HOME » NEWS » Ipl » IPL 2021 SRH VS KKR LIVE SCORE KKR WON BY 10 RUNS ZP

IPL 2021: SRH ವಿರುದ್ಧ ಗೆದ್ದು ಬೀಗಿದ KKR

ಉಭಯ ತಂಡಗಳು ಇದುವರೆಗೆ 20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 13 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿದೆ.

news18-kannada
Updated:April 11, 2021, 11:13 PM IST
IPL 2021: SRH ವಿರುದ್ಧ ಗೆದ್ದು ಬೀಗಿದ KKR
KRR
  • Share this:
ಚೆನ್ನೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ  ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಕೊಲ್ಕತ್ತಾ ನೈಟ್​ ರೈಡರ್ಸ್​ 10 ರನ್​ಗಳ ಜಯ ಸಾಧಿಸಿದೆ. ಕೆಕೆಆರ್ ನೀಡಿದ 188 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್ 177 ರನ್​ಗಳಿಸಲಷ್ಟೇ ಶಕ್ತರಾದರು.

ಈ ಗುರಿ ಬೆನ್ನತ್ತಿದ ಎಸ್​ಆರ್​ಹೆಚ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕೆಕೆಆರ್ ಯಶಸ್ವಿಯಾಯಿತು. ಹರ್ಭಜನ್ ಸಿಂಗ್ ಎಸೆದ ಮೊದಲ ಓವರ್​ನಲ್ಲಿ ಪ್ಯಾಟ್ ಕಮಿನ್ಸ್ ಬಿಟ್ಟ ಕ್ಯಾಚ್​ನಿಂದ ಜೀವದಾನ ಪಡೆದಿದ್ದ ಡೇವಿಡ್ ವಾರ್ನರ್​ನ್ನು 2ನೇ ಓವರ್​ನಲ್ಲಿ ಪ್ರಸಿದ್ಧ್ ಕೃಷ್ಣ ಔಟ್ ಮಾಡುವಲ್ಲಿ ಯಶಸ್ವಿಯಾದರು. 3 ರನ್​ಗಳಿಸಿದ್ದ ವಾರ್ನರ್ ಪ್ರಸಿದ್ಧ್ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದರ ಬೆನ್ನಲ್ಲೇ ಶಕೀಬ್ ಅಲ್ ಹಸನ್ ಎಸೆದ ಮೂರನೇ ಓವರ್​ನ ಮೊದಲ ಎಸೆತದಲ್ಲಿ ವೃದ್ದಿಮಾನ್ ಸಾಹ (7) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಯಾದ ಮನೀಷ್ ಪಾಂಡೆ ಹಾಗೂ ಜಾನಿ ಬೈರ್​ಸ್ಟೋವ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಸನ್​ರೈಸರ್ಸ್​ ಕೇವಲ 35 ರನ್​ಗಳಿಸಲಷ್ಟೇ ಶಕ್ತರಾದರು.

ಪವರ್​ಪ್ಲೇ ಬಳಿಕ ಅಬ್ಬರಿಸಲಾರಂಭಿಸಿದ ಜಾನಿ ಬೈರ್​ಸ್ಟೋವ್ ಫೋರ್​-ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಇಂಗ್ಲೆಂಡ್​ ಆಟಗಾರನಿಗೆ ಕನ್ನಡಿಗ ಮನೀಷ್ ಪಾಂಡೆ ಉತ್ತಮ ಸಾಥ್ ನೀಡಿದರು. ಪರಿಣಾಮ 10 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 77 ಕ್ಕೆ ಬಂದು ನಿಂತಿತು. ಕೊನೆಯ 10 ಓವರ್​ನಲ್ಲಿ ಎಸ್​ಆರ್​ಹೆಚ್​ಗೆ ಗೆಲ್ಲಲು 111 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬೈರ್​ಸ್ಟೋವ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 12 ಓವರ್​ನಲ್ಲಿ ತಂಡದ ಮೊತ್ತವನ್ನು 100ಕ್ಕೆ ತಂದು ನಿಲ್ಲಿಸಿದರು. ಆದರೆ ಇದರ ಬೆನ್ನಲ್ಲೇ ಪ್ಯಾಟ್ ಕಮಿನ್ಸ್​ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ 3 ಸಿಕ್ಸ್, 5 ಫೋರ್​ಗಳನ್ನು ಒಳಗೊಂಡ ಜಾನಿ ಬೈರ್​ಸ್ಟೋವ್ ಅವರ 40 ಎಸೆತಗಳಲ್ಲಿನ 55 ರನ್​ಗಳ ಇನಿಂಗ್ಸ್​ ಅಂತ್ಯಗೊಂಡಿತು.

ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು ಕೊನೆಯ 6 ಓವರ್​ಗಳಲ್ಲಿ 75 ರನ್​ಗಳ ಅವಶ್ಯಕೆಯಿತ್ತು. ಈ ಹಂತದಲ್ಲಿ ಪಾಂಡೆ ಜೊತೆಗೂಡಿದ ಮೊಹಮ್ಮದ್ ನಬಿ 10 ಎಸೆತಗಳಲ್ಲಿ 14 ರನ್ ಬಾರಿಸಿ ಪ್ರಸಿದ್ಧ್ ಕೃಷ್ಣಗ ವಿಕೆಟ್ ಒಪ್ಪಿಸಿದರು. ಕೊನೆಯ 24 ಎಸೆತಗಳಲ್ಲಿ 57 ರನ್​ ಕಲೆಹಾಕಬೇಕಿತ್ತು.

ಈ ವೇಳೆ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮನೀಷ್ ಪಾಂಡೆ ಬ್ಯಾಟ್ ಮೇಲೆಕ್ಕೆತ್ತಿದರು. ಇದೇ ವೇಳೆ ಕ್ರೀಸ್​​ನಲ್ಲಿದ್ದ ವಿಜಯ್ ಶಂಕರ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಗುರಿಯ ಅಂತರವನ್ನು ಕಡಿಮೆ ಮಾಡಿದರು. ಇದರಿಂದ ಕೊನೆಯ 3 ಓವರ್​ಗಳಲ್ಲಿ 44 ರನ್​ಗಳ ಟಾರ್ಗೆಟ್ ಪಡೆಯಿತು.18ನೇ ಓವರ್​ನಲ್ಲಿ ಆಂಡ್ರೆ ರಸೆಲ್ ಕೇವಲ 6 ರನ್​ ನೀಡಿದ ವಿಜಯ್ ಶಂಕರ್ (11) ವಿಕೆಟ್ ಪಡೆದರು. ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 38 ರನ್​ಗಳು ಬೇಕಿತ್ತು. ಹಂತದಲ್ಲಿ ಕಣಕ್ಕಿಳಿದ ಅಬ್ದುಲ್ ಸಮದ್ ಪ್ಯಾಟ್ ಕಮಿನ್ಸ್ ಓವರ್​ನಲ್ಲಿ 2 ಸಿಕ್ಸರ್ ಸಿಡಿಸುವ ಮೂಲಕ ಅಬ್ಬರಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ 22 ರನ್​ಗಳು ಗುರಿ ಪಡೆಯಿತು.

ಆಂಡ್ರೆ ರಸೆಲ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ  2 ರನ್. 2ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 3ನೇ ಹಾಗೂ 4ನೇ ಎಸೆತದಲ್ಲಿ  ಒಂದೊಂದು ರನ್​. ಕೊನೆಯ ಎಸೆತದಲ್ಲಿ ಮನೀಷ್ ಪಾಂಡೆ ಸಿಕ್ಸ್ ಸಿಡಿಸಿದರೂ ಸನ್​ರೈಸರ್ಸ್​ ಗುರಿ ಮುಟ್ಟಲು ಇನ್ನೂ 11 ರನ್​ಗಳ ಅವಶ್ಯಕತೆಯಿತ್ತು.  ಅಂತಿಮ ಓವರ್​ವರೆಗೂ ಬ್ಯಾಟ್ ಬೀಸಿದ ಮನೀಷ್ ಪಾಂಡೆ 44 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್​ನೊಂದಿಗೆ 61 ರನ್​ಗಳಿಸಿದರೆ, ಅಬ್ದುಲ್ ಸಮದ್ ಅಂತಿಮ ಹಂತದಲ್ಲಿ ಕೇವಲ 8 ಎಸೆತಗಳಲ್ಲಿ 19 ರನ್ ಬಾರಿಸಿದರು.

ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 177 ರನ್​ಗಳಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್ 10 ರನ್​ಗಳ ಸೋಲೊಪ್ಪಿಕೊಂಡಿತು. ಕೆಕೆಆರ್ ಪರ 4 ಓವರ್​ನಲ್ಲಿ 35 ರನ್​ ನೀಡಿ 2 ವಿಕೆಟ್ ಪಡೆದು ಪ್ರಸಿದ್ಧ್ ಕೃಷ್ಣ ಗಮನ ಸೆಳೆದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಎಸ್​ಆರ್​ಹೆಚ್ ನಾಯಕ ಡೇವಿಡ್ ವಾರ್ನರ್​ ಬೌಲಿಂಗ್ ಆಯ್ದುಕೊಂಡರು. ಕೆಕೆಆರ್​ ಪರ ಆರಂಭಿಕರಾಗಿ ನಿತೀಶ್ ರಾಣಾ ಹಾಗೂ ಶುಭ್​ಮನ್ ಗಿಲ್ ಕಣಕ್ಕಿಳಿದರು. ಮೊದಲ ಓವರ್ ಎಸೆದ ಭುವನೇಶ್ವರ್ ಕುಮಾರ್ ಕೇವಲ 4 ರನ್​ ನೀಡಿ ಎಸ್​ಆರ್​ಹೆಚ್​ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ 2ನೇ ಓವರ್​ನಿಂದ ರನ್​ಗಳಿಕೆ ವೇಗ ಹೆಚ್ಚಿಸಿದ ಕೆಕೆಆರ್​ ಒಪನಿಂಗ್ ಜೋಡಿ 3ನೇ ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 19ಕ್ಕೇರಿಸಿದರು.

ಇನ್ನು 4ನೇ ಓವರ್​ನಲ್ಲಿ ಸಂದೀಪ್ ಶರ್ಮಾಗೆ ಹ್ಯಾಟ್ರಿಕ್ ಫೋರ್ ಬಾರಿಸುವ ಮೂಲಕ ನಿತೀಶ್ ರಾಣಾ ಅಬ್ಬರಿಸುವ ಸೂಚನೆ ನೀಡಿದರು. ಹಾಗೆಯೇ 5ನೇ ಓವರ್​ನಲ್ಲಿ 12 ಬಾರಿಸಿದರು. ಪವರ್​ಪ್ಲೇನ ಕೊನೆಯ ಓವರ್​ನಲ್ಲಿ ಬೌಂಡರಿಯೊಂದಿಗೆ 50 ರನ್​ಗಳ ಜೊತೆಯಾಟವನ್ನು ಪೂರೈಸಿದರು.

7ನೇ ಓವರ್​ ಎಸೆಯಲು ನಾಯಕ ಡೇವಿಡ್ ವಾರ್ನರ್ ಚೆಂಡನ್ನು ರಶೀದ್ ಖಾನ್​ ಅವರ ಕೈಗಿತ್ತರು. ನಾಯಕನ ನಂಬಿಕೆಯನ್ನು ಹುಸಿಗೊಳಿಸದಂತೆ ಶುಭ್​ಮನ್ ಗಿಲ್ (15)ನ್ನು ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟರು.

ಆದರೆ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ನಿತೀಶ್ ರಾಣಾ ಎಸ್​ಆರ್​ಹೆಚ್ ಬೌಲರುಗಳನ್ನು ದಂಡಿಸಿದರು. ಪರಿಣಾಮ 37 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಅಲ್ಲದೆ 10 ಓವರ್​ನಲ್ಲಿ ತಂಡದ ಮೊತ್ತವು 83ಕ್ಕೇರಿತು.

ಅರ್ಧಶತಕದ ಬಳಿಕ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ರಾಣಾ 12 ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಕೂಡ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆಯಲು ಶುರು ಮಾಡಿದರು.  ಪರಿಣಾಮ 15 ಓವರ್ ಮುಕ್ತಾಯದ ವೇಳೆಗೆ 146ಕ್ಕೆ ತಂದು ನಿಲ್ಲಿಸಿದರು. ಜೊತೆಗೆ ಕೇವಲ 28 ಎಸೆತಗಳಲ್ಲಿ  ರಾಹುಲ್ ತ್ರಿಪಾಠಿ ತಮ್ಮ ಅರ್ಧಶತಕ ಪೂರೈಸಿದರು.

ಹಾಫ್​ ಸೆಂಚುರಿ ಬೆನ್ನಲ್ಲೇ ಬಿರುಸಿನ ಹೊಡೆತಕ್ಕೆ ಮುಂದಾದ ತ್ರಿಪಾಠಿ (53) ವಿಕೆಟ್ ಕೀಪರ್ ವೃದ್ದಿಮಾನ್ ಸಾಹಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ ಡೇಂಜರಸ್ ಆಂಡ್ರೆ ರಸೆಲ್ (5) ರಶೀದ್ ಖಾನ್ ಎಸೆತದಲ್ಲಿ ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

18ನೇ ಓವರ್​ನಲ್ಲಿ 54 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳೊಂದಿಗೆ 80 ರನ್ ಬಾರಿಸಿದ್ದ ನಿತೀಶ್ ರಾಣಾ ವಿಕೆಟ್ ಒಪ್ಪಿಸಿದರು. ಮರು ಎಸೆತದಲ್ಲೇ ಬೌಂಡರಿ ಲೈನ್​ಲ್ಲಿ ಅಬ್ದುಲ್ ಸಮದ್ ಹಿಡಿದ ಉತ್ತಮ ಕ್ಯಾಚ್​ಗೆ ಇಯಾನ್ ಮೋರ್ಗನ್ (2) ಬಲಿಯಾದರು. ಈ ಓವರ್​ನಲ್ಲಿ ಮೊಹಮ್ಮದ್ ನಬಿ ಕೇವಲ 3 ರನ್​ ನೀಡಿ 2 ವಿಕೆಟ್ ಕಬಳಿಸಿದರು.

ನಟರಾಜನ್ 19ನೇ ಓವರ್​ನಲ್ಲಿ ನಟರಾಜನ್ ಕೇವಲ 8 ರನ್ ಮಾತ್ರ ನೀಡಿದರು. ಭುವನೇಶ್ವರ್ ಕುಮಾರ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಸಿಕ್ಸರ್ ಸಿಡಿಸಿದರು. 2ನೇ ಎಸೆತದಲ್ಲಿ ಮತ್ತೊಂದು ಬೌಂಡರಿ. 3ನೇ ಎಸೆತದಲ್ಲಿ 2 ರನ್. 4ನೇ ಎಸೆತದಲ್ಲಿ  ಮತ್ತೆರಡು ರನ್. 5ನೇ ಎಸೆತದಲ್ಲಿ 1 ರನ್. ಅಂತಿಮ ಎಸೆತದಲ್ಲಿ ಶಕೀಬ್ ಅಲ್ ಹಸನ್ ವಿಕೆಟ್ ಒಪ್ಪಿಸಿದರು.

ಅಂತಿಮ ಓವರ್​ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 22 ರನ್​ ಕಲೆಹಾಕುವ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೆಕೆಆರ್ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 187ಕ್ಕೆ ತಂದು ನಿಲ್ಲಿಸಿದರು. ಸನ್​ರೈಸರ್ಸ್​ ಪರ ರಶೀದ್ ಖಾನ್ 4 ಓವರ್​ನಲ್ಲಿ 24 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ನಬಿ 4 ಓವರ್​ನಲ್ಲಿ 32 ರನ್​ ನೀಡಿ 2 ವಿಕೆಟ್ ಕಬಳಿಸಿದರು.



ಉಭಯ ತಂಡಗಳು ಇದುವರೆಗೆ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ.

IPL 2021 SRH KKR Playing 11: ಕೆಕೆಆರ್​​ಗೆ ಎಸ್​ಆರ್​ಹೆಚ್ ಸವಾಲು: ಉಭಯ ತಂಡಗಳು ಹೀಗಿವೆ..!

ಹೀಗಾಗಿ ಅದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಮೋರ್ಗನ್ ಪಡೆ ಕಣಕ್ಕಿಳಿಯಲಿದೆ. ಇನ್ನು ಕಳೆದ ಸೀಸನ್​ನಲ್ಲಿ ಎರಡು ಸೋಲುಗಳ ಸೇಡನ್ನು ಐಪಿಎಲ್ ಅಭಿಯಾನದ ಪಂದ್ಯದಲ್ಲೇ ತೀರಿಸಿಕೊಳ್ಳುವ ತವಕದಲ್ಲಿದೆ ಎಸ್​ಆರ್​ಹೆಚ್ ತಂಡ. ಹೀಗಾಗಿ ಎರಡೂ ತಂಡಗಳ ಕಡೆಯಿಂದ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Published by: zahir
First published: April 11, 2021, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories