SRH vs DC: ಸನ್​ರೈಸರ್ಸ್​ಗೆ ಸ್ಪರ್ಧಾತ್ಮಕ ಸವಾಲು ನೀಡಿದ ಕ್ಯಾಪಿಟಲ್ಸ್​

ಉಭಯ ತಂಡಗಳು ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 7 ಬಾರಿ ಜಯ ಸಾಧಿಸಿದೆ. ಕಳೆದ ಸೀಸನ್​ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 2 ಬಾರಿ ಗೆಲುವು ದಾಖಲಿಸಿದರೆ, ಪ್ಲೇ ಆಫ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸನ್​ರೈಸರ್ಸ್​ಗೆ ಸೋಲುಣಿಸಿತ್ತು ಎಂಬುದು ವಿಶೇಷ.

DC

DC

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್​ರೈಸರ್ಸ್​ ಹೈದರಾಬಾದ್​ಗೆ 160 ರನ್​ಗಳ ಗುರಿ ನೀಡಿದೆ.  ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಆಯ್ದುಕೊಂಡರು.

  ಡೆಲ್ಲಿ ಪರ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಭರ್ಜರಿ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಈ ಜೋಡಿ ಸನ್​ರೈಸರ್ಸ್​ ಬೌಲರುಗಳು ವಿರುದ್ದ ಮುಗಿಬಿದ್ದರು. ಪರಿಣಾಮ ಪವರ್​ಪ್ಲೇನಲ್ಲಿ ಡೆಲ್ಲಿ ಮೊತ್ತ 51ಕ್ಕೆ ಬಂದು ನಿಂತಿತು.

  ಮೊದಲ ವಿಕೆಟ್​ಗೆ 81 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ರಶೀದ್ ಖಾನ್ ಯಶಸ್ವಿಯಾದರು. 28 ರನ್​ಗಳಿಸಿದ್ದ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ರಶೀದ್ ಖಾನ್ ಸನ್​ರೈಸರ್ಸ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ್ದ ಪೃಥ್ವಿ ಶಾ (53ರನ್, 39 ಎಸೆತ) ರನೌಟ್​ಗೆ ಬಲಿಯಾದರು. ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಪಂತ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

  3ನೇ ವಿಕೆಟ್​ಗೆ 58 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಸಿದ್ದಾರ್ಥ್​ ಕೌಲ್ ಬೇರ್ಪಡಿಸಿದರು. 19ನೇ ಓವರ್​ನಲ್ಲಿ ರಿಷಭ್ ಪಂತ್ (37) ಔಟ್ ಮಾಡಿ ಎಸ್​ಆರ್​ಹೆಚ್​​ಗೆ 3ನೇ ಯಶಸ್ಸು ತಂದುಕೊಟ್ಟರು. ಇನ್ನು ಬಂದ ವೇಗದಲ್ಲೇ ಶಿಮ್ರಾನ್ ಹೆಟ್ಮೆಯರ್​ ಔಟ್ ಮಾಡಿ ಕೌಲ್ 4ನೇ ವಿಕೆಟ್ ಉರುಳಿಸಿದರು.

  ಸ್ಟೀವ್ ಸ್ಮಿತ್ ಅವರ ಅಜೇಯ 34 ರನ್​ಗಳ ನೆರವಿನೊಂದಿಗೆ ಅಂತಿಮವಾಗಿ  ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್​ ಪೇರಿಸಿತು. ಸನ್​ರೈಸರ್ಸ್​ ಹೈದರಾಬಾದ್ ಪರ 4 ಓವರ್​ನಲ್ಲಿ  31 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.  ಉಭಯ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ಗೆಲುವು ದಾಖಲಿಸುವ ಮೂಲಕ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಸತತ ಮೂರು ಸೋಲುಗಳ ಬಳಿಕ ಒಂದು ಗೆಲುವು ಕಂಡಿರುವ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿದೆ.

  ಉಭಯ ತಂಡಗಳು ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 7 ಬಾರಿ ಜಯ ಸಾಧಿಸಿದೆ. ಕಳೆದ ಸೀಸನ್​ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 2 ಬಾರಿ ಗೆಲುವು ದಾಖಲಿಸಿದರೆ, ಪ್ಲೇ ಆಫ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸನ್​ರೈಸರ್ಸ್​ಗೆ ಸೋಲುಣಿಸಿತ್ತು ಎಂಬುದು ವಿಶೇಷ. ಇನ್ನು ಕೊನೆಯ 6 ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ 3 ಗೆಲುವು ದಾಖಲಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲ ಹೊಂದಿದೆ ಎಂದೇ ಹೇಳಬಹುದು.
  Published by:zahir
  First published: