HOME » NEWS » Ipl » IPL 2021 RCB TO SPORT BLUE JERSEY AS TRIBUTE TO FRONT LINE HEROES TO DONATE FOR OXYGEN SUPPORT ZP

IPL 2021: ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB

ಪಂದ್ಯದ ಬಳಿಕ ಈ ಜೆರ್ಸಿಗಳ ಮೇಲೆ ಆಟಗಾರರು ಸಹಿ ಹಾಕಲಿದ್ದು, ಬಳಿಕ ಅದನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಲಭಿಸುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.

news18-kannada
Updated:May 2, 2021, 3:01 PM IST
IPL 2021: ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB
rcb
  • Share this:
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಜೆರ್ಸಿ ಬದಲಿಸಿದೆ. ಮುಂದಿನ ಪಂದ್ಯಗಳಲ್ಲಿ ರೆಡ್ ಜೆರ್ಸಿಯ ಬದಲು ಆರ್​ಸಿಬಿ ಆರ್ಮಿ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರತಿ ಸೀಸನ್​ನಲ್ಲೂ ರೆಡ್ ಮತ್ತು ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಆರ್​​ಸಿಬಿ ಈ ಬಾರಿ ನೀಲಿ ಜೆರ್ಸಿ ಆಯ್ಕೆ ಮಾಡಿಕೊಂಡಿದೆ. ಕೊರೋನಾ ವೈರಸ್ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ ಗೌರವ ಸೂಚಿಸುವ ಸಲುವಾಗಿ ಆರ್​ಸಿಬಿ ಈ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಮುಂದಿನ ಏಳು ಪಂದ್ಯಗಳಲ್ಲಿ ಆರ್​ಸಿಬಿ ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಅಲ್ಲದೆ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಬಳಸುವ ಮ್ಯಾಚ್​ ಕಿಟ್​ ಮೇಲೆ ಕೊರೋನಾ ವಾರಿಯರ್ಸ್​ ಕುರಿತು ವಿಶೇಷ ಸಂದೇಶವನ್ನು ನೀಡಲಾಗುತ್ತದೆ. ಪಂದ್ಯದ ಬಳಿಕ ಈ ಜೆರ್ಸಿಗಳ ಮೇಲೆ ಆಟಗಾರರು ಸಹಿ ಹಾಕಲಿದ್ದು, ಬಳಿಕ ಅದನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಲಭಿಸುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.
ಇದರೊಂದಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆಕ್ಸಿಜನ್ ಪೂರೈಸಲು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆರ್ಥಿಕ ಸಹಾಯ ಮಾಡಲಿದೆ. ಕಳೆದ 13 ಸೀಸನ್​ಗಳಲ್ಲಿ ಪ್ಲಾಸ್ಟಿಕ್ ಮರುಬಳಕೆ ಕುರಿತು ಹಾಗೂ ಪರಿಸರದ ಕುರಿತು ಸಂದೇಶ ಸಾರಲು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದ ಆರ್​ಸಿಬಿ ಈ ಬಾರಿ ಕೊರೋನಾ ವಾರಿಯರ್ಸ್​​ಗೆ ಗೌರವ ಸೂಚಿಸಲು ಅವರ ವೈದ್ಯಕೀಯ ಕಿಟ್​ ಬಣ್ಣದಲ್ಲಿ ಕಣಕ್ಕಿಳಿಯುರುತ್ತಿರುವುದು ಗೌರವದ ವಿಷಯ. ಆರ್​ಸಿಬಿ ತಂಡದ ಹೊಸ ಜೆರ್ಸಿ ಹೇಗಿದೆ ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ. ಹಾಗೆಯೇ ನಮ್ಮ ಚಾನೆಲ್​ನ್ನು ಸಬ್ಸ್​ಕ್ರೈಬ್​ ಆಗಿ. ಧನ್ಯವಾದಗಳು.
Published by: zahir
First published: May 2, 2021, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories