• Home
 • »
 • News
 • »
 • ipl
 • »
 • IPL 2021: ಇವರ ಮ್ಯಾಚ್ ನೋಡುವುದೇ ಬೋರ್ ಎಂದ ವಿರೇಂದ್ರ ಸೆಹ್ವಾಗ್..!

IPL 2021: ಇವರ ಮ್ಯಾಚ್ ನೋಡುವುದೇ ಬೋರ್ ಎಂದ ವಿರೇಂದ್ರ ಸೆಹ್ವಾಗ್..!

sehwag

sehwag

ಕೊಲ್ಕತ್ತಾ ನೈಟ್ ರೈಡರ್ಸ್​ ಪ್ರತಿ ಪಂದ್ಯದಲ್ಲೂ ಒಂದೇ ರೀತಿಯ ತಪ್ಪುಗಳನ್ನು ಮಾಡುತ್ತಿದ್ದಾರೆ. ಅವರು ಚೇಸಿಂಗ್ ಮಾಡುವಾಗಲೂ ನಿಧಾನಗತಿಯ ಬ್ಯಾಟಿಂಗ್ ಮಾಡ್ತಿದ್ದಾರೆ.

 • Share this:

  ಕೊಲ್ಕತ್ತಾ ನೈಟ್​ ರೈಡರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲಾರ್ಧ ಮುಗಿಸಿದೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಕೆಕೆಆರ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 2 ಗೆಲುವಿನ ಹೊರತಾಗಿಯೂ ಕೆಕೆಆರ್ ತಂಡದಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿಲ್ಲ. ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ದ ಪಂದ್ಯದ ಮೂಲಕ ಅದು ಮತ್ತೊಮ್ಮೆ ಸಾಬೀತಾಗಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 25ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್​ 154 ರನ್‌ಗಳಿಸಲಷ್ಟೇ ಶಕ್ತರಾದರು. ಆದರೆ ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿತು. ಅಲ್ಲದೆ ಕೇವಲ 16.3 ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್‍ಗಳ ಭರ್ಜರಿ ಜಯಗಳಿಸಿತು.


  ಈ ಪಂದ್ಯದ ಬಳಿಕ ಮಾತನಾಡಿದ ವಿರೇಂದ್ರ ಸೆಹ್ವಾಗ್, ನನಗೆ ಇಂತಹ ಪಂದ್ಯಗಳನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲ. ನಾನು ಸಿನಿಮಾಗಳನ್ನು ನೋಡುವಾಗ ಬೋರ್ ಎನಿಸುವ ದೃಶ್ಯಗಳನ್ನು ವೇಗವಾಗಿ ಫಾರ್ವರ್ಡ್ ಮಾಡುತ್ತೇನೆ. ಅದೇ ರೀತಿ ಕೆಕೆಆರ್​ ಪಂದ್ಯಗಳನ್ನು ವೇಗವಾಗಿ ಫಾರ್ವರ್ಡ್​ ಮಾಡಿ ವೀಕ್ಷಿಸಬೇಕಾಗುತ್ತದೆ. ಆ ರೀತಿಯಲ್ಲಿ ನಿಧಾನಗತಿಯಲ್ಲಿ ಕೆಕೆಆರ್ ಬ್ಯಾಟ್ಸ್​ಮನ್​ಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಈ ತಂಡದ ಪಂದ್ಯಗಳನ್ನು ವೀಕ್ಷಿಸುವುದೇ ಬೋರ್ ಎಂದು ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.


  ಇದೆಲ್ಲವೂ ನೀರಸ ಪ್ರದರ್ಶನ. ಏಕೆಂದರೆ ಕೊಲ್ಕತ್ತಾ ನೈಟ್ ರೈಡರ್ಸ್​ ಪ್ರತಿ ಪಂದ್ಯದಲ್ಲೂ ಒಂದೇ ರೀತಿಯ ತಪ್ಪುಗಳನ್ನು ಮಾಡುತ್ತಿದ್ದಾರೆ. ಅವರು ಚೇಸಿಂಗ್ ಮಾಡುವಾಗಲೂ ನಿಧಾನಗತಿಯ ಬ್ಯಾಟಿಂಗ್ ಮಾಡ್ತಿದ್ದಾರೆ. ನನ್ನ ಪ್ರಕಾರ ಕೊಲ್ಕತ್ತಾ ನೈಟ್ ರೈಡರ್ಸ್​ ಅತೀ ಬೇಸರವನ್ನುಂಟು ಮಾಡುವ ತಂಡವಾಗಿದೆ ಎಂದಿದ್ದಾರೆ ಸೆಹ್ವಾಗ್.


  ಅದೃಷ್ಟವಶಾತ್, ಇಯಾನ್ ಮೋರ್ಗನ್ ಕೊನೆಯ ಪಂದ್ಯದಲ್ಲಿ ಕೆಲವು ರನ್ ಗಳಿಸಿದರು. ಆದರೆ ಡೆಲ್ಲಿ ವಿರುದ್ದ ಅದೇ ತಪ್ಪುಗಳನ್ನು ಮಾಡಿದರು. ಮ್ಯಾನೇಜ್ಮೆಂಟ್ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುವುದಿಲ್ಲ. ನೀವು ನಿಮ್ಮ ಆಟಗಾರನನ್ನು ಬೆಂಬಲಿಸುತ್ತಿದ್ದೀರಿ ಎಂದು ಹೇಳಬಹುದು. ಆದರೆ ಫಲಿತಾಂಶಗಳನ್ನು ಬದಲಾಯಿಸಲು ನೀವು ಕನಿಷ್ಠ ಬ್ಯಾಟಿಂಗ್ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಬೇಕು ಎಂದು ಸೆಹ್ವಾಗ್ ತಿಳಿಸಿದ್ದಾರೆ.

  Published by:zahir
  First published: