ 2021 ರ ಐಪಿಎಲ್​ನಲ್ಲಿ ಬೇರೊಂದು ತಂಡವು ಎಡಗೈ ದಾಂಡಿಗನನ್ನು ಖರೀದಿಸುವುದು ಬಹುತೇಕ ಖಚಿತ.

  ಇದೇ ಕಾರಣದಿಂದ ರೈನಾ ನಾಯಕತ್ವದಲ್ಲಿ ತಂಡವನ್ನು ಖರೀದಿಸುವ  ಬಗ್ಗೆ ಕೂಡ ಆಸಕ್ತ ಫ್ರಾಂಚೈಸಿಗಳು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಹೀಗಾಗಿ 14ನೇ ಸೀಸನ್ ಐಪಿಎಲ್​ನಲ್ಲಿ ರೈನಾ ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ 2021 ಐಪಿಎಲ್​ನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಯೋಚಿಸಿದ್ದು, ಕೊರೋನಾ ಲಸಿಕೆ ಲಭ್ಯವಾದರೆ ಮಾರ್ಚ್-ಮೇ ನಡುವೆ ಟೂರ್ನಿ ಜರುಗಲಿದೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್
  Published by:zahir
  First published: