IPL 2021-RR vs KKR: ಸೋತವರ ನಡುವೆ ಹೈವೋಲ್ಟೇಜ್ ಪಂದ್ಯ: ಕುತೂಹಲ ಮೂಡಿಸಿದೆ ಕೊಲ್ಕತ್ತಾ-ರಾಜಸ್ಥಾನ ಮ್ಯಾಚ್

ಪಾಯಿಂಟ್​ ಟೇಬಲ್​ ಗಮನಿಸಿದಾಗ ಕೊಲ್ಕತ್ತಾ ತಂಡ 7 ಸ್ಥಾನವನ್ನು ಪಡೆದಿದೆ. ಅಂತೆಯೇ ರಾಜಸ್ಥಾನ ತಂಡ 8ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು 2ನೇ ಸ್ಥಾನದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಕಾಣಿಸಿಕೊಂಡಿದೆ.

RR vs KKR

RR vs KKR

 • Share this:
  ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್​ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡ ಇಂದು ಮುಖಮುಖಿಯಾಗುತ್ತಿದೆ. ವಾಂಖೆಡೆ ಮೈದಾನದಲ್ಲಿ ಐಪಿಎಲ್ 14ನೇ ಸೀಸನ್​ನ​ 5ನೇ ಪಂದ್ಯವನ್ನು ಎದುರಿಸುತ್ತಿದೆ. ಸಂಜು ಸ್ಯಾಮ್ಸನ್​​ ನಾಯಕತ್ವದ ರಾಜಸ್ಥಾನ ರಾಯಲ್ಸ್​ ಈವರೆಗೆ 4 ಪಂದ್ಯವನ್ನು ಎದುರಿಸಿದೆ. ಅದರಲ್ಲಿ 1 ಪಂದ್ಯದಲ್ಲಿ ಜಯಗಳಿಸಿ ಉಳಿದೆಲ್ಲದರಲ್ಲಿ ಸೋಲು ಅನುಭವಿಸಿದೆ. ಅದರಂತೆ ಮಾರ್ಗನ್​ ನಾಯಕತ್ವದ ಕೊಲ್ಕತ್ತಾ ತಂಡ ಕೂಡ 1 ಪಂದ್ಯದಲ್ಲಿ ಜಯಗಳಿಸಿದೆ. ಹಾಗಾಗಿ ಇಂದಿನ ಪಂದ್ಯ ಈವೆರಡು ತಂಡಕ್ಕೆ ಬಹುಮುಖ್ಯವಾಗಿದೆ.

  ಪಾಯಿಂಟ್​ ಟೇಬಲ್​ ಗಮನಿಸಿದಾಗ ಕೊಲ್ಕತ್ತಾ ತಂಡ 7 ಸ್ಥಾನವನ್ನು ಪಡೆದಿದೆ. ಅಂತೆಯೇ ರಾಜಸ್ಥಾನ ತಂಡ 8ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು 2ನೇ ಸ್ಥಾನದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಕಾಣಿಸಿಕೊಂಡಿದೆ.

  ಪಂದ್ಯ: 7.30ಕ್ಕೆ

  ಮೈದಾನ: ವಾಂಖೆಡೆ ಮೈದಾನ

  ಪಿಚ್​ ಹೇಗಿದೆ?

  ಮುಂಬೈನ ವಾಂಖೆಡೆ ಸ್ಟೇಡಿಯಂ ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗಲಿದೆ. ರನ್​ಗಳ ಹೊಳೆ ಹರಿಸಲು ನೆರವಾಗಲಿದೆ. ಅಂತೆಯೇ ವೇಗದ ಬೌಲರ್​ಗಳಿಗೆ ಈ ಪಿಚ್​ ಹೇಳಿ ಮಾಡಿಸಿದ ಹಾಗಿದೆ.

  ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಆಟಗಾರರು: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ , ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಶಿವಂ ದುಬೆ, ಜಯದೇವ್ ಉನಾದ್ಕತ್/ಶ್ರೇಯಸ್ ಗೋಪಾಲ್, ಮುಸ್ತಫಿಜರ್ ರೆಹಮಾನ್ ಮತ್ತು ಚೇತನ್ ಸಕಾರಿಯಾ.

  ಕೊಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಆಟಗಾರರು: ಶುಬ್ಮನ್ ಗಿಲ್, ನಿತೀಶ್ ರಾಣ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ಸುನೀಲ್ ನರೇನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿ.ಕೀ), ಪ್ಯಾಟ್ ಕಮಿನ್ಸ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ ಮತ್ತು ಪ್ರಸಿದ್ಧ್ ಕೃಷ್ಣ
  Published by:Harshith AS
  First published: