ಏಪ್ರಿಲ್ 9 ರಂದು ಶುರುವಾಗಿದ್ದ ಐಪಿಎಲ್ಗೆ ಕೊರೋನಾ ಕಾರಣದಿಂದ ಮೇ 4 ರಂದು ತೆರೆ ಬಿದ್ದಿದೆ. ಇತ್ತ 29 ಪಂದ್ಯಗಳನ್ನು ಆಯೋಜಿಸಿರುವ ಬಿಸಿಸಿಐಗೆ ಉಳಿದ 31 ಪಂದ್ಯಗಳನ್ನು ಆಯೋಜಿಸುವುದು ಇದೀಗ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ದೇಶದಲ್ಲಿನ ಕೊರೋನಾ ಪರಿಸ್ಥಿತಿಯಿಂದಾಗಿ ಸದ್ಯದಲ್ಲಂತು ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ. ಹೀಗಾಗಿ ಟೂರ್ನಿ ಆಯೋಜನೆಗಾಗಿ ಇರುವ ಅನ್ಯ ಮಾರ್ಗಗಳನ್ನು ಬಿಸಿಸಿಐ ಎದುರು ನೋಡುತ್ತಿದೆ.
ಈ ಸುದ್ದಿ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕೌಂಟಿ ಕ್ರಿಕೆಟ್ ಕ್ಲಬ್ಗಳು ಐಪಿಎಲ್ ಟೂರ್ನಿಯ ಆತಿಥ್ಯವಹಿಸಲು ಮುಂದೆ ಬಂದಿದೆ ಎಂದು ವರದಿಯಾಗಿತ್ತು. ಕೊರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್ನಲ್ಲಿ ನಡೆಸಲಿ ಎಂದು ಎಂಸಿಸಿ, ಸರ್ರೆ, ವಾರ್ವಿಕ್ಷೈರ್ ಮತ್ತು ಲಂಕಾಷೈರ್ ಕೌಂಟಿಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಪತ್ರವನ್ನು ಬರೆದಿವೆ. ಈ ಪತ್ರದಲ್ಲಿ ಐಪಿಎಲ್ ಆಯೋಜನೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ಈ ಕ್ಲಬ್ಗಳು ತಿಳಿಸಿತ್ತು.
ಆದರೀಗ ಇಂಗ್ಲೆಂಡ್ನ ಮತ್ತೊಂದು ಕೌಂಟಿ ಕ್ಲಬ್ ಈ ಬಗ್ಗೆ ಅಪಸ್ವರ ಎತ್ತಿದೆ. ಹ್ಯಾಂಪ್ಶೈರ್ ಕೌಂಟಿ ತಂಡವು 'ಇಂಗ್ಲೆಂಡ್ನಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವುದು ಕಾನೂನುಬಾಹಿರ ಎಂದು ತಿಳಿಸಿದೆ. ಉಳಿದ ತಂಡಗಳು ಹೇಗೆ ಐಪಿಎಲ್ ನಡೆಸಬಹುದು ಎಂದು ತಿಳಿಸಿದೆಯೋ ಗೊತ್ತಿಲ್ಲ. ಆದರೆ ನಮ್ಮ ಒಪ್ಪಂದಗಳ ಪ್ರಕಾರ ವಿದೇಶಿ ಲೀಗ್ನ್ನು ಆಯೋಜಿಸುವಂತಿಲ್ಲ. ಅದು ಅಕ್ರಮವಾಗುತ್ತದೆ ಎಂದು ಹ್ಯಾಂಪ್ಶೈರ್ ಮುಖ್ಯಸ್ಥರು ತಿಳಿಸಿದ್ದಾರೆ. ಈ ಹೇಳಿಕೆಯೊಂದಿಗೆ ಇಂಗ್ಲೆಂಡ್ನಲ್ಲಿ ಟೂರ್ನಿ ಮರು ಆಯೋಜನೆಗೊಳ್ಳಲಿದೆ ಎಂಬ ಐಪಿಎಲ್ ಪ್ರೇಮಿಗಳಿಗೆ ನಿರಾಸೆಯುಂಟಾಗಿದೆ.
ಇಂಗ್ಲೆಂಡ್ ಹಾಗೂ ಕೌಂಟಿ ಕ್ಲಬ್ಗಳ ಒಪ್ಪಂದಗಳ ಪ್ರಕಾರ ಯಾವುದೇ ಅನ್ಯ ಲೀಗ್ಗಳನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಲಾಗಿದೆ. ಇದೇ ಕಾರಣದಿಂದ ಈ ಬಾರಿ ಖುದ್ದು ಇಂಗ್ಲೆಂಡ್ ಹಂಡ್ರೆಡ್ ಹೆಸರಿನಲ್ಲಿ ಹೊಸ ಲೀಗ್ನಲ್ಲಿ ಶುರು ಮಾಡಲಿದೆ. ಇದೇ ವೇಳೆ ಐಪಿಎಲ್ ಅನ್ನು ಆಯೋಜಿಸುವುದು ಕಾನೂನುಬಾಹಿರವಾಗುತ್ತದೆ ಎಂಬುದು ಹ್ಯಾಂಪ್ಶೈರ್ ವಾದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ