IPL 2021: ಟ್ರೋಫಿ ಗೆದ್ದು ದಾಖಲೆ ಬರೆದರೂ ಮುಂಬೈಯಿಂದ ಅಚ್ಚರಿ ನಿರ್ಧಾರ: 3 ಸ್ಟಾರ್ ಆಟಗಾರರ ಬಿಡುಗಡೆ

ಮುಂಬರುವ ಆವೃತ್ತಿಗೆ ಇನ್ನಷ್ಟು ಬಲಿಷ್ಠವಾಗಿ ತಂಡವನ್ನು ಸಜ್ಜುಮಾಡಲು ಹೊರಟಿರುವ ಮುಂಬೈ, ಹೊಸ ಮುಖಗಳತ್ತ ಚಿತ್ತ ನೆಟ್ಟಿದೆ. ಇದಕ್ಕಾಗಿ ತಂಡದಲ್ಲಿನ ಮೂವರು ಆಟಗಾರರಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.

Mumbai Indians

Mumbai Indians

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಐದನೇ ಬಾರಿಗೆ ಟ್ರೋಫಿ ಗೆದ್ದು ದಾಖಲೆ ಬರೆದ ಏಕೈಕ ತಂಡ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್. ಐಪಿಎಲ್ ಇತಿಹಾಸದಲ್ಲೇ ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಮುಂಬೈ ಆವೃತ್ತಿಯಿಂದ ಆವೃತ್ತಿಗೆ ಅಮೋಘ ಪ್ರದರ್ಶನ ನೀಡುತ್ತಾ ಬರುತ್ತಿದೆ. ಅದರಲ್ಲೂ ಈ ಬಾರಿ ರೋಹಿತ್ ಪಡೆ ಪ್ರಚಂಡ ಫಾರ್ಮ್​ನಲ್ಲಿ ಆಡಿ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿತು. ಹೀಗೆ ದೈತ್ಯ ಆಟಗಾರರಿಂದ ಕೂಡಿದ್ದರೂ ಮುಂಬೈ ಫ್ರಾಂಚೈಸಿ ಸದ್ಯ ಮೂವರು ಸ್ಟಾರ್ ಆಟಾರರನ್ನು ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆ.

  ಐಪಿಎಲ್ 2020 ರಲ್ಲಿ ಮೊದಲ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆಯಿಟ್ಟ ಮುಂಬೈ ತಂಡಕ್ಕೆ ಅನುಭವಿ ಆಟಗಾರರೇ ಆಸ್ತಿ. ಜೊತೆಗೆ ರೋಹಿತ್ ಶರ್ಮಾ ನಾಯಕತ್ವ ಕೂಡ ತಂಡದ ಪ್ಲಸ್ ಪಾಯಿಂಟ್. ಆದರೆ, ಮುಂಬರುವ ಆವೃತ್ತಿಗೆ ಇನ್ನಷ್ಟು ಬಲಿಷ್ಠವಾಗಿ ತಂಡವನ್ನು ಸಜ್ಜುಮಾಡಲು ಹೊರಟಿರುವ ಮುಂಬೈ, ಹೊಸ ಮುಖಗಳತ್ತ ಚಿತ್ತ ನೆಟ್ಟಿದೆ. ಇದಕ್ಕಾಗಿ ತಂಡದಲ್ಲಿನ ಮೂವರು ಆಟಗಾರರಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.

  Devdutt Padikkal: ಟೆಸ್ಟ್ ಆಡುವುದೇ ನನ್ನ ಗುರಿ: ದೇವದತ್ ಪಡಿಕ್ಕಲ್

  ನಥನ್ ಕಲ್ಟರ್ ನೈಲ್: ಆಸ್ಟ್ರೇಲಿಯಾ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ಮುಂಬೈ ಇಂಡಿಯನ್ಸ್ ಇವರನ್ನು ಹರಾಜಿನಲ್ಲಿ 8 ಕೋಟಿ ಕೊಟ್ಟು ಖರೀದಿ ಮಾಡಿತು. ಆದರೆ, ಈ ಬಾರಿ ಕಲ್ಟರ್ ನೈಲ್ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಅವಕಾಶ ಸಿಕ್ಕಿದ್ದು ಕೆಲವೇ ಪಂದ್ಯವಾದರು ಅದರಲ್ಲಿ ಮಿಂಚಿಲ್ಲ. 7 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದರಷ್ಟೆ. ಹೀಗಾಗಿ ಇವರನ್ನು ತಂಡದಿಂದ ರಿಲೀಸ್ ಮಾಡುವ ಬಗ್ಗೆ ಮುಂಬೈ ಯೋಚಿಸುತ್ತಿದೆ.

  ಶೆರ್ಫನ್ ರುಥರ್​ಫಾರ್ಡ್: ಮುಂಬೈ ಮಯಾಂಕ್ ಮಾರ್ಕಂಡೆ ಬದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಶೆರ್ಫನ್ ರುಥರ್​ಫಾರ್ಡ್ ಅವರನ್ನು ಎಕ್ಸೆಂಜ್ ಮಾಡಿತು. ಆದರೆ, ಒಂದೇ ಒಂದು ಪಂದ್ಯದಲ್ಲಿ ಇವರಿಗೆ ಆಡಲು ಅವಕಾಶ ಸಿಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಕೀರೊನ್ ಪೊಲಾರ್ಡ್​ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸುತ್ತಿದ್ದ ಕಾರಣ ಪ್ಲೇಯಿಂಗ್ 11 ರಲ್ಲಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಮುಂಬೈ ಪರ ಶೆರ್ಫನ್ ರುಥರ್​ಫಾರ್ಡ್ ಆಡುವುದು ಅನುಮಾನ.

  MS Dhoni: ಮುಂದಿನ ಸೀಸನ್​ನಲ್ಲಿ ಧೋನಿ ನಾಯಕನಾಗಿ ಕಣಕ್ಕಿಳಿಯುವುದು ಡೌಟ್..!

  ಮಿಚೆಲ್ ಮೆಕ್ಲೆನಘನ್: ಹಿರಿಯ ಅನುಭವಿ ಆಟಗಾರ ಮಿಚೆಲ್ ಮೆಕ್ಲೆನಘನ್ ಅವರನ್ನು ಈ ಬಾರಿಯ ಐಪಿಎಲ್​ನಲ್ಲಿ ಬೆಂಚ್ ಕಾಯಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಐಪಿಎಲ್​ನಲ್ಲಿ ಒಟ್ಟು 56 ಪಂದ್ಯಗಳಲ್ಲಿ 71 ವಿಕೆಟ್ ಕಬಳಿಸಿರುವ ಇವರು ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ ಮುಂದೆ ತಲೆ ಎತ್ತಲು ಸಾಧ್ಯವಾಗಲಿಲ್ಲ. ಇವರನ್ನೂ ಕೂಡ ಮುಂಬೈ ತಂಡದಿಂದ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
  Published by:Vinay Bhat
  First published: