HOME » NEWS » Ipl » IPL 2021 SRH VS KKR LIVE SCORE KKR SET TARGET 188 ZP

IPL 2021, SRH vs KKR: ನಿತೀಶ್ ರಾಣಾ ಸಿಡಿಲಬ್ಬರ: SRH ತಂಡಕ್ಕೆ ಕಠಿಣ ಗುರಿ ನೀಡಿದ KKR

ಉಭಯ ತಂಡಗಳು ಇದುವರೆಗೆ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ.

news18-kannada
Updated:April 11, 2021, 9:18 PM IST
IPL 2021, SRH vs KKR: ನಿತೀಶ್ ರಾಣಾ ಸಿಡಿಲಬ್ಬರ: SRH ತಂಡಕ್ಕೆ ಕಠಿಣ ಗುರಿ ನೀಡಿದ KKR
nitish rana
  • Share this:
ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡವು ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 188 ರನ್​ಗಳ ಗುರಿ ನೀಡಿದೆ.​  ಇದಕ್ಕೂ ಮುನ್ನ ಟಾಸ್ ಗೆದ್ದ ಎಸ್​ಆರ್​ಹೆಚ್ ನಾಯಕ ಡೇವಿಡ್ ವಾರ್ನರ್​ ಬೌಲಿಂಗ್ ಆಯ್ದುಕೊಂಡರು.

ಕೆಕೆಆರ್​ ಪರ ಆರಂಭಿಕರಾಗಿ ನಿತೀಶ್ ರಾಣಾ ಹಾಗೂ ಶುಭ್​ಮನ್ ಗಿಲ್ ಕಣಕ್ಕಿಳಿದರು. ಮೊದಲ ಓವರ್ ಎಸೆದ ಭುವನೇಶ್ವರ್ ಕುಮಾರ್ ಕೇವಲ 4 ರನ್​ ನೀಡಿ ಎಸ್​ಆರ್​ಹೆಚ್​ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ 2ನೇ ಓವರ್​ನಿಂದ ರನ್​ಗಳಿಕೆ ವೇಗ ಹೆಚ್ಚಿಸಿದ ಕೆಕೆಆರ್​ ಒಪನಿಂಗ್ ಜೋಡಿ 3ನೇ ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 19ಕ್ಕೇರಿಸಿದರು.

ಇನ್ನು 4ನೇ ಓವರ್​ನಲ್ಲಿ ಸಂದೀಪ್ ಶರ್ಮಾಗೆ ಹ್ಯಾಟ್ರಿಕ್ ಫೋರ್ ಬಾರಿಸುವ ಮೂಲಕ ನಿತೀಶ್ ರಾಣಾ ಅಬ್ಬರಿಸುವ ಸೂಚನೆ ನೀಡಿದರು. ಹಾಗೆಯೇ 5ನೇ ಓವರ್​ನಲ್ಲಿ 12 ಬಾರಿಸಿದರು. ಪವರ್​ಪ್ಲೇನ ಕೊನೆಯ ಓವರ್​ನಲ್ಲಿ ಬೌಂಡರಿಯೊಂದಿಗೆ 50 ರನ್​ಗಳ ಜೊತೆಯಾಟವನ್ನು ಪೂರೈಸಿದರು.

7ನೇ ಓವರ್​ ಎಸೆಯಲು ನಾಯಕ ಡೇವಿಡ್ ವಾರ್ನರ್ ಚೆಂಡನ್ನು ರಶೀದ್ ಖಾನ್​ ಅವರ ಕೈಗಿತ್ತರು. ನಾಯಕನ ನಂಬಿಕೆಯನ್ನು ಹುಸಿಗೊಳಿಸದಂತೆ ಶುಭ್​ಮನ್ ಗಿಲ್ (15)ನ್ನು ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟರು.

ಆದರೆ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ನಿತೀಶ್ ರಾಣಾ ಎಸ್​ಆರ್​ಹೆಚ್ ಬೌಲರುಗಳನ್ನು ದಂಡಿಸಿದರು. ಪರಿಣಾಮ 37 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಅಲ್ಲದೆ 10 ಓವರ್​ನಲ್ಲಿ ತಂಡದ ಮೊತ್ತವು 83ಕ್ಕೇರಿತು.

ಅರ್ಧಶತಕದ ಬಳಿಕ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ರಾಣಾ 12 ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಕೂಡ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆಯಲು ಶುರು ಮಾಡಿದರು.  ಪರಿಣಾಮ 15 ಓವರ್ ಮುಕ್ತಾಯದ ವೇಳೆಗೆ 146ಕ್ಕೆ ತಂದು ನಿಲ್ಲಿಸಿದರು. ಜೊತೆಗೆ ಕೇವಲ 28 ಎಸೆತಗಳಲ್ಲಿ  ರಾಹುಲ್ ತ್ರಿಪಾಠಿ ತಮ್ಮ ಅರ್ಧಶತಕ ಪೂರೈಸಿದರು.

ಹಾಫ್​ ಸೆಂಚುರಿ ಬೆನ್ನಲ್ಲೇ ಬಿರುಸಿನ ಹೊಡೆತಕ್ಕೆ ಮುಂದಾದ ತ್ರಿಪಾಠಿ (53) ವಿಕೆಟ್ ಕೀಪರ್ ವೃದ್ದಿಮಾನ್ ಸಾಹಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ ಡೇಂಜರಸ್ ಆಂಡ್ರೆ ರಸೆಲ್ (5) ರಶೀದ್ ಖಾನ್ ಎಸೆತದಲ್ಲಿ ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು.18ನೇ ಓವರ್​ನಲ್ಲಿ 54 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳೊಂದಿಗೆ 80 ರನ್ ಬಾರಿಸಿದ್ದ ನಿತೀಶ್ ರಾಣಾ ವಿಕೆಟ್ ಒಪ್ಪಿಸಿದರು. ಮರು ಎಸೆತದಲ್ಲೇ ಬೌಂಡರಿ ಲೈನ್​ಲ್ಲಿ ಅಬ್ದುಲ್ ಸಮದ್ ಹಿಡಿದ ಉತ್ತಮ ಕ್ಯಾಚ್​ಗೆ ಇಯಾನ್ ಮೋರ್ಗನ್ (2) ಬಲಿಯಾದರು. ಈ ಓವರ್​ನಲ್ಲಿ ಮೊಹಮ್ಮದ್ ನಬಿ ಕೇವಲ 3 ರನ್​ ನೀಡಿ 2 ವಿಕೆಟ್ ಕಬಳಿಸಿದರು.

ನಟರಾಜನ್ 19ನೇ ಓವರ್​ನಲ್ಲಿ ನಟರಾಜನ್ ಕೇವಲ 8 ರನ್ ಮಾತ್ರ ನೀಡಿದರು. ಭುವನೇಶ್ವರ್ ಕುಮಾರ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಸಿಕ್ಸರ್ ಸಿಡಿಸಿದರು. 2ನೇ ಎಸೆತದಲ್ಲಿ ಮತ್ತೊಂದು ಬೌಂಡರಿ. 3ನೇ ಎಸೆತದಲ್ಲಿ 2 ರನ್. 4ನೇ ಎಸೆತದಲ್ಲಿ  ಮತ್ತೆರಡು ರನ್. 5ನೇ ಎಸೆತದಲ್ಲಿ 1 ರನ್. ಅಂತಿಮ ಎಸೆತದಲ್ಲಿ ಶಕೀಬ್ ಅಲ್ ಹಸನ್ ವಿಕೆಟ್ ಒಪ್ಪಿಸಿದರು.

ಅಂತಿಮ ಓವರ್​ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 22 ರನ್​ ಕಲೆಹಾಕುವ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೆಕೆಆರ್ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 187ಕ್ಕೆ ತಂದು ನಿಲ್ಲಿಸಿದರು. ಸನ್​ರೈಸರ್ಸ್​ ಪರ ರಶೀದ್ ಖಾನ್ 4 ಓವರ್​ನಲ್ಲಿ 24 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ನಬಿ 4 ಓವರ್​ನಲ್ಲಿ 32 ರನ್​ ನೀಡಿ 2 ವಿಕೆಟ್ ಕಬಳಿಸಿದರು.



ಉಭಯ ತಂಡಗಳು ಇದುವರೆಗೆ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ.

IPL 2021 SRH KKR Playing 11: ಕೆಕೆಆರ್​​ಗೆ ಎಸ್​ಆರ್​ಹೆಚ್ ಸವಾಲು: ಉಭಯ ತಂಡಗಳು ಹೀಗಿವೆ..!

ಹೀಗಾಗಿ ಅದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಮೋರ್ಗನ್ ಪಡೆ ಕಣಕ್ಕಿಳಿಯಲಿದೆ. ಇನ್ನು ಕಳೆದ ಸೀಸನ್​ನಲ್ಲಿ ಎರಡು ಸೋಲುಗಳ ಸೇಡನ್ನು ಐಪಿಎಲ್ ಅಭಿಯಾನದ ಪಂದ್ಯದಲ್ಲೇ ತೀರಿಸಿಕೊಳ್ಳುವ ತವಕದಲ್ಲಿದೆ ಎಸ್​ಆರ್​ಹೆಚ್ ತಂಡ. ಹೀಗಾಗಿ ಎರಡೂ ತಂಡಗಳ ಕಡೆಯಿಂದ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Published by: zahir
First published: April 11, 2021, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories