HOME » NEWS » Ipl » IPL 2021 RCB FACES KKR IN FIRST MATCH AND PBKS VS DC IN SECOND ONE SNVS

IPL 2021 - ಇಂದು ಎರಡು ಪಂದ್ಯ; ಆರ್​ಸಿಬಿ-ಕೆಕೆಆರ್; ಡೆಲ್ಲಿ-ಪಂಜಾಬ್ ಹಣಾಹಣಿ - ಬೆಂಗಳೂರಿಗೆ ಹ್ಯಾಟ್ರಿಕ್ ಕನಸು

ಇವತ್ತು ಭಾನುವಾರ ಮಧ್ಯಾಹ್ನ 3:30ಕ್ಕೆ ಆರ್​ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಆರಂಭವಾಗಲಿದೆ. ಸಂಜೆ 7:30ಕ್ಕೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಫೈಟ್ ಆಗಲಿದೆ.

cricketnext
Updated:April 18, 2021, 1:48 PM IST
IPL 2021 - ಇಂದು ಎರಡು ಪಂದ್ಯ; ಆರ್​ಸಿಬಿ-ಕೆಕೆಆರ್; ಡೆಲ್ಲಿ-ಪಂಜಾಬ್ ಹಣಾಹಣಿ - ಬೆಂಗಳೂರಿಗೆ ಹ್ಯಾಟ್ರಿಕ್ ಕನಸು
ಶಹಬಾಜ್ ಅಹ್ಮದ್
  • Cricketnext
  • Last Updated: April 18, 2021, 1:48 PM IST
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ಎರಡು ಹಣಾಹಣಿಗಳಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಟ್ರಿಕ್ ಗೆಲುವಿಗೆ ಅಡ್ಡವಾಗಿ ಕೋಲ್ಕತಾ ನೈಟ್ ರೈಡರ್ಸ್ ನಿಂತಿದೆ. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಎರಡನೇ ಗೆಲುವಾಗಿ ಪ್ರಯತ್ನಿಸಲಿವೆ. ಬೆಂಗಳೂರು ಮತ್ತು ಕೋಲ್ಕತಾ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಡೆಲ್ಲಿ ಮತ್ತು ಪಂಜಾಬ್ ತಂಡದ ಪಂದ್ಯ ರಾತ್ರಿ 7:30ಕ್ಕೆ ನಡೆಯಲಿದೆ. ಸತತ ಎರಡು ಗೆಲುವಿನಿಂದ ಹೊಸ ಹುರುಪು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದತ್ತ ಎಲ್ಲರ ಕಣ್ಣು ನೆಟ್ಟಿದೆ. ಮೊದಲೆರಡು ಪಂದ್ಯಗಳ ಗೆಲುವು ಅದೃಷ್ಟದಿಂದ ಬಂದಿದ್ದಲ್ಲ ಎಂಬುದನ್ನು ಸಾಬೀತು ಮಾಡುವ ಕಾರ್ಯ ಬೆಂಗಳೂರಿಗೆ ಸೇರಿದೆ. ಇನ್ನು ಇವತ್ತಿನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಲಯ ಕಂಡುಕೊಳ್ಳಲು ಪರದಾಡುತ್ತಿದೆ. ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಇದೇ ಸ್ಥಿತಿ. ಶಿಖರ್ ಧವನ್, ಪೃಥ್ವಿ ಶಾ ಮತ್ತು ರಿಷಭ್ ಪಂತ್ ಅವರು ಡೆಲ್ಲಿ ಬ್ಯಾಟಿಂಗ್​ನ ಸದ್ಯದ ಆಧಾರ ಸ್ತಂಭವಾಗಿದ್ದಾರೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟಿಂಗ್ ಮೇಲ್ನೋಟಕ್ಕೆ ಬಲಿಷ್ಠವೆನಿಸಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಎಬಿ ಡೀವಿಲಿಯರ್ಸ್ ಅವರಂಥ ವಿಶ್ವಶ್ರೇಷ್ಠ ಬ್ಯಾಟುಗಾರರು ತಂಡದಲ್ಲಿದ್ದಾರೆ. ಶಹಬಾಜ್ ಅಹ್ಮದ್ ಅವರೂ ಒಳ್ಳೆಯ ಲಯದಲ್ಲಿದ್ದಾರೆ. ಡೇನಿಯಲ್ ಸ್ಯಾಮ್ಸ್ ಅವರು ಕೋವಿಡ್​ನಿಂದ ಚೇತರಿಸಿಕೊಂಡಿದ್ದು ಇದೀಗ ಆಟಕ್ಕೆ ಲಭ್ಯರಿದ್ದಾರೆ. ಅವರು ಅಥವಾ ಡೇನಿಯಲ್ ಕ್ರಿಸ್ಟಿಯನ್ ಅವರು ಬೆಂಗಳೂರಿಗೆ ಸ್ಫೋಟಕ ಶಕ್ತಿ ಆಗಬಹುದು. ಕರ್ನಾಟಕದ ಪ್ರತಿಭಾನ್ವಿತ ಬ್ಯಾಟುಗಾರ ದೇವದತ್ ಪಡಿಕ್ಕಲ್ ಅವರು ಫಾರ್ಮ್ ಕಂಡುಕೊಂಡರೆ ಬೆಂಗಳೂರಿಗೆ ಪ್ಲಸ್ ಪಾಯಿಂಟ್. ಹಾಗೆಯೇ, ಕೈಲ್ ಜೇಮಿಸನ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಫಾರ್ಮ್ ಕಂಡುಕೊಳ್ಳಬೇಕಿದೆ.

ಇನ್ನು ಬೆಂಗಳೂರಿನ ಬೌಲಿಂಗ್​ಗೆ ಹರ್ಷಲ್ ಪಟೇಲ್ ಹೊಸ ಶಕ್ತಿ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಯುಜವೇಂದ್ರ ಚಹಲ್ ಅವರಿರುವ ಆರ್​ಸಿಬಿ ತಂಡದ ಬೌಲಿಂಗ್ ದುರ್ಬಲವೇನಿಲ್ಲ. ಹೀಗಾಗಿ, ಬೆಂಗಳೂರಿನ ಹ್ಯಾಟ್ರಿಕ್ ಕನಸು ಕಷ್ಟಕರ ಎನಿಸುವುದಿಲ್ಲ.

ಅತ್ತ, ಆರ್​ಸಿಬಿಗೆ ಚಾಲೆಂಜ್ ಹಾಕುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂಥ ಪ್ರದರ್ಶನ ನೀಡಿಲ್ಲ. ಆಂಡ್ರೆ ರಸಲ್, ಶುಭ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ ಅವರಿರುವ ಕೋಲ್ಕತಾ ಬ್ಯಾಟಿಂಗ್ ಪಡೆ ಪ್ರಬಲವಾಗಿದೆ. ರಾಣಾ ಅವರು ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಅದ್ಭುತ ಅಲ್​ರೌಂಡರ್​ಗಳಾದ ಆಂಡ್ರೆ ರಸಲ್, ಶಾಕಿಬ್ ಅಲ್ ಹಸನ್ ಅವರಿದ್ದಾರೆ. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಅನ್ನು ಕೋಲ್ಕತಾ ಹೆಚ್ಚು ನೆಚ್ಚಿಕೊಂಡಿದೆ.

ಇದನ್ನೂ ಓದಿ: MI vs SRH, IPL 2021: ಸೋಲುಂಡ ಡೇವಿಡ್​ ಪಡೆ; ಮುಂಬೈಗೆ 13 ರನ್​ಗಳ ಜಯ!

ಪಂಜಾಬ್ ವರ್ಸಸ್ ಡೆಲ್ಲಿ:

ಪಂಜಾಬ್ ಕಿಂಗ್ಸ್ ತಂಡದಲ್ಲೂ ಸಮರ್ಥ ಬ್ಯಾಟುಗಾರರು ಮತ್ತು ಬೌಲರ್​ಗಳು ಇದ್ದಾರೆ. ಆದರೆ, ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಕ್ರಿಸ್ ಗೇಲ್, ಕೆಎಲ್ ರಾಹುಲ್, ದೀಪಕ್ ಹೂಡಾ, ಶಾರುಕ್ ಖಾನ್ ಒಂದಷ್ಟು ಸಿಡಿದಿದ್ದಾರೆ. ಮಯಂಕ್ ಅಗರ್ವಾಲ್, ನಿಕೋಲಾಸ್ ಪೂರನ್ ಮೊದಲಾದ ಬ್ಯಾಟುಗಾರರು ಫಾರ್ಮ್ ಕಂಡುಕೊಳ್ಳಬೇಕಿದೆ.ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ್ದೂ ಇದೇ ಸ್ಥಿತಿ. ಆದರೆ, ಅವೇಶ್ ಕಾನ್, ಕಾಗಿಸೋ ರಬಡ, ಆರ್ ಅಶ್ವಿನ್ ಅವರಿರುವ ಅದರ ಬೌಲಿಂಗ್ ಪ್ರಬಲವಾಗಿದೆ. ಹೀಗಾಗಿ, ಪಂಜಾಬ್ ಮತ್ತು ಡೆಲ್ಲಿ ನಡುವಿನ ಪಂದ್ಯ ರೋಚಕವಾಗಿರುವ ಸಾಧ್ಯತೆಯೇ ಹೆಚ್ಚು.

ಆರ್​ಸಿಬಿ ವರ್ಸಸ್ ಕೆಕೆಆರ್ ಸಂಭಾವ್ಯ ತಂಡ:

ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡೀವಿಲಿಯರ್ಸ್, ಡೇನಿಯಲ್ ಕ್ರಿಸ್ಟಿಯನ್/ಡೇನಿಯೆಲ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್

ಕೋಲ್ಕತಾ ತಂಡ: ಶುಭ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಶಾಕಿಬ್ ಅಲ್ ಹಸನ್, ಪ್ಯಾಟ್ ಕಮಿನ್ಸ್, ಹರ್ಭಜನ್ ಸಿಂಗ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ
Published by: Vijayasarthy SN
First published: April 18, 2021, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories