HOME » NEWS » Ipl » IPL 2021 RR VS PBKS LIVE SCORE PUNJAB KINGS FIFTY ZP

RR vs PBKS: ರಾಹುಲ್-ಹೂಡಾ ಆರ್ಕಷಕ ಅರ್ಧಶತಕ: ಪಂಜಾಬ್ ಬೃಹತ್ ಮೊತ್ತ

Rajasthan Royals vs Punjab Kings live score: ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 12 ರಲ್ಲಿ ಗೆದ್ದರೆ, ಪಂಜಾಬ್ ಕಿಂಗ್ಸ್ ಇಲೆವೆನ್ 9 ರಲ್ಲಿ ಜಯ ಸಾಧಿಸಿದೆ.

news18-kannada
Updated:April 12, 2021, 9:40 PM IST
RR vs PBKS: ರಾಹುಲ್-ಹೂಡಾ ಆರ್ಕಷಕ ಅರ್ಧಶತಕ: ಪಂಜಾಬ್ ಬೃಹತ್ ಮೊತ್ತ
RR vs PBKS
  • Share this:
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​​ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್​ ವಿರುದ್ಧ ಸೆಣಸುತ್ತಿದೆ. ಟಾಸ್ ಗೆದ್ದಿರುವ ಆರ್​ಆರ್​ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಅದರಂತೆ ಇನಿಂಗ್ಸ್ ಆರಂಭಿಸಿದ ಪಂಜಾಬ್ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ಓವರ್​ನಲ್ಲೇ 10 ರನ್​ ಕಲೆಹಾಕುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಇನ್ನು 2ನೇ ಓವರ್​ ಮುಕ್ತಾಯದ ವೇಳೆ 21 ರನ್ ಪೇರಿಸಿದ್ದ ಈ ಜೋಡಿಯನ್ನು 3ನೇ ಓವರ್​ನಲ್ಲಿ ಬೇರ್ಪಡಿಸಲು ಯುವ ವೇಗಿ ಚೇತನ್ ಸಕರಿಯಾ ಯಶಸ್ಸಿಯಾದರು.

ಸಕರಿಯಾ ಎಸೆದ ಮೂರನೇ ಓವರ್​ನ 4ನೇ ಎಸೆತದಲ್ಲಿ ಮಯಾಂಕ್ ಅರ್ಗವಾಲ್ (14) ಕೀಪರ್​ ಸಂಜು ಸ್ಯಾಮ್ಸನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ರಿಸ್ ಗೇಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆ ಪಂಜಾಬ್ ಕಿಂಗ್ಸ್ ಗಳಿಸಿದ್ದು 46 ರನ್​ಗಳು.

ಪವರ್​ಪ್ಲೇ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಕ್ರಿಸ್ ಗೇಲ್ ತಮ್ಮ ಹಿಂದಿನ ಆಟದತ್ತ ವಾಲಿದರು. ಪರಿಣಾಮ 2 ಸಿಕ್ಸ್ ಹಾಗೂ 4 ಭರ್ಜರಿಗಳು ಮೂಡಿಬಂದವು. ಅತ್ತ ಗೇಲ್​ಗೆ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 5 ಭರ್ಜರಿ ಬೌಂಡರಿ ಬಾರಿಸಿದರು. ಅದರಂತೆ 10 ಓವರ್​ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 89ಕ್ಕೆ ಬಂದು ನಿಂತಿತು.  ಆದರೆ ಇದೇ ಓವರ್​ನ 5ನೇ ಎಸೆತದಲ್ಲಿ ಬೆನ್​ ಸ್ಟೋಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಕ್ರಿಸ್ ಗೇಲ್ ಬಲಿಯಾದರು. ಇದರೊಂದಿಗೆ 28 ಎಸೆತಗಳಲ್ಲಿ 40 ರನ್​ಗಳ ಗೇಲ್ ಇನಿಂಗ್ಸ್ ಅಂತ್ಯವಾಯಿತು.

ಆದರೆ ಮತ್ತೊಂದೆಡೆ ಅಬ್ಬರಿಸಲಾರಂಭಿಸಿದ ಕೆಎಲ್ ರಾಹುಲ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 11ನೇ ಓವರ್​ನಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಲ್ಲದೆ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ರಾಹುಲ್​ ಜೊತೆಗೂಡಿ ಕೇವಲ 22 ಎಸೆತಗಳಲ್ಲಿ ಅರ್ಧಶತಕಗಳ ಜೊತೆಯಾಟವಾಡಿದರು. ಈ ಮೂಲಕ 14 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 150ಕ್ಕೇರಿಸಿದರು.

ಅಲ್ಲದೆ 6 ಭರ್ಜರಿ ಸಿಕ್ಸರ್​ಗಳೊಂದಿಗೆ ದೀಪಕ್ ಹೂಡಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪಂಜಾಬ್ ಮೊತ್ತವು 16 ಓವರ್​ ಮುಕ್ತಾಯದ ವೇಳೆಗೆ 172 ಆಗಿತ್ತು. ಇನ್ನು ಹೂಡಾ-ರಾಹುಲ್ ಸಿಡಿಲಬ್ಬರದಿಂದ ಕೇವಲ 47 ಎಸೆತಗಳಲ್ಲಿ 105 ರನ್​ಗಳು ಮೂಡಿಬಂದವು. ಈ ಹಂತದಲ್ಲಿ 28 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ್ದ ಹೂಡಾ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಆದರೆ ಮತ್ತೊಂದೆಡೆ ರಾಹುಲ್ ಅಬ್ಬರ ಶುರುವಾಗಿತ್ತು. ಪರಿಣಾಮ 18ನೇ ಓವರ್​ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 200ರ ಗಡಿದಾಟಿತು. ಈ ವೇಳೆ ಕ್ರೀಸ್​ಗಿಳಿದ ನಿಕೋಲಸ್ ಪೂರನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.ಕೊನೆಯ ಎರಡು ಓವರ್​ಗಳಿರುವಾಗ ರಾಹುಲ್ ಜೊತೆಗೂಡಿದ ಶಾರುಖ್ ಖಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 19ನೇ ಓವರ್​ನಲ್ಲಿ 15 ರನ್​ ಕಲೆಹಾಕಿತು. ಚೇತನ್ ಸಕರಿಯಾ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ರಾಹುಲ್ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ರಾಹುಲ್ ತೆವಾಠಿಯಾ ಹಿಡಿದ ಅತ್ಯುತ್ತಮ ಕ್ಯಾಚ್​ನಿಂದ ಕೆಎಲ್ ರಾಹುಲ್ ಔಟಾದರು. 50 ಎಸೆತಗಳನ್ನು ಎದುರಿಸಿದ್ದ ರಾಹುಲ್ 5 ಭರ್ಜರಿ ಸಿಕ್ಸ್​ ಹಾಗೂ 7 ಬೌಂಡರಿಗಳೊಂದಿಗೆ 91 ರನ್​ ಬಾರಿಸಿ ಮಿಂಚಿದರು.

ಕೊನೆಯ ಓವರ್​ನಲ್ಲಿ ಕೇವಲ 5 ರನ್​ಗಳಿಸುವುದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್​ಗಳನ್ನು ಪೇರಿಸಿತು.



ಸ್ಕೋರ್: 221/6

ಓವರ್: 20

ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 12 ರಲ್ಲಿ ಗೆದ್ದರೆ, ಪಂಜಾಬ್ ಕಿಂಗ್ಸ್ ಇಲೆವೆನ್ 9 ರಲ್ಲಿ ಜಯ ಸಾಧಿಸಿದೆ. ಹಾಗೆಯೇ ಕಳೆದ ಸೀಸನ್​ನಲ್ಲಿ ಆಡಿದ 2 ಪಂದ್ಯಗಳಲ್ಲೂ ರಾಜಸ್ಥಾನ್ ಗೆದ್ದು ಬೀಗಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ.

RR vs PBKS Playing 11: ಬಲಿಷ್ಠ ಪಂಜಾಬ್ ಪಡೆ: ಇಂದು ಕಣಕ್ಕಿಳಿಯುವ ಉಭಯ ತಂಡಗಳು ಹೀಗಿವೆ

ಇತ್ತ ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಕೆಎಲ್ ರಾಹುಲ್, ಕ್ರಿಸ್ ಗೇಲ್, ಪೂರನ್ ಇದ್ದರೆ, ಅತ್ತ ಸಂಜು ಸ್ಯಾಮ್ಸನ್ ಜೊತೆ ಬೆನ್​ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಇರುವುದು ವಿಶೇಷ. ಹೀಗಾಗಿ ಉಭಯ ತಂಡಗಳಿಂದಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನಿರೀಕ್ಷಿಸಬಹುದು.
Published by: zahir
First published: April 12, 2021, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories