HOME » NEWS » Ipl » IPL 2021 RCB TEAM NEW INDIAN PLAYERS DETAILS ZP

IPL 2021: RCB ತಂಡದಲ್ಲಿರುವ ಹೊಸ ಆಟಗಾರರ ಕಿರು ಪರಿಚಯ ಇಲ್ಲಿದೆ

ಪ್ರಸ್ತುತ ಆರ್​ಸಿಬಿ ತಂಡದಲ್ಲಿ 22 ಆಟಗಾರರಿದ್ದಾರೆ. ಇದರಲ್ಲಿ 4 ಬ್ಯಾಟ್ಸ್​ಮನ್​ಗಳು, 7 ಬೌಲರುಗಳು, 4 ವಿಕೆಟ್ ಕೀಪರ್​​ಗಳು ಹಾಗೂ 7 ಆಲ್​ರೌಂಡರ್​ಗಳಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಆರ್​ಸಿಬಿ ಬಲಿಷ್ಠ ಬಳಗವನ್ನೇ ಹೊಂದಿದೆ.

news18-kannada
Updated:February 22, 2021, 9:27 PM IST
IPL 2021: RCB ತಂಡದಲ್ಲಿರುವ ಹೊಸ ಆಟಗಾರರ ಕಿರು ಪರಿಚಯ ಇಲ್ಲಿದೆ
rcb
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನು ಖರೀದಿಸಿದೆ. ಅದರಲ್ಲಿ ಮೂವರು ವಿದೇಶಿ ಸ್ಟಾರ್ ಆಟಗಾರರು. ಇನ್ನುಳಿದ ಐವರು ದೇಶೀಯ ಪ್ರತಿಭೆಗಳು. ಈ ಬಾರಿ ಆರ್​ಸಿಬಿ ಬಳಗವನ್ನು ಕೂಡಿಕೊಂಡಿರುವ ಈ ಐವರು ದೇಶೀಯ ಕ್ರಿಕೆಟರುಗಳ ಕಿರು ಪರಿಚಯ ಇಲ್ಲಿದೆ.

ಸಚಿನ್ ಬೇಬಿ: ಸಚಿನ್​ ಬೇಬಿ ಕೇರಳ ಮೂಲದ ಕ್ರಿಕೆಟರ್. 2016 ರಲ್ಲಿ ಸಚಿನ್ ಬೇಬಿ ಆರ್​ಸಿಬಿ ಪರ ಆಡಿದ್ದರು. ಆದರೆ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರದ ಕಾರಣ ತಂಡದಿಂದ ಕೈ ಬಿಡಲಾಗಿತ್ತು. ಇದಕ್ಕೂ ಮುನ್ನ ಸಚಿನ್ 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೂಡ ಆಡಿದ್ದರು. ಅಲ್ಲದೆ ಆರ್​ಸಿಬಿ ತಂಡದಿಂದ ಹೊರಬಿದ್ದ ಬಳಿಕ 2018 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ 32 ವರ್ಷದ ಸಚಿನ್ ಬೇಬಿಯನ್ನು ಆರ್​ಸಿಬಿ 20 ಲಕ್ಷ ರೂ. ನೀಡಿ ಮತ್ತೆ ಖರೀದಿಸಿದೆ.

ಸುಯಶ್​ ಪ್ರಭು ದೇಸಾಯಿ: ಸುಯಶ್ ಗೋವಾ ಮೂಲದ ಕ್ರಿಕೆಟಿಗ. 2017ರಿಂದ ಗೋವಾ ಪರ ಆಡುತ್ತಿರುವ ಸುಯಶ್, 19 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 357 ರನ್​ ಕಲೆಹಾಕಿದ್ದಾರೆ. ಇನ್ನು ಬಲಗೈ ದಾಂಡಿಗನಾಗಿರುವ ಸುಯಶ್ ವಯಸ್ಸು ಕೇವಲ 23. ಯಾವುದೇ ಕ್ರಮಾಂಕದಲ್ಲೂ ಬ್ಯಾಟ್​ ಬೀಸಬಲ್ಲ ಆಟಗಾರನಾಗಿರುವುದರಿಂದಲೇ ಆರ್​ಸಿಬಿ ಗೋವಾದ ಈ ಯುವ ಬ್ಯಾಟ್ಸ್​ಮನ್​ನ್ನು ಖರೀದಿಸಿದೆ.

ಕೆ.ಎಸ್.​ಭರತ್​: ಭರತ್ ಆಂಧ್ರ ಪ್ರದೇಶದ ಕ್ರಿಕೆಟರ್. ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗೆ ಭರತ್ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆಯಾಗಿದ್ದಾರೆ. 27 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಇಷ್ಟೇ ಅಲ್ಲದೆ ಭರತ್ ರಣಜಿ ಕ್ರಿಕೆಟ್​ನಲ್ಲಿ ತ್ರಿಶತಕ ಬಾರಿಸಿದ ಆಟಗಾರ. ಇನ್ನು ಅನುಭವಿ ಆಟಗಾರ ಕೂಡ. ಈ ಎಲ್ಲಾ ಕಾರಣಗಳಿಂದ ಆರ್​ಸಿಬಿ 20 ಲಕ್ಷಕ್ಕೆ ಕೆ.ಎಸ್ ಭರತ್​ ರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ರಜತ್ ಪಾಟಿದಾರ್: ರಜತ್ ಮಧ್ಯಪ್ರದೇಶದ ಕ್ರಿಕೆಟಿಗ. 2015 ರಿಂದ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡುತ್ತಿರುವ ರಜತ್ ಟಿ20 ಯಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 23 ಟಿ20 ಪಂದ್ಯಗಳನ್ನಾಡಿರು ರಜತ್ 6 ಅರ್ಧಶತಕಗಳೊಂದಿಗೆ 143 ಸ್ಟ್ರೈಕ್​ ರೇಟ್​ನಲ್ಲಿ 699 ರನ್ ಕಲೆಹಾಕಿದ್ದಾರೆ. ಇನ್ನು ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ರಜತ್​ರನ್ನು ಆರ್​ಸಿಬಿ 20 ಲಕ್ಷ ನೀಡಿ ಖರೀದಿಸಿದೆ.

ಮೊಹಮ್ಮದ್​ ಅಜರುದ್ದೀನ್​: ಈ ಹೆಸರು ಈಗಾಗಲೇ ಕ್ರಿಕೆಟ್​ ಪ್ರೇಮಿಗಳಿಗೆ ಚಿರಪರಿಚಿತ. ಏಕೆಂದರೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ವಿರುದ್ಧ ಸಿಡಿಲಬ್ಬರದ 137 ರನ್ ಸಿಡಿಸುವ ಮೂಲಕ ಅಜರ್ ಅಬ್ಬರಿಸಿದ್ದರು. ಹೀಗಾಗಿಯೇ ಈತ ಈ ಬಾರಿ ಐಪಿಎಲ್​ನಲ್ಲಿ ಸೇಲ್ ಆಗಲಿದ್ದಾರೆ ಎನ್ನಲಾಗಿತ್ತು. ಇತ್ತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದ್ದ ಆರ್​ಸಿಬಿ ಕಾಸರಗೋಡು ಮೂಲದ ಅಜರ್​ನನ್ನು ಖರೀದಿಸಿದೆ. ಇನ್ನು ಈತ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಆಟಗಾರ. ಅದರಲ್ಲೂ ಸಂಕಷ್ಟದ ಸಮಯದಲ್ಲಿ ಇಡೀ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಅಜರ್​ಗಿದೆ. ಹೀಗಾಗಿಯೇ ಈ ಹೊಡಿಬಡಿ ಆಟಗಾರರನ್ನು ಆರ್​ಸಿಬಿ 20 ಲಕ್ಷ ರೂ. ನೀಡಿ ಖರೀದಿಸಿದೆ.
ಪ್ರಸ್ತುತ ಆರ್​ಸಿಬಿ ತಂಡದಲ್ಲಿ 22 ಆಟಗಾರರಿದ್ದಾರೆ. ಇದರಲ್ಲಿ 4 ಬ್ಯಾಟ್ಸ್​ಮನ್​ಗಳು, 7 ಬೌಲರುಗಳು, 4 ವಿಕೆಟ್ ಕೀಪರ್​​ಗಳು ಹಾಗೂ 7 ಆಲ್​ರೌಂಡರ್​ಗಳಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಆರ್​ಸಿಬಿ ಬಲಿಷ್ಠ ಬಳಗವನ್ನೇ ಹೊಂದಿದೆ. ಹೀಗಾಗಿ ಈ ಸಲ ಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ.
Published by: zahir
First published: February 22, 2021, 9:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories