SRH - ಹೈದರಾಬಾದ್ ಸನ್​ರೈಸರ್ಸ್ ತಂಡ ಸತತ ಸೋಲು ಕಾಣಲು ಕಾರಣಗಳೇನು?

ಪ್ರಬಲ ಬೌಲಿಂಗ್ ಪಡೆ ಹೊಂದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್​ನಲ್ಲಿ ತನ್ನ ಮೊದಲ ಮೂರು ಪಂದ್ಯಗಳನ್ನ ಸೋಲಲು ಕಾರಣ ಏನೆಂಬುದು ಕುತೂಹಲ. ಆದರೆ, ಬ್ಯಾಟಿಂಗ್ ಪಡೆಯಲ್ಲಿನ ದೋಷ ಮೇಲ್ನೋಟಕ್ಕೆ ತೋರುತ್ತದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟುಗಾರ

ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟುಗಾರ

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಈ ಬಾರಿಯ ಸೀಸನ್​ನಲ್ಲಿ ಅತ್ಯಂತ ಪ್ರಬಲ ತಂಡಗಳಲ್ಲಿ ಹೈದರಾಬಾದ್ ಸನ್ ರೈಸರ್ಸ್ ಕೂಡ ಒಂದು. ಆದರೆ, ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ದುಸ್ಥಿತಿಗೆ ಬಿದ್ದಿದೆ. ಮೊದಲ ಪಂದ್ಯದಲ್ಲೂ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿತ್ತು ಹೈದರಾಬಾದ್​ಗೆ. ಹ್ಯಾಟ್ರಿಕ್ ಸೋಲುಗಳಿಂದ ಅದು ಅಂಕಪಟ್ಟಿಯಲ್ಲಿ ಈಗ ತಳದಲ್ಲಿ ಕೂತಿದೆ. ಅದರ ಈ ಮೂರೂ ಸೋಲು ಕೂಡ ಚೇಸಿಂಗ್​ನಲ್ಲಿಯೇ ಬಂದಿರುವುದು ಗಮನಾರ್ಹ. ತಂಡ ಹಳಿ ತಪ್ಪುತ್ತಿರುವುದು ಎಲ್ಲಿ ಎಂಬುದು ಪ್ರಮುಖ ಪ್ರಶ್ನೆ.

    ಹೈದರಾಬಾದ್ ಸನ್ ರೈಸರ್ಸ್ ತಂಡದ ಸಮರ್ಪಕವಾಗಿಯೇ ಇದೆ. ಭುನವೇಶ್ವರ್ ಕುಮಾರ್, ರಷೀದ್ ಖಾನ್ ಅವರುಗಳು ಮ್ಯಾಚ್ ವಿನ್ನಿಂಗ್ ಬೌಲರ್​ಗಳು. ಸಂದೀಪ್ ಶರ್ಮಾ, ಟಿ ನಟರಾಜನ್, ಮೊಹಮ್ಮದ್ ನಬಿ, ವಿಜಯ್ ಶಂಕರ್ ಕೂಡ ಎದುರಾಳಿಗಳನ್ನ ಕಟ್ಟಿಹಾಕಬಲ್ಲರು. ಈ ಮೂರು ಪಂದ್ಯಗಳಲ್ಲಿ ಸನ್ ರೈಸರ್ಸ್ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ್ದು ಕಡಿಮೆಯೇ.

    ಇದನ್ನೂ ಓದಿ: 2021ರ ಐಸಿಸಿ ವಿಶ್ವ T20 ಟೂರ್ನಿ: ಪಾಕಿಸ್ತಾನ ತಂಡಕ್ಕೆ ವೀಸಾ ನೀಡಿದ ಭಾರತ

    ಸನ್ ರೈಸರ್ಸ್ ತಂಡಕ್ಕೆ ಸಮಸ್ಯೆ ಕಾಡುತ್ತಿರುವುದು ಬ್ಯಾಟಿಂಗ್ ವಿಭಾಗದಲ್ಲಿ. ತಂಡದ ಟಾಪ್ ಆರ್ಡರ್ ಈ ಮೂರು ಪಂದ್ಯಗಲ್ಲಿ ಕ್ಲಿಕ್ ಆಗಿದೆ. ಮಧ್ಯಮ ಕ್ರಮಾಂಕ ಮತ್ತು ಕೆಳಗಿನ ಕ್ರಮಾಂಕದ ಬ್ಯಾಟಿಂಗ್ ನಿರಾಶೆ ಮೂಡಿಸಿದೆ. ಮನೀಶ್ ಪಾಂಡೆ ಮತ್ತು ಜಾನಿ ಬೇರ್​ಸ್ಟೋ ಒಳ್ಳೆಯ ಬುನಾದಿ ಹಾಕಿಕೊಟ್ಟರೂ ಮೊಹಮ್ಮದ್ ನಬಿ, ವಿಜಯ್ ಶಂಕರ್ ಹಾಗೂ ಇತರರು ಅದನ್ನು ಮುಂದುವರಿಸಲಾಗದೇ ಗೆಲುವನ್ನು ಕೈಚೆಲ್ಲುತ್ತಿದ್ದಾರೆ. ಅಬ್ದುಲ್ ಸಮದ್ ಸ್ಫೋಟಕ ಇನ್ನಿಂಗ್ಸ್ ಆಡುವ ಭರವಸೆ ಮೂಡಿಸಿದರೂ ಅವರಿಂದ ಇನ್ನೂ ಮ್ಯಾಚ್ ವಿನ್ನಿಂಗ್ಸ ಇನ್ನಿಂಗ್ಸ್ ಬಂದಿಲ್ಲ.

    ಮಿಡಲ್ ಆರ್ಡರ್ ಮತ್ತು ಲೋಯರ್ ಮಿಡಲ್ ಆರ್ಡರ್ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡತೊಡಗಿದರೆ ಸನ್ ರೈಸರ್ಸ್ ಹೈದರಾಬಾದ್ ದಿಗ್ವಿಜಯದ ಹಾದಿಯತ್ತ ತೆರಳುವುದರಲ್ಲಿ ಅನುಮಾನ ಇಲ್ಲ. ಹೈದರಾಬಾದ್ ಪಡೆ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 21ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಆ ಪಂದ್ಯವೂ ಚೆನ್ನೈನಲ್ಲೇ ನಡೆಯಲಿದೆ.
    Published by:Vijayasarthy SN
    First published: