IPL- ಐಪಿಎಲ್ 2021ಗೆ ಕೋವಿಡ್ ಭೀತಿ; ನಟರಾಜನ್​ಗೆ ಪಾಸಿಟಿವ್; ಏಳು ಮಂದಿ ಐಸೋಲೇಶನ್

T Natarajan covid-19 Positive- ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಟಿ ನಟರಾಜನ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗಲಕ್ಷಣಗಳಿಲ್ಲದ ಅವರು ಹಾಗೂ ಅವರ ಸಂಪರ್ಕದಲ್ಲಿದ್ದ ಇತರ ಆರು ಮಂದಿ ಐಸೋಲೇಶನ್​ನಲ್ಲಿ ಇದ್ದಾರೆ.

ಟಿ ನಟರಾಜನ್

ಟಿ ನಟರಾಜನ್

  • Share this:
    ಹೈದರಾಬಾದ್, ಸೆ. 22: ಕೋವಿಡ್ ಕಾರಣಕ್ಕೆ ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡು ಮುಂದೂಡಿಕೆಯಾಗಿದ್ದ ಐಪಿಎಲ್ 2021 ಟೂರ್ನಿ ಈಗ ಯುಎಇಯಲ್ಲೂ ಕೋವಿಡ್ ಭೀತಿಯಲ್ಲಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಟಿ ನಟರಾಜ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೇರೆ ಆಟಗಾರರ ಆರ್​ಟಿಪಿಸಿಆರ್ ಪರೀಕ್ಷೆಗಳನ್ನ ನಡೆಸಲಾಗಿದೆ. ಸದ್ಯ ನಟರಾಜನ್ ಅವರು ಐಸೋಲೇಶನ್​ನಲ್ಲಿದ್ಧಾರೆ. ಅವರೊಂದಿಗೆ ಇತ್ತೀಚೆಗೆ ನಿಕಟ ಸಂಪರ್ಕದಲ್ಲಿದ್ದ ಆಲ್​ರೌಂಡರ್ ವಿಜಯ್ ಶಂಕರ್ ಆರು ಮಂದಿಯನ್ನೂ ಐಸೋಲೇಶನ್​ಗೆ ಒಳಪಡಿಸಲಾಗಿದೆ. ವಿಜಯ್ ಶಂಕರ್ ಅವರಲ್ಲದೇ ಟೀಮ್ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ವೈದ್ಯೆ ಅಂಜಲಾ ವಣ್ಣನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸ್ವಾಮಿ ಗಣೇಸನ್ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ. ಸದ್ಯ ಇವರ್ಯಾರಿಗೂ ಯಾವುದೇ ರೋಗಲಕ್ಷಣಗಳಿಲ್ಲ. ನಟರಾಜನ್ ಕೂಡ ಎಸಿಂಪ್ಟಮ್ಯಾಟಿಕ್ ಆಗಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಇಂದು ಸಂಜೆ ಪಂದ್ಯ ನಡೆಯಲಿದೆ. ಹೀಗಾಗಿ, ಈ ಪಂದ್ಯದ ಮೇಲೆ ಕೋವಿಡ್ ಕರಿನೆರಳು ಬಿದ್ದಿದೆ. ನಟರಾಜನ್ ಜೊತೆಗೆ ಆರ್​ಟಿಪಿಸಿಆರ್ ಪರೀಕ್ಷೆ ನಡೆಸಿದ ಹೈದರಾಬಾದ್​ನ ಇತರೆಲ್ಲಾ ಆಟಗಾರರಿಗೆ ನೆಗಟಿವ್ ರಿಸಲ್ಟ್ ಬಂದಿದೆ. ಈಗ ಮತ್ತೊಮ್ಮೆ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೂ ಪರೀಕ್ಷೆಗೆ ಸ್ಯಾಂಪಲ್ ಪಡೆಯಲಾಗಿದೆ. ಮೂಲಗಳ ಪ್ರಕಾರ, ಇವತ್ತು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಅಬಾಧಿತವಾಗಿ ನಡೆಯುವ ಸಾಧ್ಯತೆ ಇದೆ.

    ಐಪಿಎಲ್ ಪತ್ರಿಕಾ ಪ್ರಕಟಣೆ ಮಾಹಿತಿ:

    ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಟಿ ನಟರಾಜನ್ ಅವರು ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್-10 ಪಾಸಿಟಿವ್ ಬಂದಿದ್ಧಾರೆ. ತಂಡದ ಇತರ ಸದಸ್ಯರಿಂದ ನಟರಾಜನ್ ಐಸೋಲೇಶನ್​ನಲ್ಲಿ ಒಳಪಟ್ಟಿದ್ದಾರೆ. ಸದ್ಯ ಅವರು ಎಸಿಂಪ್ಟಮ್ಯಾಟಿಕ್ ಆಗಿದ್ಧಾರೆ.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ವೈದ್ಯಕೀಯ ತಂಡವು ನಟರಾಜನ್ ಜೊತೆ ನಿಕಟವಾಗಿದ್ದ ಆರು ಮಂದಿಯನ್ನು ಗುರುತಿಸಿ ಅವರನ್ನೂ ಐಸೋಲೇಶನ್​ನಲ್ಲಿ ಇಟ್ಟಿದೆ.

    ಈ ಆರು ಮಂದಿ ಪಟ್ಟಿ ಇಲ್ಲಿದೆ:
    1) ವಿಜಯ್ ಶಂಕರ್- ಆಟಗಾರ
    2) ವಿಜಯ್ ಕುಮಾರ್- ಟೀಮ್ ಮ್ಯಾನೇಜರ್
    3) ಶ್ಯಾಮ್ ಸುಂದರ್ ಜೆ- ಫಿಸಿಯೋ ಥೆರಪಿಸ್ಟ್
    4) ಅಂಜನಾ ವಣ್ಣನ್- ವೈದ್ಯರು
    5) ತುಷಾರ್ ಖೇಡ್ಕರ್ – ಲಾಜಿಸ್ಟಿಕ್ಸ್ ಮ್ಯಾನೇಜರ್
    6) ಪೆರಿಯಸಾಮಿ ಗಣೇಸನ್- ನೆಟ್ ಬೌಲರ್

    ಇದನ್ನೂ ಓದಿ: IPL 2021| ಐಪಿಎಲ್​ ಟೂರ್ನಿಯ ನಡುವೆಯೇ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಲಿದೆಯೇ ಆರ್​ಸಿಬಿ?

    ಇಂದು ಸಂಜೆ 7:30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಆರಂಭವಾಗುತ್ತದೆ. ಏಳು ಪಂದ್ಯಗಳಿಂದ ಕೇವಲ ಎರಡು ಅಂಕ ಹೊಂದಿರುವ ಸನ್ ರೈಸರ್ಸ್ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೋವಿಡ್ ಪಾಸಿಟಿವ್ ಬಂದಿರುವ ಟಿ ನಟರಾಜನ್ ಅವರು ಹೈದರಾಬಾದ್ ತಂಡದ ಪ್ರಮುಖ ವೇಗದ ಬೌಲರ್. ಇವರು ಇಂದು ಆಡದೇ ಇರುವುದು ತಂಡಕ್ಕೆ ಹಿನ್ನಡೆ ಎಂದೇ ಪರಿಗಣಿಸಲಾಗಿದೆ. ಸನ್ ರೈಸರ್ಸ್ ತಂಡ ನಾಕೌಟ್ ಹಂತ ಪ್ರವೇಶಿಸುವ ಕನಸು ಜೀವಂತವಾಗಿರಬೇಕಾದರೆ ಈ ಪಂದ್ಯ ಗೆಲ್ಲುವುದು ಬಹಳ ಮುಖ್ಯ.

    ಇದನ್ನೂ ಓದಿ: Watch Video| ಬೌಂಡರಿ ಲೈನಲ್ಲಿ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿದು ಬೆರಗುಗೊಳಿಸಿದ ಫ್ಯಾಬಿಯನ್ ಅಲೆನ್; ಇಲ್ಲಿದೆ ನೋಡಿ ವಿಡಿಯೋ!

    ಇನ್ನೊಂದೆಡೆ, ಜಾನ್ ಬೇರ್​ಸ್ಟೋ ಕೂಡ ಸನ್ ರೈಸರ್ಸ್ ತಂಡದಲ್ಲಿ ಇಲ್ಲ. ಭಾರತದಲ್ಲಿ ನಡೆದ ಮೊದಲ ಲೆಗ್ ಪಂದ್ಯಗಳಲ್ಲಿ ಬೇರ್​ಸ್ಟೋ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸನ್​ರೈಸರ್ಸ್ ತಂಡದಲ್ಲಿ ಫಾರ್ಮ್​ನಲ್ಲಿದ್ದ ಒಂದೆರಡು ಆಟಗಾರರಲ್ಲಿ ಬೇರ್​ಸ್ಟೋ ಒಬ್ಬರಾಗಿದ್ದರು. ಈಗ ಅವರು ಮತ್ತು ನಟರಾಜನ್ ಆಡುತ್ತಿಲ್ಲದಿರುವುದು ಹೈದರಾಬಾದ್ ತಂಡಕ್ಕೆ ಆಘಾತಕಾರಿ ಎನಿಸಬಹುದು.
    Published by:Vijayasarthy SN
    First published: