HOME » NEWS » Ipl » IPL 2021 SRH VS KKR LIVE SCORE NITISH RANA OUT ZP

SRH vs KKR: ನಿತೀಶ್ ಭರ್ಜರಿ ಅರ್ಧಶತಕ: ಎಸ್​ಆರ್​ಹೆಚ್​ ವಿರುದ್ಧ ಸವಾಲಿನ ಮೊತ್ತ ಪೇರಿಸಿದ ಕೆಕೆಆರ್​

kolkata knight riders vs sunrisers hyderabad: ಉಭಯ ತಂಡಗಳು ಇದುವರೆಗೆ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು.

news18-kannada
Updated:April 11, 2021, 9:18 PM IST
SRH vs KKR: ನಿತೀಶ್ ಭರ್ಜರಿ ಅರ್ಧಶತಕ: ಎಸ್​ಆರ್​ಹೆಚ್​ ವಿರುದ್ಧ ಸವಾಲಿನ ಮೊತ್ತ ಪೇರಿಸಿದ ಕೆಕೆಆರ್​
SRH - KKR
  • Share this:
ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಎಸ್​ಆರ್​ಹೆಚ್ ನಾಯಕ ಡೇವಿಡ್ ವಾರ್ನರ್​ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಕೆಕೆಆರ್​ ಪರ ಆರಂಭಿಕರಾಗಿ ನಿತೀಶ್ ರಾಣಾ ಹಾಗೂ ಶುಭ್​ಮನ್ ಗಿಲ್ ಕಣಕ್ಕಿಳಿದರು. ಮೊದಲ ಓವರ್ ಎಸೆದ ಭುವನೇಶ್ವರ್ ಕುಮಾರ್ ಕೇವಲ 4 ರನ್​ ನೀಡಿ ಎಸ್​ಆರ್​ಹೆಚ್​ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ 2ನೇ ಓವರ್​ನಿಂದ ರನ್​ಗಳಿಕೆ ವೇಗ ಹೆಚ್ಚಿಸಿದ ಕೆಕೆಆರ್​ ಒಪನಿಂಗ್ ಜೋಡಿ 3ನೇ ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 19ಕ್ಕೇರಿಸಿದರು.

ಇನ್ನು 4ನೇ ಓವರ್​ನಲ್ಲಿ ಸಂದೀಪ್ ಶರ್ಮಾಗೆ ಹ್ಯಾಟ್ರಿಕ್ ಫೋರ್ ಬಾರಿಸುವ ಮೂಲಕ ನಿತೀಶ್ ರಾಣಾ ಅಬ್ಬರಿಸುವ ಸೂಚನೆ ನೀಡಿದರು. ಹಾಗೆಯೇ 5ನೇ ಓವರ್​ನಲ್ಲಿ 12 ಬಾರಿಸಿದರು. ಪವರ್​ಪ್ಲೇನ ಕೊನೆಯ ಓವರ್​ನಲ್ಲಿ ಬೌಂಡರಿಯೊಂದಿಗೆ 50 ರನ್​ಗಳ ಜೊತೆಯಾಟವನ್ನು ಪೂರೈಸಿದರು.

7ನೇ ಓವರ್​ ಎಸೆಯಲು ನಾಯಕ ಡೇವಿಡ್ ವಾರ್ನರ್ ಚೆಂಡನ್ನು ರಶೀದ್ ಖಾನ್​ ಅವರ ಕೈಗಿತ್ತರು. ನಾಯಕನ ನಂಬಿಕೆಯನ್ನು ಹುಸಿಗೊಳಿಸದಂತೆ ಶುಭ್​ಮನ್ ಗಿಲ್ (15)ನ್ನು ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟರು.

ಆದರೆ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ನಿತೀಶ್ ರಾಣಾ ಎಸ್​ಆರ್​ಹೆಚ್ ಬೌಲರುಗಳನ್ನು ದಂಡಿಸಿದರು. ಪರಿಣಾಮ 37 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಅಲ್ಲದೆ 10 ಓವರ್​ನಲ್ಲಿ ತಂಡದ ಮೊತ್ತವು 83ಕ್ಕೇರಿತು.

ಅರ್ಧಶತಕದ ಬಳಿಕ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ರಾಣಾ 12 ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಕೂಡ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆಯಲು ಶುರು ಮಾಡಿದರು.  ಪರಿಣಾಮ 15 ಓವರ್ ಮುಕ್ತಾಯದ ವೇಳೆಗೆ 146ಕ್ಕೆ ತಂದು ನಿಲ್ಲಿಸಿದರು. ಜೊತೆಗೆ ಕೇವಲ 28 ಎಸೆತಗಳಲ್ಲಿ 5 ಫೋರ್ ಹಾಗೂ 2 ಸಿಕ್ಸ್​ ಒಳಗೊಂಡಂತೆ ರಾಹುಲ್ ತ್ರಿಪಾಠಿ ತಮ್ಮ ಅರ್ಧಶತಕ ಪೂರೈಸಿದರು.

18ನೇ ಓವರ್​ನಲ್ಲಿ 54 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳೊಂದಿಗೆ 80 ರನ್ ಬಾರಿಸಿದ್ದ ನಿತೀಶ್ ರಾಣಾ ವಿಕೆಟ್ ಒಪ್ಪಿಸಿದರು. ಮರು ಎಸೆತದಲ್ಲೇ ಬೌಂಡರಿ ಲೈನ್​ಲ್ಲಿ ಅಬ್ದುಲ್ ಸಮದ್ ಹಿಡಿದ ಉತ್ತಮ ಕ್ಯಾಚ್​ಗೆ ಇಯಾನ್ ಮೋರ್ಗನ್ (2) ಬಲಿಯಾದರು.ನಟರಾಜನ್ 19ನೇ ಓವರ್​ನಲ್ಲಿ ನಟರಾಜನ್ ಕೇವಲ 8 ರನ್ ಮಾತ್ರ ನೀಡಿದರು. ಭುವನೇಶ್ವರ್ ಕುಮಾರ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಸಿಕ್ಸರ್ ಸಿಡಿಸಿದರು. 2ನೇ ಎಸೆತದಲ್ಲಿ ಮತ್ತೊಂದು ಬೌಂಡರಿ. 3ನೇ ಎಸೆತದಲ್ಲಿ 2 ರನ್. 4ನೇ ಎಸೆತದಲ್ಲಿ  ಮತ್ತೆರಡು ರನ್. 5ನೇ ಎಸೆತದಲ್ಲಿ 1 ರನ್. ಅಂತಿಮ ಎಸೆತದಲ್ಲಿ ಶಕೀಬ್ ಅಲ್ ಹಸನ್ ವಿಕೆಟ್ ಒಪ್ಪಿಸಿದರು.

ಅಂತಿಮ ಓವರ್​ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 22 ರನ್​ ಕಲೆಹಾಕುವ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೆಕೆಆರ್ ಮೊತ್ತವನ್ನು 187ಕ್ಕೆ ತಂದು ನಿಲ್ಲಿಸಿದರು. ಸನ್​ರೈಸರ್ಸ್​ ಪರ ರಶೀದ್ ಖಾನ್ 4 ಓವರ್​ನಲ್ಲಿ 24 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ನಬಿ 4 ಓವರ್​ನಲ್ಲಿ 32 ರನ್​ ನೀಡಿ 2 ವಿಕೆಟ್ ಕಬಳಿಸಿದರು.

ಸ್ಕೋರ್: 187/6

ಓವರ್​: 20

ಉಭಯ ತಂಡಗಳು ಇದುವರೆಗೆ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ.

IPL 2021 SRH KKR Playing 11: ಕೆಕೆಆರ್​​ಗೆ ಎಸ್​ಆರ್​ಹೆಚ್ ಸವಾಲು: ಉಭಯ ತಂಡಗಳು ಹೀಗಿವೆ..!

ಹೀಗಾಗಿ ಅದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಮೋರ್ಗನ್ ಪಡೆ ಕಣಕ್ಕಿಳಿಯಲಿದೆ. ಇನ್ನು ಕಳೆದ ಸೀಸನ್​ನಲ್ಲಿ ಎರಡು ಸೋಲುಗಳ ಸೇಡನ್ನು ಐಪಿಎಲ್ ಅಭಿಯಾನದ ಪಂದ್ಯದಲ್ಲೇ ತೀರಿಸಿಕೊಳ್ಳುವ ತವಕದಲ್ಲಿದೆ ಎಸ್​ಆರ್​ಹೆಚ್ ತಂಡ. ಹೀಗಾಗಿ ಎರಡೂ ತಂಡಗಳ ಕಡೆಯಿಂದ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Published by: zahir
First published: April 11, 2021, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories