IPL 2021, SRH vs RCB: ಮ್ಯಾಕ್ಸ್​ವೆಲ್ ಅರ್ಧಶತಕ: ಎಸ್​ಆರ್​ಹೆಚ್​ಗೆ ಸಾಧಾರಣ ಸವಾಲು

ಉಭಯ ತಂಡಗಳು ಇದುವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 7 ರಲ್ಲಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ 10 ಬಾರಿ ಗೆಲುವಿನ ರುಚಿ ನೋಡಿದೆ. ಹಾಗೇಯ ಒಂದು ಪಂದ್ಯವು ಮಳೆಯಿಂದ ರದ್ದಾಗಿತ್ತು.

SRH vs RCB

SRH vs RCB

  • Share this:
    ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಎಸ್​ಆರ್​​ಹೆಚ್ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

    ಅದರಂತೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಭುವನೇಶ್ವರ್ ಕುಮಾರ್ ಅವರ ಮೊದಲ ಓವರ್​ನಲ್ಲೇ ಭರ್ಜರಿ ಫೋರ್ ಬಾರಿಸಿ ಬೌಂಡರಿ ಖಾತೆ ತೆರೆದರು. 2ನೇ ಓವರ್​ನ ಮೊದಲ ಎಸೆತದಲ್ಲೇ ದೇವದತ್ ಪಡಿಕ್ಕಲ್ ಕೂಡ ಬೌಂಡರಿ ಬಾರಿಸಿ ರನ್ ಖಾತೆ ಓಪನ್ ಮಾಡಿದರು.

    ಭುವನೇಶ್ವರ್ ಕುಮಾರ್ ಎಸೆದ ಮೂರನೇ ಓವರ್​ನ 5ನೇ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ದೇವದತ್ ಪಡಿಕ್ಕಲ್ (11) ನದೀಮ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಹಬಾಜ್ ಅಹ್ಮದ್ ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾದರು. ಅಲ್ಲದೆ ಕೊಹ್ಲಿ ಜೊತೆಗೂಡಿ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 47 ಕ್ಕೆ ತಂದು ನಿಲ್ಲಿಸಿದರು.

    ಆದರೆ 7ನೇ ಓವರ್​ನ ಮೊದಲ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಶಹಬಾಜ್ ಅಹ್ಮದ್ (14) ರಶೀದ್​​ ಖಾನ್​ಗೆ ಕ್ಯಾಚ್ ಔಟಾದರು. ಈ ಹಂತದಲ್ಲಿ ಕೊಹ್ಲಿ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್​ವೆಲ್ ರನ್​ಗಳಿಸಲು ಪರದಾಡಿದರು. 16 ಎಸೆತಗಳನ್ನು ಎದುರಿಸಿ ಕೇವಲ 9 ರನ್​ ಮಾತ್ರ ಕಲೆಹಾಕಿದರು. ಪರಿಣಾಮ 10 ಓವರ್ ಮುಕ್ತಾಯದ ವೇಳೆಗೆ ಆರ್​ಸಿಬಿ ಮೊತ್ತ ಕೇವಲ 63 ರನ್​ಗಳು ಮಾತ್ರ.

    10 ಓವರ್ ಮುಕ್ತಾಯದ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ಮ್ಯಾಕ್ಸ್​ವೆಲ್ ನದೀಮ್ ಓವರ್​ನಲ್ಲಿ ಸಿಕ್ಸ್, ಫೋರ್, ಸಿಕ್ಸ್​ನೊಂದಿಗೆ ಕೊಹ್ಲಿ ಜೊತೆ ಸೇರಿ 22 ರನ್​ ಕಲೆಹಾಕಿದರು. ತಂಡದ ರನ್​ಗಳಿಕೆ ವೇಗ ಪಡೆಯುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 13ನೇ ಓವರ್​ನ ಜೀಸನ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ವಿರಾಟ್ ಕೊಹ್ಲಿ (33, 29ಎಸೆತ) ನಿರ್ಗಮಿಸಿದರು. ನಾಯಕನ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ (1) ರಶೀದ್ ಖಾನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಪ್ರಮುಖ ವಿಕೆಟ್ ಕಳೆದುಕೊಂಡ ಆರ್​ಸಿಬಿ 100 ರನ್​ಗಳ ಗಡಿದಾಟಲು 15ನೇ ಓವರ್​ಗಳನ್ನು ತೆಗೆದುಕೊಂಡಿತು. ಈ ಹಂತದಲ್ಲಿ 8 ರನ್​ಗಳಿಸಿದ್ದ ವಾಷಿಂಗ್ಟನ್​ ಸುಂದರನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಮನೀಷ್ ಪಾಂಡೆ ಪೆವಿಲಿಯನ್​ಗೆ ಕಳುಹಿಸಿದರು. ನಟರಾಜನ್ ಎಸೆದ 17ನೇ ಓವರ್​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಡೇನಿಯಲ್ ಕ್ರಿಶ್ಚಿಯನ್ (1) ಬಂದ ವೇಗದಲ್ಲೇ ಹಿಂತಿರುಗಿದರು.

    ಈ ಹಂತದಲ್ಲಿ ಕಣಕ್ಕಿಳಿದ ಜೇಮಿಸನ್ ಭುವನೇಶ್ವರ್ ಕುಮಾರ್ ಓವರ್​ನಲ್ಲಿ 2 ಬೌಂಡರಿ ಬಾರಿಸುವ ಮೂಲಕ ಆರ್​ಸಿಬಿ ರನ್​ಗಳಿಕೆ ಹೆಚ್ಚಿಸಿದರು. ಅದರಂತೆ 18ನೇ ಓವರ್​ನಲ್ಲಿ 14 ರನ್​ ಮೂಡಿಬಂತು. 19ನೇ ಕೊಂಚ ಅಬ್ಬರಿಸಿದ ಮ್ಯಾಕ್ಸ್​​ವೆಲ್ 12 ರನ್​ ಕಲೆಹಾಕಿದರು.

    ಜೇಸನ್ ಹೋಲ್ಡರ್ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಕೈಲ್ ಜೇಮಿಸನ್ (12) ನಿರ್ಗಮಿಸಿದರು. 2ನೇ ಎಸೆತದಲ್ಲಿ ಮ್ಯಾಕ್ಸ್​ವೆಲ್ ರನ್ ಓಡಲಿಲ್ಲ.  ಮೂರನೇ ಎಸೆತದಲ್ಲಿ 2 ರನ್ ಓಡುವ ಮೂಲಕ 38 ಎಸೆತಗಳಲ್ಲಿ ಮ್ಯಾಕ್ಸಿ ತಮ್ಮ ಅರ್ಧಶತಕ ಪೂರೈಸಿದರು. 4ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್.  5ನೇ ಎಸೆತದಲ್ಲಿ ವೈಡ್+2 ರನ್. ಕೊನೆಯ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡುವ ಮೂಲಕ ಮ್ಯಾಕ್ಸ್​ವೆಲ್ (59) ವಿಕೆಟ್ ಒಪ್ಪಿಸಿದರು.  ಅಂತಿಮವಾಗಿ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್​ ಕಲೆಹಾಕಿತು. ಸನ್​ರೈಸರ್ಸ್​ ಪರ ಜೇಸನ್ ಹೋಲ್ಡರ್ 4 ಓವರ್​ನಲ್ಲಿ 30 ರನ್​ ನೀಡಿ 3 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ಓವರ್​ನಲ್ಲಿ ಕೇವಲ 18 ರನ್​ ನೀಡಿ 2 ವಿಕೆಟ್ ಉರುಳಿಸಿದರು.

    ಈ ಪಿಚ್​ನಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯಗಳನ್ನಾಡಿದ್ದು, ಆರ್​ಸಿಬಿ ಮುಂಬೈ ಇಂಡಿಯನ್ಸ್ ವಿರುದ್ದ 2 ರನ್​ಗಳ ರೋಚಕ ಜಯ ಸಾಧಿಸಿದರೆ, ಸನ್​ರೈಸರ್ಸ್ ಹೈದರಾಬಾದ್ ತಂಡವು ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ದ 10 ರನ್​ಗಳಿಂದ ಶರಣಾಗಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ ಮೊದಲ ಗೆಲುವು ದಾಖಲಿಸಲು ಡೇವಿಡ್ ವಾರ್ನರ್ ಪಡೆ ಪಣತೊಟ್ಟಿದೆ. ಅತ್ತ ಗೆಲುವಿನ ಲಯ ಮುಂದುವರೆಸಲು ಕೊಹ್ಲಿ ಅ್ಯಂಡ್ ಟೀಮ್ ಸಜ್ಜಾಗಿದೆ.

    IPL 2021, RCB vs SRH Playing 11: ಆರ್​ಸಿಬಿ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಹೀಗಿವೆ

    ಇನ್ನು ಉಭಯ ತಂಡಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಸನ್​ರೈಸರ್ಸ್​ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಎರಡೂ ತಂಡಗಳು ಇದುವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 7 ರಲ್ಲಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ 10 ಬಾರಿ ಗೆಲುವಿನ ರುಚಿ ನೋಡಿದೆ. ಹಾಗೇಯ ಒಂದು ಪಂದ್ಯವು ಮಳೆಯಿಂದ ರದ್ದಾಗಿತ್ತು.

    ಕಳೆದ ಸೀಸನ್​ನಲ್ಲಿನ ಎರಡೂ ತಂಡಗಳ ಪ್ರದರ್ಶನವನ್ನು ಗಮನಿಸುವುದಾದರೆ, ಉಭಯ ತಂಡಗಳು 3 ಬಾರಿ ಸೆಣಸಿವೆ. ಅದರಲ್ಲಿ ಎರಡು ಬಾರಿ ಸನ್​ರೈಸರ್ಸ್ ಹೈದರಾಬಾದ್ ಗೆಲುವು ದಾಖಲಿಸಿದೆ. ಇನ್ನು ಕೊನೆಯ 10 ಪಂದ್ಯಗಳ ಫಲಿತಾಂಶವನ್ನು ತೆಗೆದುಕೊಂಡರೆ, ಅದರಲ್ಲಿ ಆರ್​ಸಿಬಿ 4 ಬಾರಿ ಮಾತ್ರ ಗೆಲುವು ಸಾಧಿಸಲು ಶಕ್ತವಾಗಿತ್ತು.
    Published by:zahir
    First published: