HOME » NEWS » Ipl » IPL 2021 ROHIT SHARMA SAYS HE HAD NEVER SEEN A CHASE LIKE THIS BEFORE SNVS

MI vs CSK - ಇಂಥ ಚೇಸ್ ನಾನು ಯಾವತ್ತೂ ನೋಡಿರಲಿಲ್ಲ ಎಂದ ಕ್ಯಾಪ್ಟನ್

ನಾನು ಆಡಿರುವ ಅತ್ಯುತ್ತಮ ಟಿ20 ಪಂದ್ಯಗಳಲ್ಲಿ ಇದೂ ಒಂದು ಎನಿಸುತ್ತದೆ. ಇಂಥದ್ದೊಂದು ಚೇಸಿಂಗ್ ಅನ್ನು ನಾನೆಂದೂ ನೋಡಿರಲಿಲ್ಲ ಎಂದು ಸಿಎಸ್​ಕೆ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

cricketnext
Updated:May 2, 2021, 8:38 AM IST
MI vs CSK - ಇಂಥ ಚೇಸ್ ನಾನು ಯಾವತ್ತೂ ನೋಡಿರಲಿಲ್ಲ ಎಂದ ಕ್ಯಾಪ್ಟನ್
ಕೀರಾನ್ ಪೊಲಾರ್ಡ್
  • Share this:
ನವದೆಹಲಿ: ಇಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಪಿಎಲ್ 2021ನ 27ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೂಪರ್ ಗೆಲುವು ಪಡೆಯಿತು. 219 ರನ್​ಗಳ ಬೃಹತ್ ಗುರಿಯನ್ನು ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿ ಬೆನ್ನತ್ತಿತು. ಚೆನ್ನೈ ತಂಡದ ಪರ ಅಂಬಾಟಿ ರಾಯುಡು, ಮುಂಬೈ ಪರ ಕೀರಾನ್ ಪೊಲಾರ್ಡ್ ಸ್ಫೋಟಕ ಆಟವಾಡಿ ಈ ಪಂದ್ಯವನ್ನು ಅವಿಸ್ಮರಣೀಯವಾಗಿಸಿದರು. ಆದರೆ, ಅಂತಿಮವಾಗಿ ಕೀರಾನ್ ಪೊಲಾರ್ಡ್ ಅವರ ಅದ್ಭುತ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್ ಅದ್ಭುತ ಗೆಲುವು ದಕ್ಕಿಸಿಕೊಂಡಿತು. ಪೊಲಾರ್ಡ್ ಕೇವಲ 34 ಬಾಲ್​ನಲ್ಲಿ ಅಜೇಯ 87 ರನ್ ಗಳಿಸಿದರು. ಪೊಲಾರ್ಡ್ ಆಟ ಕಂಡು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದಂಗಾಗಿದ್ದಾರೆ. ಇಂಥದ್ದೊಂದು ಚೇಸಿಂಗ್ ಅನ್ನು ತಾನೆಂದೂ ಕಂಡಿರಲಿಲ್ಲ ಎಂದು ರೋಹಿತ್ ಉದ್ಘರಿಸಿದ್ದಾರೆ.

“ನಾನು ಆಡಿರುವ ಅತ್ಯುತ್ತಮ ಟಿ20 ಪಂದ್ಯಗಳಲ್ಲಿ ಇದೂ ಒಂದು ಎನಿಸುತ್ತದೆ. ಇಂಥದ್ದೊಂದು ಚೇಸಿಂಗ್ ಅನ್ನು ನಾನೆಂದೂ ನೋಡಿರಲಿಲ್ಲ. ಪೊಲ್ಲಿ (ಕೀರಾನ್ ಪೊಲ್ಲಾರ್ಡ್) ಅವರ ಅಮೋಘ ಆಟವನ್ನು ಹೊರಗಿನಿಂದ ಕೂತು ನೋಡುವುದೇ ಸಖತ್ತಾಗಿತ್ತು. ಒಳ್ಳೆಯ ಪಿಚ್, ಚಿಕ್ಕ ಗ್ರೌಂಡ್ ಇದಾಗಿದೆ. ನಮಗೆ ಒಳ್ಳೆಯ ಆರಂಭ ಸಿಕ್ಕಿತು. ಕ್ರೀಸ್​ನಲ್ಲಿ ನಾವು ಸಹಜ ಆಟ ಆಡಲು ಬಯಸಿದ್ದೆವು. ಟಾಪ್ ಆರ್ಡರ್​ನಲ್ಲಿ ಅದ್ಭುತ ಜೊತೆಯಾಟ, ನಂತರ ಕೃಣಾಲ್ ಪಾಂಡ್ಯ ಮತ್ತು ಪೊಲಾರ್ಡ್ ಜೊತೆಯಾಟ ಕೂಡ ಬಹಳ ಮಹತ್ವದ್ದಾಗಿತ್ತು” ಎಂದು ಪಂದ್ಯೋತ್ತರ ಸಂವಾದದಲ್ಲಿ ರೋಹಿತ್ ಶರ್ಮಾ ಹೇಳಿದ್ಧಾರೆ.

ಇದನ್ನೂ ಓದಿ: MI vs CSK, IPL 2021: ಪೊಲಾರ್ಡ್ ಅಬ್ಬರ; ಚೆನ್ನೈಗೆ ಸೋಲಿನ ರುಚಿ ತೋರಿಸಿದ ಮುಂಬೈ ಇಂಡಿಯನ್ಸ್!

“ದೊಡ್ಡ ಮೊತ್ತದ ಗುರಿಯನ್ನು ಚೇಸ್ ಮಾಡುವಾಗ ನಿಮ್ಮ ತಂಡದ ಪವರ್ ಹಿಟ್ಟರ್ಸ್ ಆದಷ್ಟು ಹೆಚ್ಚು ಚೆಂಡುಗಳನ್ನ ಆಡಬೇಕು. ಈ ಕೆಲಸವನ್ನ ಕೃಣಾಲ್ ಅವರಿಂದಲೂ ನಿರೀಕ್ಷಿಸುತ್ತೇವೆ. ಡೆಲ್ಲಿಯ ಪಿಚ್ ನಮ್ಮ ಆಟದ ಶೈಲಿಗೆ ತಕ್ಕುದಾಗಿದೆ. ನಮ್ಮ ಗೆಲುವಿನ ಗುರಿಗೆ ಬೌಲರ್​ಗಳ ಕೊಡುಗೆಯೂ ಮುಖ್ಯ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಬೌಲರ್​ಗಳೇ ನಮಗೆ ಗೆಲುವಿನ ಸನಿಹಕ್ಕೆ ತಂದಿದ್ದು. ನಿಮ್ಮ ತಂಡದ ಪ್ರಮುಖ ಬೌಲರ್​ಗಳಿಗೆ ಬೆಂಬಲ ನೀಡಿದರೆ ಅವರು ಬಹಳಷ್ಟು ಬಾರಿ ಗೆಲುವು ತಂದುಕೊಡಬಲ್ಲರು” ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕರಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಸಿಎಸ್​ಕೆ ವಿರುದ್ಧ 219 ರನ್ ಗುರಿಯನ್ನು ಮುಂಬೈ ಚೇಸ್ ಮಾಡಿದ್ದು ಹೊಸ ದಾಖಲೆಯಾಗಿದೆ. ಕೊನೆಯ ಬಾಲ್​ವರೆಗೂ ನಡೆದ ಚೇಸಿಂಗ್ ರೋಚಕವಾಗಿತ್ತು. ಮುಂಬೈ ಇಂಡಿಯನ್ಸ್ ಚೇಸ್ ಮಾಡಿದ ಗರಿಷ್ಠ ಗುರಿ ಇದಾಗಿದೆ. ಮ್ಯಾಚ್ ವಿನ್ನರ್ ಕೀರಾನ್ ಪೊಲಾರ್ಡ್ 68 ರನ್ ಇದ್ದಾಗ ಡುಪ್ಲೆಸಿಸ್ ಕ್ಯಾಚ್ ಡ್ರಾಪ್ ಮಾಡಿದರು. ಫ್ಯಾಪ್ ಡುಪ್ಲೆಸಿಸ್ ಡ್ರಾಪ್ ಮಾಡಿದ್ದು ಕ್ಯಾಚಲ್ಲ, ಪಂದ್ಯವನ್ನ ಅಂತ ಪಂದ್ಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅನೇಕರ ಅನಿಸಿಕೆ.
Published by: Vijayasarthy SN
First published: May 2, 2021, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories